ಒಂದು ಸಿನಿಮಾದಲ್ಲಿ ಥಿಯೇಟರ್ʻಗೆಬಂದಾಗ ಜನ ನೋಡಲಿಲ್ಲ. ಆದರೆ ಅದೇ ಸಿನಿಮಾ ಥಿಯೇಟರಿಗೆ ಬಂದು ತಿಂಗಳುಗಳ ನಂತರ ಒಟಿಟಿಗೆ ಬಂದಾಗ ದೊಡ್ಡ ವಿವಾದವೇ ಸೃಷ್ಟಿಯಾಗಿದೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿನಯದ ‘ಅನ್ನಪೂರ್ಣಿ’ ಸಿನಿಮಾ. ಈ ಈ ಚಿತ್ರವನ್ನು ನೆಟ್‌ಫ್ಲಿಕ್ಸ್ ಓಟಿಟಿ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಲಾಗಿದೆ. ಜೊತೆಗೆ ಸಿನಿಮಾ ನಿರ್ಮಾಣ ಮಾಡಿದ್ದ ಸಂಸ್ಥೆ ಝೀ ಸ್ಟುಡಿಯೋಸ್ ಕ್ಷಮೆಯನ್ನೂ ಕೇಳಿದೆ.
‘ಅನ್ನಪೂರ್ಣಿ’ ಸಿನಿಮಾ ಹಿಂದೂಗಳ ಅವಹೇಳನದ ಆರೋಪ ಎದುರಿಸುತ್ತಿದ್ದು, ಹಲವು ಹಿಂದೂ ಸಂಘಟನೆಗಳು ಚಿತ್ರದ ವಿರುದ್ಧ ದೂರು ನೀಡಿದ್ದವು. ಸಿನಿಮಾ ಥಿಯೇಟರುಗಳಲ್ಲಿ ಫ್ಲಾಪ್ ಆಗಿತ್ತು. ಜನ ಥಿಯೇಟರಿಗೆ ಬರದೆ ಚಿತ್ರದಲ್ಲಿ ಏನಿದೆ ಅನ್ನೋದೇ ಗೊತ್ತಾಗಿರಲಿಲ್ಲ. ಆದರೆ ಓಟಿಟಿಗೆ ಬಂದ ಮೇಲೆ ಚಿತ್ರವನ್ನು ನೋಡಿದ ಜನ ಕೆರಳಿದ್ದರು. ಏಕೆಂದರೆ ಅನ್ನಪೂರ್ಣಿಯಲ್ಲಿ ನಮಾಜ್ ಮಾಡಿ ಬಿರಿಯಾನಿ ಮಾಡುವುದನ್ನು ತೋರಿಸುತ್ತಲೇ, ಮಾಂಸಾಹಾರ ತಿನ್ನದ, ಸಸ್ಯಾಹಾರ ತಿನ್ನುವವರೆಲ್ಲ ದುಷ್ಟರು ಎಂಬಂತೆ ಬಿಂಬಿಸಲಾಗಿತ್ತು.
ಅನ್ನಪೂರ್ಣಿ ಸಿನಿಮಾದಲ್ಲಿ ಕಾಂಟ್ರವರ್ಸಿ ಏನು?
ಅನ್ನಪೂರ್ಣಿ’ ಸಿನಿಮಾದಲ್ಲಿ ನಾಯಕಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿರುತ್ತಾಳೆ. ಆಕೆ ನಮಾಜ್ ಮಾಡಿ, ನಾನ್‌ವೆಜ್ ಅಡುಗೆ ಮಾಡುವಂತೆ ಸಿನಿಮಾದಲ್ಲಿ ತೋರಿಸಲಾಗಿದೆ. ಚಿತ್ರದುದ್ದಕ್ಕೂ ಹಿಂದೂ ಧರ್ಮದ ಬಗ್ಗೆ ಕೇವಲ ಎನ್ನಿಸುವಂತೆ ಮಾಡುವ ಡೈಲಾಗುಗಳಿವೆ. ನಿಮಾದ ಹೀರೋ ಮುಸ್ಲಿಂ ಸಮುದಾಯದವನಾಗಿದ್ದು, ಒಂದು ದೃಶ್ಯದಲ್ಲಿ ಶ್ರೀರಾಮನು ಮಾಂಸಾಹಾರಿಯಾಗಿದ್ದ, ಹೀಗಾಗಿ ಮಾಂಸ ತಿಂದರೆ ತಪ್ಪೇನಿಲ್ಲ ಎನ್ನುವ ದೃಶ್ಯವೂ ಇದೆ. ಚಿತ್ರದಲ್ಲಿ ಲವ್ ಜಿಹಾದ್ ಬೆಂಬಲಿಸುವ ಸನ್ನಿವೇಶಗಳಿವೆ. ಇವೆಲ್ಲವೂ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಮಾಡುತ್ತಿವೆ ಎಂದು ಹಲವು ಹಿಂದೂ ಸಂಘಟನೆಗಳು ದೂರು ಕೊಟ್ಟಿದ್ದವು.
ಕಾಂಟ್ರವರ್ಸಿ ಸೀನ್ʻಗಳೇನು?
