ಡೆಂಘೀ ಅಥವಾ ಡೆಂಗ್ಯೂ. ಭಾರತದಲ್ಲಿ ಡೆಂಘಿ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗುತ್ತಿದ್ದು, ಕರ್ನಾಟಕ, ಉತ್ತರಾಖಂಡ, ಮುಂಬೈ ಮತ್ತು ದೆಹಲಿ ಈ ಕ್ಷಣದಲ್ಲಿ ಹೆಚ್ಚು ಕೇಸ್ ಕಂಡು ಬರುತ್ತಿವೆ. ಈ ಕಾಯಿಲೆ ಬಂದಾಗ ಪ್ಲೇಟ್‌ಲೆಟ್ ಸಂಖ್ಯೆಗಳ ಇಳಿಕೆಯೇ ತಲೆಬಿಸಿ ಮಾಡಿಸುವುದು.
ಡೆಂಘೀ ಅಷ್ಟೇ ಅಲ್ಲ, ಮಾರಣಾಂತಿಕ ಝೀಕಾ ವೈರಸ್ ಕೂಡಾ ಕಂಡುಬಂದಿದೆ. ರಾಜ್ಯದಲ್ಲಿ ಡೆಂಘೀ ಜ್ವರದ ಪ್ರಕರಣಗಳು ಇಲ್ಲ ಎನ್ನುತ್ತಿಲ್ಲ. ಡೆಂಘೀ ಜತೆಗೆ ಝೀಕಾ ವೈರಸ್ ಕೂಡ ಹರಡುತ್ತಿದೆ. ಆದರೆ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಿಸುವ ಸ್ಥಿತಿಯಿಲ್ಲ. ಜನರಲ್ಲಿ ವಿನಾಕಾರಣ ಆತಂಕ ಸೃಷ್ಟಿಸುವ ಪ್ರಯತ್ನ ಮಾಡಬೇಡಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಇದೆಲ್ಲದರ ಮಧ್ಯೆ ಸೊಳ್ಳೆಗಳಿಂದ ಬಚಾವ್ ಆಗುವುದು, ಮನೆ, ಕಚೇರಿ ಸುತ್ತಮುತ್ತ ಶುಚಿಯಾಗಿಟ್ಟುಕೊಳ್ಳವುದು ನಾವು ಮಾಡಬೇಕಾಗಿರುವ ಕೆಲಸ. ಇದೆಲ್ಲದರ ಮಧ್ಯೆಯೂ ಡೆಂಘೀ ಹರಡಬಹುದು.
ರಕ್ತದಲ್ಲಿ ಕೆಂಪು ಮತ್ತು ಬಿಳಿ ರಕ್ತಕಣ ಎಂದಿರುತ್ತವೆ. ಡೆಂಘೀ ಬಂದಾಗ ಕುಸಿಯುವುದೇ ಬಿಳಿ ರಕ್ತ ಕಣಗಳು. ಬಿಳಿ ರಕ್ತಕಣಗಳೆಂದರೆ.. ದೇಹದೊಳಗೆ ಆಂತರಿಕವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಶಕ್ತಿ. ಅದೇ ಬಿಳಿ ರಕ್ತ ಕಣ ಕಡಿಮೆಯಾಗಿಬಿಟ್ಟರೆ..
ನೆನಪಿಡಿ. ಎಲ್ಲ ಬ್ಲಡ್ ಡೋನರ್ಸ್ ಬಳಿಯಿಂದಲೂ ಬಿಳಿ ರಕ್ತ ಕಣ ಪಡೆಯುವುದು ಸಾಧ್ಯವಿಲ್ಲ. ಬಿಳಿ ರಕ್ತ ಕಣವನ್ನು ದಾನ ಮಾಡುವವರು ಕೇವಲ ರಕ್ತ ಹೊಂದಿದ್ದರೆ ಸಾಲದು, ಆರೋಗ್ಯವಂತರೂ ಆಗಿರಬೇಕು. ಹೀಗಾಗಿ ಬಿಳಿ ರಕ್ತ ಕಣ ಹೆಚ್ಚಿಸಿಕೊಳ್ಳುವುದು ಪ್ರತಿಯೊಬ್ಬರ ಆರೋಗ್ಯಕ್ಕೂ ಒಳ್ಳೆಯದು. ಅಂತಹ ಬಿಳಿ ರಕ್ತ ಕಣ ಹೆಚ್ಚಿಸುವ ಆಹಾರಗಳ ಪುಟ್ಟ ಲಿಸ್ಟ್ ಇಲ್ಲಿದೆ.
ಪಪ್ಪಾಯಿ ಎಲೆಗಳು
ಡೆಂಘೆಯಿಂದ ಬಳಲುತ್ತಿರುವ ರೋಗಿಗಳಲ್ಲಿ ಅಪಾಯಕಾರಿ ಕಡಿಮೆ ಮಟ್ಟಕ್ಕೆ ಬೀಳುವ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಪಪ್ಪಾಯಿ ಸಹಾಯ ಮಾಡುತ್ತದೆ. ಪಪ್ಪಾಯ ಕಾಯಿ ಮತ್ತು ಎಲೆಗಳನ್ನು ಸೇವಿಸುವುದು ಉತ್ತಮ. ನೀವು ಎಲೆಗಳ ರಸ ತೆಗೆದು ಅದನ್ನು ಸ್ವಲ್ಪ ಜೇನುತುಪ್ಪದೊಂದಿಗೆ ದಿನಕ್ಕೆ 3 ಬಾರಿ ಸೇವಿಸಬಹುದು.
