ಮಲ್ಲ. ಬಹುಶಃ ರವಿಚಂದ್ರನ್ ನಿರ್ದೇಶನದಲ್ಲಿ ಬಂದ ಕೊನೆಯ ಬ್ಲಾಕ್ ಬಸ್ಟರ್ ಚಿತ್ರ ಎನ್ನಬಹುದು. ಅದಾದ ಮೇಲೆ ರವಿಚಂದ್ರನ್ ಹಲವು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರೂ, ಅದೇಕೋ ಏನೋ.. ಹಿಟ್ ಎನ್ನುವುದು ಡೈರೆಕ್ಟರ್ ರವಿಚಂದ್ರನ್ ಅವರ ಕೈಹಿಡಿದಿಲ್ಲ ಇದು ಆ ಚಿತ್ರದ ಒಂದು ಕಾಂಟ್ರವರ್ಸಿ ಕುರಿತ ಕಥೆ.
ಮಲ್ಲ ಚಿತ್ರ ರಿಲೀಸ್ ಆದಾಗ ಮಡಿವಂತ ಪ್ರೇಕ್ಷಕರು ಬೆಚ್ಚಿಬಿದ್ದಿದ್ದರು. ರವಿಚಂದ್ರನ್ ಮತ್ತು ಪ್ರಿಯಾಂಕಾ ಉಪೇಂದ್ರ ಅವರ ನಡುವಿನ ರೊಮ್ಯಾನ್ಸ್ ಆಗಿನ ಕಾಲಕ್ಕೆ ಒಂದು ಎಲ್ಲೆಯನ್ನು ಮೀರಿತ್ತು. ಹಾಗೆ ನೋಡಿದರೆ ಕನ್ನಡ ಚಿತ್ರರಂಗದಲ್ಲಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಹಲವು ಬಾರ್ಡರ್‌ಗಳನ್ನು ಬ್ರೇಕ್ ಮಾಡಿದವರೇ ರವಿಚಂದ್ರನ್. ಚಿತ್ರದಲ್ಲಿ
ಯಮ್ಮೋ ಯಮ್ಮೋ.. ನೋಡ್ದೇ.. ನೋಡ್ದೇ..
ಈ ಪ್ರೀತಿಯ ಮರೆತೂ..
ಒಳಗಿರೋದು ಒಳಗಿದ್ರೆ..
ಅಂಗದಾ.. ಅಂಗದಾ..
ಬಾಂಗಡಿ ಮೀನು ಬಳುಕಿದಾಗ..
ಎಂದೆಲ್ಲ ರೊಮ್ಯಾಂಟಿಕ್ ಗೀತೆಗಳಿದ್ದವು. ಸಂಗೀತ ನಿರ್ದೇಶಕರೂ ಕೂಡಾ ರವಿಚಂದ್ರನ್ ಅವರೇ. ಸಾಹಿತ್ಯವೂ ರವಿಚಂದ್ರನ್ ಅವರದ್ದೇ. 2004ರಲ್ಲಿ ರಿಲೀಸ್ ಆಗಿದ್ದ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿತ್ತು. ಚಿತ್ರದ ನಿರ್ಮಾಪಕರು ರಾಮು ಅವರಾಗಿದ್ದರೂ, ರಾಮು ಕಷ್ಟಕ್ಕೆ ಸಿಲುಕಿದ್ದಾಗ ರವಿಚಂದ್ರನ್ ಅವರೇ ದುಡ್ಡು ಹಾಕಿ ಸಿನಿಮಾ ಮಾಡಿದ್ದರು. ಆದರೆ ಚಿತ್ರ ರಿಲೀಸ್ ಆಗುವ ಹೊತ್ತಿಗೆ ಪ್ರಿಯಾಂಕಾ, ಉಪೇಂದ್ರ ಅವರೊಂದಿಗೆ ಹಸೆಮಣೆ ಏರಿದ್ದರು.
