ಸುಮ್ಮನೆ ಕೂತಿರುವಾಗ.. ಯಾವುದೋ ಕೆಲಸ ಮಾಡ್ತಿರೋವಾಗ ಕಣ್ಣುಗಳು ಇದ್ದಕ್ಕಿದ್ದಂತೆ ಅದುರುತ್ತವೆ. ಹುಬ್ಬುಗಳು ತಮಗೇ ಅರಿವಿಲ್ಲದಂತೆ ಹಾಡುತ್ತವೆ. ತುಟಿಗಳು ಇದ್ದಕ್ಕಿದ್ದಂತೆ ಪಟಪಟನೆ ಹೊಡೆದುಕೊಳ್ಳುತ್ತವೆ. ಒಂದು ವಿಚಿತ್ರ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ನಿಮಿಷಗಳ ಕಾಲ ಹೀಗೆಲ್ಲ ಆಗುತ್ತಲೇ ಇರುತ್ತದೆ. ಶಕುನ ಶಾಸ್ತ್ರದ ಪ್ರಕಾರ, ಕೆಲವೊಂದು ಘಟನೆಗಳು ನಮ್ಮ ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬುದರ ಕುರಿತು ಸೂಚನೆಯನ್ನು ನೀಡುತ್ತದೆ. ಅಂಗೈ ತುರಿಸುವುದು, ಹುಬ್ಬುಗಳು ಅದುರುವುದು, ಕಣ್ಣುಗಳು ಹೊಡೆದುಕೊಳ್ಳುವುದು ಮುಂದಿನ ದಿನಗಳಲ್ಲಿ ನಿಮ್ಮ ಜೀವನ ಹೇಗಿರಬಹುದು ಸಿಗ್ನಲ್ ಕೊಡುತ್ತವೆ. ಶಕುನ ಶಾಸ್ತ್ರದ ಪ್ರಕಾರ ಪುರುಷರಿಗೆ ಮತ್ತು ಸ್ತ್ರೀಯರಿಗೆ ಪ್ರತ್ಯೇಕ ಸಂದೇಶಗಳಿವೆ.
ಮಹಿಳೆಯರ ಬಲಗಣ್ಣು ಹೊಡೆದುಕೊಂಡರೆ..
ಅದನ್ನು ಶುಭವೆಂದು ಹೇಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಯಾವುದಾದರೊಂದು ಸಮಸ್ಯೆಯನ್ನು ಎದುರಿಸುತ್ತೀರಿ ಎಂಬುದರ ಸೂಚನೆ. ಇದು ಮಹಿಳೆಯರಲ್ಲಿ ಮಾನಸಿಕ ಒತ್ತಡವನ್ನು, ಆರೋಗ್ಯದ ಸಮಸ್ಯೆಗಳನ್ನು ಸೇರಿದಂತೆ ಇನ್ನಿತರ ಸಮಸ್ಯೆಗಳ ಸೂಚನೆ.
ಪುರುಷರಲ್ಲಿ ಬಲಗಣ್ಣು ಹೊಡೆದುಕೊಂಡರೆ..
ಮಹಿಳೆಯರಲ್ಲಿ ಬಲಗಣ್ಣು ಬಡಿದುಕೊಳ್ಳುವುದು ಅಶುಭವಾದರೆ, ಪುರುಷರಲ್ಲಿ ಅದು ಶುಭ ಸೂಚನೆ.ಪುರುಷರಲ್ಲಿ ಬಲಗಣ್ಣು ಹೊಡೆದುಕೊಳ್ಳುವುದು ಮುಂದಿನ ದಿನಗಳಲ್ಲಿ ಅವರು ಶುಭ ಸುದ್ದಿಯನ್ನು ಪಡೆದುಕೊಳ್ಳುತ್ತಾರೆ. ಉದ್ಯೋಗದಲ್ಲಿ, ಯಶಸ್ಸನ್ನು ಸಾಧಿಸುತ್ತಾರೆ ಎಂಬ ನಂಬಿಕೆ ಇದೆ.
ಮಹಿಳೆಯರ ಎಡಗಣ್ಣು ಹೊಡೆದುಕೊಂಡರೆ..
