ಸಾವು. ಹುಟ್ಟಿದ ಮೇಲೆ ಸಾಯಲೇಬೇಕು ಎನ್ನುವುದು ಅನಿವಾರ್ಯವಾದರೂ, ಅದನ್ನು ಯಾರೂ ಪ್ರೀತಿಯಿಂದ ಬರಮಾಡಿಕೊಳ್ಳೋದಿಲ್ಲ. ಸಾಧ್ಯವಾದಷ್ಟೂ ನಿಧಾನವಾಗಿ ಬರಲಿ ಎಂದು ಹಾರೈಸುವವರೇ ಹೆಚ್ಚು. ಕೆಲವರಿಗಂತೂ ಅಕಾಲಿಕವಾಗಿ.. ವಯಸ್ಸಲ್ಲದ ವಯಸ್ಸಿನಲ್ಲಿ ಸಾವು ಬರುತ್ತದೆ. ಬೇರೆಯವರಿಗೆ ಅದು ಅನಿರೀಕ್ಷಿತ ಎನ್ನಿಸಬಹುದು. ಆದರೆ ಅವರಿಗೆ ಅಂದರೆ ಸಾಯುವವರಿಗೆ ಅದು ಗೊತ್ತಾಗಿರುತ್ತದೆ. ಅದನ್ನು ಗರುಡಪುರಾಣ, ಶಿವಪುರಾಣಗಳಲ್ಲಿ ಹೇಳಲಾಗಿದೆ.
ಸಾಯುವ ಮೊದಲು ಅವರೇ ಅವರಿಗೆ ಕಾಣಿಸಲ್ಲ : ಗರುಡ ಪುರಾಣದ ಪ್ರಕಾರ ಅಕಾಲಿಕ ಮರಣದ ಸಮಯದಲ್ಲಿ ಒಬ್ಬ ವ್ಯಕ್ತಿಗೆ ತನ್ನದೇ ಮೂಗು ನೋಡುವುದಕ್ಕೆ ಆಗುವುದಿಲ್ಲ. ಕನ್ನಡಿ, ನೀರು, ಎಣ್ಣೆ ಇತ್ಯಾದಿಗಳಲ್ಲಿಯೂ ಸಹ, ತಮ್ಮ ಮುಖ ನೋಡುವುದಕ್ಕೆ ಆಗದೆ ಪರದಾಡುತ್ತಾರೆ.ಒಂದು ವೇಳೆ ಅವರಿಗೆ ದೇಹದ ಭಾಗಗಳು ಕಾಣಿಸಿದರೂ ಅದನ್ನು ಗುರುತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ನೆರಳು ನಾಪತ್ತೆಯಾಗುತ್ತದೆ : ಅಕಾಲಿಕ ಸಾವು ಸಂಭವಿಸುವುದಕ್ಕೂ ಸ್ವಲ್ಪ ಮೊದಲು, ವ್ಯಕ್ತಿಯ ನೆರಳು ಅಗೋಚರವಾಗುತ್ತದೆ. ಸಾವು ತುಂಬಾ ಹತ್ತಿರದಲ್ಲಿದ್ದಾಗ ಇದು ಸಂಭವಿಸುತ್ತದೆ. ಅವನ ನೆರಳೇ ಅವನಿಗೆ ಕಾಣಿಸುವುದಿಲ್ಲ. ಇದ್ದಕ್ಕಿದ್ದಂತೆ ಯಾವ ವ್ಯಕ್ತಿಯ ಕಣ್ಮರೆಯಾಗುತ್ತದೆಯೋ ಅಂತಹ ವ್ಯಕ್ತಿ ಶೀಘ್ರದಲ್ಲೇ ಭೂಮಿಯಿಂದ ದೂರಾಗುತ್ತಾನೆ.
ಮಾತು ತೊದಲುವುದಕ್ಕೆ ಶುರುವಾಗುತ್ತದೆ : ಸಾಮಾನ್ಯವಾಗಿ ಸಾಯುವ ಮುನ್ನ ಹಲವರು ನಾಲಗೆ ತೊದಲುವುದು, ಮಾತನಾಡುವುದಕ್ಕೆ ಸಾಧ್ಯವಾಗದೇ ಇರುವುದನ್ನು ನೋಡಿರಬಹುದು. ದೃಷ್ಟಿ ದುರ್ಬಲವಾಗಿ ಕೇಳಿಸಿಕೊಳ್ಳುವ ಸಾಮರ್ಥ್ಯವನ್ನು ಕೂಡ ಕಳೆದುಕೊಳ್ಳುತ್ತಾರೆ. ಅಂತಹ ವ್ಯಕ್ತಿಗೆ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಮಾತನಾಡಲು ಬಳಸುವ ಪದಗಳು ಸರಿಯಾದ ಉಚ್ಛಾರಣೆಯನ್ನು ಇಟ್ಟುಕೊಳ್ಳುವುದಿಲ್ಲ. ಉಚ್ಛಾರಣೆಯಲ್ಲಿ ಅಸ್ಪಷ್ಟತೆ ಇರುತ್ತದೆ. ಉಚ್ಚಾರಣೆಯಲ್ಲಿ ತೊದಲಿಕೆ ಹೆಚ್ಚಾಗುವುದು.
ಇನ್ನು ಶಿವಪುರಾಣದಲ್ಲಿಯೂ ಸಾವಿನ ಮುನ್ಸೂಚನೆಗಳ ಬಗ್ಗೆ ಹೇಳಲಾಗಿದೆ. ಸಾವಿಗೆ ಆರು ತಿಂಗಳ ಮೊದಲು, ವ್ಯಕ್ತಿಯ ನಾಲಿಗೆ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದರರ್ಥ ಅವರು ಯಾವುದೇ ಆಹಾರ ಅಥವಾ ಪಾನೀಯವನ್ನು ಸೇವಿಸಿದರೂ ಕೂಡ ಅವರಿಗೆ ಅದರ ರುಚಿ ತಿಳಿಯುವುದಿಲ್ಲ. ಅಕಾಲಿಕ ಮರಣ ಹೊಂದುವುದಕ್ಕೂ ಮುನ್ನ ಅವರ ನಾಲಿಗೆ ರುಚಿಯನ್ನು ನೋಡುವ ಅನುಭವವನ್ನು ಕಳೆದುಕೊಳ್ಳುತ್ತದೆ ಎನ್ನುತ್ತದೆ ಶಿವಪುರಾಣ.
ಸಾವು ಅಂತಿಮ ಸತ್ಯವಾದರೂ ಅದನ್ನು ನಿರ್ಧರಿಸುವ ಶಕ್ತಿ ದೇವರ ಕೈಯಲ್ಲಿರುತ್ತದೆ. ಇನ್ನು ಕೆಲವೊಬ್ಬರು ದೇವರು ನಿರ್ಧರಿಸಿರುವ ಸಾವಿನ ಸಮಯಕ್ಕೂ ಮುನ್ನವಾಗಿರಬಹುದು ಅಥವಾ ಅರ್ಧ ವಯಸ್ಸಿನಲ್ಲೇ ಆಗಿರಬಹುದು ಮರಣ ಹೊಂದುತ್ತಾರೆ. ಇಂತಹ ಸಾವನ್ನು ಅಕಾಲಿಕ ಮರಣವೆಂದು ಕರೆಯಲಾಗುತ್ತದೆ. ಅಕಾಲಿಕ ಮರಣಕ್ಕೆ ತುತ್ತಾದವರಿಗೆ ಮೋಕ್ಷ ಇರುವುದಿಲ್ಲ ಎನ್ನುವುದು ನಂಬಿಕೆ.



