ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ. ಈಗ ಖರ್ಗೆಯವರು ಅಧ್ಯಕ್ಷರಾದರೂ.. ಅಧಿಕಾರ ಈಗಲೂ ರಾಹುಲ್ ಗಾಂಧಿ ಅವರಲ್ಲಿಯೇ ಇದೆ. ೨೦೦ರಲ್ಲಿ ರಾಜಕೀಯಕ್ಕೆ ಬಂದ ರಾಹುಲ್ ಗಾಂಧಿಗೆ ನೇತೃತ್ವ ಕೊಟ್ಟ ಮೇಲೆ, ಕಾಂಗ್ರೆಸ್ ಗೆದ್ದಿಲ್ಲ. ರಾಹುಲ್ ಅವರನ್ನು ಕಾಂಗ್ರೆಸ್ಸಿಗರು ಹೋರಾಟಗಾರ, ಟಫ್ ಫೈಟರ್, ಹೃದಯವಂತ, ದೇಶದ ನಾಡಿಮಿಡಿತ ಅರ್ಥ ಮಾಡಿಕೊಂಡಿರುವ ನಾಯಕ ಎಂದರೆ.. ವಿರೋಧಿಗಳು ಪಪ್ಪು, ದಡ್ಡ ಎಂದೆಲ್ಲ ಕಾಮಿಡಿ ಮಾಡ್ತಾರೆ. ಅಂತಹ ರಾಹುಲ್ ಗಾಂಧಿಗೆ ಕನ್ನಡದ ಹ್ಯಾಟ್ರಿಕ ಹೀರೋ ಕೂಡಾ ಫ್ಯಾನ್ ಅಗಿದ್ಧಾರೆ. ಶಿವಣ್ಣ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯರಲ್ಲದೇ ಇರಬಹುದು. ಆದರೆ.. ಶಿವಣ್ಣ ಅವರೀಗ ಕಾಂಗ್ರೆಸ್ ಮುಖಂಡರೇ ಆಗಿದ್ಧಾರೆ.
ಸೆಂಚುರಿ ಸ್ಟಾರ್ ಶಿವಣ್ಣಗೆ ರಾಜ್ಯಾದ್ಯಂತ ಲಕ್ಷಾಂತರ ಫ್ಯಾನ್ಸ್ ಇದ್ಧಾರೆ. ಆದರೆ.. ಶಿವಣ್ಣ ಅವರು ರಾಹುಲ್ ಗಾಂಧಿ ಅವರ ಫ್ಯಾನ್ ಆಗಿದ್ಧಾರೆ. ಅಂದಹಾಗೆ ಶಿವಣ್ಣ, ರಾಹುಲ್ ಗಾಂಧಿಯವರ ಫ್ಯಾನ್ ಅಗೋದಕ್ಕೆ ಕಾರಣವೂ ಇದೆ. ಶಿವಣ್ಣ ಅವರಿಗೆ ರಾಹುಲ್ ಅವರ ಮಾನವೀಯತೆ, ಫಿಟ್ʻನೆಸ್ ಇಷ್ಟವಾಗಿದೆಯಂತೆ. ರಾಹುಲ್ ಪ್ರಧಾನಿಯಾದರೆ.. ದೇಶವನ್ನು ಫಿಟ್ ಆಗಿ ಇಡಬಲ್ಲರು ಎಂದಿದ್ದಾರೆ ಶಿವಣ್ಣ. ಇದೆಲ್ಲವನ್ನೂ ಹೇಳಿದ್ದು ಶಿವಮೊಗ್ಗದಲ್ಲಿ. ಲೋಕಸಭೆ ಚುನಾವಣೆ ಪ್ರಚಾರದ ವೇಳೆ. ಶಿವಮೊಗ್ಗದಲ್ಲಿ ನಡೆದ ಬೃಹತ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗಿಯಾಗಿದ್ದರು. ಕಾಂಗ್ರೆಸ್ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ಧರಾಮಯ್ಯ , ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ದುನಿಯಾ ವಿಜಯ್ ಕೂಡ ಇದ್ದರು. ಈ ಸಮಯದಲ್ಲಿ ಮಾತನಾಡಿದ ಶಿವಣ್ಣ, ರಾಹುಲ್ ಗಾಂಧಿಯವರ ದೈಹಿಕ ಸಾಮರ್ಥ್ಯ ನೋಡಿದರೆ ಖುಷಿಯಾಗುತ್ತದೆ. ಏಕೆಂದರೆ ದೇಶದ ನಾಯಕರಾದವರು ಮೊದಲು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ದೈಹಿಕವಾಗಿ ಫಿಟ್ ಆಗಿರಬೇಕು. ದೈಹಿಕವಾಗಿ ಫಿಟ್ ಆಗಿರುವವರು ದೇಶವನ್ನೂ ಇದೇ ರೀತಿ ಇಟ್ಟುಕೊಳ್ಳುತ್ತಾರೆ. ರಾಹುಲ್ ಗಾಂಧಿ ಕೂಡ ಪ್ರಧಾನಿಯಾದರೆ ದೇಶವನ್ನು ಫಿಟ್ ಆಗಿಯೇ ಇಡಬಲ್ಲರು ಎಂದು ಹೇಳಿದ್ಧಾರೆ.
ಶಿವಮೊಗ್ಗದಲ್ಲಿ ಬಿಜೆಪಿಯ ಬಿ.ವೈ.ರಾಘವೇಂದ್ರ ಎದುರು ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ಮಾಡಿದ್ದಾರೆ. ಪಕ್ಷೇತರರಾಗಿ ಕೆ.ಎಸ್.ಈಶ್ವರಪ್ಪ ಕಣದಲ್ಲಿದ್ದಾರೆ. ೨೦೧೪ರಲ್ಲಿ ಗೀತಾ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು. ಆಗಲೂ ಶಿವರಾಜಕುಮಾರ್ ಪತ್ನಿ ಪರವಾಗಿ ಮತಯಾಚಿಸಿದ್ದರು. ಚುನಾವಣೆ ಮುಗಿಯುವವರಗೂ ಜತೆಯಲ್ಲಿಯೇ ಇದ್ದರು.
ಈ ಬಾರಿ ಕಾಂಗ್ರೆಸ್‌ನಿಂದ ಗೀತಾ ಸ್ಪರ್ಧಿಸಿದ್ದು, ಈ ಬಾರಿಯೂ ಶಿವಮೊಗ್ಗದಲ್ಲೇ ಶಿವರಾಜಕುಮಾರ್ ಬೀಡು ಬಿಟ್ಟಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಶಿವಣ್ಣ ಹೊಗಳ್ತಾ ಇರೋದು ಇದೇ ಫಸ್ಟ್ ಟೈಂ ಏನಲ್ಲ. ಈ ಹಿಂದೆ ವಿಧಾನಸಭೆ ಚುನಾವಣೆ ಸಮಯದಲ್ಲಿಯೂ ಹೊಗಳಿದ್ದರು. ಆಗ ಶಿವಣ್ಣ ಮಧು ಬಂಗಾರಪ್ಪ ಸೇರಿದಂತೆ ಶಿವಮೊಗ್ಗದೆಲ್ಲೆಡೆ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು. ಶಿವಣ್ಣ, ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯದೇ ಇರಬಹುದು. ಆದರೆ.. ಶಿವಣ್ಣ ಈಗ ಕಾಂಗ್ರೆಸ್ ಮುಖಂಡರೇ ಆಗಿದ್ಧಾರೆ. ಏಕೆಂದರೆ.. ಅವರು ವ್ಯಕ್ತಿ ನೋಡಿ ಪ್ರಚಾರ ಮಾಡುವವರಲ್ಲ. ಪಕ್ಷ ನೋಡಿಯೇ ಪ್ರಚಾರ ಮಾಡುವವರು ಹಾಗೂ ಮಾಡಿದವರು.