ಬಲಗಣ್ಣು ಅಶುಭವಾದರೆ, ಎಡಗಣ್ಣು ಶುಭವಂತೆ.ಇದು ಆ ಮಹಿಳೆಗೆ ಒಳ್ಳೆಯ ಸುದ್ದಿಗಳ ಜೊತೆಗೆ ಅವರು ಕೈಗೆತ್ತಿಕೊಂಡ ಎಲ್ಲಾ ಕೆಲಸಗಳು ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುವುದು ಎಂಬುದರ ಸಂಕೇತ.
ಪುರುಷರ ಬಲಗಣ್ಣು ಹೊಡೆದುಕೊಂಡರೆ..
ಅದೇ ಪುರುಷರ ಎಡಗಣ್ಣು ಹೊಡೆದುಕೊಳ್ಳಲು ಪ್ರಾರಂಭಿಸಿದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಯಾವುದೋ ಕೆಟ್ಟ ಸುದ್ದಿ ಅವರಿಗಾಗಿ ಕಾಯುತ್ತಿದೆ ಎಂದೇ ಅರ್ಥ.
ಇದು ಕಣ್ಣಿನ ವಿಚಾರವಾದರೆ..ಹುಬ್ಬುಗಳ ವಿಷಯದಲ್ಲಿಯೂ ನಂಬಿಕೆಗಳಿವೆ. ಕಣ್ಣು ಅದುರದೆ.. ಕೇವಲ ಹುಬ್ಬು ಮಾತ್ರವೇ ಪಟ ಪಟ ಎಂದು ಬಡಿದುಕೊಳ್ಳುತ್ತಿದ್ದರೆ.. ಅರ್ಥ ಸಂಕೇತಗಳೇ ಬೇರೆ.
ಮಹಿಳೆಯರ ಬಲ ಹುಬ್ಬು: ಮಹಿಳೆಯರ ಬಲ ಹುಬ್ಬು ಅದುರುವುದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲವೆಂದು ಶಕುನ ಶಾಸ್ತ್ರ ಹೇಳಿದೆ. ಇದು ಸದ್ಯದಲ್ಲೇ ಎದುರಾಗಬಹುದಾದ ಸಮಸ್ಯೆಗಳ ಸೂಚನೆಯಾಗಿದೆ. ಮಹಿಳೆಯರು ಹಣಕಾಸಿನ ಸಮಸ್ಯೆಗಳನ್ನು ಎದುರಿಸುವ ಮುನ್ನ ಇಂತಹ ಸೂಚನೆಯನ್ನು ಪಡೆದುಕೊಳ್ಳುತ್ತಾರೆ.
ಪುರುಷರ ಬಲಹುಬ್ಬು ಅದುರಿದರೆ..
ಅದು ಶುಭ ಸೂಚನೆ. ಇದು ಮಹಿಳೆಯರಿಗೆ ಹಣಕಾಸಿನ ಸಮಸ್ಯೆಗಳ ಸೂಚನೆಯಾದರೆ, ಪುರುಷರಿಗೆ ಧನಲಾಭದ ಸೂಚನೆ.
ಮಹಿಳೆಯರ ಎಡ ಹುಬ್ಬು ಅದುರಿದರೆ..
ಅದು ಅಶುಭದ ಸೂಚನೆ. ಆದರೆ ಹೆಣ್ಣು ಮಕ್ಕಳಿಗೆ ಎಡಹುಬ್ಬು ಶುಭ ಸಂದೇಶದ ಸಂಕೇತ. ಮಹಿಳೆಯರಿಗೆ ಧನಲಾಭವನ್ನು, ಶುಭ ಸುದ್ದಿಯನ್ನು ತರುತ್ತದಂತೆ.
ಪುರುಷರ ಎಡ ಹುಬ್ಬು ಹಾರಿದರೆ ಅದು ಅಶುಭದ ಸುಳಿವು. ದೊಡ್ಡ ಹಣಕಾಸಿನ ಸಮಸ್ಯೆಯನ್ನು ಸೂಚಿಸುತ್ತದೆ.
ಅಂಗೈ ತುರಿಕೆ ಸಂಕೇತಗಳು
ಪುರುಷರ ಬಲ ಅಂಗೈ ತುರಿಕೆಯಾದರೆ ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪುರುಷನಾಗಲಿ ಅಥವಾ ಸ್ತ್ರೀಯಾಗಲಿ ಹಣಕಾಸಿನ ಲಾಭವನ್ನು ಪಡೆಯುವುದಕ್ಕೂ ಮುನ್ನ ಅಥವಾ ಅನಿರೀಕ್ಷಿತ ಧನಾಗಮನಕ್ಕೂ ಮುನ್ನ ಇಂತಹ ಸಂದೇಶ ಸಿಗುತ್ತದೆ ಎನ್ನುವ ನಂಬಿಕೆ ಇದೆ.