ಅದಕ್ಕೆ ತಕ್ಕಂತೆ ಇವತ್ತಿಗೂ ಮೈಬಿಸಿ ಏರಿಸುವಂತಹ ಹಾಡುಗಳು, ರೊಮ್ಯಾನ್ಸ್, ಕಿಸ್ಸಿಂಗ್ ದೃಶ್ಯಗಳು.. ಎಲ್ಲವೂ ಇದ್ದ ಮಲ್ಲ ಚಿತ್ರದ ಬಗ್ಗೆ ಸಾಕಷ್ಟು ಅಂತೆ ಕಂತೆಗಳು ಹೊರಬಿದ್ದಿದ್ದವು. ಅದಕ್ಕೆಲ್ಲ ಈಗ ಉತ್ತರ ಸಿಕ್ಕಿದೆ.
ತುಂಬಾ ಕಡೆ ವಿವಾದ ಆಗಿತ್ತು. ಕೆಲವು ಕಡೆ ಡ್ರೆಸ್ ಬಗ್ಗೆ ಬರೆದಿದ್ದರು. ಅದೆಲ್ಲ ಏನೂ ಮ್ಯಾಟರ್ ಅಲ್ಲ. ಯಾಕಂದ್ರೆ ಸಮಯ ಎಲ್ಲವನ್ನೂ ಸಾಬೀತು ಮಾಡುತ್ತೆ. ನನ್ನ ಜೀವನದಲ್ಲಿ ಏನನ್ನು ಆಯ್ಕೆ ಮಾಡುತ್ತೇನೋ ಅದಕ್ಕೆ ನಾನು ಬದ್ಧವಾಗಿದ್ದೇನೆ. ಯಾರೋ ಫೋರ್ಸ್ ಮಾಡಿ ಹೀಗೆ ಮಾಡಿಸಿದ್ದಾರೆ ಅಂತ ಹೇಳಿದ್ದರು. ಹಾಗಂತ ನಾನೇನು ಬಲಿಪಶು ಆಗಿರಲಿಲ್ಲ. ನನಗೆ ಏನು ತಪ್ಪು ಅನಿಸಿದೆಯೋ ಅದನ್ನು ನಾನು ಮಾಡಿಲ್ಲ. ಯಾವುದು ಸರಿ ಅನಿಸಿದೆಯೋ ಅದನ್ನು ಮಾಡಿದ್ದೇನೆ ಎಂದಿರುವ ಪ್ರಿಯಾಂಕಾ ಅವರು ಮಲ್ಲ ಚಿತ್ರದ ಪಾತ್ರ, ಪಾತ್ರದ ನರೇಷನ್, ಎಕ್ಸ್‌ಪೋಸ್ ಎಲ್ಲವನ್ನೂ ಒಪ್ಪಿಕೊಂಡೇ ಸಿನಿಮಾ ಮಾಡಿದೆ ಎಂದಿದ್ದಾರೆ.
