ಬಿಪಿಎಲ್ ಕಾರ್ಡ್ ಹೊಂದಿರುವವರು ಎಂದರೆ.. ಬಡತನದ ರೇಖೆಗಿಂತ ಕೆಳಗಿಳಿರುವವರು ಎಂದರ್ಥ. ಅಂತಹವರಿಗೆ ಸರ್ಕಾರದ ಅಕ್ಕಿ, ಬೇಳೆ ಸೇರಿದಂತೆ ರೇಷನ್, ವೈದ್ಯಕೀಯ ಸೇವೆ ಮೊದಲಾದ ಸೇವೆಗಳು ಲಭ್ಯವಾಗುತ್ತವೆ. ರಾಜ್ಯದಲ್ಲಿ ಸುಮಾರು ಮೂರೂವರೆ ಕೋಟಿ ಬಿಪಿಎಲ್ ಕಾರ್ಡ್ ಫಲಾನುಭವಿಗಳಿದ್ದಾರೆ. ರಾಜ್ಯದ ಜನಸಂಖ್ಯೆಯೇ ಸುಮಾರು 6 ರಿಂದ 7 ಕೋಟಿ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ.76.04, ನಗರ ಪ್ರದೇಶಗಳಲ್ಲಿ ಶೇ.49.36 ಸೇರಿ ಒಟ್ಟು 3,58,87,666 ಫಲಾನುಭವಿಗಳಿಗೆ 1,03,70,666 2 ನೀಡಬೇಕೆಂಬ ನಿಯಮವಿದೆ. ಆದರೆ, ರಾಜ್ಯದಲ್ಲಿ ಸದ್ಯ 3,93,29,981 1,16,51,209 ಬಿಪಿಎಲ್ ಕಾರ್ಡ್ ನೀಡಲಾಗಿದೆ. ನಿಗದಿಗಿಂತ ಹೆಚ್ಚುವರಿಯಾಗಿ 14 ಲಕ್ಷ ಬಿಪಿಎಲ್ ಕಾರ್ಡ್‌ಗಳಿವೆ. ಹಾಗಾದರೆ.. ಇಂತಹವರೆಲ್ಲ ಅಕ್ರಮ ಬಿಪಿಎಲ್ ಕಾರ್ಡ್ ಹೊಂದಿದ್ದರೆ.. ದಂಡ ಕಟ್ಟಬೇಕಾಗುತ್ತಾ..? ಹೌದು.
ನಿಮಗೆ ಈ ಅರ್ಹತೆ ಇದ್ದರೆ.. ನೀವು ಬಿಪಿಎಲ್ ಕಾರ್ಡ್ʻಗೆ ಅರ್ಹರಲ್ಲ..!
ತೆರಿಗೆ ಪಾವತಿಸುತ್ತಿದ್ದರೆ..
ಕುಟುಂಬದಲ್ಲಿ ಸರ್ಕಾರಿ ಮತ್ತು ಆರೆ ಸರ್ಕಾರಿ ನೌಕರರಿದ್ದರೆ..
ಮನೆಗಳನ್ನು ಬಾಡಿಗೆಗೆ ಕೊಟ್ಟಿರುವವರಿದ್ದರೆ.. ಬಾಡಿಗೆಯಿಂದ ಸಂಪಾದನೆ ಮಾಡುತ್ತಿದ್ದರೆ..
7.5 ಎಕರೆಗಿಂತ ಹೆಚ್ಚು ಜಮೀನು ಹೊಂದಿದ್ದರೆ..
ಸ್ವಂತಕ್ಕೆ ಎಂದು 4 ಚಕ್ರದ ವಾಹನ ಹೊಂದಿದ್ದರೆ (ಟ್ಯಾಕ್ಸಿ ಓಡಿಸುತ್ತಿದ್ದರೆ ಇದು ಅನ್ವಯವಾಗುವುದಿಲ್ಲ)
ಬಿಪಿಎಲ್, ಅಂತ್ಯೋದಯ ಕಾರ್ಡು ಪಡೆಯುವಂತಿಲ್ಲ.
ಸಿಕ್ಕಿಬಿದ್ದರೆ ಚಕ್ರಬಡ್ಡಿ ಸಮೇತ ಕಟ್ಟಬೇಕು. ಎಚ್ಚರಿಕೆ..!
ಒಂದು ವೇಳೆ ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದಿದ್ದು ಸಾಬೀತಾದರೆ ಇದುವರೆಗೂ ನ್ಯಾಯಬೆಲೆ ಅಂಗಡಿ ಯಲ್ಲಿ ಪಡೆದ ಅಕ್ಕಿ ಅಥವಾ ಇತರೆ ಧಾನ್ಯಗಳ ಮೊತ್ತವನ್ನು (ಅಕ್ಕಿ ಕೆಜಿಗೆ ತಲಾ 35 ರು.ನಂತೆ) ಮರಳಿಸಬೇಕು. ಅಂದರೆ ಎಷ್ಟು ವರ್ಷ ಪಡೆದಿದ್ದೀರೋ.. ಅಷ್ಟೂ ಮೊತ್ತವನ್ನು ಸರ್ಕಾರಕ್ಕೆ ಚಕ್ರಬಡ್ಡಿ ಸಮೇತ ಕಟ್ಟಬೇಕು. ಒಂದೇ ತಿಂಗಳು 10 ಕೆಜಿ ಅಕ್ಕಿ ಪಡೆದಿದ್ದರೆ.. ಸರ್ಕಾರಕ್ಕೆ ವಾಪಸ್ ಕಟ್ಟಬೇಕಾದ ದಂಡದ ಮೊತ್ತ 280 ರೂ. ಒಂದು ವರ್ಷ ಪಡೆದಿದ್ದರೆ.. 3360/- ರೂ. ಹಣವನ್ನ ದಂಡದ ರೂಪದಲ್ಲಿ ಕಟ್ಟಬೇಕಾಗುತ್ತೆ.