ಎಡ ಅಂಗೈ ತುರಿಕೆಯನ್ನು ಶುಭ ಸಂದೇಶ ಎಂದು ಪರಿಗಣಿಸುವುದಿಲ್ಲ. ಣದ ಸಮಸ್ಯೆಗಳು ಎದುರಾಗುವುದಕ್ಕೂ ಮುನ್ನ ಇಂತಹ ಘಟನೆಗಳು ಸಂಭವಿಸುತ್ತದೆ. ಇದು ನಿಮ್ಮ ಖರ್ಚು, ವೆಚ್ಚಗಳು ಹೆಚ್ಚಾಗಬಹುದು.
ಕೈ ನಡುಕ ಇದ್ದರೆ.. ಹಿಡಿತ ತಪ್ಪುತ್ತಿದ್ದರೆ..
ಕೆಲವೊಮ್ಮೆ ಕೈಲಿ ಹಿಡಿದುಕೊಂಡಿದ್ದ ವಸ್ತುಗಳ ಮೇಲೆ ಇದ್ದಕ್ಕಿದ್ದಂತೆ ಕಂಟ್ರೋಲ್ ತಪ್ಪುತ್ತದೆ. ಶಕುನ ಶಾಸ್ತ್ರದ ಪ್ರಕಾರ ಈ ರೀತಿ ಆಗಿ ಕೈಯಿಂದ ಗಾಜು ಬಿದ್ದು ಒಡೆದು ಹೋಗುವುದು ಶುಭವೆಂದು ಪರಿಗಣಿಸಲಾಗುತ್ತದೆ.ಹಣಕಾಸಿನ ಸಮಸ್ಯೆಗಳಿಂದ ನೀವು ಮುಕ್ತರಾಗುತ್ತೀರಿ. ಅಥವಾ ಇನ್ನಾವುದೋ ದೊಡ್ಡ ಸಮಸ್ಯೆಗಳಿಂದ ನೀವು ಮುಕ್ತರಾಗುವಿರಿ ಎಂದು ಹೇಳುತ್ತದೆ. ನಿಮ್ಮ ಕೈಯಿಂದ ಗಾಜು ಬಿದ್ದು ಒಡೆದು ಹೋದರೆ ತಕ್ಷಣ ಅದನ್ನು ವ್ಯವಸ್ಥಿತವಾಗಿ ಎಸೆಯಬೇಕು. ಮನೆಯಲ್ಲಿ ಒಡೆದ ಗಾಜನ್ನು ಇಟ್ಟುಕೊಳ್ಳುವುದು ನಕಾರಾತ್ಮಕತೆಯನ್ನು ಆಹ್ವಾನಿಸುತ್ತದೆ.
ವೈಜ್ಞಾನಿಕವಾಗಿ ಣ್ಣು ಅದುರುವುದು (ಅಥವಾ ಹೊಡೆದುಕೊಳ್ಳುವುದು/ರೆಪ್ಪೆ ಮಿಟುಕಿಸುವುದು) ಸಾಮಾನ್ಯವಾಗಿ ಸ್ಟ್ರೆಸ್, ನಿದ್ರೆ ಕೊರತೆ, ಕಣ್ಣಿನ ಒಣಗುವಿಕೆ, ಕ್ಯಾಫೀನ್ ಹೆಚ್ಚು, ಅಥವಾ ಕಣ್ಣಿನ ಸ್ನಾಯುಗಳ ಸಮಸ್ಯೆಯಿಂದ ಉಂಟಾಗುತ್ತದೆ. ಇದೆಲ್ಲಾ ಪುರಾತನ ನಂಬಿಕೆಗಳು ಮತ್ತು ಮೂಢನಂಬಿಕೆಗಳಾಗಿವೆ – ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಹೆಚ್ಚು ಅದುರಿದರೆ ಕಣ್ಣಿನ ವೈದ್ಯರನ್ನು ಭೇಟಿಯಾಗಿ, ವಿಶ್ರಾಂತಿ ತೆಗೆದುಕೊಳ್ಳಿ, ನೀರು ಹೆಚ್ಚು ಕುಡಿಯಿರಿ.



