ಗರ್ಭಧಾರಣೆ (unwanted pregnancy) ತಡೆಯುವುದಕ್ಕೆ ಅತೀ ಹೆಚ್ಚು ಜನ ಬಳಸೋದು ಕಾಂಡೋಮ್ (condom) ಅಥವಾ ನಿರೋಧ್ (nirodh). ಬಹುತೇಕ ಸೇಫ್ ಎನ್ನಿಸೋ ಕಾಂಡೋಮ್ಗಳು ಕೆಲವೊಮ್ಮೆ ಮಾತ್ರ ಕೈಕೊಡುತ್ತವೆ. ಗಂಡಸರಿಗೆ (ex-turned condom) ಎಕ್ಸ್-ಟರ್ನಲ್ ಕಾಂಡೋಮ್ ಹಾಗೂ ಹೆಣ್ಣು ಮಕ್ಕಳಿಗೆ ಇಂಟರ್ನಲ್ ಕಾಂಡೋಮ್ʻಗಳೂ ಇವೆ.
ಅದನ್ನು ಬಿಟ್ಟರೆ ಹೆಣ್ಣು ಮಕ್ಕಳಿಗೆ ಕಾಪರ್ ಟಿ ಬಳಸ್ತಾರೆ. ಆದರೆ ತೃಪ್ತಿಕರವಾದ ಲೈಂಗಿಕ ಸುಖ ಸಿಕ್ಕುವುದಿಲ್ಲ ಎನ್ನುವ ಮಾತುಗಳೂ ಇವೆ. ಇದನ್ನು ಬಿಟ್ಟರೆ ಯುವಕ ಯುವತಿಯರು ಗರ್ಭ ನಿರೋಧಕ ಮಾತ್ರೆ ಬಳಸ್ತಾರೆ. ಆದರೆ ಇದರಿಂದ ಸೈಡ್ ಎಫೆಕ್ಟ್ ಹೆಚ್ಚು ಎನ್ನುವ ಆರೋಪಗಳೂ ಇವೆ. ವೈದ್ಯರ ಸಲಹೆ ಸೂಚನೆ ಮೇರೆಗೇ ಇದನ್ನು ತೆಗೆದುಕೋಳ್ಳಬೇಕು.
ಇದರ ನಡುವೆಯೇ ಬಯಸದ ಗರ್ಭವನ್ನು ತಡೆಯುವ ಪುಟ್ಟ ಸಾಧನವೊಂದನ್ನು ಆರೋಗ್ಯ ಇಲಾಖೆಯೇ ಪರಿಚಯಿಸುತ್ತಿದೆ. ಇದನ್ನು ತೋಳಿನಲ್ಲಿ ಹಾಕಿಕೊಳ್ಳಬೇಕು..! ಹೌದು, ತೋಳಿನಲ್ಲಿಯೇ ಹಾಕಿಕೊಳ್ಳಬೇಕು. ಗರ್ಭ ನಿರೋಧಕ ಇಂಪ್ಲಾಂಟ್ ಅಥವಾ ಸಬ್ ಡರ್ಮಲ್ ಇಂಪ್ಲಾಂಟ್ (sub dermal implant) ಎಂದು ಕರೆಯೋ ಇದನ್ನ ತೋಳಿಗೆ ಅಡ್ಜಸ್ಟ್ ಮಾಡ್ತಾರೆ.
ಗರ್ಭಧಾರಣೆ ಆದ ನಂತರ ಅಥವಾ ಗರ್ಭಧಾರಣೆ ವಯಸ್ಸಿನ ಎಲ್ಲ ಹೆಣ್ಣು ಮಕ್ಕಳೂ ಇದನ್ನು ಧರಿಸಬಹುದು. ತೋಳಿನೊಳಗೆ ಫಿಕ್ಸ್ ಮಾಡಬಹುದು. ಒಮ್ಮೆ ಫಿಕ್ಸ್ ಮಾಡಿದರೆ 3 ವರ್ಷ ಅವರಿಗೆ ಮಕ್ಕಳಾಗಲ್ಲ. ಇದು ಸರಳ, ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಆರೋಗ್ಯ ಇಲಾಖೆಯೇ ಹೇಳಿದೆ.
