Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಅವರನ್ನು ಹೊಗಳಿದರೆ.. ಇವರಿಗೆ ಸಿಟ್ಟು : ಸುದೀಪ್‌ ಹುಟ್ಟುಹಬ್ಬದ ಸಂಭ್ರಮಕ್ಕೆ ಕಲ್ಲು ಹಾಕಿದ್ರಾ ದರ್ಶನ್‌ ಫ್ಯಾನ್ಸ್..?

SpeciallU by SpeciallU
September 3, 2024
in Cinema, News
Reading Time: 1 min read
0 0
0
ಅವರನ್ನು ಹೊಗಳಿದರೆ.. ಇವರಿಗೆ ಸಿಟ್ಟು : ಸುದೀಪ್‌ ಹುಟ್ಟುಹಬ್ಬದ ಸಂಭ್ರಮಕ್ಕೆ ಕಲ್ಲು ಹಾಕಿದ್ರಾ ದರ್ಶನ್‌ ಫ್ಯಾನ್ಸ್..?

ಕಿಚ್ಚ ಸುದೀಪ್‌ 51ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈಗಿನ್ನೂ 28 ತುಂಬಿ 29ಕ್ಕೆ ಕಾಲಲಿಟ್ಟಿದ್ದೇನೆ ಎಂದಿದ್ದಾರೆ. ಮನೆಯ ಬಳಿ ಮೀಟ್‌ ಮಾಡೋದು ಎಂದು ಅಭಿಮಾನಿಗಳಿಗೆ ಮೊದಲೇ ಕರೆ ಕೊಟ್ಟಿದ್ದರು ಸುದೀಪ್.‌ ಆದರೇನಂತೆ.. ಮಧ್ಯರಾತ್ರಿಯೇ ಮನೆಯ ಬಳಿ ಅಭಿಮಾನಿಗಳು ಕೇಕ್‌ ಕಟ್‌ ಮಾಡಿಸಿ ಸಂಭ್ರಮಿಸಿದ್ದರು. ಅದಾದ ಮೇಲೆ ಗ್ರೌಂಡಿಗೆ ಬಂತು ಖುಷಿ ಪಟ್ಟಿದ್ದರು. ಅಭಿಮಾನಿಗಳಿಗಾಗಿ ಸುದೀಪ್‌ ತಮ್ಮ ಬಿಲ್ಲ ರಂಗ ಭಾಷ ಚಿತ್ರದ ಝಲಕ್‌ ಕೂಡಾ ತೋರಿಸಿದ್ದರು. ಆದರೆ ಈ ಮಧ್ಯೆ ತಮ್ಮ ಅಭಿಮಾನಿಗಳನ್ನು ಹೊಗಳಿದ್ದರು ಸುದೀಪ್. ಅರೆ.. ಅವರವರ ಅಭಿಮಾನಿಗಳನ್ನು ಹೊಗಳೋದೂ ತಪ್ಪಾ ಎನ್ನಬೇಡಿ. ಆದರೆ ಆ ಹೊಗಳಿಕೆಯೇ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಕಲ್ಲು ಬೀಳುವಂತೆ ಮಾಡಿದೆ. ಸುದೀಪ್‌ ತಮ್ಮ ಅಭಿಮಾನಿಗಳನ್ನು ಹೊಗಳಿದ್ದಕ್ಕೆ ರೊಚ್ಚಿಗೆದ್ದಿರುವುದು ದರ್ಶನ್‌ ಫ್ಯಾನ್ಸ್‌ ಎನ್ನುವುದು ವಿಶೇಷ.

ಇಷ್ಟಕ್ಕೂ ಸುದೀಪ್‌ ಹೊಗಳಿಕೆಯ ಮಾತುಗಳೇನಿದ್ದವು.. ಅಂತಾ ನೋಡೋದಾದ್ರೆ..

