ಇತ್ತೀಚೆಗೆ ರಾಜ್ಯ ಸರ್ಕಾರದ ಬಜೆಟ್ಟಿನಲ್ಲಿ ಸಿದ್ದರಾಮಯ್ಯ (Siddaramaiah) ಆಲ್ಕೋಹಾಲ್ (Alcohal) ಮೇಲಿನ ಹೆಚ್ಚುವರಿ (Aditional custom duty) ಅಬಕಾರಿ ಸುಂಕವನ್ನು ಹೆಚ್ಚಿಸಿದ್ದರು. ಶೇ.20ರಷ್ಟು ಏರಿಕೆಯ ಪ್ರಸ್ತಾಪ ಮಂಡಿಸಿದ್ದರು. ಅಷ್ಟ ಏರಿಕೆ ಮಾಡಿಯೂ, ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬೆಲೆ ಕಡಿಮೆ ಎಂದು ವಾದಿಸಿದ್ದರು ಅಬಕಾರಿ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ. ಆದರೆ ವಾಸ್ತವ ನೋಡಿದರೆ ಕೆಲವೇ ಕೆಲವು ಲೋ ಬ್ರಾಂಡ್ ಲಿಕ್ಕರ್ (Liquor) ಹೊರತು ಪಡಿಸಿದರೆ ಇಡೀ ದೇಶದಲ್ಲಿ ಕರ್ನಾಟಕದಲ್ಲಿಯೇ ಬೆಲೆ ಹೆಚ್ಚು ಎಂಬ ಅಂಶ ಬೆಳಕಿಗೆ ಬಂದಿದೆ.
ಲೀಟರಿಗೆ 449 ರೂ. ಇರುವ ಬ್ರಾಂಡ್ ಹೊರತುಪಡಿಸಿದರೆ, ಉಳದೆಲ್ಲ ಬ್ರಾಂಡ್ ಲಿಕ್ಕರ್ ದುಬಾರಿಯಾಗಿದೆ. ಹೊಸ ದರದಿಂದಾಗಿ ಶೇ.70ಕ್ಕಿಂತ ಹೆಚ್ಚು ಗ್ರಾಹಕರು, ದುಬಾರಿ ಮದ್ಯದಿಂದ ದೂರವಾಗುತ್ತಿದ್ದು, ಕಡಿಮೆ ಬ್ರಾಂಡಿಗೆ ಮೊರೆ ಹೋಗಲಿದ್ದಾರೆ ಎನ್ನುವುದು ವ್ಯಾಪಾರಿಗಳ ಆತಂಕ.
ನೂತನ ಶುಲ್ಕ ಏರಿಕೆಯಿಂದ ಕರ್ನಾಟಕದಲ್ಲಿ ಬಿಯರ್ ಬೆಲೆ ಹೆಚ್ಚಾಗಲಿದೆ. 650 ಎಂಎಲ್`ನ ಬಿಯರ್ (Beer) 187 ರೂ. ಆಗಲಿದೆ. ಬಿಯರ್ (Beer) ಬೆಲೆ ಇಡೀ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ ಇದೇ ಬಿಯರ್ (Beer) 210 ರೂ. ಹಾಗೂ ದೆಹಲಿಯಲ್ಲಿ 190 ರೂ.ಗೆ ಸಿಗುತ್ತೆ. ಆದರೆ ಉಳಿದ ಲಿಕ್ಕರ್‍ಗಳ ಬೆಲೆಯಲ್ಲೀಗ ಕರ್ನಾಟಕವೇ ನಂ.1 ಆಗಿದೆ.
