ಅವರಿಬ್ಬರದ್ದೂ ಸರಿ ಸುಮಾರು 10 ವರ್ಷಗಳ ಪ್ರೀತಿ. ದಾಂಪತ್ಯ ಎನ್ನುವುದಕ್ಕೆ ಬರುವುದಿಲ್ಲವಾದರೂ.. ಒಂದು ರೀತಿಯಲ್ಲಿ ಸಂಸಾರವೇ. ದರ್ಶನ್ ಅವರಿಗೆ ಪತ್ನಿಯಾಗಿ ವಿಜಯಲಕ್ಷ್ಮಿ ಅವರಿದ್ದರೂ.. ಪತ್ನಿಯಂತೆಯೇ ಇದ್ದವರು ಪವಿತ್ರಾ ಗೌಡ. ಅವರಿಬಬರದ್ದೂ.. ಒಂದಲ್ಲ.. ಎರಡಲ್ಲ.. 9 ರಿಂದ 10 ವರ್ಷಗಳ ಲವ್ ಸ್ಟೋರಿ.
ಅಂತಹ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಸಂಬಂದ ಜೈಲಿಗೆ ಹೋದ ಮೇಲೆ ಕಿತ್ತು ಹೋಗಿದ್ಯಾ..? ಇಬ್ಬರ ನಡುವೆ ಮಾತುಕತೆಯೂ ಇಲ್ಲವಾ..? ಇಂತಹ ಪ್ರಶ್ನೆಗಳು ಉದ್ಭವವಾಗುತ್ತಿರುವುದಕ್ಕೆ ಹಲವು ಕಾರಣಗಳಿವೆ. ದರ್ಶನ್ ಜೈಲಿಗೆ ಹೋಗಿದ್ದು ಪವಿತ್ರಾ ಗೌಡ ಅವರಿಗೆ ಕೆಟ್ಟ ಮೆಸೇಜ್ ಮಾಡಿದ ರೇಣುಕಾಸ್ವಾಮಿಯನ್ನು ಕೊಂದ ಅಥವಾ ಕೊಲ್ಲಿಸಿದ ಆರೋಪದಲ್ಲಿ. ಪವಿತ್ರಾ ಗೌಡ ಅವರ ಮೇಲಿನ ಪ್ರೀತಿ, ಆಸೆಗಾಗಿಯೇ ಇದನ್ನೆಲ್ಲ ಮಾಡಿದ್ದರೂ.. ಜೈಲಿಗೆ ಹೋಗಬಹುದು ಎಂಬ ನಿರೀಕ್ಷೆ ಇರಲಿಲ್ಲವೇನೋ.. ಆದರೆ ಜೈಲಿಗೆ ಹೋದ ಮೇಲೆ ಎಲ್ಲವೂ ಬದಲಾದಂತೆ ಕಾಣ್ತಿದೆ.
ದರ್ಶನ್ ಅವರ ಜೊತೆ ಇದುವರೆಗೆ ಮಾತನಾಡಿರುವ ಪತ್ನಿ ವಿಜಯಲಕ್ಷ್ಮಿ, ತಾಯಿ ಮೀನಾ, ತಮ್ಮ ದಿನಕರ್ ಸೇರಿದಂತೆ ಎಲ್ಲರೂ ದರ್ಶನ್ ಅವರಿಗೆ ಹಾಕಿರುವ ಷರತ್ತು ʻಪವಿತ್ರಾ ಗೌಡ ಅವರಿಂದ ದೂರ ಇರುʼ ಎನ್ನುವುದು. ಇದು ಖಚಿತ ಇರಬಹುದು ಅಥವಾ ಇಲ್ಲದೆಯೂ ಇರಬಹುದು. ಆದರೆ ದರ್ಶನ್ ಜೈಲಿನಲ್ಲಿ ಪವಿತ್ರಾ ಗೌಡ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ್
ದರ್ಶನ್ ಮತ್ತು ಪವಿತ್ರಾ ಗೌಡ ಇಬ್ಬರೂ ಇರುವುದು ಪರಪ್ಪನ ಅಗ್ರಹಾರ ಜೈಲಿನಲ್ಲೇ ಆದರೂ, ಪವಿತ್ರಾ ಗೌಡ ಇರುವುದು ಮಹಿಳಾ ಬ್ಯಾರಕ್ʻನಲ್ಲಿ. ಎರಡರ ನಡುವೆ ಕಾಂಟ್ಯಾಕ್ಟ್ ಇಲ್ಲ. ಹೀಗಿದ್ದರೂ.. ಜೈಲಿನಲ್ಲಿ ಒಂದು ನಿಯಮವಿದೆ.
ವಾರದಲ್ಲಿ ಒಂದು ದಿನ ಒಂದೇ ಪ್ರಕರಣದ ಆರೋಪಿಗಳು ಪರಸ್ಪರ ಭೇಟಿಯಾಗಬಹುದು. ಮಾತನಾಡಬಹುದು. ಗುರುವಾರವನ್ನು ಅದಕ್ಕೆಂದೇ ನಿಗದಿ ಮಾಡಲಾಗಿದೆ. ಆದರೆ.. ಇಬ್ಬರೂ ಜೈಲಿಗೆ ಹೋಗಿ ತಿಂಗಳಾಗಿದ್ದರೂ.. ಪ್ರತಿ ಗುರುವಾರ ಪರಸ್ಪರ ಭೇಟಿಗೆ ಅವಕಾಶ ಇದ್ದರೂ.. ದರ್ಶನ್ ಆಗಲೀ ಅಥವಾ ಪವಿತ್ರಾ ಗೌಡ ಅವರಾಗಲೀ.. ಪರಸ್ಪರ ಭೇಟಿ ಮಾಡಿಲ್ಲ.
