ದೇಹವೇ ಹಾಗೆ. ಒಂದಕ್ಕೊಂದು ಲಿಂಕ್ ಇರುತ್ತದೆ. ಯಾವುದೂ ದಿಢೀರ್ ಎಂದು ಬರುವುದಿಲ್ಲ. ಸಣ್ಣ ಸಣ್ಣ ಸುಳಿವು ಕೊಡುತ್ತಲೇ ಇರುತ್ತದೆ. ಆದರೆ ಬಹುತೇಕ ವ್ಯಕ್ತಿಗಳು ಅದು ಸಿಗ್ನಲ್ ಎಂದಾಗಲೀ, ಮುನ್ಸೂಚನೆ ಎಂದಾಗಲಿ, ಮುಂದಾಗುವ ಅಪಾಯದ ಮೊದಲ ಎಚ್ಚರಿಕೆ ಎಂದಾಗಲಿ ಗೊತ್ತಿರುವುದಿಲ್ಲ. ಅಂತಾದ್ದರಲ್ಲಿ ಒಂದು ಕೈ ಬೆರಳುಗಳ ಸೂಚನೆ.
ಹೃದಯವು ಆರೋಗ್ಯವಾಗಿ ಇರಬೇಕೆಂದರೆ ರಕ್ತನಾಗಳು ಸರಿಯಾಗಿ ಕೆಲಸ ಮಾಡಬೇಕು. ರಕ್ತನಾಗಳೇ ಮುಚ್ಚಿದರೆ ಆಗ ಹೃದಯಕ್ಕೆ ಹಾನಿ ಆಗುವುದು. ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಕೆಲವು ಖನಿಜಾಂಶಗಳು ಶೇಖರಣೆ ಆಗುವ ಪರಿಣಾಮ ರಕ್ತನಾಳಗಳು ಮುಚ್ಚಿ ಹೋಗುವುದು. ಇದರಿಂದ ನಿಧಾನವಾಗಿ ರಕ್ತ ಸಂಚಾರಕ್ಕೆ ಅಡ್ಡಿಯಾಗುವುದು ಮಾತ್ರವಲ್ಲದೆ ಎದೆನೋವು, ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಪಾರ್ಶ್ವವಾಯು ಸಂಭವಿ ಸುವುದು. ಇದರ ಲಕ್ಷಣಗಳನ್ನು ಬೇಗನೆ ಪತ್ತೆ ಮಾಡಿಕೊಂಡು ಅದಕ್ಕೆ ಚಿಕಿತ್ಸೆ ನೀಡಿದರೆ, ಮುಂದೆ ಬರುವ ಅಪಾಯವನ್ನು ತಪ್ಪಿಸಬಹುದು. ರಕ್ತನಾಳಗಳು ಮುಚ್ಚಿದ್ದರೆ, ಆಗ ಅದರ ಲಕ್ಷಣಗಳು ರಾತ್ರಿ ವೇಳೆ ಬೆರಳುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅಂತಹ ಕೆಲವು ಸೂಚನೆಗಳು ಇಲ್ಲಿವೆ.
ಬದಲಾಗುತ್ತೆ ಚರ್ಮದ ಬಣ್ಣ : ಬೆರಳಿನ ಚರ್ಮದ ಬಣ್ಣದಲ್ಲಿ ಹಠಾತ್ ಆಗಿ ಬದಲಾವಣೆ ಕಾಣಿಸಿಕೊಂಡರೆ ಅದು ಅಪಾಯದ ಮುನ್ಸೂಚನೆ. ಹೃದಯವು ಬ್ಲಾಕ್ ಆದ ವೇಳೆ ಕೈಬೆರಳಿನ ಬಣ್ಣವು ನೀಲಿ ಅಥವಾ ಬಣ್ಣರಹಿತವಾಗಬಹುದು. ಬೆರಳಿಗೆ ಸರಿಯಾಗಿ ರಕ್ತ ಸಂಚಾರವು ಆಗದೆ ಇದ್ದಾಗ ಬೆರಳುಗಳ ಜೀವಕೋಶಗಳಿಗೆ ಆಮ್ಲಜನಕವು ತಲುಪುವುದು ತಪ್ಪುವುದು.ಇದು ಅಪಾಯದ ಸಿಗ್ನಲ್ ಎಂದೇ ಅರ್ಥ.
ಐಸ್ ಇಟ್ಟಂತಾಗುವ ಬೆರಳುಗಳು : ವಾತಾವರಣವು ಬಿಸಿಯಾಗಿದ್ದರೂ ಕೈಯ ಬೆರಳುಗಳು ತಣ್ಣಗೆ ಇರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೃದಯವು ಬ್ಲಾಕ್ ಆಗಿರುವ ಪ್ರಮುಖ ಲಕ್ಷಣಗಳಲ್ಲಿ ಒಂದು. ಕೈಬೆರಳುಗಳಿಗೆ ಸರಿಯಾಗಿ ರಕ್ತ ಸಂಚಾರವು ಆಗದೆ ಇರುವ ಸಂದರ್ಭದಲ್ಲಿ ಹೀಗೆ ಆಗುವ ಸಂಭವ ಹೆಚ್ಚು.
