ಭಯೋತ್ಪಾದನೆಗೆ ಅನಕ್ಷರತೆ ಕಾರಣ ಎನ್ನುತ್ತಾರೆ. ಬಡತನ ಕಾರಣ ಎನ್ನುತ್ತಾರೆ. ನಿರುದ್ಯೋಗ ಕಾರಣ ಎನ್ನುತ್ತಾರೆ. ಅದರೆ.. ಅದಾವುದೂ ಅಲ್ಲ. ನಿಜವಾದ ಭಯೋತ್ಪಾದಕರು, ಉಗ್ರರು, ಧರ್ಮದ ಹೆಸರು ಹೇಳಿ, ನಂಬಿಸಿ ದಾರಿ ತಪ್ಪಿಸುವವರು ಬುದ್ದಿವಂತರೇ ಆಗಿರುತ್ತಾರೆ. ಈಗ ಅರೆಸ್ಟ್ ಆಗಿರುವವರನ್ನೇ ನೋಡಿ.. ಇದನ್ನು ನೋಡುತ್ತಿದ್ದರೆ ಡಿಗ್ರಿ ಮಾಡಿದವರೇ ಡೇಂಜರ್.. ವಿದ್ಯಾವಂತರೇ ಭಯೋತ್ಪಾದಕರು ಎಂದು ಅನಿಸದೇ ಇದರು. ಅದರಲ್ಲೂ ಆ ಲೇಡಿ ಡಾಕ್ಟರ್ ಟೆರರಿಸ್ಟ್ ಕಾರಿನಲ್ಲಿ ಒಂದು ಆಯುಧಗಳ ಫ್ಯಾಕ್ಟರಿಯೇ ಸಿಕ್ಕಿದೆ. ಅರೆಸ್ಟ್ ಆಗಿರುವವರ ಪೈಕಿ ಮೂವರು ಡಾಕ್ಟರ್ಸ್.. ಒಬ್ಬ ಯನಿವರ್ಸಿಟಿ ಪ್ರೊಫೆಸರ್. ಒಬ್ಬ ಇಂಜಿನಿಯರ್, ಒಬ್ಬ ಮೌಲ್ವಿ.. ಎಲ್ಲರೂ ವಿದ್ಯಾವಂತರೇ.
ಅನಕ್ಷರತೆ ಭಯೋತ್ಪಾದನೆಗೆ ಕಾರಣ ಎಂಬ ಪೊಳ್ಳುವಾದ ಮತ್ತೆ ಠುಸ್ ಆಗಿದೆ. ಮೂವರು ಟೆರರಿಸ್ಟ್ ಡಾಕ್ಟರ್ಸ್ ಅರೆಸ್ಟ್ ದಿನವೇ ಕೆಂಪುಕೋಟೆ ಸ್ಪೋಟ ಸಂಭವಿಸಿದೆ. ಡಾಕ್ಟರ್ಸ್ ಭಯೋತ್ಪಾದಕರ ಬಂಧನಕ್ಕೂ, ಸ್ಫೋಟಕ್ಕೂ ಸಂಬಂಧ ಇದೆಯಾ. ಇದು ಸದ್ಯಕ್ಕೆ ನಡೆಯುತ್ತಿರುವ ತನಿಖೆ.
ಮೊದಲು ಅರೆಸ್ಟ್ ಆದವನು ಅದೀಲ್ ಅಹ್ಮದ್. ಈಗ ಕಾಶ್ಮೀರದ ಪುಲ್ವಾಮದಲ್ಲಿದ್ದ ಡಾಕ್ಟರ್ ಉಗ್ರ. ಅದೀಲ್ ಅಹ್ಮದ್ ಅರೆಸ್ಟ್ ಆಗಿದ್ದು ಆತನ ಮನೆಯಲ್ಲಿ ಸಿಕ್ಕ ಅತ್ಯಾಧುನಿಕ ಗನ್ ಮತ್ತು ಸ್ಫೋಟಕಗಳ ಕಾರಣಕ್ಕೆ. ಇವನನ್ನು ಬೆಂಡೆತ್ತಿದಾಗ ಹೊರಬಂದ ಹೆಸರು ಡಾ.ಮುಜಮ್ಮಿಲ್, ಅಹ್ಮದ್ ಮೊಹಿಯಿದ್ದೀನ್ ಸೈಯ್ಯದ್ ಹಾಗೂ ಲೇಡಿ ಡಾಕ್ಟರ್ ಟೆರರಿಸ್ಟ್ ಶಹೀನ್.
ಮಸೀದಿಯೊಂದ ಮೌಲ್ವಿ ಇಮಾಂ ಮೌಲ್ವಿ ಇರ್ಫಾನ್ ಅಹ್ಮದ್ ಸೇರಿದಂತೆ ಅರೆಸ್ಟ್ ಆಗುವವರು ಜಾಸ್ತೀನೇ ಆಘಿದ್ದಾರೆ.
ಈ ಡಾಕ್ಟರುಗಳ ಬಳಿ 2900 ಕೆಜಿ RDX, AK 56 ರೈಫಲ್, ಚೈನೀಸ್ ಸ್ಟಾರ್ ಪಿಸ್ತೂಲ್, ಬೆರೆಟ್ಟಾ ಪಿಸ್ತೂಲ್, AK ಕ್ರಿನ್ ಕೋವ್ ರೈಫಲ್, ಟೈಮರ್ ಬ್ಯಾಟರಿ, ಬಾಂಬ್ ತಯಾರಿಕೆಗೆ ಸಂಬಂದಪಟ್ಟ ಇತ್ಯಾದಿಗಳು ಸಿಕ್ಕಿವೆ.
