ನಟಿ ರುಕ್ಮಿಣಿ ವಸಂತ್ ಒಂದು ಫೋನ್ ನಂಬರ್ ಕೊಟ್ಟು ಒಂದು ಎಚ್ಚರಿಕೆ ಕೊಟ್ಟಿದ್ದಾರೆ. ಅದು ಸೈಬರ್ ಕ್ರೈಂನವರಿಂದ ಎಚ್ಚರವಾಗಿರಿ ಅನ್ನೋದು. ಇಷ್ಟಕ್ಕೂ ಆಗಿದ್ದು ಏನೆಂದರೆ.. ಇತ್ತೀಚೆಗೆ 9445893273 ನಿಂದ ಹಲವರಿಗೆ ಕಾಲ್ ಹೋಗುತ್ತಿದೆ. ನಾನು ರುಕ್ಮಿಣಿ ವಸಂತ್. ಕಾಂತಾರದ ಕನಕವತಿ ಎಂದು ಮಾತು ಶುರುವಾಗುತ್ತದೆ. ಮುಂದೆ.. ಆ ಮಾತಿನ ಮೋಡಿಗೆ ಬಿದ್ದಿರೋ.. ಸುಲಿಗೆ ಫಿಕ್ಸ್.
ಹೀಗಾಗಿಯೇ ರುಕ್ಮಿಣಿ ವಸಂತ್.. ʻʻಯಾವುದೇ ಕಾರಣಕ್ಕೂ ನನ್ನ ಹೆಸರಿನಲ್ಲಿ 9445893273 ಎಂಬ ಈ ಸಂಖ್ಯೆಯಿಂದ ನಿಮಗೆ ಕರೆ ಬಂದರೆ ಸ್ವೀಕರಿಸಬೇಡಿ, ಮೆಸೇಜ್ ಬಂದರೆ ಪ್ರತಿಕ್ರಿಯಿಸಬೇಡಿ. ಇದು ನನ್ನ ವ್ಯೆಯಕ್ತಿಕ ಫೋನ್ ನಂಬರ್ ಅಲ್ಲ. ನನ್ನ ಹೆಸರಿನಲ್ಲಿ ಈ ನಂಬರ್‌ನ ಒಬ್ಬ ವ್ಯಕ್ತಿ ಉಪಯೋಗ ಮಾಡುತ್ತಿದ್ದು, ಹಲವಾರು ಜನರಿಗೆ ಈ ವ್ಯಕ್ತಿ ಸಂಪರ್ಕ ಮಾಡುತ್ತಿದ್ಧಾನೆ. ಈ ಫೋನ್ ನಂಬರ್ ನನ್ನದಲ್ಲ. ಇದರಿಂದ ಬರುವ ಫೋನ್ ಮತ್ತು ಮೆಸೇಜ್‌ಗಳು ಸಂಪೂರ್ಣ ನಕಲಿ ಎಂದು ನಾನು ಈ ಮೂಲಕ ಸ್ಪಷ್ಟ ಪಡಿಸಲು ಬಯಸುತ್ತೇನೆ. ಎಲ್ಲರೂ ದಯವಿಟ್ಟು ಎಚ್ಚರದಿಂದ ಇರಿʼʼ ಎಂದು ಸೋಷಿಯಲ್ ಮೀಡಿಯಾದಲ್ಲಿಯೇ ಪೋಸ್ಟ್ ಹಾಕಿದ್ದಾರೆ. ಆಗಿರುವುದೇನೆಂದರೆ ರುಕ್ಮಿಣಿ ಹೆಸರಲ್ಲಿ ಅನಾಮಿಕನೊಬ್ಬ ಫೋನ್ ಮಾಡಿ ಹಣ ಕೇಳ್ತಿದ್ದಾನಂತೆ. ಇದರ ಬಗ್ಗೆ ನ. 7ರಂದು ಮಧ್ಯಾಹ್ನ 3.41ಕ್ಕೆ ಟ್ವೀಟ್ ಮಾಡಿದ್ದಾರೆ. ಅನಾಮಿಕ ವ್ಯಕ್ತಿಯೊಬ್ಬ ನನ್ನ ಹೆಸರಿನಲ್ಲಿ ಪೋನ್ ಮಾಡಿ ಹಣ ಕೇಳುತ್ತಿದ್ದಾನೆ. ಯಾರೂ ಆತನನ್ನು ನಂಬಿ ಹಣ ಕಳಿಸಬಾರದು ಎಂದು ಮನವಿ ಮಾಡಿದ್ದಾರೆ.