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ನಾನು ಮೇಕಪ್​ ಹಾಕೋದು ಅಭಿಮಾನಿಗಳಿಗೋಸ್ಕರ. ಎಲ್ಲಿಯವರೆಗೆ ನೋಡೋಕೆ ಇಷ್ಟಪಡುತ್ತಿರೋ ಅಲ್ಲಿಯವರೆಗೆ ನಿಮಗೋಸ್ಕರ ದುಡಿಯುತ್ತೇನೆ.
ನಾವು ಬೆಳೆಯುತ್ತೇವೆ ಅನ್ನೋದು ತಪ್ಪಲ್ಲ. ಯಾವ ವಾತಾವರಣದಲ್ಲಿ ಬೆಳೆಯುತ್ತೇವೆ ಅನ್ನೋದು ಮುಖ್ಯ. ಅವರು ಒಳ್ಳೆಯ ಕೆಲಸ ಮಾಡ್ತಿರೋದು ನಾನು ಹೇಳಿದೆ ಅಂತಲ್ಲ, ಅವರಲ್ಲಿ ಒಳ್ಳೆತನ ಇದೆ. ಅದಕ್ಕಾಗಿ ನಾವಿಷ್ಟು ಒಳ್ಳೆಯವರು.

ನನ್ನ ಫ್ಯಾನ್ಸ್ ಒಳ್ಳೆಯವ್ರು, ಅದಕ್ಕೆ ನಾನು ಒಳ್ಳೆಯವನಾಗಿದ್ದೇನೆ. ನನ್ನಿಂದ ಅವರು ಒಳ್ಳೆಯ ಕೆಲಸ ಮಾಡಿಸುತ್ತಾರೆ. ಅವರೂ ಮಾಡುತ್ತಾರೆ.  ನನ್ನ ಅಭಿಮಾನಿಗಳು ಮಾಡಿರೋ ಕೆಲಸದ ಶ್ರೇಯಸ್ಸು ಅವರ ತಂದೆ ತಾಯಿಗೆ, ಊರಿನವರಿಗೆ ಸಲ್ಲುತ್ತದೆ.

ನಾನು ಸಂಪಾದನೆ ಮಾಡಿರುವ ಹೆಸರಿಗೆ ಕಳಂಕ ತರುವ ಕೆಲಸವನ್ನು ನನ್ನ ಫ್ಯಾನ್ಸ್ ಮಾಡಿಲ್ಲ. ನನ್ನ ಅಭಿಮಾನಿಗಳು ತಲೆತಗ್ಗಿಸುವ ಕೆಲಸವನ್ನು ನಾನೂ ಮಾಡುವುದಿಲ್ಲ.
ಅಭಿಮಾನಿಗಳು ನಮ್ಮ ಪ್ರತಿಬಿಂಬ. ನಾನು ಹೋದಲೆಲ್ಲಾ ತಲೆ ಎತ್ಕೊಂಡು ಓಡಾಡ್ತೀನಿ ಅಂದ್ರೆ ಅದಕ್ಕೆ ಅಭಿಮಾನಿಗಳೇ ಕಾರಣ. ಅಭಿಮಾನಿಗಳಿಗೆ ಕಳಂಕ ತರೋ ಕೆಲಸ ಮಾಡಲ್ಲ.
ಸಿನಿಮಾ ಎಲ್ಲರೂ ಮಾಡುತ್ತಾರೆ. ವ್ಯಕ್ತಿತ್ವದಲ್ಲಿ ದೊಡ್ಡವರಾಗಬೇಕಾದರೆ ಸಿನಿಮಾ ಮಾತ್ರ ಸಾಕಾಗಲ್ಲ. ನನ್ನ ಕುಟುಂಬ, ಗೆಳೆಯರು ಎಲ್ಲರೂ ಮುಖ್ಯವಾಗುತ್ತಾರೆ.
ನನ್ನ ಫ್ಯಾನ್ಸ್ ಒಳ್ಳೆಯವ್ರು. ಅದಕ್ಕೆ ನಾನು ಒಳ್ಳೆಯವನಾಗಿದ್ದೇನೆ.

