ಒಂದು ಹೊಚ್ಚ ಹೊಸ ಕಾರು. ಎಥೆನಾಲ್ ಕಾರು (Ethanol car) . ಈ ಕಾರಿಗೆ ಪೆಟ್ರೋಲ್ (Petrol) ಬೇಕಿಲ್ಲ. ಡೀಸೆಲ್ (Diesel) ಬೇಕಿಲ್ಲ. ಕೇವಲ ಎಥೆನಾಲ್ (Ethanol) ಸಾಕು. ಇಂಥಾದ್ದೊಂದು ಕಾರು ವಿಶ್ವದಲ್ಲೇ ಮೊದಲು. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ (Toyota kirolskar motors) ಸಂಸ್ಥೆಯ ಜನಪ್ರಿಯ ಇನ್ನೋವಾ (Innova Car) ಕಾರಿನ ಹೊಸ ಆವೃತ್ತಿ ಬಿಡುಗಡೆ ಆಗಿದೆ. ಟೊಯೋಟಾ ಕಂಪನಿಯ ಇನ್ನೋವಾ ಹೈಕ್ರಾಸ್ (Innova High cross car) ಕಾರು ಇದಾಗಿದ್ದು, 100% ಎಥೆನಾಲ್ ಬಳಸಿ ಓಡುತ್ತದೆ. ಟೊಯೊಟಾ ಇನ್ನೊವಾದ (Toyota Innova) ಈ ಹೊಸ ಆವೃತ್ತಿಯ ಕಾರನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nithin gadkari)ಬಿಡುಗಡೆ ಮಾಡಿದರು. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಇನ್ನೋವಾ ಕಾರು ಪರಿಸರ ಸ್ನೇಹಿ. ಜೈವಿಕ ಇಂಧನವಾಗಿರುವ ಎಥೆನಾಲ್ (Ethanol) ಸಂಪೂರ್ಣ ಸ್ವಚ್ಛ ಇಂಧನ. ದೆ. ಪೆಟ್ರೋಲ್ ಹಾಗೂ ಡೀಸೆಲ್ನಂತೆ ಇದು ಇಂಗಾಲದ ಡೈಆಕ್ಸೈಡ್ ಹಾಗೂ ಇತರ ವಿಷಾನಿಲಗಳನ್ನು ಹೊರಸೂಸುವುದಿಲ್ಲ. ಭಾರತದಲ್ಲಿ ಈಗಾಗಲೇ ಪೆಟ್ರೋಲ್ನಲ್ಲಿ ಸೀಮಿತ ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಿ ಬಳಸುವ ವಾಹನಗಳು ಮಾರುಕಟ್ಟೆಯಲ್ಲಿವೆ. ಇದೇ ಮೊದಲ ಬಾರಿ ಈಗ ಸಂಪೂರ್ಣ ಎಥೆನಾಲ್ (Ethanol) ಬಳಸಿ ಓಡುವ ಕಾರು ಮಾರುಕಟ್ಟೆಗೆ ಬಂದಿದೆ.
ಟೊಯೋಟಾ ಕಂಪನಿಯ ಪ್ರಕಾರ, ಸಂಪೂರ್ಣ ಎಥೆನಾಲ್ ಬಳಸಿ ಓಡುವ ಈ ಕಾರು ಜಗತ್ತಿನ ಮೊದಲ ಬಿಎಸ್-6 ಎಲೆಕ್ಟ್ರಿಫೈಡ್ ಕಾರಾಗಿದೆ. ಜೋಳ, ಕಬ್ಬು ಮುಂತಾದವುಗಳ ಹೊಟ್ಟಿನ ಬಯೋಮಾಸ್ನಿಂದ ಎಥೆನಾಲ್ ತಯಾರಿಸಲಾಗುತ್ತದೆ. ಇದು ಸಂಪೂರ್ಣ ನವೀಕರಿಸಬಹುದಾದ ಇಂಧನವಾಗಿದೆ.
ಭಾರತದಲ್ಲಿ ಸದ್ಯ ಪೆಟ್ರೋಲಿಯಂ ಉತ್ಪನ್ನಗಳ ಆಮದು ವೆಚ್ಚ 16 ಲಕ್ಷಕೋಟಿ ರೂ ಇದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಕಾರ ಇದು ಭಾರತಕ್ಕೆ ಅತೀವ ಆರ್ಥಿಕ ನಷ್ಟ ಉಂಟು ಮಾಡುತ್ತಿದೆ. ಇದನ್ನು ತಪ್ಪಿಸಲು ಇರುವ ಮಾರ್ಗವೆಂದರೆ ಪರ್ಯಾಯ ಇಂಧನ ಬಳಕೆ. ಇದೇ ಕಾರಣಕ್ಕೆ ಪೆಟ್ರೋಲ್ಗೆ ಪರ್ಯಾಯವಾಗಿರುವ ಇಂಧನ ಬಳಸುವ ಕಾರುಗಳನ್ನು ತಯಾರು ಮಾಡಲು ಕೇಂದ್ರ ಪ್ರೋತ್ಸಾಹಿಸುತ್ತಿದೆ.
