ಮತ್ತೊಂದು ಸಮೀಕ್ಷೆ ಹೊರಬಿದ್ದಿದೆ. ಈ ಸಮೀಕ್ಷೆಯಲ್ಲೂ ಎನ್ʻಡಿಎಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಇಂಡಿಯಾ ಟೀವಿ-ಸಿಎನ್‌ಎಕ್ಸ್ ಚುನಾವಣಾ ಪೂರ್ವ ಜಂಟಿ ಸಮೀಕ್ಷೆ ಫಲಿತಾಂಶದ ಪ್ರಕಾರ ಎನ್‌ಡಿಎ 378 ಸ್ಥಾನ ಗಳಿಸಲಿದೆ. ಈ ಪೈಕಿ ಬಿಜೆಪಿ 335 ಸ್ಥಾನ ಪಡೆಯಲಿದ್ದು, ಕಳೆದ ಸಲಕ್ಕಿಂತ 32 ಸ್ಥಾನ ಹೆಚ್ಚು ಸಂಪಾದಿಸಲಿದೆ.
ಇಂಡಿಯಾ ಒಕ್ಕೂಟಕ್ಕೆ ಒಟ್ಟು 98 ಸ್ಥಾನ ನೀಡಿರುವ ಈ ಸಮೀಕ್ಷೆ, ಇಂಡಿಯಾ ಒಕ್ಕೂಟದಲ್ಲಿ ತೃಣ ಮೂಲ ಕಾಂಗ್ರೆಸ್ಸನ್ನು ಸೇರಿಸಿಲ್ಲ. ತೃಣಮೂಲ ಕಾಂಗ್ರೆಸ್ ಹೊರತಾದ ಇಂಡಿಯಾ ಕೂಟ 98 ಸ್ಥಾನ ಪಡೆಯಲಿದೆ ಎಂದು ಹೇಳಿದೆ. ತೃಣಮೂಲ ಕಾಂಗ್ರೆಸ್ 21 ಸ್ಥಾನ ಪಡೆದು 3ನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಹಾಗೂ.. ಕಾಂಗ್ರೆಸ್ ಈ ಸಲ ಕೇವಲ 37ಕ್ಕೆ ಕುಸಿದು, ಈವರೆಗಿನ ಅತಿ ಕಳಪೆ ಸಾಧನೆ ಪ್ರದರ್ಶಿಸಲಿದೆ.
ಕರ್ನಾಟಕದಲ್ಲಿ ಬಿಜೆಪಿ 22 ಹಾಗೂ ಜೆಡಿಎಸ್ 2 ಸ್ಥಾನ ಗೆಲ್ಲುವ ಮೂಲಕ ಎನ್‌ಡಿಎಗೆ 24 ಸ್ಥಾನ ಸಿಗಲಿವೆ. ರಾಜ್ಯದ ಆಡಳಿತಾರೂಢ ಕಸ್ಗ್ರೆಸ್ ಕೇವಲ 4ರಲ್ಲಿ ಗೆಲ್ಲಲಿದೆ ಎಂದು ಇಂಡಿಯಾ ಟೀವಿ-ಸಿಎನ್‌ಎಕ್ಸ್ ಸಮೀಕ್ಷೆ ಹೇಳಿದೆ. ಪ್ರಸ್ತುತ ಬಿಜೆಪಿ 25, ಜೆಡಿಎಸ್ 1, ಕಾಂಗ್ರೆಸ್ 1 ಹಾಗೂ ಪಕ್ಷೇತರರಾಗಿರುವ ಸುಮಲತಾ ಅಂಬರೀಷ್ ಒಂದು ಸ್ಥಾನದಲ್ಲಿ ಗೆದ್ದಿದ್ದಾರೆ. ಈ ಲೆಕ್ಕದ ಪ್ರಕಾರವೂ ಕಾಂಗ್ರೆಸ್ ಹಾಗೂ ಜೆಡಿಎಸ್ʻಗೆ ಲಾಭವಾಗಲಿದೆ. ಕಾಂಗ್ರೆಸ್ ಕಳೆದ ಬಾರಿ 1 ಸ್ಥಾನ ಗೆದ್ದಿತ್ತು. ಈ ಬಾರಿ 4 ಸ್ಥಾನ ಗೆಲ್ಲಲಿದೆ. ಜೆಡಿಎಸ್ ಕೂಡಾ ಒಂದು ಗೆದ್ದಿತ್ತು, ಈ ಬಾರಿ ಡಬಲ್ ಆಗಲಿದೆ. ಆದರೆ ನಷ್ಟವಾಗುವುದು ಬಿಜೆಪಿಗೆ. ಕಳೆದ ಬಾರಿ ಏಕಾಂಗಿಯಾಗಿ 25 ಸ್ಥಾನ ಗೆದ್ದಿದ್ದ ಬಿಜೆಪಿ, ಈ ಬಾರಿ ಮೈತ್ರಿ ಮಾಡಿಕೊಂಡು ಕೇವಲ 22ರಲ್ಲಿ ಗೆಲ್ಲಲಿದೆ. ಮೈತ್ರಿಯ 2 ಸ್ಥಾನ ಸೇರಿದರೂ, 24 ಆಗಲಿದ್ದು, 1 ಸ್ಥಾನ ನಷ್ಟ ಅನುಭವಿಸಲಿದೆ.
