ಡಿಕೆ ಶಿವಕುಮಾರ್ (DK Shivakumar) ಮಾಡೋದನ್ನೇ ಹೇಳ್ತಾರೆ. ಹೇಳಿದ್ದನ್ನೇ ಮಾಡ್ತಾರೆ. ಇದು ಕಾಂಗ್ರೆಸ್ಸಿನ ರಾಜಕಾರಣಿಗಳೆಲ್ಲ ಬಹುತೇಕ ಒಪ್ಪಿಕೊಂಡಿರೋ ವಿಷಯ. ಇಂತಹ ಡಿಕೆ ಶಿವಕುಮಾರ್ ಈಗ ಮತ್ತೆ ಮುಂದಿನ ತಿಂಗಳು 20, 21 ಮತ್ತೊಂದು ಸೀರಿಸ್ ಇದೆ. ನಾನು ಮಾತನಾಡುವುದಿಲ್ಲ ಮಾಡಿ ತೋರಿಸುತ್ತೀನಿ ಎಂದು ಹೇಳುವ ಮೂಲಕ ಮತ್ತೊಂದು ಆಪರೇಷನ್ ಹಸ್ತದ ಸುಳಿವು ಕೊಟ್ಟಿದ್ದಾರೆ. ಏಕೆಂದರೆ ಸುಮಾರು ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವ ಡಿಕೆ ವಾರ್ನಿಂಗ್`ನ್ನ ಸುಮ್ಮನೆ ನೋಡಿಕೊಂಡು ಇರಲಾಗದ ಸ್ಥಿತಿಯಲ್ಲಿರುವುದು ಎರಡೂ ಪಕ್ಷಗಳ ನಾಯಕರು. ಏಕೆಂದರೆ ಇಡೀ ಆಪರೇಷನ್ ಹಸ್ತದಲ್ಲಿ ಡಿಕೆ ಶಿವಕುಮಾರ್ ಕೈಹಾಕಿರುವುದು ಸಾಮ್ರಾಟ್ ಎಂದೇ ಕರೆಸಿಕೊಳ್ಳುವ ಅಶೋಕ್ (R Ashok) ಹಾಗೂ ಕುಮಾರಸ್ವಾಮಿ (HD Kumaraswamy) ಆಪ್ತರಿಗೆ. ಒಂದ್ಸಲ ಈ ಲಿಸ್ಟ್ ನೋಡಿ..
- ಎಲ್. ಶ್ರೀನಿವಾಸ್, ಮಾಜಿ ಉಪ ಮಹಾಪೌರರು, ಪದ್ಮನಾಭನಗರ
- ಪ್ರಸಾದ್ ಬಾಬು, ಜೆಡಿಎಸ್ ಮುಖಂಡ
- ಆರಪ್ಪ, ಮಾಜಿ ತಾ.ಪಂ.ಸದಸ್ಯ
- ಶೋಭಾ ಆಂಜಿನಪ್ಪ, ಮಾಜಿ ಕಾರ್ಪೊರೇಟರ್
- ಹೆಚ್.ನಾರಾಯಣ್, ಮಾಜಿ ಕಾರ್ಪೊರೇಟರ್
- ಹೆಚ್. ಸುರೇಶ್, ಮಾಜಿ ಕಾರ್ಪೊರೇಟರ್, ಹಿಂದುಳಿದ ವರ್ಗಗಳ ನಾಯಕ
- ವೆಂಕಟಸ್ವಾಮಿ ನಾಯ್ಡು, ಮಾಜಿ ಕಾರ್ಪೊರೇಟರ್
- ಸಿ. ಎಲ್.ಗೋವಿಂದ ರಾಜು, ಮಾಜಿ ಕಾರ್ಪೊರೇಟರ್
- ರಂಗರಾಮೇಗೌಡ್ರು, ಮಾಜಿ ಅಧ್ಯಕ್ಷರು, ಪದ್ಮನಾಭನಗರ ಮಂಡಲ
- ಲಕ್ಷ್ಮಿ ಸುರೇಶ್, ಮಾಜಿ ಜಿ.ಪಂ. ಸದಸ್ಯರು
- ಪವನ್, ಬಿಜೆಪಿ ಮುಖಂಡರು.