ಹೈಬ್ರೀಡ್ ಇಂಜಿನ್ ಅಂದ್ರೆ ಪೆಟ್ರೋಲ್ ಹಾಗೂ ಎಥೆನಾಲ್ ಖಾಲಿ ಆದರೆ ಎಲೆಕ್ಟ್ರಿಕ್ ಚಾರ್ಜಿಂಗ್ ಮೇಲೂ ಓಡಬಹುದು. ಈ ಇನೋವಾ ಕಾರಿಗೆ ಪೆಟ್ರೋಲ್, ಡೀಸೆಲ್ ಬೇಡ! ಹೀಗಾಗಿ ಇದರ ಮಾಲೀಕರು ಪೆಟ್ರೋಲ್ ರೇಟ್ ಗಗನಕ್ಕೇರಿದರೂ, ಅಥವಾ ಸಿಗದೇ ಹೋದರೂ ನಿಶ್ಚಿಂತೆಯಿಂದ ಇರಬಹುದು. ಈಗ ಬಿಡುಗಡೆಯಾಗಿರುವ ಟೊಯೊಟಾ ಇನೋವಾ ಹೈ ಕ್ರಾಸ್ ಫ್ಲೆಕ್ಸ್ ಫ್ಯುಯೆಲ್ ಎಂಪಿವಿ ಕಾರಿನ ವಿಶೇಷತೆ ಏನೆಂದರೆ, ಸ್ವತಃ ಕಾರು ತಾನಾಗಿಯೇ ವಿದ್ಯುತ್ ಉತ್ಪಾದಿಸುತ್ತದೆ. ಹೀಗಾಗಿ ಎಲೆಕ್ಟ್ರಿಕ್ ಕಾರಿನಂತೆಯೂ ಚಲಾಯಿಸಬಹುದು.
ಭಾರತದಲ್ಲಿ ಕಳೆದ 2022-23ರಲ್ಲಿ 17,47,376 ಕಾರುಗಳು ಮಾರಾಟವಾಗಿವೆ. ಅಂದರೆ ದಿನಕ್ಕೆ ಸರಾಸರಿ 4,787 ಕಾರುಗಳು ಗ್ರಾಹಕರ ಪಾಲಾಗಿದೆ. ಇಷ್ಟು ದೊಡ್ಡ ಮಾರುಕಟ್ಟೆ ಭಾರತದಲ್ಲಿದೆ. ಇದು ಇನ್ನೂ ಬೆಳೆಯುವುದು ಖಚಿತ. ಇಂಥ ಸಂದರ್ಭ ಎಥೆನಾಲ್ ಇತ್ಯಾದಿ ಪರ್ಯಾಯ ಇಂಧನಗಳ ಪ್ರಯೋಗಕ್ಕೂ ಭಾರತ ಮುಕ್ತವಾಗಿರುವುದು ಗಮನಾರ್ಹ. ದೇಶವಾಗಿ ಭಾರತ ಬೆಳೆಯುತ್ತಿರುವುದಕ್ಕೆ ಇದೊಂದು ಪುಟ್ಟ ಉದಾಹರಣೆ.
1980-90ರಲ್ಲಿ ಕಾಂಟೆಸ್ಸಾ, ಫಿಯೆಟ್ ಪದ್ಮಿನಿ, ಮಾರುತಿ 1000, ಮಾರುತಿ ಜೆನ್, ಮಾರುತಿ ಒಮಿನಿ ಇತ್ಯಾದಿ ಕೆಲ ಮಾದರಿಗಳ ಕಾರುಗಳು ಮಾತ್ರ ನಮ್ಮಲ್ಲಿತ್ತು. ಆದರೆ ಈಗ ಮಾರುತಿ, ಹುಂಡೈ, ಟಾಟಾ ಮೋಟಾರ್ಸ್, ಮಹೀಂದ್ರಾ, ಹೋಂಡಾ, ಕಿಯಾ, ರೆನಾಲ್ಟ್ ಸೇರಿ 35ಕ್ಕೂ ಹೆಚ್ಚು ದೇಶ-ವಿದೇಶಿ ಬ್ರಾಂಡ್ಗಳಿವೆ.



