ಪ್ರಜ್ವಲ್ ರೇವಣ್ಣ ದೇಶ ಬಿಟ್ಟಿದ್ದು ಏಪ್ರಿಲ್ ೨೬ರ ನಂತರ. ಮೊದಲ ಹಂತದ ಮತದಾನ ಮುಗಿದ ಮಾರನೇ ದಿನವೇ ದೇಶ ಬಿಟ್ಟಿದ್ದ ಪ್ರಜ್ವಲ್ ಇವತ್ತಿಗೂ ಜರ್ಮನಿಯಲ್ಲಿದ್ಧಾರೆ.. ಲಂಡನ್ನಿನಲ್ಲಿದ್ದಾರೆ ಎಂಬ ಸುದ್ದಿಗಳಿವೆಯೇ ಹೊರತು.. ಮತ್ತೇನಾಗಿಲ್ಲ. ಹೆಚ್.ಡಿ.ರೇವಣ್ಣ ಜೈಲಿಗೂ ಹೋಗಿ ಬಂದಾಯ್ತು. ಪ್ರಜ್ವಲ್ ಬಂದಿಲ್ಲ. ಮತ್ತೆ ಜೈಲಿಗೆ ಹೋಗುವ ಸಾಧ್ಯತೆಗಳೂ ಇವೆ. ಆದರೆ.. ಪ್ರಜ್ವಲ್ ಬರುವ ಸೂಚನೆಗಳೂ ಇಲ್ಲ.
ಈ ನಡುವೆ ಮಾಜಿ ಸಿಎಂ ಹಾಗೂ ಪ್ರಜ್ವಲ್ ಚಿಕ್ಕಪ್ಪ ಹೆಚ್.ಡಿ.ಕುಮಾರಸ್ವಾಮಿ ಪ್ರಜ್ವಲ್ ರೇವಣ್ಣಗೆ ಮನವಿ ಮಾಡಿಕೊಂಡಿದ್ದಾರೆ. ನನ್ನ ಹಾಗೂ ಹೆಚ್ಡಿ ದೇವೇಗೌಡರ ಮೇಲೆ ಗೌರವ ಇದ್ದರೆ ನಾನು ಕೈಮುಗಿದು ಮನವಿ ಮಾಡ್ತೇನೆ 24-48 ಗಂಟೆಯಲ್ಲಿ ಶರಣಾಗು. ನಾನು ಕೂಡ ಯಾಕೆ ಹೆದರಬೇಕು. ಎಷ್ಟು ದಿನ ಹೊರಗೆ ಇರಬೇಕು, ಕೈಜೋಡಿಸಿ ಮನವಿ ಮಾಡುತ್ತೇನೆ. ದೇಶಕ್ಕೆ ವಾಪಸ್ ಬಂದು ತನಿಖೆಗೆ ಸಹಕರಿಸು, ನಮ್ಮ ತಂದೆಯವ ಪರವಾಗಿ ನಾನು ಮನವಿ ಮಾಡುತ್ತೇನೆ. ದೇವೇಗೌಡ ಶ್ರಮವನ್ನು ಬಿಟ್ಟು ನಿನಗೆ ಅವಕಾಶ ಕೊಟ್ಟಿದ್ರು. ಮುಂದಿನ 24 ಗಂಟೆ ಅಥವಾ 48 ಗಂಟೆಗಳ ಬಂದು ವಿಚಾರಣೆಗೆ ಹಾಜರಾಗಲು ಮನವಿ ಮಾಡಿದ್ಧಾರೆ.
ದೇವೇಗೌಡರು ಇದೆಲ್ಲದರಿಂದ ಬೇಸತ್ತು ತಮ್ಮ ರಾಜೀನಾಮೆ ಕೊಡುವುದಕ್ಕೆ ಮುಂದಾಗಿದ್ದರು. ನೀವು ತಪ್ಪು ಮಾಡಿಲ್ಲ, ಯಾರದ್ದೋ ತಪ್ಪಿಗೆ ನೀವೇಕೆ ರಾಜೀನಾಮೆ ಕೊಡ್ತೀರಿ ಎಂದು ತಡೆ ಹಿಡಿದು ನಿಲ್ಲಿಸಿದ್ದೇವೆ. ದೇವೇಗೌಡರು ಪ್ರಜ್ವಲ್ ಘಟನೆಯಿಂದ ಬಹಳಷ್ಟು ನೊಂದು ಹೋಗಿದ್ದಾರೆ. ದಯವಿಟ್ಟು ಭಾರತಕ್ಕೆ ಬಂದು ವಿಚಾರಣೆ, ತನಿಖೆ ಎದುರಿಸು ಎಂದು ಮನವಿ ಮಾಡಿದ್ಧಾರೆ ಕುಮಾರಸ್ವಾಮಿ.