ಕಿಚ್ಚ ಸುದೀಪ್‌ ಈ ಮಾತು ಹೇಳಿದ್ದ ತಮ್ಮ ಅಭಿಮಾನಿಗಳಿಗೆ. ಸುದೀಪ್‌ ತಮ್ಮ ಮಾತಿನಲ್ಲಿ ಎಲ್ಲಿಯೂ ದರ್ಶನ್‌ ಹೆಸರು ಹೇಳೋದಿಲ್ಲ. ದರ್ಶನ್‌ ಅಭಿಮಾನಿಗಳ ವಿಷಯವನ್ನಂತೂ ಹೇಳೋದೇ ಇಲ್ಲ. 51ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಸುದೀಪ್‌ ಅವರಿಗೆ ಶುಭಕೋರಲು ರಾಜ್ಯದ ನಾನಾ ಕಡೆಗಳಿಂದ ಸಾವಿರಾರು ಮಂದಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಸುದೀಪ್‌ ತಮ್ಮ ಅಭಿಮಾನಿಗಳ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾ.. ತನ್ನ ಅಭಿಮಾನಿಗಳಿಗೆ ತಾನು ಕಳಂಕ ತರುವ ಕೆಲಸ ಮಾಡಲ್ಲ. ನನ್ನ ಅಭಿಮಾನಿಗಳೂ ಕೂಡಾ ತಲೆ ಎತ್ತಿಕೊಂಡು ಓಡಾಡುವಂತೆ ಇದ್ದಾರೆ ಎಂದು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸ್ತಾರೆ.

ದರ್ಶನ್‌ ಅಭಿಮಾನಿಗಳು ರೊಚ್ಚಿಗೆದ್ದಿದ್ದು ಯಾಕೆ..?

ಸೋಷಿಯಲ್‌ ಮೀಡಿಯಾದಲ್ಲಿ ಸುದೀಪ್‌ ಅವರ ಈ ಮಾತಿಗೆ ರೊಚ್ಚಿಗೆದ್ದವರು ದರ್ಶನ್‌ ಫ್ಯಾನ್ಸ್.‌ ಸುದೀಪ್‌ ಈ ಮಾತು ಹೇಳುತ್ತಿರುವುದೆಲ್ಲ ತಮ್ಮ ‌ʻಡಿ ಬಾಸ್ʼ ವಿರುದ್ಧವೇ ಎಂದು ರೊಚ್ಚಿಗೆದ್ದರು. ಅದಾದ ಮೇಲೆ ಸುದೀಪ್‌ ಅವರ ಫೋಟೋ, ವಿಡಿಯೋಗಳನ್ನು ಕೆಟ್ಟದಾಗಿ ಫೋಟೋಶಾಪ್‌ ಮಾಡಿ ಹಾಕಿ ಆಕ್ರೋಶ ತೋರಿಸಿದರು. ಸುದೀಪ್‌ ಅವರನ್ನ ಕನ್ನಡ ಚಿತ್ರರಂಗದ ಐರನ್‌ ಲೆಗ್‌ ಎಂದೆಲ್ಲ ಬಿಂಬಿಸಿದರು. ಜೊತೆಗೆ ಸುದೀಪ್‌, ಸ್ಟಾರ್‌ ನಟನಾಗಿದ್ದೇ ದರ್ಶನ್‌ ಅವರಿಂದ ಎಂದು ಬಿಂಬಿಸಿ ಹಳೆಯ ವಿಡಿಯೋಗಳಿಗೆಲ್ಲ ಹೊಸ ಹೊಸ ಕ್ಯಾಪ್ಷನ್‌ ಬರೆದು ಪೋಸ್ಟ್‌ ಮಾಡಿದರು.

ಸುದೀಪ್‌ ಫ್ಯಾನ್ಸ್‌ ರಿಯಾಕ್ಷನ್‌ ಹೇಗಿತ್ತು..?