ಇವರಿಗಿಂತ ಡೇಂಜರಸ್ ಆಗಿರೋದು ಹೆಣ್ಣು ಮಗ ಡಾಕ್ಟರ್ ಲೇಡಿ ಟೆರರ್ ಡಾಕ್ಟರ್ ಶಹೀನ್. ಈಕೆಯ ಕಾರಿನಲ್ಲಿ ಕೂಡಾ ಗನ್ ಇತ್ತು. 360 ಕೆಜಿ ಅಮೋನಿಯಂ ನೈಟ್ರೇಟ್, 3 ಮ್ಯಾಗಜಿನ್, 83 ಬುಲೆಟ್ಸ್, 8 ರೌಂಡ್ ಪಿಸ್ತೂಲ್, ಬುಲೆಟ್ ಖಾಲಿಯಾಗಿದ್ದ 2 ಕ್ಯಾಟ್ರಿಡ್ಜ್, ಸ್ಫೋಟಕ ತುಂಬಿದ್ದ 12 ಸೂಟ್‌ಕೇಸ್, 20 ಟೈಮರ್, 4 ಬ್ಯಾಟರಿ, 4 ರಿಓಟ್, 5 ಕೆಜಿ ಹೆವಿ ಮೆಟಲ್, ಒಂದು ವಾಕಿಟಾಕಿ ಸಿಕ್ಕಿತ್ತು. ಹೆಸರಿಗಷ್ಟೇ ಡಾಕ್ಟರ್ ಆಗಿದ್ದ ಜೈಷ್ ಭಯೋತ್ಪಾದಕಿ ಡಾ.ಶಹೀನ್.. ಇದೆಲ್ಲವನ್ನೂ ಯಾರಿಗೆ ಆಪರೇಷನ್ ಮಾಡಲು ತೆಗೆದಿಟ್ಟುಕೊಂಡಿದ್ದಳೋ ಏನೋ..
ಇನ್ನು ಗುಜರಾತಿನಲ್ಲಿ ಅರೆಸ್ಟ್ ಆದ ಉಗ್ರರ ಬೇಟೆಗೆ ಬೆಂಗಳೂರು ಲಿಂಕ್ ಇದೆ. ಬೆಂಗಳೂರಿನ ಶಮಾ ಪರ್ವಿನ್ ಕೊಟ್ಟ ಕ್ಲೂ ಮೇಲೆ ಮೂವರು ಅರೆಸ್ಟ್ ಆಗಿದ್ದಾರೆ. ಉಗ್ರ ಕೃತ್ಯದಲ್ಲಿ ಅರೆಸ್ಟ್ ಆಗಿರುವ ಬೆಂಗಳೂರಿನ ಶಮಾ ಪರ್ವೀನ್, ಜುಲೈ 30ರಂದು ಬೆಂಗಳೂರಿನ ಹೆಬ್ಬಾಳದಲ್ಲಿ ಅರೆಸ್ಟ್ ಆಗಿದ್ದಳು. ಗುಜರಾತ್ ಎಟಿಎಸ್ ಪಡೆಯಿಂದ ಅರೆಸ್ಟ್ ಆಗಿದ್ದ ಹೆಬ್ಬಾಳದ ಶಮಾ ಪರ್ವಿನ್ ಕೊಟ್ಟ ಕ್ಲೂ ಮೇಲೆ ಮೂವರು ಉಗ್ರರು ಅರೆಸ್ಟ್ ಆಗಿದ್ದಾರೆ. ಕೆಮಿಕಲ್ ಬಾಂಬ್ ತಯಾರಿಯ ಹಾದಿಯಲ್ಲಿ ಉಗ್ರನೂ ಅರೆಸ್ಟ್ ಆಗಿದ್ದಾನೆ.
ಇನ್ನು ದೆಹಲಿಯ ಕೆಂಪುಕೋಟೆ ಕಾರ್ ಬ್ಲಾಸ್ಟ್ ಕೇಸ್ ತನಿಖೆಗೆ ಮೆಗಾ ಟ್ವಿಸ್ಟ್ ಸಿಕ್ಕಿದೆ. ಕಾರು ಹರಿಯಾಣದ್ದು.. ಒಂದೇ ಕಾರಿಗೆ ಹಲವು ಓನರ್ಸ್ ಇದ್ದಾರೆ. ಕೇವಲ ಒಂದೂವರೆ ವರ್ಷದಲ್ಲಿ ಹಲವರ ಕೈ ಬದಲಿಸಿರುವ ಕಾರ್, ನದೀಮ್ ಖಾನ್ ಎಂಬುವವರ ಹೆಸರಲ್ಲಿ ರಿಜಿಸ್ಟರ್ ಆಗಿತ್ತು. ಹುಂಡೈ i 20 ಕಾರಿನ ಮಾಲೀಕರು ಹೆಸರಲ್ಲಿ ನದೀಮ್ ಒಬ್ಬನೇ ಅಲ್ಲ. ಮೊಹಮ್ಮದ್ ಸಲ್ಮಾನ್, ಸಲ್ಮಾನ್ʻನಿಂದ ದೇವಿಂದರ್‌ಗೆ ಮಾರಾಟವಾಗಿತ್ತು. ಕೊನೆಗೆ ಪುಲ್ವಾಮಾದ ತಾರೀಕ್ ಅಹ್ಮದ್ ಹೆಸರು ಸದ್ಯದ ಕಾರ್ ಮಾಲೀಕ ಎಂಬ ಮಾಹಿತಿ ಹೊರಬಿದ್ದಿದೆ. ಈ ತಾರೀಕ್ ಕಾಶ್ಮೀರದ ಪುಲ್ವಾಮಾದ ಶಂಭುರಾ ಗ್ರಾಮದವನು. ಕಾರ್ ನಂ. HR 26 CE 7674.