ಆದರೆ ವಕೀಲರ ವಿಷಯದಲ್ಲಿ ಹಾಗಲ್ಲ. ವಕೀಲರು ದರ್ಶನ್ ಅವರನ್ನು ಮಾತ್ರ ಸಮರ್ಥಿಸಿಕೊಳ್ಳುವಂತಿಲ್ಲ. ಅದು ಅನಿವಾರ್ಯ. ಆದರೆ.. ಜೈಲಿನಲ್ಲಿ ಆಗಿರುವ ಬೆಳವಣಿಗೆ ನೋಡುತ್ತಿದ್ದರೆ.. ಇಬ್ಬರ ಮಧ್ಯೆ ಲವ್ ಬ್ರೇಕಪ್ ಆಗಿದೆ ಎಂಬ ಸುದ್ದಿಯಂತೂ ಜೋರಾಗಿದೆ.
ಅಂದಹಾಗೆ ಈ ರೀತಿ ಲವ್ ಮತ್ತು ಬ್ರೇಕಪ್ ಇಬ್ಬರಿಗೂ ಹೊಸದೇನಲ್ಲ. ಸುಮಾರು 10 ವರ್ಷಗಳಿಂದ ಇಬ್ಬರ ಮಧ್ಯೆ ಸ್ನೇಹ ಸಂಬಂಧ ಇದ್ದರೂ.. ಆಗಾಗ್ಗೆ ಮುನಿಸಿಕೊಳ್ಳೋದು, ಮಾತು ಬಿಡೋದು.. ಕೆಲವು ದಿನಗಳ ನಂತರ ಮತ್ತೊಮ್ಮೆ ಅಂಟಿಕೊಳ್ಳೋದು ನಡೆಯುತ್ತಲೇ ಇದೆ. ಜೈಲಿನಲ್ಲಿ ಆಗಿರುವ ಈ ಬೆಳವಣಿಗೆಯೂ ಅಂತದ್ದೇ ಅನ್ನೋದು ಬ್ರೇಕಪ್ ಸುದ್ದಿ ಒಪ್ಪದವರ ವಾದ.
ಜೈಲು ಸೇರಿದ ಮೇಲೆ ಒಂಟಿಯಾಗಿರುವ ಪವಿತ್ರಾ ಗೌಡ ಅವರ ದೇಹದ ತೂಕ ಸಾಕಷ್ಟು ಇಳಿದಿದೆ. ಒಂಟಿಯಾಗಿಯೇ ಇರುವ ಪವಿತ್ರಾ ಗೌಡ ಅವರನ್ನು ತಮ್ಮ, ಗೆಳತಿ ಭೇಟಿಯಾಗುತ್ತಿದ್ದಾರೆ. ಅವರು ಬಂದಾಗ ಮಾತುಕತೆ ಎಷ್ಟೋ ಅಷ್ಟೆ, ಉಳಿದಂತೆ ಪವಿತ್ರಾ ಗೌಡ ಸೈಲೆಂಟ್ ಆಗಿರುತ್ತಾರೆ.
ಇನ್ನು ದರ್ಶನ್ ಕೂಡಾ ಅಷ್ಟೆ, ಜೈಲು ಮತ್ತೊಮ್ಮೆ ಹೊಸ ಪಾಠವನ್ನೇ ಕಲಿಸಿದಂತಿದೆ. ಜೈಲಿನಲ್ಲಿ ವಿಗ್ ತೆಗೆಸಲಾಗಿದೆ. ಒಮ್ಮೆ ವೈರಲ್ ಫೀವರ್ ಕೂಡಾ ಬಂದು.. ಒಂದಿಡೀ ವಾರ ಕಾಟ ಕೊಟ್ಟಿದೆ. ದೇಹದ ತೂಕ ಇಳಿದಿದೆ. ಜೈಲಿನಲ್ಲಿ ಪುಸ್ತಕ, ಪೇಪರ್ ಓದುತ್ತಾ ಕಾಲ ಕಳೆಯುತ್ತಿದ್ದಾರೆ. ಒಂಟಿಯಾಗಿ. ಏಕೆಂದರೆ ದರ್ಶನ್ ಇರುವುದು ವಿಐಪಿ ಸೆಲ್ʻನಲ್ಲಿ.
ದರ್ಶನ್ ಅವರು ಕಾನೂನಿನ ಅವಕಾಶ ಇದ್ದರೂ.. ಪವಿತ್ರಾ ಗೌಡ ಅವರನ್ನು ಭೇಟಿ ಮಾಡುತ್ತಿಲ್ಲ ಏಕೆ ಅನ್ನೋದಕ್ಕೆ ಉತ್ತರ ಜೈಲಿಂದ ಅವರು ಹೊರ ಬಂದ ಮೇಲೆ ತಿಳಿಯಬಹುದು. ಆದರೆ.. ಹೊರಗೆ ಬರುತ್ತಾರಾ..?