ಶೆಫ್ ಆಗಬೇಕೆಂದು ಬಯಸುವವರು ಮಾಂಸಾಹಾರ ತಿನ್ನಲೇ ಬೇಕು. ಇಲ್ಲದಿದ್ದರೆ ಸಾಧ್ಯವೇ ಇಲ್ಲ ಎಂದು ತೋರಿಸಲಾಗಿದೆ.
ನಾನ್ʻವೆಜ್ ಮಾಡುವುದನ್ನು ಕಲಿಯುವ ನಾಯಕಿಯ ಅಡುಗೆಯಲ್ಲಿ ಟೇಸ್ಟ್ ಇರುವುದಿಲ್ಲ. ಆಗ ಸ್ವತಃ ನಾನ್ʻವೆಜ್ ತಿಂದರಷ್ಟೇ ಒಳ್ಳೆಯ ಟೇಸ್ಟ್ ಬರುತ್ತೆ ಎಂದು ತೋರಿಸಲಾಗಿದೆ.
ಬಿರಿಯಾನಿ ಮಾಡುವುದಕ್ಕೂ ಮುನ್ನ ನಮಾಜ್ ಮಾಡುವ ದೃಶ್ಯವಿದೆ. ಬಿರಿಯಾನಿ ಮಾಡುವವರು ನಮಾಜ್ ಮಾಡುವುದೇಕೆ..?
ಹೀಗೆ ಹಲವು ವಿವಾದಾತ್ಮಕ ದೃಶ್ಯಗಳಿವೆ.
ಕ್ಷಮೆ ಕೇಳಿ ಸಿನಿಮಾ ಹಿಂದೆಗೆದುಕೊಂಡ ಜೀ ಸ್ಟುಡಿಯೋ
ಈ ಸಿನಿಮಾದ ಸಹ ನಿರ್ಮಾಪಕರಾದ ನಮಗೆ ಹಿಂದೂಗಳು ಮತ್ತು ಬ್ರಾಹ್ಮಣ ಸಮುದಾಯಕ್ಕೆ ನೋವುಂಟು ಮಾಡುವ ಯಾವುದೇ ಉದ್ದೇಶ ಇರಲಿಲ್ಲ. ಈ ಸಮುದಾಯಗಳ ಧಾರ್ಮಿಕ ಭಾವನೆಗಳಿಗೆ ನೋವು ಉಂಟಾಗಿರುವುದಕ್ಕೆ ನಾವು ಕ್ಷಮಾಪಣೆ ಕೇಳಲು ಬಯಸುತ್ತೇವೆ ಎಂದು ಹೇಳಿರುವ ಝೀ ಸ್ಟುಡಿಯೋಸ್, ಹಿಂದೂಗಳ ಕ್ಷಮೆ ಕೇಳಿದೆ. ಬೆನ್ನಲ್ಲೇ ನೆಟ್ʻಫ್ಲಿಕ್ಸ್ ಒಟಿಟಿಯಿಂದ ಅನ್ನಪೂರ್ಣಿ ಸಿನಿಮಾವನ್ನು ತೆಗೆದು ಹಾಕಲಾಗಿದೆ. ನೆಟ್ʻಫ್ಲಿಕ್ಸ್ ವಿರುದ್ಧ ಒಟಿಟಿಯನ್ನೇ ಬ್ಯಾನ್ ಮಾಡಬೇಕು ಎಂಬ ಅಭಿಯಾನವೂ ಶುರುವಾಗಿತ್ತು. ಕೊನೆಗೆ ಪ್ರತಿಭಟನೆಗೆ ಮಣಿದಂತೆ ಕಾಣುತ್ತಿದೆ.
ಅನ್ನಪೂರ್ಣಿಯ ಕಥೆ : ಇದು ನಯನತಾರಾ ಅವರ 75ನೇ ಸಿನಿಮಾ. ನಿಲೇಶ್ ಕೃಷ್ಣ ಎಂಬ ಹೊಸಬ ನಿರ್ದೇಶಕನ ಮೊದಲ ಪ್ರಯತ್ನ. ನಿರ್ಮಾಣದಲ್ಲಿ ಜತಿನ್ ಸೇಥಿ, ಆರ್ ರವೀಂದ್ರನ್ ಜೊತೆಗೆ ಜೀ ಸ್ಟುಡಿಯೋಸ್ ಕೈಜೋಡಿಸಿದೆ. ನಯನತಾರಾ ಜೊತೆಗೆ ಜೈ ಹೀರೋ. ಕನ್ನಡದ ಅಚ್ಯುತ್ ಕುಮಾರ್ ಅವರು ನಯನತಾರಾ ಅವರ ತಂದೆಯ ಪಾತ್ರ ಮಾಡಿದ್ದಾರೆ. ಸತ್ಯರಾಜ್, ಕೆ ಎಸ್ ರವಿಕುಮಾರ್, ಕಾರ್ತಿಕ್ ಕುಮಾರ್, ರೇಣುಕಾ ಮುಂತಾದವರು ನಟಿಸಿದ್ದಾರೆ.



