ಆತ ಅಕಸ್ಮಾತ್ ಬದುಕಿದ್ದರೆ.. ಜೀವಂತ ಶವವಾಗಿರುತ್ತಿದ್ದನಷ್ಟೇ.. ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಯ ಮೇಲೆ ಎಸಗಿದ್ದ ಕ್ರೌರ್ಯ ಹೇಗಿತ್ತು ಅನ್ನೋದಕ್ಕೆ ಪೋಸ್ಟ್ ಮಾರ್ಟಂ ಸಾಕ್ಷಿ ಹೇಳುತ್ತಿದೆ. ರೇಣುಕಾಸ್ವಾಮಿಯ.. ಎದೆಯ ಎಲುಬು ಶ್ವಾಸಕೋಶಕ್ಕೆ ತೂರಿಕೊಂಡಿತ್ತಂತೆ. ಬೆನ್ನು ಮೂಳೆ ಅಂದ್ರೆ.. ಸ್ಪೈನಲ್ ಕಾರ್ಡ್ ಮುರಿದು ಹೋಗಿತ್ತಂತೆ. ಆತ ಬದುಕಿದ್ದರೆ.. ಜೀವನ ಪೂರ್ತಿ ಸೊಂಟ ಎತ್ತಿ ನಡೆಯುವುದಕ್ಕೆ.. ಅಥವಾ ಕಕ್ಕ ಮಾಡುವುದಕ್ಕೂ ಆಗುತ್ತಿರಲಿಲ್ಲ. ವೃಷಣಗಳಲ್ಲಿ ರಕ್ತ ಸೋರಿತ್ತು, ಮೆದುಳಲ್ಲಿ ರಕ್ತಸ್ರಾವವಾಗಿತ್ತು. ಪೋಸ್ಟ್ ಮಾರ್ಟಂ ರಿಪೋರ್ಟ್ ನೋಡಿದ ಪೊಲೀಸರು ಕೂಡಾ ಬೆಚ್ಚಿಬಿದ್ದಿದ್ದಾರೆ. ಹೆಸರು ಹೇಳದ ಅಧಿಕಾರಿಯೊಬ್ಬರು ಹೇಳುವ ಪ್ರಕಾರ.. ಆತನ ಮೇಲೆ ಕ್ರೌರ್ಯ ನಡೆಸಿರುವುದು ಮನುಷ್ಯರಂತೂ ಅಲ್ಲ.
ರೇಣುಕಾಸ್ವಾಮಿ ಹತ್ಯೆಯ ನಂತರ ಪೊಲೀಸರು ಮಹತ್ವದ ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ. ಕೊಲೆ ನಡೆದ ಜಾಗ ಪಟ್ಟಣಗೆರೆ ಶೆಡ್‌ನಲ್ಲಿನ ಸಿಸಿಟಿವಿ ಕ್ಯಾಮರಾ, ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಮನೆಯ ಸಿಸಿಟಿವಿ ದೃಶ್ಯಾವಳಿ, ಸ್ಟೋನಿ ಬ್ರೂಕ್‌ನಲ್ಲಿನ ಸಿಸಿಟಿವಿ ಫುಟೇಜ್, ಕೊಲೆ ನಡೆದ ಸ್ಥಳದಲ್ಲಿ ಸಿಕ್ಕ ಫಿಂಗರ್ ಪ್ರಿಂಟ್ಸ್, ರೇಣುಕಾಸ್ವಾಮಿ ಮೃತದೇಹ ಸಾಗಿಸಿದ ಸ್ಕಾರ್ಪಿಯೋ ಕಾರಿನಲ್ಲಿನ ಫಿಂಗರ್ ಪ್ರಿಂಟ್‌ಗಳನ್ನೆಲ್ಲಾ ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಇದೀಗ ಹೈದರಾಬಾದ್ ಹಾಗೂ ಬೆಂಗಳೂರಿನ ಎಫ್‌ಎಸ್‌ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ಕಡೆಯಿಂದ ವರದಿಗಳು ಸಿದ್ಧಗೊಂಡಿವೆ. ಆದರೆ ದರ್ಶನ್ ಗ್ಯಾಂಗ್ ಕ್ರೌರ್ಯದ ಮಾಹಿತಿ ಪೋಸ್ಟ್ ಮಾರ್ಟಂ ರಿಪೋರ್ಟ್ ಪೊಲೀಸರೇ ಬೆಚ್ಚಿಬೀಳುವಂತಿದೆ.