ಬಹುಶಃ ಮದುವೆ ಆದ ಮೇಲೆ ಮಲ್ಲ ಸಿನಿಮಾ ರಿಲೀಸ್ ಆಗಿದ್ದಕ್ಕೆ ಹಾಗೆಲ್ಲ ಕಥೆಗಳು ಹುಟ್ಟಿಕೊಂಡಿರಬಹುದು. ನನಗೆ ಆಗ ಸರಿ ಅನ್ನಿಸಿದ್ದನ್ನು ಮಾಡಿದ್ದೇನೆ. ಪಶ್ಚಾತ್ತಾಪವಂತೂ ಖಂಡಿತಾ ಇಲ್ಲ ಎಂದಿದ್ದಾರೆ ಪ್ರಿಯಾಂಕಾ ಉಪೇಂದ್ರ. ಮಲ್ಲ’ ಸಿನಿಮಾ ಶೂಟಿಂಗ್ ಮಾಡುವಾಗಲೇ ಉಪೇಂದ್ರ ಹಾಗೂ ಪ್ರಿಯಾಂಕಾ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ಕನ್ನಡದ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದ ಪ್ರಿಯಾಂಕಾ ಗೆ ಕ್ರೇಜಿಸ್ಟಾರ್ ‘ಮಲ್ಲ’ ಸಿನಿಮಾದಲ್ಲಿ ನಟಿಸಲು ಆಫರ್ ಕೊಟ್ಟಿದ್ದರು. ಈ ಸಿನಿಮಾ ಮುಗಿಸಿ ಅದು ರಿಲೀಸ್ ಆಗುವ ಗ್ಯಾಪ್‌ನಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕಾ ಮದುವೆ ನಡೆದು ಹೋಗಿತ್ತು. ಆದರೆ, ಪ್ರಿಯಾಂಕಾ ಅವರಿಗೆ ಮದುವೆ ಬಳಿಕೆ ಈ ಸಿನಿಮಾ ರಿಲೀಸ್ ಆಗುತ್ತೆ ಅನ್ನೋದು ಗೊತ್ತಿರಲಿಲ್ಲ. ‘ಮಲ್ಲ’ ಬಿಡುಗಡೆಯಾಗುತ್ತಿದ್ದಂತೆ ವಿವಾದಕ್ಕೆ ಗುರಿಯಾಗಬೇಕಾಗಿ ಬಂದಿತ್ತು.
ಇನ್ನು ಚಿತ್ರದಲ್ಲಿ ಬಾಂಗಡಿ ಮೀನು ಬಳುಕಿದಾಗ ಹಾಡನ್ನು ತೆಗೆದು ಹಾಕಲಾಗಿತ್ತು. ಆಗ ಕ್ಯಾಸೆಟ್ಟಿನಲ್ಲಿ ಆ ಹಾಡು ಇತ್ತು. ಆದರೆ ಸಿನಿಮಾದಲ್ಲಿ ಇರಲಿಲ್ಲ. ಆ ಹಾಡಿನಲ್ಲಿ ಪ್ರಿಯಾಂಕಾ ಇನ್ನಷ್ಟು ಮತ್ತಷ್ಟು ಎಕ್ಸ್‌ಪೋಸ್ ಮಾಡಿದ್ದಾರಂತೆ. ಅದಕ್ಕೇ ಉಪೇಂದ್ರ ಆ ಹಾಡನ್ನು ತೆಗೆಸಿದ್ದಾರಂತೆ ಎಂಬ ಕಥೆಗಳೂ ಹುಟ್ಟಿಕೊಂಡಿದ್ದವು. ಅದನ್ನು ನಿರಾಕರಿಸಿರುವ ಪ್ರಿಯಾಂಕಾ ಉಪೇಂದ್ರ ಹಾಗೆಲ್ಲ ಏನಿರಲಿಲ್ಲ. ಮಲ್ಲ ಚಿತ್ರದ ಪ್ರತಿ ಹಾಡು ಕೂಡಾ ರೊಮ್ಯಾಂಟಿಕ್ ಆಗಿಯೇ ಶೂಟ್ ಆಗಿದೆ. ಅದನ್ನು ಯಾಕೆ ಡಿಲೀಟ್ ಮಾಡಲಾಯಿತು ಎನ್ನುವುದು ನನಗೂ ಗೊತ್ತಿಲ್ಲ. ಆ ಹಾಡನ್ನು ಕೂಡಾ ರೊಮ್ಯಾಂಟಿಕ್ ಆಗಿಯೇ ಚಿತ್ರೀಕರಿಸಲಾಗಿತ್ತು ಎಂದಿದ್ದಾರೆ.
ಅಂತಿಮವಾಗಿ ಆ ಹಾಡನ್ನು ಪಾಂಡುರಂಗವಿಠಲ ಚಿತ್ರದಲ್ಲಿ ಬಳಸಿಕೊಳ್ಳಲಾಗಿತ್ತು. ಆಗ ರವಿಚಂದ್ರನ್ ಮತ್ತು ರಂಭಾ ಆ ಹಾಡಿನಲ್ಲಿ ನಟಿಸಿದ್ದರು.



