ಪಾದಗಳಲ್ಲಿ ಪದೇ ಪದೇ ಉರಿಯಾಗುತ್ತಿದೆ. ಯಾರೋ ಸೂಜಿಯಿಂದ ಚುಚ್ಚಿದಂತ ಅನುಭವವಾಗುತ್ತದೆ. ಮೆಣಸಿನ ಕಾಯಿಯ ಕಾರವನ್ನು ಚರ್ಮದ ಮೇಲಿಟ್ಟುಕೊಂಡಂತೆ ಫೀಲ್ ಆಗುತ್ತಿದೆ. ವಿನಾಕಾರಣ ಜೋಮು ಹಿಡಿಯುತ್ತಿದೆ. ಅದು ಸೆಕೆಂಡುಗಳಲ್ಲ, ನಿಮಿಷಗಳ ಕಾಲ ಆಗುತ್ತಿದೆ..
ಇಂತಹ ಅನುಭವ ಆಗುತಿದ್ದರೆ..
ಪಾದದ ಅಡಿಭಾಗದಲ್ಲಿ ಉರಿಯುವ ಸಂವೇದನೆ ಅನುಭವಿಸತ್ತಿದ್ದರೆ..
ಎಚ್ಚೆತ್ತುಕೊಳ್ಳಬೇಕಾದ ಸಮಯ ಬಂದಿದೆ ಎಂದೇ ಅರ್ಥ. ಅಪರೂಪಕ್ಕೆ ಕಾಣಿಸಿಕೊಂಡರೆ ಯಾವುದೇ ಸಮಸ್ಯೆ ಇಲ್ಲ, ಆದರೆ ಪದೇ ಪದೇ ಕಾಣಿಸಲಾರಂಭಿಸಿದರೆ ಮಾತ್ರ ಹುಷಾರಾಗಿರಬೇಕು.
ಯಾಕೆಂದರೆ ಇದು ಮಧುಮೇಹದ ಆರಂಭಿಕ ಲಕ್ಷಣವಾಗಿರಬಹುದು. ಮಧುಮೇಹ ರೋಗಿಗಳಲ್ಲಿ ನರಗಳ ಹಾನಿಯ ಅಪಾಯವು ಹೆಚ್ಚು.ಆದರೆ ಕೇವಲ ಮಧುಮೇಹ ಅಷ್ಟೇ ಅಲ್ಲ, ಮಧುಮೇಹವನ್ನು ಹೊರತುಪಡಿಸಿ ಇದು ಅನೇಕ ಇತರ ಕಾಯಿಲೆಗಳ ಲಕ್ಷಣವಾಗಿರಲೂ ಬಹುದು.
ಮಧುಮೇಹ : ಡಯಾಬಿಟಿಸ್, ಶುಗರ್, ಸಕ್ಕರೆ ಕಾಯಿಲೆ.. ಇತ್ಯಾದಿ..
ಪಾದದ ಅಡಿಭಾಗದಲ್ಲಿ ಸುಡುವ ಸಂವೇದನೆಯ ಸಮಸ್ಯೆಯು ಮಧುಮೇಹ ರೋಗಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ನಿರಂತರವಾಗಿ ಹೆಚ್ಚಿನ ಮಧುಮೇಹದ ಕಾರಣ ಹಾಗೂ ಅದರ ಪರಿಣಾಮ ನರಗಳಿಗೆ ಹಾನಿಯಾಗುತ್ತದೆ. . ಅಧಿಕ ರಕ್ತದ ಸಕ್ಕರೆಯ ಮಟ್ಟವು ನರಗಳನ್ನು ಹಾನಿಗೊಳಿಸುತ್ತದೆ. ಇದು ಪಾದಗಳಲ್ಲಿ ಉರಿ, ಜುಮ್ಮೆನಿಸುವಿಕೆ ಮತ್ತು ನೋವಿನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
ರೆಸ್ಟ್ ಲೆಸ್ ಲೆಗ್ ಸಿಂಡ್ರೋಮ್ :
ವಿಶೇಷವಾಗಿ ರಾತ್ರಿಯಲ್ಲಿ ಪಾದದ ಅಡಿಭಾಗದಲ್ಲಿ ಸುಡುವಿಕೆ, ಜುಮ್ಮೆನಿಸುವಿಕೆ ಮತ್ತು ಅಸ್ವಸ್ಥತೆ ಅನುಭವವಾಗುತ್ತಿದ್ದರೆ, ರೆಸ್ಟ್ ಲೆಸ್ ಲೆಗ್ ಸಿಂಡ್ರೋಮ್ ಆಗಿರಲೂಬಹುದು. ಕಾಲುಗಳಿಗೆ ವಿಶ್ರಾಂತಿ ಕೊಡದೇ ಇರುವವರು, ನಿಂತುಕೊಂಡೇ ಕೆಲಸ ಮಾಡುವವರಿಗೆ ಇದು ಹೆಚ್ಚು ಕಾಡುತ್ತದೆ.
ಥೈರಾಯ್ಡ್ ಪ್ರಾಬ್ಲಂ :
ಥೈರಾಯ್ಡ್ ಗ್ರಂಥಿಯಲ್ಲಿನ ತೊಂದರೆಗಳು ಅಥವಾ ಕಡಿಮೆ ಚಟುವಟಿಕೆಯು ನರಗಳ ಹಾನಿಗೆ ಕಾರಣವಾಗಬಹುದು, ಇದು ಪಾದದ ಅಡಿಭಾಗದಲ್ಲಿ ಸುಡುವ ಸಂವೇದನೆಯನ್ನು ಉಂಟುಮಾಡಬಹುದು. ಇದು ವೈದ್ಯರನ್ನು ಕಂಡರೆ ಮಾತ್ರ ಗೊತ್ತಾಗಬಹುದಾದ ಕಾಯಿಲೆ.
ಪ್ಲ್ಯಾಂಟರ್ ಫ್ಯಾಸಿಟಿಸ್
ಪ್ಲಾಂಟರ್ ಫ್ಯಾಸಿಟಿಸ್ ಸ್ಥಿತಿಯಲ್ಲಿ ಅಂದರೆ ಪಾದದ ಅಡಿಭಾಗದಲ್ಲಿರುವ ಅಂಗಾಂಶಗಳು ಊದಿಕೊಳ್ಳುತ್ತವೆ. ಇದು ಹಿಮ್ಮಡಿ ಮತ್ತು ಅಡಿಭಾಗದಲ್ಲಿ ನೋವು ಮತ್ತು ಉರಿ ಸಂವೇದನೆಯನ್ನು ಉಂಟುಮಾಡುತ್ತದೆ.
ವಿಟಮಿನ್ ಪ್ರಾಬ್ಲಂ :
ಸಿಕ್ಕಿದ್ದೆಲ್ಲ ತಿಂತೀವಿ. ಆದರೆ ದೇಹಕ್ಕೆ ಬೇಕಾಗಿದ್ದನ್ನೇ ತಿನ್ನೋದಿಲ್ಲ. ಕೆಲವು ಜೀವಸತ್ವಗಳ ಕೊರತೆ, ವಿಶೇಷವಾಗಿ ವಿಟಮಿನ್ ಬಿ 12, ವಿಟಮಿನ್ ಬಿ 6 ಮತ್ತು ಫೋಲೇಟ್, ನರಗಳ ಹಾನಿಯನ್ನು ಉಂಟುಮಾಡಬಹುದು, ಪಾದದ ಅಡಿಭಾಗದಲ್ಲಿ ಉರಿ ಸಂವೇದನೆಯನ್ನು ಉಂಟುಮಾಡಬಹುದು.