ಬಲವಾಗಿ ಏಟು ತಿಂದಿದ್ದ ರೇಣುಕಾಸ್ವಾಮಿ ಅವರ ಎದೆಯ ಎಲುಬು ಮುರಿದಿದೆ. ಮುರಿದ ಎದೆಯ ಎಲುಬು ಶ್ವಾಸಕೋಶಕ್ಕೆ ಚುಚ್ಚಿಕೊಂಡಿದೆ. ಹೀಗಾಗಿ.. ಸಾಯುವ ಕೊನೆ ಗಳಿಗೆಯಲ್ಲಿ ಉಸಿರಾಡುವುದಕ್ಕೂ ಅವನಿಗೆ ಆಗಿಲ್ಲ. ರೇಣುಕಾಸ್ವಾಮಿಯ ಮೊಣಕಾಲು ಮೂಳೆ ಮುರಿದಿದ್ದು, ಬಲಗಣ್ಣಿಗೆ ಗಾಯವಾಗಿದೆ ಎಂಬ ಅಂಶಗಳು ರೇಣುಕಾಸ್ವಾಮಿ ಪೋಸ್ಟ್ ಮಾರ್ಟಂ ರಿಪೋರ್ಟ್‌ನಲ್ಲಿ ಇದ್ಯಂತೆ. ಅಂದರೆ ಕುಳಿತುಕೊಂಡು ತೆವಳಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದ ರೇಣುಕಾಸ್ವಾಮಿ. ಅಷ್ಟೇ ಅಲ್ಲ, ಸ್ಪೈನಲ್ ಕಾರ್ಡ್ ಮುರಿದಿದ್ದು, ವೃಷಣ ಚೀಲದಲ್ಲಿ ರಕ್ತ ಸೋರಿಕೆಯಾಗಿದ್ಯಂತೆ. ಅಂದರೆ ಜೀವನಪೂರ್ತಿ ರೇಣುಕಾಸ್ವಾಮಿ ನಪುಂಸಕನಾಗಿ ಹೋಗಿದ್ದ. ತಲೆಗೆ ಗಂಭೀರ ಗಾಯವಾಗಿದ್ದು, ಮೆದಳಿನಲ್ಲಿ ತೀವ್ರವಾದ ರಕ್ತಸ್ರಾವವಾಗಿದೆ ಎನ್ನುತ್ತಿದೆ ಪೋಸ್ಟ್ ಮಾರ್ಟಂ ರಿಪೋರ್ಟ್. ಸಾವಿನ ಸಮಯ ಸಂಜೆ 6ರಿಂದ 6.30 ಎನ್ನಲಾಗಿದೆ. ಒಟ್ಟಿನಲ್ಲಿ ಮನುಷ್ಯ ಮಾತ್ರದವರು ಊಹಿಸಿಕೊಳ್ಳಲೂ ಆಗದಂತಹ ರೀತಿಯಲ್ಲಿ ರೇಣುಕಾಸ್ವಾಮಿ ಮೇಲೆ ಕ್ರೌರ್ಯ ನಡೆದಿದೆ.
ಇವೆಲ್ಲದರ ಜೊತೆಯಲ್ಲಿ ಎಫ್‌ಎಸ್‌ಎಲ್ ಕಡೆಯಿಂದ ಒಟ್ಟು 6 ವರದಿಗಳು ಪೊಲೀಸರ ಕೈಸೇರಿವೆ.
