ಕೆ46 (K-46) ಸಿನಿಮಾ ಶೂಟಿಂಗ್ ಸ್ಟಾರ್ಟ್ ಆಗಿದೆ. 2023ಕ್ಕೆ ರಿಲೀಸ್ ಆಗುವ ಸಾಧ್ಯತೆ ಇಲ್ಲ. 2024ರ ಮೋಸ್ಟ್ ಸೆನ್ಸೇಷನ್ ಸಿನಿಮಾದಲ್ಲೊಂದು (K-46). ಆದರೆ ಚಿತ್ರದ ಬಗ್ಗೆ ಎದ್ದಿದ್ದ ಪ್ರಶ್ನೆಗೆ ಉತ್ತರವಂತೂ ಸಿಕ್ಕಿದೆ. ಕೆ46ನಲ್ಲಿ (K-46) ಶೇ.80ಕ್ಕೂ ಹೆಚ್ಚು ಕನ್ನಡಿಗ ಕಾರ್ಮಿಕರೇ ಇರಲಿದ್ದಾರೆ. ಅದರಲ್ಲೇನು ವಿಶೇಷ ಎನ್ನುವಂತಿಲ್ಲ. ಅದು ವಿವಾದವಾಗುವ ಸಾಧ್ಯತೆಗಳೂ ಇದ್ದವು.
ತಮಿಳು ಚಿತ್ರರಂಗದಲ್ಲಿ (Tamil Movie) ತಮಿಳು ಸಿನಿಮಾದಲ್ಲಿ ತಮಿಳು ಕಲಾವಿದರೇ ಇರಬೇಕು. ತಮಿಳಿನವರೇ (Tamil Movie makers) ಕೆಲಸ ಮಾಡಬೇಕು. ಕಲಾವಿದರಾಗಿರಲಿ ಕಾರ್ಮಿಕರಾಗಿರಲಿ, ತಂತ್ರಜ್ಞರಾಗಿರಲಿ ತಮಿಳಿನವರೇ ಇರಬೇಕು ಎಂಬ ನಿಯಮ ಜಾರಿಗೆ ಅಲ್ಲಿನ ಫಿಲ್ಮ್ ಫೆಡರೇಷನ್ ಮುಂದಾಗಿತ್ತು. ಹಾಗಾದರೆ ಈ ಚಿತ್ರದಲ್ಲಿ ಕನ್ನಡದ ತಂತ್ರಜ್ಞರು, ಕಾರ್ಮಿಕರು ಇರೋದಿಲ್ವಾ..? ಈ ಪ್ರಶ್ನೆ ಭುಗಿಲೆದ್ದಿತ್ತು. ಆದರೆ ಈ ಸಮಸ್ಯೆಗೆ ಸುದೀಪ್ (Kichcha Sudeep) ಅವರೇ ಪರಿಹಾರ ಸೂಚಿಸಿದ್ದಾರೆ. ಇದನ್ನು ತೆಲುಗಿನ ನಟ ಪವನ್ ಕಲ್ಯಾಣ್ (Pavan Kalyan) ಇದನ್ನು ಬಹಿರಂಗವಾಗಿಯೇ ಪ್ರಶ್ನಿಸಿದ್ದರು. ಆದರೆ ಹೇಳಿಕೆಗಷ್ಟೇ ಸೀಮಿತವಾಗಿತ್ತು. ಏಕೆಂದರೆ ಈ ಪ್ರಶ್ನೆಉದ್ಭವವಾಗಿದ್ದೇ ವಿಶೇಷ ಕಾರಣಗಳಿಂದ. ಈ ಚಿತ್ರದ ಪ್ರೊಡಕ್ಷನ್ ಬ್ಯಾನರ್ ತಮಿಳುನಾಡಿನದ್ದು. ‘ವಿ ಕ್ರಿಯೇಶನ್ಸ್’ (V Creations) ಮೂಲಕ ಕಲೈಪುಲಿ ಎಸ್. ಧಾನು ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸುದೀಪ್ (Kichcha Sudeep) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ (kannada Movie) ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾದ ಬಹುತೇಕ ಚಿತ್ರೀಕರಣ ತಮಿಳುನಾಡಿನಲ್ಲಿ ನಡೆಯುತ್ತಿದೆ. ಅದಕ್ಕಾಗಿ ಮಹಾಬಲಿಪುರಂನಲ್ಲಿ (Mahabalipuram) ಬೃಹತ್ ಸೆಟ್ ಹಾಕಲಾಗಿದೆ. ಈ ಮಧ್ಯೆ ಕಿಚ್ಚ ಸುದೀಪ್ (Kichcha Sudeep) ತಮ್ಮ 46ನೇ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ
ತಮಿಳಿನಲ್ಲಿ ಸಿನಿಮಾ ನಿರ್ಮಿಸಬೇಕು ಎಂಬುದು ನಿರ್ಮಾಪಕರ ಉದ್ದೇಶ ಆಗಿತ್ತು. ಆದರೆ ಸುದೀಪ್ ಕನ್ನಡದಲ್ಲಿಯೇ ಸಿನಿಮಾ ಶೂಟಿಂಗ್ ಮಾಡಿ ನಂತರ ತಮಿಳಿಗೆ ಡಬ್ ಮಾಡುವುದು ಉತ್ತಮ ಎಂಬ ನಿರ್ಧಾರಕ್ಕೆ ಬಂದರು. ಹಾಗಾಗಿ ಈ ಸಿನಿಮಾದ ಶೂಟಿಂಗ್ ತಮಿಳುನಾಡಿನಲ್ಲಿ ನಡೆದರೂ ಕೂಡ ಚಿತ್ರೀಕರಣದ ಸೆಟ್ಟಿನಲ್ಲಿ ಕನ್ನಡದ ತಂತ್ರಜ್ಞರು ಮತ್ತು ಕಲಾವಿದರೇ ತುಂಬಿಕೊಂಡಿದ್ದಾರೆ. ಒಂದೇ ಹಂತದಲ್ಲಿ ಶೂಟಿಂಗ್ ಮುಗಿಸಬೇಕು ಎಂಬ ಗುರಿಯನ್ನು ಚಿತ್ರತಂಡ ಇಟ್ಟುಕೊಂಡಿದೆ. ಸುದೀಪ್ ಅವರು ಆಗಸ್ಟ್ ತಿಂಗಳು ಪೂರ್ತಿ ತಮಿಳುನಾಡಿನಲ್ಲಿ ಶೂಟಿಂಗ್ ಮಾಡಲಿದ್ದಾರೆ.
ನಂತರ ಬೆಂಗಳೂರಿಗೆ ಬಂದು ಜನ್ಮದಿನ ಆಚರಿಸಿಕೊಂಡ ಬಳಿಕ ಮತ್ತೆ ತಮಿಳುನಾಡಿಗೆ ಹಿಂದಿರುಗಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ಒಟ್ಟಿನಲ್ಲಿ ಇತ್ತೀಚೆಗೆ ಸುದೀಪವರನ್ನು ಇಕ್ಕಟ್ಟಿಗೆ ಸಿಲುಕಿಸುವ ಆಟ ನಡೆಯುತ್ತಿದೆಯೇನೋ ಎಂಬ ಅನುಮಾನ ಮೂಡುತ್ತಿರುವುದು ನಿಜ. ಸುದೀಪ್ ಏನೇ ಮಾಡಿದರೂ ವಿವಾದಗಳಾಗುತ್ತಿವೆ. ಕೊನೆಗೆ ಸುದೀಪ್ ಅವರೇ ಪರಿಹಾರ ಸೂಚಿಸುತ್ತಿದ್ದಾರೆ. ಬಗ್ಗುತ್ತಿಲ್ಲ. ಈಗಲೂ ಅಷ್ಟೆ, ಕನ್ನಡತನವನ್ನು ಬಿಟ್ಟುಕೊಟ್ಟಿಲ್ಲ.