ಸಮೀಕ್ಷಾ ವರದಿಯು ನಿಜವಾದಲ್ಲಿ, ಬಿಜೆಪಿಗೆ ಲೋಕಸಭೆಯ ಒಟ್ಟು ಸ್ಥಾನಗಳಲ್ಲಿ (543) ಬಿಜೆಪಿಗೆ ಶೇ. 69 ಸ್ಥಾನಗಳು ಲಭ್ಯವಾಗಲಿವೆ ಎಂದು ಅಂದಾಜಿಸಲಾಗಿದೆ.
ಮತ್ತೊಂದೆಡೆ, ಕಾಂಗ್ರೆಸ್ ಪಕ್ಷವು ಕೇವಲ 37 ಸ್ಥಾನಗಳನ್ನು ಗಳಿಸಲಿದ್ದು, ಭಾರತೀಯ ಚುನಾವಣಾ ಇತಿಹಾಸದಲ್ಲೇ ಅತ್ಯಂತ ಶೋಚನೀಯ ಸೋಲನ್ನು ಕಾಣಲಿದೆ ಎಂದು ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಈ ಬಾರಿ 400 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ಧಾರೆ. ಆದರೆ, ಅವರ ಟಾರ್ಗೆಟ್ ಗಿಂತ ಕೊಂಚ ಕಡಿಮೆ ಅಂದರೆ, 378 ಸ್ಥಾನಗಳು ಎನ್ ಡಿಎಗೆ ಲಭ್ಯವಾಗಲಿವೆ. ಆದರೆ, ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಬಿಜೆಪಿಯು ಈವರೆಗಿನ ಲೋಕಸಭಾ ಚುನಾವಣೆಯಲ್ಲಿ ಹಿಂದೆಂದೂ ಕಾಣದಂಥ ಗೆಲುವನ್ನು ಈ ಬಾರಿ ಕಾಣಲಿದೆ. ಬಿಜೆಪಿಗೆ ಈ ಬಾರಿ 330+ ಸ್ಥಾನಗಳು ಸಿಗಲಿವೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇಷ್ಟಾದರೂ ಈ ಹಿಂದೆ, ರಾಜೀವ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಗಳಿಸಿದ್ದ 415 ಸೀಟುಗಳ ದಾಖಲೆಯನ್ನು ಅಳಿಸಲು ಎನ್ ಡಿಎಗೆ ಸಾಧ್ಯವಾಗುವುದಿಲ್ಲ.
ಸಮೀಕ್ಷೆ ಪ್ರಕಾರ ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಸ್ಥಾನ..?