ಇದು ಪೊಲೀಸರ ಸಂತೋಷಕ್ಕೂ ಕಾರಣವಾಗಿದೆ. ಕಾರಣ ಇಷ್ಟೇ. ಬಹುತೇಕ ಸೆಲಬ್ರಿಟಿಗಳು ತಾವು ಮೋಸ ಹೋದ ನಂತರ.. ಲಾಸ್ ಮಾಡಿಕೊಂಡ ನಂತರ ಪೊಲೀಸರನ್ನು ಕಾಂಟ್ಯಾಕ್ಟ್ ಮಾಡಿ ಹೆಲ್ಪ್ ಕೇಳ್ತಾರೆ. ಎಷ್ಟೋ ಜನ ತಮ್ಮ ಹೆಸರು ಮಿಸ್ ಯೂಸ್ ಆಗುತ್ತಿದೆ ಎಂದು ಗೊತ್ತಿದ್ದೂ.. ಸೈಲೆಂಟ್ ಆಗಿರ್ತಾರೆ. ಅದಕ್ಕೆ ಆಸ್ಪದವನ್ನೇ ನೀಡದೆ ತಕ್ಷಣ ಗಮನಕ್ಕೆ ತಂದು, ಅಲರ್ಟ್ ಕೂಡಾ ಮಾಡಿರುವ ರುಕ್ಮಿಣಿ ವಸಂತ್ ಅವರನ್ನು ಪೊಲೀಸರು ಅಭಿನಂದಿಸಿದ್ಧಾರೆ.
ರುಕ್ಮಿಣಿ ವಸಂತ್. ಈಗ ಸ್ಟಾರ್ ನಟಿ. ಕಾಂತಾರದ ಕನಕವತಿ. ಸಪ್ತಸಾಗರದಾಚೆ ಎಲ್ಲೋನ ಪುಟ್ಟಿ. ಅರೆ.. ರುಕ್ಮಿಣಿ ಅವರ ಹೆಸರಿನಲ್ಲೂ ಮೋಸ ಮಾಡೋವ್ರು ಹುಟ್ಟಿಕೊಂಡಿದ್ದಾರಾ ಎಂದರೆ ಉತ್ತರ ಹೌದು. ಇದು ಗೊತ್ತಾಗುತ್ತಿದ್ದಂತೆಯೇ ತಕ್ಷಣ ಸೈಬರ್ ಪೊಲೀಸರ ಗಮನಕ್ಕೆ ತಂದಿದ್ದಾರೆ ರುಕ್ಮಿಣಿ. ತಮ್ಮ ಹೆಸರಿನಲ್ಲಿ ದಾರಿ ತಪ್ಪಿಸುತ್ತಿರುವ.. ವಂಚನೆಯ ಪ್ರಯತ್ನ ಮಾಡುತ್ತಿರುವ.. ವ್ಯಕ್ತಿಯ ವಿರುದ್ದ ದೂರನ್ನೂ ಕೊಟ್ಟಿದ್ದಾರೆ. ಈ ರೀತಿಯ ಕರೆ ಬಂದರೆ ನೇರವಾಗಿ ಅವರನ್ನಾಗಲೀ.. ಅವರ ತಂಡವನ್ನಾಗಲೀ ಕಾಂಟ್ಯಾಕ್ಟ್ ಮಾಡಬೇಕಂತೆ. ಆನ್‌ಲೈನ್‌ನಲ್ಲಿ ಜಾಗರೂಕರಾಗಿರಿ.. ಸುರಕ್ಷಿತರಾಗಿರಿʼʼ ಎಂದು ಬರೆದುಕೊಂಡಿದ್ದಾರೆ ರುಕ್ಮಿಣಿ ವಸಂತ್.
ಎಷ್ಟೆಂದರೂ ರುಕ್ಮಿಣಿ ವಸಂತ್ ಯೋಧನ ಮಗಳು. ಹುತಾತ್ಮ ಸೈನಿಕ ಕರ್ನಲ್ ವಸಂತ್ ವೇಣುಗೋಪಾಲ್ ಮತ್ತು ಭರತನಾಟ್ಯ ನರ್ತಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಸುಭಾಷಿಣಿ ವಸಂತ್ ಅವರ ಹಿರಿಯ ಮಗಳು. ಕರ್ನಾಟಕದ ಮೊದಲ ಅಶೋಕ ಚಕ್ರ ಪಡೆದ ಯೋಧ ಕರ್ನಲ್ ವಸಂತ್ ವೇಣುಗೋಪಾಲ್. 2007 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಅವರು ಹುತಾತ್ಮರಾದರು. 2007 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ನುಸುಳುಕೋರರನ್ನು ತಡೆಯುವಾಗ ಕರ್ನಲ್ ವಸಂತ್ ವೇಣುಗೋಪಾಲ್ ಸಾವನ್ನಪ್ಪಿದರು. ಅಶೋಕ ಚಕ್ರ ಪಡೆದ ಕರ್ನಾಟಕದ ಮೊದಲ ಯೋಧ ಕರ್ನಲ್ ವಸಂತ್ ವೇಣುಗೋಪಾಲ್. ಹೀಗಾಗಿ ಕಾನೂನು ಚೆನ್ನಾಗಿಯೇ ಗೊತ್ತಿದೆ.



