ಹ್ಯಾಟ್ರಿಕ್ ಹೀರೋ.. ಸೆಂಚುರಿ ಸ್ಟಾರ್ ಶಿವ ರಾಜ್ʻಕುಮಾರ್ ಅಭಿಮಾನಿಗಳ ಬಳಗ ದೊಡ್ಡದು. ಅಭಿಮಾನಿಗಳಿಗಾಗಿ ಶಿವಣ್ಣ ಏನ್ ಬೇಕಾದ್ರೂ ಮಾಡ್ತಾರೆ. ಹಾಡ್ತಾರೆ..ಕುಣೀತಾರೆ..ನಗ್ತಾರೆ..ನಗಿಸ್ತಾರೆ.. ಅಂತಹ ಶಿವಣ್ಣನ ಘೋಸ್ಟ್ ಇದೇ ವಾರ ರಿಲೀಸ್ ಆಗ್ತಿದೆ. ಆದರೆ ಅಭಿಮಾನಿ ದೇವರುಗಳ ಆಗ್ರಹದ ಎದುರು ಶಿವಣ್ಣನೇ ಸೋತು ಹೋಗಿದ್ದಾರೆ. ಏಕಂದ್ರೆ ಶಿವಣ್ಣನ ಘೋಸ್ಟ್ ಅಧಿಕೃತವಾಗಿ ರಿಲೀಸ್ ಆಗ್ತಿರೋದು ಆಗಸ್ಟ್ ೧೯ಕ್ಕಾದರೂ, ಆಗಸ್ಟ್ ೧೮ಕ್ಕೇ ಒಂದಷ್ಟು ಜನ ಸಿನಿಮಾ ನೋಡ್ತಾರೆ. ಹಾಗೆ ಸಿನಿಮಾ ನೋಡೋದು ಶಿವಣ್ಣನ ಫ್ಯಾನ್ಸ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.
ಘೋಸ್ಟ್ ರಿಲೀಸ್ ಆಗ್ತಿರೋದು ಅಕ್ಟೋಬರ್ ೧೯ಕ್ಕೆ. ಅಧಿಕೃತವಾಗಿ. ಆದರೆ ಶಿವಣ್ಣನ ಫ್ಯಾನ್ಸ್ ಕ್ರೇಜ್ ಹೇಗಿದೆ ಅಂದ್ರೆ, ಮಧ್ಯರಾತ್ರಿಯೇ ಶೋಗಳು ಶುರುವಾಗುತ್ವೆ. ಶಿವಣ್ಣ ಅಭಿನಯದ ಪ್ರತಿ ಚಿತ್ರವೂ ಬಳ್ಳಾರಿ, ಹೊಸಪೇಟೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಬೆಳ್ ಬೆಳಗ್ಗೆ ಶೋಗಳಾಗುವುದು ಹೊಸದೇನಲ್ಲ. ಭಜರಂಗಿ’ ಚಿತ್ರದ ಪ್ರದರ್ಶನ ಬೆ 6ರಿಂದ ಆರಂಭವಾಗಿತ್ತು. ಆದರೆ ಮಧ್ಯರಾತ್ರಿಯಿಂದಲೇ ಪ್ರದರ್ಶನ ಕಾಣುತ್ತಿರುವ ಮೊದಲ ಚಿತ್ರ ಘೋಸ್ಟ್.
ಇದೇ ಮೊದಲ ಬಾರಿಗೆ ಕೆ ಜಿ ರಸ್ತೆಯ ಪ್ರಮುಖ ಚಿತ್ರಮಂದಿರದಲ್ಲಿ ಅಕ್ಟೋಬರ್18ರ ಮಧ್ಯರಾತ್ರಿ 12 ಕ್ಕೆ ಭರ್ಜರಿ ಫ್ಯಾನ್ ಶೋ ಆಯೋಜಿಸಲಾಗಿದೆ. ಘೋಸ್ಟ್ ಚಿತ್ರವನ್ನು ನೋಡಲು ಕನ್ನಡಿಗರಷ್ಟೇ ಅಲ್ಲ, ಜೈಲರ್ ಚಿತ್ರದ ಎಫೆಕ್ಟ್‌ನಿಂದಾಗ ಭಾರತೀಯರ ಜೊತೆಗೆ ವಿದೇಶಿಗರು ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ವಿದೇಶಿ ಅಭಿಮಾನಿಗಳು ತಾವು ಕೂಡ ಈ ಚಿತ್ರದ ಬಿಡುಗಡೆಗೆ ಕಾತುರದಿಂದ ಕಾಯುತ್ತಿರುವುದಾಗಿ ವಿಡಿಯೋ ಮೂಲಕ ಹೇಳಿಕೊಂಡಿದ್ದರು. ಶಿವರಾಜಕುಮಾರ್, ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ದತ್ತಣ್ಣ, ಪ್ರಶಾಂತ್ ನಾರಾಯಣನ್, ಅಭಿಜಿತ್, ಶ್ರೀನಿ ಮುಂತಾದವರು ‘ಘೋಸ್ಟ್’ ಚಿತ್ರದ ತಾರಾಬಳಗದಲ್ಲಿದ್ದು, ಶ್ರೀನಿಯೇ ಡೈರೆಕ್ಟರ್.
ಶಿವರಾಜ್‌ಕುಮಾರ್‌ಗೆ ‘ಘೋಸ್ಟ್’ ಚಿತ್ರದಲ್ಲಿ ನಾಯಕಿ ಇಲ್ಲ. ಆ್ಯಕ್ಷನ್ ಥ್ರಿಲ್ಲರ್ ಮಾದರಿಯ ಸಿನಿಮಾದಲ್ಲಿ ನಟಿ ಅರ್ಚನಾ ಜೊಯೀಸ್ ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಕಥೆ ೪೮ ಗಂಟೆಗಳಲ್ಲಿ ನಡೆಯುತ್ತಂತೆ.
ಇಷ್ಟೆಲ್ಲ ಕುತೂಹಲ, ಸಸ್ಪೆನ್ಸ್ ಹುಟ್ಟುಹಾಕಿರೋ ಸಿನಿಮಾಗೆ ಎದುರಾಗಿ ರಿಲೀಸ್ ಆಗ್ತಿರೋದು ದಳಪತಿ ವಿಜಯ್ ಅವರ ಲಿಯೋ. ಜೈಲರ್ ಚಿತ್ರದ ನರಸಿಂಹ ಪಾತ್ರ ಎಷ್ಟು ಸಕ್ಸಸ್ ಆಗಿದೆ ಎಂದರೆ, ಶಿವಣ್ಣಂಗೀಗ ತಮಿಳುನಾಡಲ್ಲೂ ಫ್ಯಾನ್ಸ್ ಕ್ರೇಜ್ ಇದೆ. ಅಲ್ಲಿಯೂ ಒಂದು ಶಿವು ಅಡ್ಡ ಆಗಿದೆ. ಹೀಗಾಗಿ ತಮಿಳಿನ ಲಿಯೋ ಗೆಲ್ಲುತ್ತಾ.. ಕನ್ನಡದ ಘೋಸ್ಟ್ ಗೆಲ್ಲುತ್ತಾ ಅನ್ನೋ ಫ್ಯಾನ್ಸ್ ವಾರ್ ಶುರುವಾಗಿದೆ. ಆ ನಿರೀಕ್ಷೆಯನ್ನು ಡೈರೆಕ್ಟರ್ ಶ್ರೀನಿ ಹುಸಿ ಮಾಡಬಾರದಷ್ಟೇ..