- ಸುಪ್ರಿಯ ಶೇಖರ್, ಮಾಜಿ ಕಾರ್ಪೊರೇಟರ್
- ಬಾಲಕೃಷ್ಣ, ಮಾಜಿ ಕಾರ್ಪೊರೇಟರ್
- ಸುಗುಣ ಬಾಲಕೃಷ್ಣ, ಮಾಜಿ ಕಾರ್ಪೊರೇಟರ್
- ಯು.ಕೃಷ್ಣಮೂರ್ತಿ, ಮಾಜಿ ಕಾರ್ಪೊರೇಟರ್
- ನರಸಿಂಹ ನಾಯಕ್, ಮಾಜಿ ಕಾರ್ಪೊರೇಟರ್
ಪದ್ಮನಾಭನಗರ (Padmanabha nagara), ಬೆಂಗಳೂರು ದಕ್ಷಿಣ(Bengaluru south) , ದಾಸರಹಳ್ಳಿ, (Dasarahalli) ರಾಜರಾಜೇಶ್ವರಿ ನಗರ (Rajarajeshwari nagara) ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಇವರು. ಕೆಲವರಂತೂ ಓಪನ್ ಆಗಿಯೇ ನಮಗೆ ಕಾಂಗ್ರೆಸ್ಸಿಗೆ ಬಂದರೆ ಲಾಭ ಇದೆ, ಮೀಸಲಾತಿ ಅನುಕೂಲ ಮಾಡಿಕೊಡ್ತಾರೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇನ್ನು ಕಬಡ್ಡಿ ಬಾಬು ಅವರಂತೂ ನನಗೂ ಕುಮಾರಸ್ವಾಮಿಗೂ ಸಂಬಂಧ ಚೆನ್ನಾಗಿಯೇ ಇದೆ. ಆದರೆ ರಾಜಕೀಯವೇ ಬೇರೆ ಎಂದು ಕಾಂಗ್ರೆಸ್ಸಿಗೆ ಬಂದಿದ್ದಾರೆ. ಕಬಡ್ಡಿ ಬಾಬು (Kabaddi babu) ಈ ವರ್ಷ ಮಗನನ್ನು ರಾಜಕೀಯಕರಕೆ ಕರೆತರುತ್ತಾರಂತೆ. ಕಾಂಗ್ರೆಸ್ಸಿಗೆ ಸೇರಿರುವ ಬಹುತೇಕರಿಗೆ ಮಕ್ಕಳಿಗೆ ರಾಜಕೀಯ ಪಟ್ಟ ನೀಡುವ ಉತ್ಸಾಹ ಇದ್ದಂತಿದೆ. ಇದರ ನಡುವೆಯೇ ಡಿಕೆ ಶಿವಕುಮಾರ್ ಈ ಮಾತು ಹೇಳಿರೋದು..
ಪದ್ಮನಾಭನಗರದಿಂದ ಎಂಟು ಕಾರ್ಪೋರೆಟರ್ಗಳು ಗೆಲ್ಲಬೇಕು. ಈ ಹಿಂದೆ ಯಶವಂತಪುರ ಕ್ಷೇತ್ರದಿಂದ ಮಾಜಿ ಕಾರ್ಪೋರೆಟರ್ಗಳ ಸೇರ್ಪಡೆ ಮಾಡಿಕೊಂಡ್ವಿ, ಬಿಜೆಪಿ ಪರಿಸ್ಥಿತಿ ಏನಾಗಿದೆ ಅಂತ ನಿಮಗೆ ಗೊತ್ತು. ವಿರೋಧ ಪಕ್ಷದ ನಾಯಕ ಯಾರು ಅಂತ ಗೊತ್ತಿಲ್ಲ. ಈಗ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಬಿಳಿಸಿದವರ ಜೊತೆ ಕುಮಾರಸ್ವಾಮಿ ಅಲೈಯನ್ಸ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಜೆಡಿಎಸ್ ಶಾಸಕರು ಅಸಮಧಾನಗೊಂಡಿದ್ದಾರೆ. ಅವರ ಅನುಕೂಲಕ್ಕೆ ಜೆಡಿಎಸ್ ರಾಜಕೀಯ ಮಾಡುತ್ತಿದ್ದಾರೆ. ಅವರ ಅನುಕೂಲ ಅವರು ನೋಡ್ತಾ ಇದ್ರೆ ಅಲ್ಲಿ ಇದ್ದು ನೀವೇನೂ ಮಾಡ್ತೀರಾ?. ನಿಮ್ಮ ನಿರ್ಧಾರ ನೀವು ಮಾಡಿಕೊಳ್ಳಿ ಅಂತ ಹೇಳುವ ಮೂಲಕ ಬಿಜೆಪಿ ಹಾಗೂ ಜೆಡಿಎಸ್ನಲ್ಲಿನ ಅಸಮಾಧಾನಿತ ನಾಯಕರಿಗೆ ಬಹಿರಂಗ ಅಹ್ವಾನ ಕೊಟ್ಟಿದ್ದಾರೆ.