ಅರಿಶಿನ
ಅರಿಶಿನವು ಅದ್ಭುತವಾದ ಸಸ್ಯವಾಗಿದ್ದು, ಡೆಂಘೆಯಿಂದ ಚೇತರಿಸಿಕೊಳ್ಳುವಾಗ ನೀವು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಚಯಾಪಚಯ ವರ್ಧಕವಾಗಿದೆ.
ಅಲೋವೆರಾ
ಅಶ್ವಗಂಧ, ತುಳಸಿ ಮತ್ತು ಅಲೋವೆರಾ ರಸವನ್ನು ನಿಮ್ಮ ಆಹಾರದಲ್ಲಿ ಸೇರಿಸಬಹುದು. ಇವು ಕೂಡಾ ಚೇತರಿಕೆಯ ಪ್ರಕ್ರಿಯೆಯಲ್ಲಿ ನಿಮ್ಮ ದೇಹವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತವೆ.
ಕಿತ್ತಳೆ ಹಣ್ಣು
ವಿಟಮಿನ್ ಸಿ ಯ ಸಮೃದ್ಧ ಮಿಶ್ರಣವಾಗಿರುವ ಕಿತ್ತಳೆ, ಸ್ಟ್ರಾಬೆರಿ, ನಿಂಬೆಹಣ್ಣು, ಪಪ್ಪಾಯಿ ಇತ್ಯಾದಿಗಳನ್ನು ಹೆಚ್ಚು ಹೆಚ್ಚು ಸೇವಿಸಿ.
ಮಸಾಲೆ ಪದಾರ್ಥಗಳು
ಶುಂಠಿ, ಬೆಳ್ಳುಳ್ಳಿ, ಮೆಣಸು, ದಾಲ್ಚಿನ್ನಿ, ಏಲಕ್ಕಿ ಮತ್ತು ಜಾಯಿಕಾಯಿ ಮುಂತಾದ ಮಸಾಲೆಗಳನ್ನು ಚೇತರಿಕೆ ಸಮಯದಲ್ಲಿ ಆಹಾರದೊಂದಿಗೆ ಸೇವಿಸಿ.
ಹಸಿರು ತರಕಾರಿಗಳು
ಹಸಿರು ತರಕಾರಿಗಳಲ್ಲಿ ವಿಟಮಿನ್ ಕೆ ಇರುವುದರಿಂದ ರಕ್ತದ ಪ್ಲೇಟ್‌ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮೇಕೆ ಹಾಲು ಕೂಡಾ ಸಸ್ಯಗಳ ಔಷಧೀಯ ಗುಣಗಳನ್ನು ಒದಗಿಸಿ ಪ್ಲೇಟ್‌ಲೆಟ್ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಮಸಾಲಾ ಟೀ
ಗಿಡಮೂಲಿಕೆ ಚಹಾವು ಏಲಕ್ಕಿ, ಪುದೀನಾ, ದಾಲ್ಚಿನ್ನಿ, ಶುಂಠಿ ಮತ್ತು ನಿಂಬೆಯನ್ನು ಬಳಸಿ ತಯಾರಿಸುವುದಾಗಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಎಳನೀರು
ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸಲು ಎಳನೀರನ್ನು ಸೇವಿಸಿ. ಇದು ದೇಹ ಡಿಹ್ರೈಡ್ರೇಟ್ ಆಗದಂತೆಯೂ ನೋಡಿಕೊಳ್ಳುತ್ತದೆ.
ಬಿಳಿ ರಕ್ತಕಣಗಳು ಗಾಯಗಳಾದಾಗ ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ. ರಕ್ತ ಸೋರುವಿಕೆಯನ್ನು ತಡೆಯುತ್ತದೆ. ಇವು ಹೆಚ್ಚಾಗಿ ಮೂಳೆಗಳ ಮಜ್ಜೆಯಲ್ಲಿ ಶೇಖರವಾಗಿತ್ತವೆ. ಸಾಮಾನ್ಯ ಪ್ಲೇಟ್ಲೆಟ್ ಸಂಖ್ಯೆ 1.5 ಲಕ್ಷದಿಂದ 4 ಲಕ್ಷವಿರುವುದು 20,000 ದಿಂದ 40,000 ಪ್ಲೇಟ್ಲೆಟ್ಗಳಿಗೆ ಇಳಿಯಬಹುದು. ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ರಕ್ತ ವರ್ಗಾವಣೆಯನ್ನು ಬಳಸಲಾಗುತ್ತದೆ. ಆದಾಗ್ಯೂ, ಕಬ್ಬಿಣ, ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ವಿಟಮಿನ್ ಬಿ 12 ಸೇರಿದಂತೆ ಅಗತ್ಯವಾದ ಖನಿಜಗಳೊಂದಿಗೆ ಆಹಾರ ಸೇವಿಸುವುದು ಮುಖ್ಯ