- ಪಟ್ಟಣಗೆರೆ ಶೆಡ್‌ನಲ್ಲಿನ ಸಿಸಿಟಿವಿ ಕ್ಯಾಮರಾಗಳ ಫುಟೇಜ್
- ಕೊಲೆ ನಡೆದ ಸ್ಥಳದಲ್ಲಿನ ಫಿಂಗರ್ ಪ್ರಿಂಟ್‌ಗಳ ವರದಿ
- ರೇಣುಕಾಸ್ವಾಮಿ ಮೃತದೇಹ ಸಾಗಿಸಿದ್ದ ಸ್ಕಾರ್ಪಿಯೋ ಕಾರಿನಲ್ಲಿನ ಫಿಂಗರ್ ಪ್ರಿಂಟ್ ವರದಿ
- ದರ್ಶನ್, ಪವಿತ್ರಾ ಗೌಡ ಮನೆಯ ಸಿಸಿಟಿವಿ ಫುಟೇಜ್
- ಸ್ಟೋನಿ ಬ್ರೂಕ್ ಪಬ್‌ನಲ್ಲಿನ ಸಿಸಿಟಿವಿ ಫುಟೇಜ್
- ಕೊಲೆ ಆರೋಪಿಗಳ ಮೊಬೈಲ್ ರಿಟ್ರೀವ್ ರಿಪೋರ್ಟ್
ಪೊಲೀಸರಿಗೆ ತಲುಪಿದ್ದು, ಈ ಎಲ್ಲವನ್ನೂ ಸಂಪೂರ್ಣವಾಗಿ ಪರಿಶೀಲಿಸಿರುವ ಪೊಲೀಸರು ಕಾನೂನು ತಜ್ಞರ ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ.ಖುದ್ದು ಕಮಿಷನರ್ ದಯಾನಂದ್ ಅವರೇ ಚಾರ್ಜ್ಶೀಟ್ ಪರಿಶೀಲನೆ ಮಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಇಷ್ಟೆಲ್ಲ ಆಗಿಯೂ ಕಾಮಾಕ್ಷಿಪಾಳ್ಯ ಪೊಲೀಸರ ಕೈಸೇರಿದ್ದು ಕೇವಲ 70 % ರಿಪೋರ್ಟ್ ಅಷ್ಟೇ. ಮರಣೋತ್ತರ ಪರೀಕ್ಷೆ ಸೇರಿದಂತೆ ಜೈವಿಕ ವಸ್ತುಗಳ ರಿಪೋರ್ಟ್ ಮಾತ್ರ ಬಂದಿದೆ. ಉಳಿದಂತೆ ಯಾವುದೇ ರಿಪೋರ್ಟ್ ಪೊಲೀಸರ ಕೈ ಸೇರಿಲ್ಲ. ದರ್ಶನ್ ಮತ್ತು ಪವಿತ್ರಾ ಗೌಡ ಅವರ ಎಲೆಕ್ಟ್ರಾನಿಕ್ ಡಿವೈಸ್, ಐಫೋನ್ಗಳ ರಿಪೋರ್ಟ್ ಯಾವುದು ಪೊಲೀಸರಿಗೆ ಸಿಕ್ಕಿಲ್ಲ. ಹೈದಾರಾಬಾದ್ ಎಫ್ ಎಸ್ ಎಲ್ ಗೆ ಕಳುಹಿಸಿದ್ದ ಯಾವುದೇ ರಿಪೋರ್ಟ್ ಬಂದಿಲ್ಲ. ಇದಕ್ಕೆ ಇನ್ನಷ್ಟು ಸಮಯಾವಕಾಶ ಕೇಳಿದ್ದಾರಂತೆ ಹೈದರಾಬಾದ್ ಎಫ್ಎಸ್ಎಲ್ ಅಧಿಕಾರಿಗಳು.
ಮೂಲಗಳ ಪ್ರಕಾರ ಐಫೋನ್‌ನಲ್ಲಿ ಕೆಲವು ವಿಡಿಯೋಗಳನ್ನು ಶೂಟ್ ಆಡಿ, ಸಂಬಂಧಪಟ್ಟವರಿಗೆ ಕಳುಹಿಸಲಾಗಿದೆ. ಆ ವಿಡಿಯೋಗಳನ್ನು ರೇಣುಕಾಸ್ವಾಮಿ ಸಾಯುತ್ತಲೇ ಡಿಲೀಟ್ ಕೂಡಾ ಮಾಡಲಾಗಿದೆ. ಅಲ್ಲದೆ ಅದೇ ಮೊಬೈಲಿನಲ್ಲಿ ಇನ್ನೂ ಹಲವರ ಮೇಲೆ ಹಿಂಸಾಚಾರ ನಡೆದ ವಿಡಿಯೋಗಳಿವೆ ಎನ್ನಲಾಗಿದೆ. ಈ ಎಲ್ಲವೂ ಹೊರಬಿದ್ದರೆ.. ದರ್ಶನ್ ಕಟಕಟೆಯಲ್ಲಿ ನಿಂತು ತಪ್ಪಾಯ್ತು ಎಂದು ಒಪ್ಪಿಕೊಳ್ಳದೆ ವಿಧಿ ಇಲ್ಲ. ಆದರೆ.. ಆ ವಿಡಿಯೋಗಳನ್ನು ರಿಟ್ರೀವ್ ಮಾಡೋದಕ್ಕೆ ಇನ್ನೊಂದಿಷ್ಟು ಸಮಯ ಬೇಕು ಎನ್ನುತ್ತಿದ್ದಾರೆ ಹೈದರಾಬಾದ್ ಎಫ್‌ಎಸ್‌ಎಲ್ ಆಫೀಸರ್ಸ್.