ಇದೇ ಸಮಯದಲ್ಲಿ , ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬಹಿರಂಗ ಸಂಚಿನ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಾಯಿತಲ್ಲ. ಮೊಬೈಲ್ ಸಂಭಾಷಣೆಯಲ್ಲಿ ಎಲ್ಲವೂ ಬಯಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಮುಖಂಡ ಎಲ್.ಆರ್.ಶಿವರಾಮೇಗೌಡ, ವಕೀಲ ದೇವರಾಜೇಗೌಡ ನಡುವಿನ ಸಂಭಾಷಣೆ ಆಡಿಯೋ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಶಿವರಾಮೇಗೌಡ, ಡಿ.ಕೆ.ಶಿವಕುಮಾರ್ ಮೇಲೆ ಕೂಡಲೇ ಪ್ರಕರಣ ದಾಖಲಿಸಿ, ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ದೇವರಾಜೇಗೌಡ ಮತ್ತು ಶಿವರಾಮೇಗೌಡ ಸಂಭಾಷಣೆಯ ಆಡಿಯೋ ಕೇಳಿದ್ದೇನೆ. ಸದಾಶಿವನಗರದಲ್ಲಿ ವಾಸ ಇರುವವರು ಯಾರು? ಸದಾಶಿವ ನಗರದಲ್ಲಿ ವಾಸ ಇರುವುದು ಕುಮಾರಸ್ವಾಮೀನಾ? ‘ಸಿ.ಡಿ ಶಿವುʼನಾ? ಪ್ರಕರಣದಲ್ಲಿ ನನ್ನ ಹೆಸರು ಹೇಳುವಂತೆ ದೇವರಾಜೇಗೌಡ ಅವರಿಗೆ ಪ್ರಚೋದನೆ ನೀಡಲಾಗಿದೆ. ನನ್ನ ವಿರುದ್ಧ ಪ್ರಕರಣವನ್ನು ತಿರುಗಿಸುವ ಪ್ರಯತ್ನ ಮಾಡಲಾಗಿದೆ. ದೇವೇಗೌಡರು ಇನ್ನೂ ಯಾಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಹೇಳಲಾಗುತ್ತದೆ. ನನ್ನ ಮೇಲೆ, ನಮ್ಮ ಕುಟುಂಬದ ಮೇಲೆ ಯಾಕಿಷ್ಟು ಹಗೆತನ ಎಂದು ಪ್ರಶ್ನಿಸಿದ್ದಾರೆ.
ಆಡಿಯೋದಲ್ಲಿ ನಮ್ಮ ಕುಟುಂಬವನ್ನು ಬಲಿ ಹಾಕುವುದಕ್ಕೆ ತೀರ್ಮಾನ ಮಾಡಲಾಗಿದೆ ಎಂದು ಹೇಳಲಾಗಿದೆ. ಉದ್ದೇಶ ಈಡೇರಿಕೆಗೆ ಅಮಾಯಕ ಹೆಣ್ಣುಮಕ್ಕಳ ವಿಡಿಯೋಗಳನ್ನು ಹಾದಿಬೀದಿಯಲ್ಲಿ ಹಂಚಲಾಗಿದೆ. ರಾಜಕೀಯ ಸ್ವಾರ್ಥಕ್ಕಾಗಿ ಎಂತಹ ಕೀಳು ಮಟ್ಟಕ್ಕಾದರೂ ಇಳಿಯುತ್ತಾರೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಕುಟುಂಬವನ್ನೇ ಸರ್ವನಾಶ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.



