ರಾಕಿಂಗ್ ಸ್ಟಾರ್ ಯಶ್. (Rocking star yash) ಈಗ ಇಡೀ ಹೆಸರು ಜಗತ್ತಿಗೇ ಗೊತ್ತು. ಯಶ್ ಈಗ ಗ್ಲೋಬಲ್ ಸ್ಟಾರ್. ಇಂಡಿಯಾದ ಸೂಪರ್ ಸ್ಟರ‍್ಗಳಲ್ಲಿ ಒಬ್ಬರು. ಯಶ್ ಸಿನಿಮಾ ಮಾಡಲಿ.. ಮಾಡದೇ ಇರಲಿ.. ಸುದ್ದಿಯಲ್ಲರ‍್ತಾರೆ. ಯಶ್ ಮಾತನಾಡಿ ಅಲ್ಲ, ಅವರ ಬಗ್ಗೆ ಇನ್ನೊಬ್ಬರು ಮಾತನಾಡಿ ಸುದ್ದಿಯಲ್ಲರ‍್ತಾರೆ ಯಶ್.
ಇನ್ನು ರವಿತೇಜ (Ravi teja) ತೆಲುಗು ಸ್ಟಾರ್ ನಟ. ಕೆಲವೇ ವರ‍್ಷಗಳ ಹಿಂದೆ ರವಿತೇಜ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದ್ದ ಕಾಲವೂ ಇತ್ತು. ಇತ್ತೀಚೆಗೆ ಮುಟ್ಟಿದ ಬಂಗಾರವೂ ಇದ್ದಿಲಾಗುತ್ತಿದೆ. ಅಂತಹ ಮಾಸ್ ಮಹಾರಾಜ ಎಂದೇ ಕರೆಸಿಕೊಳ್ಳೋ ರವಿತೇಜ ಇದ್ದಕ್ಕಿದ್ದಂತೆ ವಿವಾದದಲ್ಲಿದ್ದಾರೆ. ನಟ ಯಶ್ ಬಗ್ಗೆ ಸಂರ‍್ಶನವೊಂದರಲ್ಲಿ ಆಡಿದ ಮಾತಿಗೆ ಯಶ್ ಫ್ಯಾನ್ಸ್ ಕೆಂಡಾಮಂಡಲರಾಗಿದ್ಧಾರೆ. ಟೈಗರ್ ನಾಗೇಶ್ವರ್ ರಾವ್ ಸಿನಿಮಾ ಪ್ರಮೋಷನ್ ಗಾಗಿ ರವಿತೇಜಾ ಯಶ್ ಹೆಸರು ಬಳಸಿಕೊಂಡಿದ್ದಾರೆ. ಅದಲ್ಲದೆ. ರಾಕಿಭಾಯ್ ಬಗ್ಗೆ ಹಗುರವಾಗಿ ತೆಲುಗು ನಟ ಮಾತನಾಡಿದ್ದಾರೆ ಎನ್ನುವ ವಾದ ಕೇಳಿ ಬಂದಿದೆ.
ಆಗಿದ್ದು ಇಷ್ಟೆ.. ಜೂಮ್ ಟಿವಿಯ ಕಾರ‍್ಯಕ್ರಮದಲ್ಲಿ ನಿರೂಪಕಿ ಕೆಲವೊಂದು ಸ್ಟರ‍್ಗಳ ಹೆಸರು ಹೇಳಿ ಅವರಿಂದ ಏನನ್ನು ಕದಿಯೋಕೆ ಇಷ್ಟಪಡ್ತೀರಿ ಅಂತಾ ಕೆಲವರ ಹೆಸರು ಹೇಳ್ತಾರೆ.
ರಾಮ್ಚರಣ್, (Ramcharan) ದಳಪತಿ ವಿಜಯ್(thalapathy vijay), ರಾಜಮೌಳಿ (Rajamouli) ಮೊದಲಾದವರ ಹೆಸರು ಕೇಳ್ತಾರೆ. ಈ ಹಂತದಲ್ಲಿ ಯಶ್ ಹೆಸರೂ ಬರುತ್ತೆ. ಆಗ ಯಶ್ ಅವರ ಬಗ್ಗೆ ಯಶ್ ಬಗ್ಗೆ ನಾನು ನೋಡಿದ್ದೇ.. ಆ ಕೆಲವು ಚಿತ್ರಗಳಿಂದ. ಅದು ಕೆಜಿಎಫ್..ಕೆಜಿಎಫ್ನಂಥ ಸಿನಿಮಾ ಸಿಗೋಕೆ ಯಶ್ ಸಖತ್ ಲಕ್ಕಿ.. ಎನ್ನುತ್ತಾರೆ ರವಿತೇಜ.