ಪ್ರತಿಯಾಗಿ ಸುದೀಪ್‌ ಫ್ಯಾನ್ಸ್‌ ಕೂಡಾ ಸುಮ್ಮನೆ ಕೂರಲಿಲ್ಲ. ಸುದೀಪ್‌ ಅವರಿಂದಲೇ ಮೆಜೆಸ್ಟಿಕ್‌ ಹೀರೋ ಚಾನ್ಸ್‌ ಸಿಕ್ಕಿದ್ದು ಹಾಗೂ ಆಗ ಪುನೀತ್‌ ಅವರೂ ಕೂಡಾ ತಮ್ಮ ಬ್ಯಾನರ್‌ʻನಿಂದ ಚಿತ್ರೀಕರಣದ ಹಣ ತೆಗೆದುಕೊಳ್ಳದೆ ಸಹಾಯ ಮಾಡಿದ್ರು ಎಂದು ಮೆಜೆಸ್ಟಿಕ್‌ ನಿರ್ಮಾಪಕರು ಹೇಳಿದ್ದ ವಿಡಿಯೋ ಹಾಕಿ.. ತಿರುಗೇಟು ಕೊಟ್ಟರು.

ದರ್ಶನ್‌ ಫ್ಯಾನ್ಸ್‌ ಯಾಕೆ ಹೀಗೆ..

ದರ್ಶನ್‌ ಕೊಲೆ ಕೇಸಿನಲ್ಲಿ ಜೈಲಿಗೆ ಹೋದಾಗಿನಿಂದ ದರ್ಶನ್‌ ಅಭಿಮಾನಿಗಳು ತಾಳ್ಮೆ ಕಳೆದುಕೊಂಡಿರೋದು ಸತ್ಯ. ಯಾರದ್ದೇ ಸಿನಿಮಾ ಆಗಲಿ, ನಾವು ನೋಡಲ್ಲ. (ಭೀಮ ಮತ್ತು ಕೃಷ್ಣಂ ಪ್ರಣಯ ಸಖಿ ಗೆದ್ದವು)

ದರ್ಶನ್‌ ಮಾಡಿದ್ದು ತಪ್ಪೇ ಅಲ್ಲ, ಕೊಲೆಯೂ ತಪ್ಪಲ್ಲ. ದರ್ಶನ್‌ ಅವರಿಗೆ ಇಬ್ಬರು ಹೆಂಡ್ತೀರು ಏನಿವಾಗ..  ಅನ್ನೋ ಮಾತಿನಿಂದ ಹಿಡಿದು, ಮೌನವಾಗಿರುವ ಚಿತ್ರರಂಗದ ಎಲ್ಲ ನಟ ನಟಿಯರ ಕುಟುಂಬದ ಮಾನ ಮರ್ಯಾದೆ ಹರಾಜು ಹಾಕುವಲ್ಲಿಗೆ ಹೋಗುತ್ತಿದ್ದಾರೆ. ದರ್ಶನ್‌ ಜೈಲಿನಲ್ಲಿ ಸಿಗರೇಟು ಸೇದಿ, ಸಿಕ್ಕಿಬಿದ್ದರೆ, ನಮ್‌ ಅಣ್ಣ ಎಲ್ಲಿದ್ರೂ ರಾಜನೇ ಎಂಬ ಪೋಸ್ಟ್‌ ಹಾಕುತ್ತಿದ್ದಾರೆ. ಆ ಪ್ರಕರಣದ ಗಂಭೀರತೆಯೂ ಅರ್ಥವಾಗುತಿಲ್ಲ.

ದರ್ಶನ್‌ ಅಭಿಮಾನಿಗಳ ಈ ರೀತಿಯ ವರ್ತನೆಯೂ ಕೂಡಾ ದರ್ಶನ್‌ ಜೈಲಿಂದ ಬಿಡುಗಡೆಯಾಗುವುದಕ್ಕೆ, ಚಾರ್ಜ್‌ಶೀಟ್‌ ನಂತರವೂ ಜಾಮೀನು ಸಿಗದಿರುವುದಕ್ಕೆ ಕಾರಣವಾಗುತ್ತಿದೆ ಎಂಬ ಗಂಭೀರ ವಿಷಯವೂ ದರ್ಶನ್‌ ಅಭಿಮಾನಿಗಳಿಗೆ ಅರ್ಥವಾಗುತ್ತಿಲ್ಲ.

Tags: #ದರ್ಶನ್‌ #ಸುದೀಪ್‌ #ಫ್ಯಾನ್ಸ್‌ #ವಾರ್ #ಹುಟ್ಟುಹಬ್ಬ #darshan #sudeep #fans #war #birthday
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.