ಬಾಹುಬಲಿ ಸಿನಿಮಾದಲ್ಲೊಂದು ದೃಶ್ಯ ಬರುತ್ತದೆ. ಶಿವಗಾಮಿಯ ರಾಜ್ಯವನ್ನು ಕಸಿಯಲು ಸಂಚು ಮಾಡಿದ್ದವರ ಗುಂಪಿನಲ್ಲೇ ಶಿವಗಾಮಿ ಸೈನ್ಯದ ಕಟ್ಟಪ್ಪ ಬೇಹುಗಾರರನ್ನು ಬಿಟ್ಟಿರುತ್ತಾನೆ. ಅವರು ಮಾಹಿಷ್ಮತಿ ಸಾಮ್ರಾಜ್ಯದ ನಿಷ್ಠಾವಂತ ಸೇವಕರು. ಶತ್ರುಗಳ ಎದೆ ಸೀಳಿಗೆ ಶಿವಗಾಮಿಗೆ ನಮಸ್ಕರಿಸುತ್ತಾರೆ. ಆಗ ಶತ್ರು ಇದು ಕುತಂತ್ರ ಎಂದು ಕಿರುಚುತ್ತಾನೆ. ಆದರೆ ಶಿವಗಾಮಿ ಕೊಡುವ ಉತ್ತರ ಕುತಂತ್ರವಲ್ಲ.. ರಾಜತಂತ್ರ.
ಆಪರೇಷನ್ ಸಿಂಧೂರದಲ್ಲೂ ಇದೇ ಆಗಿದೆ. ವಿಶೇಷ ಎಂದರೆ ಮೋದಿಯವರ ಕನಸನ್ನು ಭಾರತದ ಸೈನ್ಯ ಸುಮ್ಮನೆ ಈಡೇರಿಸಿಲ್ಲ. ಕುತಂತ್ರವಂತೂ ಅಲ್ಲ. ಹೇಳ್ಬಿಟ್ಟೇ ಹೊಡೆದಿದೆ. ಭಾರತೀಯ ಸೈನ್ಯ ತನ್ನ ಅಧಿಕೃತ ಖಾತೆಯಲ್ಲೇ ಈ ಬಾರಿ ಸುಮ್ಮನೆ ಬಿಡೋದಿಲ್ಲ, ಹೊಡೆದೇ ಹೊಡೆಯುತ್ತೇವೆ ಎಂದು ಟ್ವೀಟ್ ಮಾಡಿತ್ತು. ಹಾಗೆ ಟ್ವೀಟ್ ಮಾಡಿದ ಕೆಲವೇ ಹೊತ್ತಿನಲ್ಲಿ ಆಪರೇಷನ್ ಸಿಂದೂರ ಸ್ಟಾರ್ಟ್ ಆಗಿದೆ.
ರೆಡಿ ಟು ಸ್ಟ್ರೈಕ್.. ಟ್ರೈನ್ಡ್ ಟು ವಿನ್. ಎಂದು ವಿಡಿಯೋ ಹಾಕಿದ್ದ ಪಾಕ್ ಸೈನ್ಯದ ಟ್ವಿಟ್ಟರ್ ಖಾತೆ ನೋಡಿದವರು ಸ್ವಲ್ಪ ಅಲರ್ಟ್ ಇದ್ದರೂ ಸಾಕಿತ್ತು. ಆದರೆ ಪಾಕ್ ಸೈನ್ಯಕ್ಕೆ ಇದು ಅರಿವಾಗಲೇ ಇಲ್ಲ. ಸರಿಯಾಗಿ ಮೇ 7ರ ಮುಂಜಾನೆ 1.28 ನಿಮಿಷಕ್ಕೆ ಸರಿಯಾಗಿ ಈ ಒಂದು ಪೋಸ್ಟ್ ಬಿದ್ದಿದೆ. ಮೆದುಳನ್ನು ಭಯೋತ್ಪಾದಕರ ಕೈ ಕೊಟ್ಟಿರೋ ಪಾಕ್ ಸೈನಿಕರಿಗೆ ಅರ್ಧರಾತ್ರಿಯ ಟ್ವೀಟ್ ಅರ್ಥವಾಗಿಲ್ಲ.