• ಆಂಧ್ರಪ್ರದೇಶ – ಒಟ್ಟು ಸ್ಥಾನ 25 (ವೈಎಸ್ ಆರ್ ಸಿಪಿ 15, ಟಿಡಿಪಿ 10)
• ಅರುಣಾಚಲ ಪ್ರದೇಶ – ಒಟ್ಟು ಸ್ಥಾನ 2 (ಬಿಜೆಪಿ -2)
• ಅಸ್ಸಾಂ – ಒಟ್ಟು ಸ್ಥಾನ 14 (ಬಿಜೆಪಿ 10, ಎಜಿಪಿ 1, ಯುಪಿಪಿಎಲ್ 1, ಕಾಂಗ್ರೆಸ್ 1, ಯುಐಯುಡಿಎಫ್ 1)
• ಬಿಹಾರ – ಒಟ್ಟು ಸ್ಥಾನ 40 (ಬಿಜೆಪಿ 17, ಜೆಡಿಯು 12, ಆರ್ ಜೆಡಿ 4, ಎಲ್ ಜೆಪಿ (ಆರ್) 3, ಆರ್ ಎಲ್ ಜೆಪಿ 1, ಎಚ್ ಎಎಂ 1, ಆರ್ ಎಲ್ ಎಂ 1, ಕಾಂಗ್ರೆಸ್ 1)
• ಛತ್ತೀಸ್ ಗಡ – ಒಟ್ಟು ಸ್ಥಾನ 11 (ಬಿಜೆಪಿ 10, ಕಾಂಗ್ರೆಸ್ 1)
• ಗೋವಾ – ಒಟ್ಟು ಸ್ಥಾನ 2 (ಬಿಜೆಪಿ 2)
• ಗುಜರಾತ್ – ಒಟ್ಟು ಸ್ಥಾನ 26 (ಬಿಜೆಪಿ 26)
• ಹರಿಯಾಣ – ಒಟ್ಟು ಸ್ಥಾನ 10 (ಬಿಜೆಪಿ 10)
• ಹಿಮಾಚಲ ಪ್ರದೇಶ – ಒಟ್ಟು ಸ್ಥಾನ 4 (ಬಿಜೆಪಿ 4)
• ಜಾರ್ಖಂಡ್ – ಒಟ್ಟು ಸ್ಥಾನ 14 (ಬಿಜೆಪಿ 12, ಎಜೆಎಸ್ ಯು 1, ಜೆಎಂಎಂ 1)
• ಕರ್ನಾಟಕ – ಒಟ್ಟು ಸ್ಥಾನ 28 (ಬಿಜೆಪಿ 22, ಜೆಡಿಎಸ್ 2, ಕಾಂಗ್ರೆಸ್ – 4)
• ಕೇರಳ – ಒಟ್ಟು ಸ್ಥಾನ 20 (ಯುಡಿಎಫ್ 11, ಎಲ್ ಡಿಎಫ್ 6, ಬಿಜೆಪಿ 3) – ಕಾಂಗ್ರೆಸ್ 7, ಸಿಪಿಐ (ಎಂ) 4, ಬಿಜೆಪಿ 3, ಸಿಪಿಐ 1, ಕೆಸಿ (ಎಂ) 1, ಐಯುಎಂಎಲ್ 2, ಆರ್ ಎಸ್ ಪಿ 1, ಇತರೆ 1
• ಮಧ್ಯ ಪ್ರದೇಶ – ಒಟ್ಟು ಸ್ಥಾನ 29 (ಬಿಜೆಪಿ 29)
• ಮಹಾರಾಷ್ಟ್ರ – ಒಟ್ಟು ಸ್ಥಾನ 48 (ಬಿಜೆಪಿ 25, ಶಿವಸೇನೆ (ಯುಬಿಟಿ) 8, ಎನ್ ಸಿಪಿ (ಅಜಿತ್) 4, ಶಿವಸೇನೆ (ಶಿಂಧೆ) 6, ಎನ್ ಸಿಪಿ (ಶರದ್) 3, ಕಾಂಗ್ರೆಸ್ 2)
• ಮಣಿಪುರ – ಒಟ್ಟು ಸ್ಥಾನ 2 (ಬಿಜೆಪಿ 1, ಕಾಂಗ್ರೆಸ್ 1)
• ಮೇಘಾಲಯ – ಒಟ್ಟು ಸ್ಥಾನ 2 (ಎನ್ ಪಿಪಿ 2)
