ಹೆಸರು :ಚನ್ನಕೇಶವ
ಹುದ್ದೆ : ಇಇ
ಇಲಾಖೆ : ಬೆಸ್ಕಾಂ ಜಯನಗರ ಉಪವಿಭಾಗ
ವಿಳಾಸ : ಅಮೃತಹಳ್ಳಿ ಜಕ್ಕೂರು ಬಳಿ
ಇವರ ಮನೆಯಲ್ಲಿ ನಡೆದಿರುವ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿದ್ದು 6 ಲಕ್ಷ ನಗದು, 3ಕೆಜಿ ಚಿನ್ನ, 28 ಕೆಜಿ ಬೆಳ್ಳಿ, 25 ಲಕ್ಷ ಮೌಲ್ಯದ ಡೈಮಂಡ್ ಜುವೆಲರಿ, ಸೇರಿ ಆಸ್ತಿ ಪತ್ರ ಸೇರಿದಂತೆ ಒಟ್ಟು 1.5 ಕೋಟಿ ಮೌಲ್ಯದ ವಸ್ತುಗಳು. ಇದೇ ವ್ಯಕ್ತಿ ಯಲಹಂಕ ಬಳಿ ಕಮರ್ಷಿಯಲ್ ಕಟ್ಟಡ ನಿರ್ಮಿಸುತ್ತಿದ್ದಾರೆ. ಈತನ ಸಂಬಂಧಿಕರ ಮನೆಯ ಮೇಲೂ ದಾಳಿ ನಡೆದಿದ್ದು, ಅವರ ಮನೆಯಲ್ಲಿಯೂ ಸುಮಾರು 1 ಕೋಟಿ ನಗದು ಸಿಕ್ಕಿದೆ ಎನ್ನಲಾಗಿದೆ. ದಾಳಿ ನಡೆದ ಕೂಡಲೇ ಬಿಪಿ ಹೈ ಆಗಿದ್ದು, ಚನ್ನಕೇಶವ ಅವರಿಗೆ ಲೋಕಾಯುಕ್ತ ಅಧಿಕಾರಿಗಳೇ ಮಾತ್ರೆ ಕೊಟ್ಟು ಉಪಚರಿಸಿದ್ಧಾರೆ.
ಹೆಸರು : ಸುಧಾಕರ್ ರೆಡ್ಡಿ S/o ಚಿಕ್ಕನಾರಾಯಣ ರೆಡ್ಡಿ
ಹುದ್ದೆ : ಇಇ(ಎಲೆಕ್ಟ್ರಿಕ್) ಬೆಸ್ಕಾಂ, ಕೆಆರ್ ಸರ್ಕಲ್
ಇಲಾಖೆ : ಬೆಸ್ಕಾಂ ಜಾಗೃತ ದಳದ ಅಧಿಕಾರಿ
ವಿಳಾಸ : ಬೆಂಗಳೂರು ಮತ್ತು ಚಿಂತಾಮಣಿಯ ಮನೆಗಳು ಸೇರಿ 5 ಕಡೆ
ಸುಧಾಕರ್‌ಗೆ ಸೇರಿದ ಐದು ಕಡೆ ದಾಳಿ ನಡೆದಿದೆ. ಒಟ್ಟಾರೆ 5.73 ಕೋಟಿ (ಸುಮಾರು 6 ಕೋಟಿ) ಮೌಲ್ಯದ ಆಸ್ತಿ ಪತ್ತೆಯಾಗಿದೆ. ಅದರಲ್ಲಿ ಐದೂವರೆ ಕೋಟಿಯಷ್ಟು ಆಸ್ತಿ ಜಮೀನು, ಮನೆ, ಅಪ್ರ್ಟ್‌ಮೆಂಟ್ʻನಂತಹ ಸ್ಥಿರಾಸ್ತಿಗಳು. ಉಳಿದದ್ದು ಕಾರು, ಬೈಕು ಮೊದಲಾದ ಸ್ಥಿರಾಸ್ತಿಗಳ ಲೆಕ್ಕ.
ಉಳಿದವರ ಆಸ್ತಿಯ ಲೆಕ್ಕವೂ ಸಖತ್ತಾಗಿಯೇ ಇದೆ. ಎಲ್ಲರೂ ಕೋಟಿ ಕೋಟಿಗಳ ಕುಳಗಳೇ. ಆದರೆ ಇದೇ ಬೆಸ್ಕಾಂನ ಈಗ ರೇಡ್ ಆಗಿ ಇಷ್ಟೊಂದು ಕೋಟಿಯ ಜೊತೆ ಸಿಕ್ಕಿಬಿದ್ದಿರುವ ಅಧಿಕಾರಿಗಳೇ ಕೆಲವೇ ದಿನಗಳ ಹಿಂದೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರ ಮನೆಯಲ್ಲಿ ಅಕ್ರಮವಾಗಿ ವಿದ್ಯುತ್ ಕಳ್ಳತನ ಮಾಡಿದ್ದಾರೆಂದು 60 ಸಾವಿರ ರೂ. ದಂಡ ವಿಧಿಸಿದ್ದರು.
ಕುಮಾರಸ್ವಾಮಿಯವರು ಮಾಡಿದ್ದರ ಸಮರ್ಥನೆಗಳು ಒಪ್ಪುವುದು ಬಿಡುವುದು ಆಮೇಲಿನ ವಿಷಯ. ಆದರೆ ಅಂದು ಪ್ರಾಮಾಣಿಕತೆಯ ಪಾಠ ಮಾಡಿದ್ದವರ ಮನೆಯಲ್ಲಿಯೇ ʻಅತ್ಯಂತ ಪ್ರಾಮಾಣಿಕತೆʼಯಿಂದ ದುಡಿದು ಸಂಪಾದಿಸಿದ ಕೋಟಿ ಕೋಟಿ ಆಸ್ತಿ ಇದೆ ಎನ್ನುವುದು ಲೋಕಾಯುಕ್ತದವರು ದಾಳಿ ಮಾಡಿದಾಗಲಷ್ಟೇ ಗೊತ್ತಾಗಿದೆ.