ಯಶ್ ಫ್ಯಾನ್ಸ್ ಸಿಟ್ಟಾಗಿರುವುದು ರವಿತೇಜ ಅವರ ಮಾತಿಗೆ ಅಲ್ಲ. ಕೆಜಿಎಫ್ (K.G.F Movie) ಸಿನಿಮಾ ಪಡೆಯೋಕೆ ಯಶ್ ಅದೃಷ್ಟ ಮಾಡಿದ್ದರು ಎನ್ನುವುದೇನೋ ನಿಜ. ಆದರೆ ಅದಕ್ಕಾಗಿ ಯಶ್ ಐದಾರು ವರ‍್ಷ ಶ್ರಮ ಹಾಕಿದ್ದರು ಎನ್ನುವುದೂ ಅಷ್ಟೇ ನಿಜ. ಕೆಜಿಎಫ್ ಗೆಲುವಿನಲ್ಲಿ ಯಶ್ ಅವರ ಪಾತ್ರ ದೊಡ್ಡದು ಎನ್ನುವುದೂ ಸತ್ಯ. ಆದರೆ ಮಾತಿನ ವೇಳೆ ರವಿತೇಜ ಅವರ ಬಾಡಿಲಾಂಗ್ವೇಜ್ ಹಾಗೂ ಟೋನ್ ನೋಡಿದವರಿಗೆ ಯಶ್ ಅವರ ಬಗ್ಗೆ ರವಿತೇಜ ಹಗುರವಾಗಿ ಮಾತನಾಡಿದ್ದಾರೆ ಎನ್ನಿಸಿದೆ.
ಯಶ್ ಫ್ಯಾನ್ಸ್ ಅಂತೂ ರವಿತೇಜ ಒಬ್ಬ ಹೀರೋನಾ.. ಆರಕ್ಕೇರದ ಮೂರಕ್ಕಿಳಿಯದ ಅರ‍್ಡಿನರಿ ನಟ ಎಂದೆಲ್ಲ ಲೇವಡಿ ಮಾಡ್ತಿದ್ದಾರೆ. ಕೆಜಿಎಫ್ ಮಾಡೋಕು ಮುನ್ನವೇ ಯಶ್ ದೊಡ್ಡ ಸ್ಟಾರ್ ಆಗಿದ್ದರು. ಅವರಬಗ್ಗೆ ಇಷ್ಟ ಹಗುರವಾಗಿ ಮಾತನಾಡೋದು ಸರಿಯಲ್ಲ ಎಂದಿದ್ದಾರೆ. ಕೆಜಿಎಫ್ ಸಿನಿಮಾಗಾಗಿ ಯಶ್ ಆರು ವರ‍್ಷ ತನು ಮನ ಅರ‍್ಪಿಸಲಿಲ್ಲವೇ, ಹಾಗಿದ್ರೆ ಯಶ್ ಪರಿಶ್ರಮಕ್ಕೆ ಬೆಲೆ ಇಲ್ವಾ. ರವಿತೇಜ, ಯಶ್ ಅವರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಸಮಾಧಾನವಾಗಿ ಯಶ್ ಅವರ ಮಿ.& ಮಿಸೆಸ್ ರಾಮಾಚಾರಿ, ರಾಜಾಹುಲಿ, ಕಿರಾತಕ ಚಿತ್ರಗಳನ್ನು ನೋಡಿ. ನಿಮ್ಮ ಅಸೂಯೆ ಹಾಗೂ ನಿಮ್ಮ ಇಂಥ ಅಭಿಪ್ರಾಯವನ್ನು ನಿಮ್ಮಲ್ಲಿಯೇ ಇಟ್ಟುಕೊಂಡರೆ ಒಳ್ಳೆಯದು ಎಂದು ಬುದ್ದಿವಾದ ಹೇಳಿದ್ದಾರೆ.
ದೇಶದಲ್ಲಿ ಸಾಕಷ್ಟು ಡೈರೆಕ್ರ‍್ಗಳು ಫ್ಲಾಪ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಯಶ್ ಹೊಸ ನಿರ‍್ದೇಶಕರ ಮೇಲೆ ನಂಬಿಕೆ ಇಟ್ಟು ತಮ್ಮ ಮೂರು ವಷ್ರವನ್ನು ಕೆಜಿಎಫ್ಗಾಗಿ ವ್ಯಯ ಮಾಡಿದ್ದಾರೆ ಅನ್ನೋದು ಇನ್ನೂ ಕೆಲವು ಫ್ಯಾನ್ಸ್ ವಾದ.
ರವಿತೇಜ ಫ್ಯಾನ್ಸ್ಗಳು ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಎಲ್ಲಾ ಯಶ್ ಫ್ಯಾನ್ಸ್ಗೆ ಹೇಳೋದಿಷ್ಟೇ. ರವಿತೇಜ ಅವರ ಉದ್ದೇಶ ಯಶ್ ಅವರಿಗೆ ಅವಮಾನ ಮಾಡುವುದಾಗಿರಲಿಲ್ಲ. ಅವರು ಕೇವಲ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅದಲ್ಲದೆ, ನಟರ ಹರ‍್ಡ್ವರ‍್ಕ್ ಹಾಗೂ ಬದ್ಧತೆಯ ಬಗ್ಗೆ ರವಿತೇಜಾ ಅವರಿಗೆ ತಿಳಿದಿದೆ ಎಂದು ಉತ್ತರ ಕೊಟ್ಟಿದ್ದಾರೆ.