ತಪ್ಪಿಸಿಕೊಳ್ಳೋದು ಹೇಗೆ..?
ಅರ್ಹತೆ ಇಲ್ಲದೆ, ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್‌ಗಳನ್ನು ಪಡೆದಿ ರುವವರು ಹಿಂದಿರುಗಿಸುವಂತೆ ಆಹಾರ ಇಲಾಖೆ ಈಗಾಗಲೇ ಅನೇಕ ಬಾರಿ ಕಾಲಾವಕಾಶ ನೀಡಿತ್ತು. ನಿಗದಿತ ಅವಧಿ ಯಲ್ಲಿ ಅನರ್ಹರು ಪಡೆದ ಬಿಪಿಎಲ್ ಕಾರ್ಡುಗಳನ್ನು ಹಿಂದಿರುಗಿಸದಿದ್ದರೆ ಕ್ರಿಮಿನಲ್ ಕೇಸು ದಾಖಲಿಸುವ ಎಚ್ಚರಿಕೆ ಯನ್ನು ಕೂಡ ನೀಡಿತ್ತು. ಹೀಗಾಗಿ ಅನೇಕರು ಬಿಪಿಎಲ್, ಅಂತ್ಯೋದಯ ಕಾರ್ಡುಗಳನ್ನು ಹಿಂದಿರುಗಿಸುವ ಮೂಲಕ ಕಾನೂನು ಕ್ರಮಕ್ಕೆ ಒಳಗಾಗುವುದರಿಂದ ಪಾರಾಗಿದ್ದರು. ಬಹುಶಃ ಈಗಲೂ ಮತ್ತೊಮ್ಮೆ ಅವಕಾಶ ನೀಡಬಹುದು. ಆಗ.. ಸ್ವತಃ ಬಿಪಿಎಲ್ ಕಾರ್ಡ್ ಸರೆಂಡರ್ ಮಾಡಿದರೆ.. ಈ ದಂಡದ ಶಿಕ್ಷೆಯಿಂದ ತಪ್ಪಿಸಿಕೊಳ್ಳೋಕೆ ಅವಕಾಶ ಇದೆ.
ಇದೀಗ ಮತ್ತೆ ಅನರ್ಹ ಅಂತ್ಯೋದಯ, ಬಿಪಿಎಲ್ ಫಲಾನುಭವಿಗಳ ಹುಡುಕಾಟ ಆರಂಭಿಸಿರುವ ಆಹಾರ ಇಲಾಖೆ ಈ ಹಿಂದೆ ಹೊರಡಿಸಿದ್ದ ಮಾನದಂಡಗಳ ಪಟ್ಟಿ ಹಿಡಿದುಕೊಂಡು ಪತ್ತೆ ಕಾರ್ಯ ಆರಂಭಿಸಿದೆ. ರಾಜ್ಯದಲ್ಲಿ ಶೇ.80ರಷ್ಟು ಮಂದಿ 100 ಸಿಸಿ ಮೇಲ್ಪಟ್ಟ ಇಂಧನ ಚಾಲಿತ ದ್ವಿಚಕ್ರ, ತ್ರಿಚಕ್ರ, ಕಾರು ಸೇರಿ ಇತ್ಯಾದಿ ವಾಹನ ಹೊಂದಿರುವ ಕುಟುಂಬಗಳಿವೆ. ಪ್ರತಿಮನೆಮನೆಯಲ್ಲೂ ಒಂದಿಲ್ಲೊಂದು ವಾಹನಗಳಿವೆ. ಪ್ರತಿಶತ ಸರಾಸರಿ 450 ರು.ಗಿಂತ ಅಧಿಕ ವಿದ್ಯುತ್ ಬಿಲ್ ಪಾವತಿಸುತ್ತಾರೆ. ಇಂತಹ ಮಾನದಂಡ ಗಳ ಅಡಿಯಲ್ಲಿ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಬಾರದು.
ದಿನೇ ದಿನೆ ಅಗತ್ಯವಸ್ತುಗಳ ಬೆಲೆ ಹೆಚ್ಚುತ್ತಿದ್ದು 18ರಿಂದ 20 ಸಾವಿರ ವೇತನ ಪಡೆದರೂ ಕುಟುಂಬ ನಿರ್ವಹಣೆ ಮಾಡಲಾಗದ ಸ್ಥಿತಿ ಇದೆ. ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕು. ಆರ್ಥಿಕವಾಗಿ ಸಬಲರಾಗಿದ್ದು ಸುಳ್ಳು ದಾಖಲೆಗಳಿಂದ ಬಿಪಿಎಲ್ ಕಾರ್ಡ್ ಪಡೆದಿದ್ದರೆ ಮಾತ್ರ ರದ್ದುಪಡಿಸಬೇಕೆಂಬ ಆಗ್ರಹ ಸಾರ್ವ ಜನಿಕ ವಲಯದಿಂದ ಕೇಳಿಬಂದಿದೆ.