ಬಲ್ಕ್ ಲೀಟರ್ ಲಿಕ್ಕರಿಗೆ ಈಗ 50 ರೂ. ಅಬಕಾರಿ ಸುಂಕ ಹಾಗೂ ಹೆಚ್ಚುವರಿ ಅಬಕಾರಿಸುಂಕ 215 ರೂ. ಹಾಗೂ ಎಂಆರ್`ಪಿ ಕೇಂದ್ರಗಳಿಗೆ ಶೇ.0.6 ಇದೆ. ಕರ್ನಾಟಕದಲ್ಲಿ ಈಗ ಕೆಎಸ್`ಬಿಆರ್ ಮಾರ್ಜಿನ್ (ಕರ್ನಾಟಕ ಬಿವರೇಜ್ ಕಾರ್ಪೊರೇಷನ್ ಲಿಮಿಟಿಡ್) ಜೊತೆಗೆ ಇದೀಗ ಇಂಡಿಯನ್ ಮೇಲ್ ಲಿಕ್ಕರ್ ಮೇಲೆ ಶೇ.20ರಷ್ಟು ಹೆಚ್ಚುವರಿ ಸುಂಕ ವಿಧಿಸಿದರೆ ಬಿಸಿನೆಸ್ ಕಷ್ಟವಾಗಲಿದೆ ಎನ್ನುವುದು ಗ್ರಾಹಕರು ಹಾಗೂ ಮಧ್ಯ ಮಾರಾಟಗಾರರ ಅಳಲು.
ಈಗ ಬ್ರಾಂಡೆಡ್ ಲಿಕ್ಕರ್ ದರಗಳನ್ನೊಮ್ಮೆ ನೋಡೊದಾದ್ರೆ
ರಾಯಲ್ ಸ್ಟಾಗ್ (Royal stag) ಈಗ ಇರುವ ತೆರಿಗೆಯ ಪ್ರಕಾರ 1360 ರೂ. ಇದ್ದರೆ, ತೆರಿಗೆ ಏರಿಕೆ ನಂತರ 1591 ರೂ. ಆಗಲಿದೆ.
ಮೆಕ್ ಡೊನಾಲ್ಡ್ (ಎಂಸಿ) (MC donald ) ಈಗ ಇರುವ ತೆರಿಗೆಯ ಪ್ರಕಾರ 914 ರೂ. ಇದ್ದರೆ, ತೆರಿಗೆ ಏರಿಕೆ ನಂತರ 1066 ರೂ. ಆಗಲಿದೆ.
ಬ್ಲೆಂಡರ್ಸ್ ಪ್ರೈಸ್ (Blenders price) ಈಗ ಇರುವ ತೆರಿಗೆಯ ಪ್ರಕಾರ 1860 ರೂ. ಇದ್ದರೆ, ತೆರಿಗೆ ಏರಿಕೆ ನಂತರ 2150 ರೂ. ಆಗಲಿದೆ.
ಬ್ಲಾಕ್ ಲೇಬಲ್ (Black Label) ಈಗ ಇರುವ ತೆರಿಗೆಯ ಪ್ರಕಾರ 6250 ರೂ. ಇದ್ದರೆ, ತೆರಿಗೆ ಏರಿಕೆ ನಂತರ 7500 ರೂ. ಆಗಲಿದೆ.
ಟೀಚರ್ಸ್ 50 (Teachers 50) ಈಗ ಇರುವ ತೆರಿಗೆಯ ಪ್ರಕಾರ 2450 ರೂ. ಇದ್ದರೆ, ತೆರಿಗೆ ಏರಿಕೆ ನಂತರ 2810 ರೂ. ಆಗಲಿದೆ.
ವೊರಿಜಿನಲ್ ಚಾಯ್ಸ್ (original choice) ಈಗ ಇರುವ ತೆರಿಗೆಯ ಪ್ರಕಾರ 291 ರೂ. ಇದ್ದರೆ, ತೆರಿಗೆ ಏರಿಕೆ ನಂತರ 332 ರೂ. ಆಗಲಿದೆ.
ಓಲ್ಡ್ ಮಾಂಕ್ (Old Monk) ಈಗ ಇರುವ ತೆರಿಗೆಯ ಪ್ರಕಾರ 560 ರೂ. ಇದ್ದರೆ, ತೆರಿಗೆ ಏರಿಕೆ ನಂತರ 672 ರೂ. ಆಗಲಿದೆ.
ಕಿಂಗ್ ಫಿಷರ್ ಬೀರ್ (KingFisher beer ) ಈಗ ಇರುವ ತೆರಿಗೆಯ ಪ್ರಕಾರ 650 ಎಂ.ಎಲ್`ಗೆ 170 ರೂ. ಇದ್ದರೆ, ತೆರಿಗೆ ಏರಿಕೆ ನಂತರ 187 ರೂ. ಆಗಲಿದೆ.



