ಇಬ್ಬರು ಸುಂದರಿಯರು. ಒಬ್ಬ ಚೆಲುವೆ ಈಗ ಕರ್ನಾಟಕದ ಕ್ರಶ್ (Karnataka Crush) ಆಗಿದ್ದಾರೆ. ರುಕ್ಮಿಣಿ ವಸಂತ್ (Actress Rukmini Vasanth). ಮತ್ತೊಮ್ಮೆ ಚೆಲುವೆ ಈಗಾಗಲೇ ಕಿಚ್ಚು ಹಚ್ಚಿರೋ ಸುಂದರಿ. ರೀಷ್ಮಾ ನಾಣಯ್ಯ (Actress Reeshma Nanaiah) . ಇಂತಹ ಎರಡು ಸುಂದರಿಯರ ಮಧ್ಯೆ ಗೋಲ್ಡನ್ ಸ್ಟಾರ್ ಗಣೇಶ್ (Actor Golden star Ganesh) . ಕಾಟ ಕೊಡುವುದಕ್ಕೆಂದೇ ಇರುವ ರಂಗಾಯಣ ರಘು. ಭಯ ಹುಟ್ಟಿಸಲೆಂದೇ ಬರುವ ಹುಲಿ..ಸಿಂಹಗಳು..
ಬಾನದಾರಿಯಲ್ಲಿ (Bana dariyalli) ಲವ್ ಸ್ಟೋರಿ (Love story) . ರುಕ್ಮಿಣಿ ವಸಂತ್ (Actress Rukmini Vasanth) ಮತ್ತು ರೀಷ್ಮಾ ನಾಣಯ್ಯ (Actress Reeshma Nanaiah) ನಾಯಕಿಯರು. ಅವರಿಬ್ಬರ ನಡುವೆ ಪ್ರೀತಮ್. ರುಕ್ಮಿಣಿ (Actress Rukmini Vasanth), ಲೀಲಾ ಅನ್ನೋ ಪಾತ್ರದಲ್ಲಿದ್ದರೆ, ರೀಷ್ಮಾ ನಾಣಯ್ಯ (Actress Reeshma Nanaiah) ಅವರ ಪಾತ್ರದ ಹೆಸರು ಕಾದಂಬರಿ. ರಂಗಾಯಣ ರಘು (Actor Rangayana Raghu) ಅವರದ್ದು ಇಲ್ಲಿ ನಾಯಕಿಯ ತಂದೆಯ ಪಾತ್ರ. ಟ್ರೇಲರ್ ಅದ್ಧೂರಿಯಾಗಿ ರಿಲೀಸ್ ಆಗಿದೆ.
(Bana dariyalli) ಸಿನಿಮಾದ ಬಹುಭಾಗ ಚಿತ್ರೀಕರಣ ನಡೆದಿರುವುದು ಕೀನ್ಯಾದಲ್ಲಿ (Keenya). ಮಸೈಮರಾ (masai mara) ಕಾಡಿನಲ್ಲಿ. ಹುಲಿ ಸಿಂಹಗಳ ಜೊತೆ ಚಿತ್ರೀಕರಣ. ರಂಗಾಯಣ ರಘು ಅವರಂತೂ ನಾವು ಜೀಪಿನಲ್ಲಿ ಹೋಗುವಾಗ ಸಿಂಹ ಬರೋದು. ಗಣೇಶ್ ನೋಡಿದ್ರೆ, ನೋಡೀ ಸರ್.. ನಿಮ್ಮನ್ನೇ ರೊಮ್ಯಾಂಟಿಕ್ ಆಗಿ ನೋಡ್ತಾ ಇದೆ ಅನ್ನೋವ್ರು. ನನಗೆ ತೊಳ್ಳೆಯೆಲ್ಲ ನಡುಗೋದು. ರಾತ್ರಿ ಬಯಲಲ್ಲಿ ಗುಡಾರ ಹಾಕಿದ್ದರೆ, ಪಕ್ಕದಲ್ಲೇ ಸಿಂಹ ಬರೋದು. ಭಯ ಪಟ್ಟುಕೊಂಡೇ ಚಿತ್ರೀಕರಣ ಮಾಡಿದ್ದೇವೆ ಎಂದು ನೆನಪು ಹಂಚಿಕೊಂಡರು ರಂಗಾಯಣ ರಘು.
(Actor Golden star Ganesh) ಗಣೇಶ್ ಮಾತನಾಡಿ ಇದು ನಾನು ಈವರೆಗೂ ಮಾಡಿರದ ಪಾತ್ರ. ಬಾನ ದಾರಿಯಲಿ ಪ್ರೀತಿಯ ಬಗೆಗಿನ ಚಿತ್ರ. ಪುನೀತ್ ರಾಜಕುಮಾರ್ (Actor Puneeth Rajkumar) ಅವರು ಅಭಿನಯಿಸಿದ್ದ ಈ ಯಶಸ್ವಿ ಹಾಡಿಗೂ ನಮ್ಮ ಸಿನಿಮಾ ಕಥೆಗೆ ಹೊಂದಾಣಿಕೆಯಾಗುತ್ತದೆ. ಹಾಗಾಗಿ ‘ಬಾನ ದಾರಿಯಲಿ’ ಶೀರ್ಷಿಕೆ ಇಟ್ಟಿದ್ದೇವೆ. ಪ್ರೀತಂ ಗುಬ್ಬಿ ನಾನು ಮುಂಚಿನಿಂದ ಸ್ನೇಹಿತರು. ನಮ್ಮ ಕಾಂಬಿನೇಶನ್ನಲ್ಲಿ ಸಾಕಷ್ಟು ಚಿತ್ರಗಳು ಬಂದಿದೆ. ಆದರೆ ಈ ಚಿತ್ರ ಎಲ್ಲರ ಮನಸ್ಸಿಗೂ ಬಹಳ ಹತ್ತಿರವಾಗುತ್ತದೆ ಎಂದಿದ್ದಾರೆ. ಪ್ರೀತಂ ಗುಬ್ಬಿ ನಿರ್ದೇಶನದ ಬಾನ ದಾರಿಯಲ್ಲಿ ಸಿನಿಮಾ ಸೆ.28ರಂದು ರಿಲೀಸ್ ಆಗ್ತಾ ಇದೆ.



