ಅಯ್ಯಪ್ಪ ಸ್ವಾಮಿಯೇ ಆಗಲಿ, ಯಾವ ದೇವರೇ ಆಗಲಿ, ದೇವರಿಗೆ ಜಾತಿ ಇಲ್ಲ. ಮನುಷ್ಯರಿಗೂ ಇಲ್ಲ ಬಿಡಿ. ಆದರೆ ಕೆಲವು ದೇವರುಗಳಿರುತ್ತವೆ. ಆ ದೇವರುಗಳಿಗೆ ಕೆಲವು ಸಂಪ್ರದಾಯಗಳಿರುತ್ತವೆ. ಅಯ್ಯಪ್ಪ ಸ್ವಾಮಿಯದ್ದೂ ಹಾಗೆ. ಶಬರಿಮಲೆಗೆ ಮಾಲೆ ಹಾಕಿಕೊಂಡು ಹೆಣ್ಣು ಮಕ್ಕಳು ಹೋಗುವಂತೆಯೇ ಇಲ್ಲ. ಬಾಲಕಿಯರು ಮತ್ತು ವೃದ್ಧೆಯರು ಹೋಗಬಹುದಷ್ಟೇ. ಅಂತಹ ಅಯ್ಯಪ್ಪ ಸ್ವಾಮಿಯ ಫೋಟೋ ಮನೆಯಲ್ಲಿಟ್ಟುಕೊಂಡರೆ.. ಕೆಲವು ನೀತಿ ನಿಯಮಗಳಿವೆ. ಅವುಗಳನ್ನು ತಪ್ಪದೇ ಪಾಲನೆ ಮಾಡಬೇಕು.
ಮನೆಯಲ್ಲಿ ಅಯ್ಯಪ್ಪನ ಫೋಟೋ ಇಡೋವ್ರು, ಅಯ್ಯಪ್ಪ ಸ್ವಾಮಿ ಚಿನ್ಮುದ್ರೆಯಲ್ಲಿರೋ ಫೋಟೋ ಇಟ್ಟುಕೊಳ್ಳಬೇಕು. ಗಾತ್ರ ಇಂಪಾರ್ಟೆಂಟ್ ಅಲ್ಲ. ದೊಡ್ಡದಾದ್ರೂ ಇರಲಿ, ಚಿಕ್ಕದಾದ್ರೂ ಇರಲಿ. ಚಿನ್ಮುದ್ರೆಯಲ್ಲಿ, 18 ಮೆಟ್ಟಿಲುಗಳೊಂದಿಗೆ ಕುಳಿತಿರುವ ಭಂಗಿಯಲ್ಲಿರುವ ಅಯ್ಯಪ್ಪ ಸ್ವಾಮಿಯ ಫೋಟೋ ಇಡುವುದು ಶುಭ ಅಂತಾರೆ.
ಇನ್ನು ಅಯ್ಯಪ್ಪ ಸ್ವಾಮಿಯ ಫೋಟೋನ ಬೆಡ್ ರೂಂನಲ್ಲಿ ಖಂಡಿತಾ ಇಡಬೇಡಿ. ಮೊದಲೇ ಬ್ರಹ್ಮಚಾರಿ. ಆತ ಇರುವ ಕೋಣೆಯಲ್ಲಿ ಅಪವಿತ್ರ ನಡೆಯೋದು ಸರಿ ಇರಲ್ಲ ಅನ್ನೋದು ನಂಬಿಕೆ.
ಇನ್ನು ಅಯ್ಯಪ್ಪ ಸ್ವಾಮಿ ಫೋಟೋ ಇದ್ರೆ, ಮನೆಯವರು ಕೆಲವು ನೀತಿ ನಿಯಮ ಪಾಲನೆ ಮಾಡಬೇಕಾಗುತ್ತೆ. ಮಾಂಸ ತಿನ್ನೋವ್ರಿಗೆ ಸಮಸ್ಯೆ ಏನಿಲ್ಲ. ಆದರೆ ಅಯ್ಯಪ್ಪ ಸ್ವಾಮಿ ಫೋಟೋ ಇಟ್ಟುಕೊಂಡು ಮಧ್ಯಪಾನ ಮಾಡಬಾರದು. ವ್ಯಭಿಚಾರ ಮಾಡಬಾರದು.