ಇನ್ನೊಂದು ಇಂಜಕ್ಷನ್ (pregnancy prevention injection) ಕೂಡಾ ಹೊರತಂದಿರುವ ಆರೋಗ್ಯ ಇಲಾಖೆ, ಅಂತರ ಹೆಸರಿನ ಸಬ್-ಕ್ಯುಟೇನಿಯಸ್ ಇಂಜಕ್ಷನ್ (sub cutaneous injection) ಕೂಡಾ ಹೊರತಂದಿದೆ.ಈ ಇಂಜಕ್ಷನ್ ತೆಗೆದುಕೊಂಡ ಮಹಿಳೆಯರಿಗೆ 3 ತಿಂಗಳವರೆಗೆ ಏನು ಮಾಡಿದರೂ ಮಕ್ಕಳಾಗಲ್ಲ. ಇದೂ ಕೂಡಾ ಯಾವುದೇ ಸೈಡ್ ಎಫೆಕ್ಟ್ ಇಲ್ಲದ ಸರಳ (safe pregnancy) ಸುರಕ್ಷಿತ ಗರ್ಭ ನಿರೋಧಕ ಮಾರ್ಗ ಎಂದು ಆರೋಗ್ಯ ಇಲಾಖೆ ಹೇಳಿದೆ.
ಸಬ್ ಡರ್ಮಲ್ ಇಂಪ್ಲಾಂಟ್ʻನ್ನು ಸದ್ಯಕ್ಕೆ ಬೀದರ್, ಬೆಂಗಳೂರು ನಗರ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗುತ್ತಿದೆ. ಮೈಸೂರು ಮತ್ತು ಯಾದಗಿರಿಯಲ್ಲಿ ಸಬ್-ಕ್ಯುಟೇನಿಯಸ್ ಇಂಜಕ್ಷನ್ ಪ್ರಯೋಗ ಜಾರಿಗೆ ತರಲಾಗಿದೆ. ಒಂದು ಉತ್ತರ ಕರ್ನಾಟಕ ಮತ್ತು ಮತ್ತೊಂದು ಮೈಸೂರು ಕರ್ನಾಟಕ ಭಾಗವನ್ನು ಆಯ್ಕೆ ಮಾಡಿರುವುದು ವಿಶೇಷ. ತೋಳಿಗೆ ಹಾಕುವ ಸ್ಟ್ರಿಪ್ʻನ್ನು 10 ಸಾವಿರ ಜನರಿಗೆ ಹಾಗೂ ಇಂಜಕ್ಷನ್ನ್ನು 20 ಸಾವಿರ ಜನರಿಗೆ ಹಾಕಲಾಗುತ್ತಿದೆ. 4 ಜಿಲ್ಲೆಗಳ ವೈದ್ಯರಿಗೆ ತರಬೇತಿ ಕೂಡಾ ನೀಡಲಾಗಿದೆ.
ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆ (Vani vilasa hospital) ಹಾಗೂ ಮಲ್ಲೇಶ್ವರದ ( malleshwaram ) ಕೆಸಿ ಜನರಲ್ ಆಸ್ಪತ್ರೆಯಲ್ಲಿ (KC General hospital), ಬೀದರ್ನ ಪ್ರಾದೇಶಿಕ ವೈದ್ಯಕೀಯ ವಿಜ್ಞಾನಿ ಸಂಸ್ಥೆಯಲ್ಲಿ ಈಗಾಗಲೇ 200 ಮಹಿಳೆಯರಿಗೆ ಪ್ರಾಯೋಗಿಕವಾಗಿ ಸ್ಟ್ರಿಪ್ ಮತ್ತು ಇಂಜಕ್ಷನ್ ನೀಡಲಾಗಿದ್ದು, ಯಶಸ್ವಿಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