ಮರಗಟ್ಟುವ ಬೆರಳುಗಳು : ಮರಗಟ್ಟುವಿಕೆ ಕೂಡಾ ಅಪಾಯದ ಮುನ್ಸೂಚನೆಯೇ. ನರಗಳ ಕಾರ್ಯಕ್ಕೆ ಸರಿಯಾಗಿ ರಕ್ತವು ಸರಬರಾಜು ಆಗದೆ ಇರುವ ಪರಿಣಾಮವಾಗಿ ಮರಗಟ್ಟುವಿಕೆ ಉಂಟಾಗುತ್ತದೆ. ಬೆರಳುಗಳಲ್ಲಿ ನಿಶ್ಯಕ್ತಿ ಕಾಡುತ್ತದೆ. ಹಾಗಂತ ಒಂದೇ ಕಡೆ ಮಲಗಿ ಅಥವಾ ಒಂದೇ ಕಡೆ ಒತ್ತಡ ಕೊಟ್ಟು ಆಗುವ ಮರಗಟ್ಟುವಿಕೆಗೂ ಇದಕ್ಕೂ ಸಂಬಂಧ ಇಲ್ಲ. ಆ ರೀತಿಯ ಮರಗಟ್ಟುವಿಕೆ ಕೆಲವೇ ನಿಮಿಷಗಳಲ್ಲಿ ಸರಿ ಹೋಗುತ್ತದೆ.
ಕೈ ಹಿಡಿತ ವೀಕ್ ಆಗುವುದು : ಯಾವುದೇ ವಸ್ತುಗಳನ್ನು ಹಿಡಿಯಲು ತುಂಬಾ ಕಷ್ಟವಾಗುತ್ತಿದ್ದರೆ, ಕೈ ಶಕ್ತಿ ಕಳೆದುಕೊಳ್ಳುತ್ತಿದ್ದರೆ ರಕ್ತನಾಳಗಳು ಬ್ಲಾಕ್ ಆಗಿರುವ ಲಕ್ಷಣ. ಇದನ್ನು ಕಡೆಗಣಿಸಿ ದರೆ, ಆಗ ಇದು ಹೃದಯದ ಗಂಭೀರ ಸಮಸ್ಯೆಗೆ ಕಾರಣವಾಗಬಹುದು.
ಉಗುರುಗಳು ದುರ್ಬಲವಾಗುವುದು : ಉಗುರುಗಳು ದಪ್ಪಗಾಗುವುದು, ನಿಧಾನವಾಗಿ ಬೆಳೆಯುವುದು ಮತ್ತು ಬಣ್ಣ ಕಳೆದುಕೊಳ್ಳುವುದು ಕೂಡ ಹೃದಯದ ರಕ್ತನಾಳಗಳು ಬ್ಲಾಕ್ ಆಗಿರುವ ಲಕ್ಷಣ. ಉಗುರುಗಳು ಆರೋಗ್ಯದ ಬಗ್ಗೆ ತುಂಬಾ ವಿಚಾರಗಳನ್ನು ಹೇಳುತ್ತದೆ. ಇದರಲ್ಲಿ ಸರಿಯಾಗಿ ರಕ್ತಸಂಚಾರವು ಆಗದೆ ಬಣ್ಣ ಕಳೆದುಕೊಳ್ಳುತ್ತಿದ್ದರೆ ಎಚ್ಚೆತ್ತುಕೊಳ್ಳಬೇಕಾಗುತ್ತದೆ.
ಬೆರಳುಗಳಲ್ಲಿ ಏನೋ ಒಂಥರಾ ನೋವು : ಕೆಲಸ ಮಾಡುವ ವೇಳೆ ಬೆರಳುಗಳಲ್ಲಿ ಅಸಾಮಾನ್ಯ ನೋವು ಅಥವಾ ಒತ್ತಡವು ಕಾಣಿಸಿಕೊಳ್ತಿದ್ದರೆ ಇದು ರಕ್ತನಾಳಗಳು ಬ್ಲಾಕ್ ಆಗಿರುವ ಪರಿಣಾಮ. ರಕ್ತ ಸಂಚಾರವು ಆಗದೆ ಇರುವ ಪರಿಣಾಮ. ಈ ನೋವು ಮಧ್ಯಮದಿಂದ ತೀವ್ರವಾಗಬಹುದು ಮತ್ತು ಉರಿಯೂತ ಹಾಗೂ ಊತವು ಕಾಣಿಸಿಕೊಳ್ಳಬಹುದು.
ಮಧುಮೇಹ ಮತ್ತು ರಕ್ತದೊತ್ತಡವನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಆಗ ಇದು ರಕ್ತನಾಳದ ಆರೋಗ್ಯ ಕಾಪಾಡಲು ಸಹಕಾರಿ ಆಗಿದೆ. ಈ ಮೇಲಿನ ಲಕ್ಷಣಗಳು ಕಂಡುಬಂದರೆ ಆಗ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಿ.