ಅಯ್ಯಪ್ಪ ಸ್ವಾಮಿ ಫೋಟೋ ಇಟ್ಟುಕೊಂಡಿರೋವ್ರು ದಿನ ನಿತ್ಯ ಪೂಜೆ, ಆರತಿ ಮಾಡಬೇಕು. ಅಯ್ಯಪ್ಪ ಸ್ವಾಮಿ ಆರತಿ ಪ್ರಿಯ. ನಿತ್ಯವೂ ಕರ್ಪೂರ ಆರತಿ ಮಾಡೋದು, ಪ್ರಾರ್ಥನೆ ಮಾಡೋದು ಮಾಡ್ಬೇಕು. ವಾರಕ್ಕೊಂದ್ಸಲ ಆದ್ರೂ ಸಿಹಿ ನೈವೇದ್ಯ ಅರ್ಪಿಸಬೇಕು. ಅಯ್ಯಪ್ಪ ಸ್ವಾಮಿ ಫೋಟೋ ಇಟ್ಕೊಂಡಿರೋವ್ರಿಗೆ ಸಾಡೇ ಸಾತಿ, ಅಷ್ಟಮ ಶನಿ ಕಾಟಗಳ ತೀವ್ರತೆ ಕಡಿಮೆ ಆಗುತ್ತಂತೆ.
ಇನ್ನ ಕಾರು, ಬಸ್ಸು, ಲಾರಿಗಳಲ್ಲಿ ಅಯ್ಯಪ್ಪ ಸ್ವಾಮಿ ಫೋಟೋ ಇಡೋವ್ರಿಗೆ ಒಂದ್ ಮಾತ್ ಹೇಳ್ಬೇಕು. ಅಂತಹ ಕೆಲಸ ದಯವಿಟ್ಟು ಮಾಡಬೇಡಿ. ಶಬರಿಮಲೆ ದರ್ಶನಕ್ಕೆ ಹೋಗುವಾಗ ಅಯ್ಯಪ್ಪ ಸ್ವಾಮಿ ಫೋಟೋ ಇದ್ರೆ ಒಳ್ಳೇದು. ಆದರೆ ವೃತ್ತಿ ಮಾಡುವಾಗ ಅಯ್ಯಪ್ಪ ಸ್ವಾಮಿ ಫೋಟೋ ಬೇಡ. ಅದು ಪವಿತ್ರ, ಶುದ್ಧ ಸ್ಥಳಗಳಲ್ಲಿ ಮಾತ್ರ ಇಡಬೇಕು. ಹೀಗಾಗಿ ಗುರುಸ್ವಾಮಿಗಳಾದವರು ಎಲ್ಲೆಂದರೆ ಅಲ್ಲಿ ಫೋಟೋ ಇಡಬೇಡಿ ಅಂತಾರೆ.
ಇನ್ನು ಮನೆಯಲ್ಲಿ ತಲೆ ಬಾಗಿಲು ಅಥವಾ ಸಿಂಹ ದ್ವಾರ ಅಂತ ಕರೀತಿವಲ್ಲ. ಅದರ ಮೇಲೆ ಅಯ್ಯಪ್ಪ ಸ್ವಾಮಿ ಫೋಟೋ ಇಡಬಾರದಂತೆ. ಇನ್ನು ಅಯ್ಯಪ್ಪ ಸ್ವಾಮಿ ಫೋಟೋ ಇಟ್ಟುಕೊಂಡು ಮಾಡಬಾರದ ಕೆಲಸಗಳನ್ನ ಮಾಡ್ತಾ ಇದ್ರೆ, ಅಯ್ಯಪ್ಪ ಸ್ವಾಮಿಯ ಆಶೀರ್ವಾದವೇ ಶಾಪ ಆಗುತ್ತೆ. ಒಳ್ಳೆಯದಂತೂ ಆಗಲ್ಲ.
ಇನ್ನು ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಫೋಟೋ ಇಡೋದಕ್ಕೆ ಸೇಫ್ ಜಾಗ ಯಾವುದು ಅಂದ್ರೆ, ಅದು ದೇವರ ಮನೆ.. ದೇವರ ಮನೆಯ ವಿಚಾರದಲ್ಲಿ ಎಲ್ಲರೂ ಸ್ವಲ್ಪ ಸ್ಟ್ರಿಕ್ಟ್ ರೂಲ್ಸ್ ಫಾಲೋ ಮಾಡ್ತಾರೆ. ಹಾಗಾಗಿ ಅಷ್ಟೆ.
ಇನ್ನು ಅಯ್ಯಪ್ಪ ಸ್ವಾಮಿಗೆ ಹೇಳೋ ಆರತಿ, ಪೂಜೆಯ ಮಂತ್ರ ಎಲ್ಲರಿಗೂ ಗೊತ್ತಲ್ಲ. ಸ್ವಾಮಿಯೇ ಶರಣಂ ಅಯ್ಯಪ್ಪ, ಅಷ್ಟ್ ಹೇಳಿದ್ರೆ ಸಾಕು.