• ಮಿಜೋರಂ – ಒಟ್ಟು ಸ್ಥಾನ 1 (ಝೆಡ್ ಪಿ ಎಂ 1)
• ನಾಗಾಲ್ಯಾಂಡ್ – ಒಟ್ಟು ಸ್ಥಾನ 1 (ಎನ್ ಡಿಪಿಪಿ 1)
• ಒಡಿಶಾ – ಒಟ್ಟು ಸ್ಥಾನ 21 (ಬಿಜೆಡಿ 11, ಬಿಜೆಪಿ 10)
• ಪಂಜಾಬ್ – ಒಟ್ಟು ಸ್ಥಾನ 13 (ಆಮ್ ಆದ್ಮಿ ಪಾರ್ಟಿ 6, ಕಾಂಗ್ರೆಸ್ 3, ಬಿಜೆಪಿ 3, ಶಿರೋಮಣಿ ಅಕಾಲಿ ದಳ 1)
• ರಾಜಸ್ಥಾನ – ಒಟ್ಟು ಸ್ಥಾನ 25 (ಬಿಜೆಪಿ 25)
• ಸಿಕ್ಕಿಂ – ಒಟ್ಟು ಸ್ಥಾನ 1 (ಎಸ್ ಕೆಎಂ 1)
• ತಮಿಳುನಾಡು – ಒಟ್ಟು ಸ್ಥಾನ 39 (ಡಿಎಂಕೆ 20, ಎಐಎಡಿಎಂಕೆ 4, ಬಿಜೆಪಿ 4, ಕಾಂಗ್ರೆಸ್ 6, ಪಿಎಂಕೆ 1, ಇತರೆ 4)
• ತೆಲಂಗಾಣ – ಒಟ್ಟು ಸ್ಥಾನ 17 (ಕಾಂಗ್ರೆಸ್ 9, ಬಿಜೆಪಿ 5, ಬಿಆರ್ ಎಸ್ 2, ಎಐಎಂಐಎಂ 1)
• ತ್ರಿಪುರಾ – ಒಟ್ಟು ಸ್ಥಾನ 2 (ಬಿಜೆಪಿ 2)
• ಉತ್ತರ ಪ್ರದೇಶ – ಒಟ್ಟು ಸ್ಥಾನ 80 (ಬಿಜೆಪಿ 74, ಅಪ್ನಾ ದಳ 2, ಆರ್ ಎಲ್ ಡಿ 2, ಎಸ್ ಪಿ 2)
• ಉತ್ತರಾಖಾಂಡ – ಒಟ್ಟು 5 (ಬಿಜೆಪಿ 5)
• ಪಶ್ಚಿಮ ಬಂಗಾಳ – ಒಟ್ಟು 42 (ತೃಣಮೂಲ ಕಾಂಗ್ರೆಸ್ 21, ಬಿಜೆಪಿ 20, ಕಾಂಗ್ರೆಸ್ 1)
• ಅಂಡಮಾನ್ ನಿಕೋಬಾರ್ – ಒಟ್ಟು ಸ್ಥಾನ 1 (ಬಿಜೆಪಿ 1)
• ಚಂಡೀಗಢ – ಒಟ್ಟು ಸ್ಥಾನ 1 (ಬಿಜೆಪಿ 1)
• ದಾದ್ರಾ ನಗರ್ ಹವೇಲಿ, ದಿಯು ಮತ್ತು ದಮನ್ – ಒಟ್ಟು ಸ್ಥಾನ 2 (ಬಿಜೆಪಿ 2)
• ಜಮ್ಮು ಮತ್ತು ಕಾಶ್ಮೀರ – ಒಟ್ಟು ಸ್ಥಾನ 5 (ಬಿಜೆಪಿ 2, ಜೆಕೆಎನ್ ಸಿ 3)
• ಲಡಾಕ್ – ಒಟ್ಟು ಸ್ಥಾನ 1 (ಬಿಜೆಪಿ 1)
• ಲಕ್ಷದ್ವೀಪ – ಒಟ್ಟು ಸ್ಥಾನ 1 (ಕಾಂಗ್ರೆಸ್ 1)
• ದೆಹಲಿ – ಒಟ್ಟು ಸ್ಥಾನ 7 (ಬಿಜೆಪಿ 7)
• ಪುದುಚ್ಚೇರಿ – ಒಟ್ಟು ಸ್ಥಾನ 1 (ಬಿಜೆಪಿ 1)