ಅಷ್ಟೇ ಅಲ್ಲ, ಮೇ 7ರಂದು ಭಾರತ ಇಡೀ ದೇಶಾದ್ಯಂತ ಮಾಕ್ ಡ್ರಿಲ್ ಘೋಷಿಸಿತ್ತು. ಮಾಕ್ ಡ್ರಿಲ್ ಕೂಡಾ ನಡೀತು. ಆದರೆ ಪಾಕ್ ಆರ್ಮಿ ಹೇಗಿತ್ತು ಎಂದರೆ ಮಾಕ್ ಡ್ರಿಲ್ ಮಾಡ್ಕೊಂಡು, ದೇಶವನ್ನೆಲ್ಲ ರೆಡಿ ಮಾಡ್ಕೊಂಡು ಬರ್ತಾರೆ. ಏನೋ ಆಗುತ್ತೆ.. ಇವತ್ತು ಆಗಲ್ಲ ಅಂತಾ ನೆಮ್ಮದಿಯಾಗಿ ನಿದ್ರೆ ಹೋಗಿದ್ದರು. ಆದರೆ, ಪಾಕ್ ಆರ್ಮಿಯಲ್ಲಿ ಧರ್ಮವನ್ನಷ್ಟೇ ಪ್ರೀತಿಸುವ ಉಗ್ರರಿದ್ದರೆ, ಭಾರತೀಯ ಸೈನ್ಯದಲ್ಲಿ ದೇಶವನ್ನಷ್ಟೇ ಪ್ರೀತಿಸುವ ಸೈನಿಕರಿದ್ದಾರೆ.
ಅಷ್ಟೇ ಅಲ್ಲ, ಮೇ 6ರಂದು ಮೋದಿ ಇಡೀ ದೇಶದ ಬಗ್ಗೆ ಮಾತನಾಡುತ್ತಾ ಹೋಗಿದ್ದರು. ಮೀಟಿಂಗುಗಳು ನಡೆಯುತ್ತಿದ್ದವು. ಆದರೆ ಮೋದಿ ಎಬಿಪಿ ನ್ಯೂಸ್ ರೂಂನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ್ದರು. ಅರೆ.. ಪ್ರಧಾನಿಯೇ ಇಷ್ಟು ಆರಾಮ್ ಇದ್ದಾನೆ.. ಏನೂ ಆಗಲ್ಲ ಬಿಡ್ರಿ ಎಂದು ಯಾಮಾರಿದ್ದವರಿಗೆ ಹೊಡೆತ ಕೊಟ್ಟಿದೆ ಭಾರತ. ಭಾರತದ ಸೈನ್ಯ ತನ್ನ ಪಾಡಿಗೆ ತಾನು ಕೆಲಸ ಮಾಡುವುದಕ್ಕೆ ಬಿಟ್ಟು, ಆರಾಮ್ ಆಗಿ ಓಡಾಡುವುದೂ ಕೂಡಾ ಯುದ್ಧ ತಂತ್ರವೇ.
ಮೋದಿಯ ಕ್ಯಾರೆಕ್ಟರ್ ನೋಡಿದವರಿಗೆ ಈ ಮನುಷ್ಯ ಒಂದು ಅತಿ ದೊಡ್ಡ ಸರ್ಜಿಕಲ್ ಸ್ಟ್ರೈಕ್ ಮಾಡೋಕೆ ಆರ್ಮಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾನೆ ಎಂದು ಅನ್ನಿಸುವುದೇ ಇಲ್ಲ. ಅಷ್ಟೇ ಅಲ್ಲ, ಇಡೀ ತಂಡದಲ್ಲಿದ್ದ ಅಜಿತ್ ದೋವೆಲ್, ಸಿಡಿಎಸ್ ಅನಿಲ್ ಚೌಹಾಣ್, ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಎಲ್ಲರೂ ತಾವು ಕೂಲ್ ಆಗಿದ್ದೇವೆ ಎಂದು ತೋರುವ ವಿಡಿಯೋಗಳನ್ನು ಮೀಡಿಯಾಗಳ ಮೂಲಕ ರಿಲೀಸ್ ಮಾಡ್ತಾನೇ ಇದ್ರು.
ಟೆನ್ಷನ್ ಇದೆ ಎಂಬಂತೆ ಓಡಾಡುತ್ತಿದ್ದವರು ವಿದೆಶಾಂಗ ಸಚಿವ ಜೈಶಂಕರ್ ಮಾತ್ರ. ಈ ಬಾರಿ ಎಂಥದ್ದೂ ಇಲ್ಲ, ರಾಜತಾಂತ್ರಿಕವಾಗಿ ಹೊಡೆಯುತ್ತಾರೆ ಎಂದು ಕೊಂಡಿದ್ದ ಪಾಕಿಸ್ತಾನ ಯಾಮಾರಿ ಬಿಟ್ಟು, 100+ ಉಗ್ರರನ್ನು ಸ್ವರ್ಗಕ್ಕೆ ಕಳಿಸಿಕೊಟ್ಟಿದೆ.



