ಕಿರಾತಕ (Kirathaka) ಚಿತ್ರದ ಕಟ್ಕೋತೀನಿ ಅನ್ನೋ ಡೈಲಾಗ್ ನೆನಪಿದೆಯಾ..? ನೇತ್ರ ಅನ್ನೋ ಹೆಸರೂ ಖಂಡಿತಾ ನೆನಪಿರುತ್ತೆ. ಏಕೆಂದರೆ ನೇತ್ರಾಳನ್ನು ಬುಟ್ಟಿಗೆ ಹಾಕ್ಕೊಂಡಿದ್ದ ಹುಡುಗ ನಂದೀಶ. (Kirathaka Nandeehsha) ಕಿರಾತಕ ನಂದೀಶ.
ಕನ್ನಡಿಗರಿಗೆ ಓವಿಯಾ (ovia) ಹೆಸರು ಅಷ್ಟಾಗಿ ನೆನಪಾಗದೇ ಇದ್ದರೆ ಅದಕ್ಕೆ ಕಾರಣ ಅವರ ಹೆಸರಷ್ಟೇ. ಆದರೆ ಕಿರಾತಕ ಚಿತ್ರದ ಹೀರೋಯಿನ್ (Kirathaka heroine) ಎಂದರೆ ಕಣ್ಣರಳಿಸ್ತಾರೆ. ಅಂತಹ ಓವಿಯಾ ಸಖತ್ ಬೋಲ್ಡ್. ಪರ್ಸನಲ್ ಲೈಫಿನಲ್ಲೂ ಅಷ್ಟೆ, ಬಿಂದಾಸ್ ವ್ಯಕ್ತಿತ್ವದ ಹುಡುಗಿ. ಇತ್ತೀಚೆಗೆ ಓವಿಯಾ ತಮಗೆ ಮದುವೆ ಎಂದರೆ ಅಲರ್ಜಿ ಎಂದಿದ್ದರು. ಅದಕ್ಕೆ ಓವಿಯಾ ಲೆಸ್ಬಿಯನ್ ಇರಬೇಕು ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೆ ಉತ್ತರ ಕೊಟ್ಟಿದ್ದ ಓವಿಯಾ ನನಗೆ ಗಂಡನ ಅವಶ್ಯಕತೆಯಿಲ್ಲ. ನಾನು ಮದುವೆಯಾಗಲ್ಲ ಎಂದಿದ್ದ ಬೆಡಗಿ, ನಾನು ಮದುವೆ ಆಗದೇ ಇರುವುದಕ್ಕೆ ನನ್ನನ್ನು ಕೆಲವರು ಸಲಿಂಗಕಾಮಿ ಎಂದು ತಿಳಿದಿದ್ದಾರೆ. ನಾನು ನೀವಂದುಕೊಂಡಂತೆ ಲೆಸ್ಬಿಯನ್ (lesbian) ಅಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ನಾನು ಮದುವೆ ಆಗಿಲ್ಲ ಅನ್ನೋ ಕಾರಣಕ್ಕೆ ಹೀಗೆ ಕಾಮೆಂಟ್ಗಳು ಬರುವುದು ಸಹಜ. ಈ ರೀತಿಯ ಪ್ರಶ್ನೆಗಳು ನನಗೆ ಎದುರಾಗುತ್ತಿರುವುದು ಇದೇ ಮೊದಲಲ್ಲ. ಒಬ್ಬ ನಟಿಯಾಗಿ ಈ ರೀತಿಯ ಗಾಸಿಪ್ಗಳು, ಕೆಟ್ಟ ಮಾತುಗಳು ಬರುವುದು ಸರ್ವೇ ಸಾಮಾನ್ಯ. ಆದರೆ ನಾನು ಅದ್ಯಾವುದಕ್ಕೂ ತಲೆ ಕೆಡಸಿಕೊಳ್ಳಲ್ಲ. ಅವರು ಹಾಗೇ ಹೇಳಿದ ಮಾತ್ರಕ್ಕೆ ನಾನು ಸಲಿಂಗಕಾಮಿಯಲ್ಲ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಅಷ್ಟೇ ಅಲ್ಲ, ಇದೀಗ ಓವಿಯಾ ಲೈಂಗಿಕ ಶಿಕ್ಷಣ (sex education) , ಅತ್ಯಾಚಾರಕ್ಕೆ (rape) ತಡೆ ಮತ್ತು ವೇಶ್ಯಾವಾಟಿಕೆಯ (brothel) ಬಗ್ಗೆ ಅಷ್ಟೇ ಬಿಂದಾಸ್ ಉತ್ತರ ಕೊಟ್ಟು ಸುದ್ದಿಯಾಗಿದ್ದಾರೆ. ವೇಶ್ಯಾವಾಟಿಕೆಯನ್ನು ಕಾನೂನು ಬದ್ಧ ಮಾಡಿದರೆ ಅತ್ಯಾಚಾರವನ್ನು ತಡೆಗಟ್ಟುವುದಕ್ಕೆ ಸಾಧ್ಯ ಎಂದಿದ್ದಾರೆ ಓವಿಯಾ. ಲೈಂಗಿಕ ಶಿಕ್ಷಣವನ್ನು ಕಡ್ಡಾಯ ಮಾಡಬೇಕು. ಎಲ್ಲರೂ ಇಂದು ಮುಖವಾಡವನ್ನು ಧರಿಸಿ ಬದುಕುತ್ತಿದ್ದಾರೆ. ಪ್ರತಿಯೊಬ್ಬರಿಗೂ ಅನೇಕ ಆಸೆಗಳಿರುತ್ತವೆ. ಹಾಗೆಯೇ ಹಾರ್ಮೋನುಗಳು ಸಹ ಇವೆ. ಅನೇಕ ಜನರು ಸಂಸ್ಕೃತಿಯ ಹಿಂದೆ ಅಡಗಿದ್ದಾರೆ. ಅದು ಸತ್ಯವೂ ಹೌದು. ಎಲ್ಲರಿಗೂ ಲೈಂಗಿಕ ಆಸಕ್ತಿಗಳು ಇವೆ. ಅದನ್ನು ಅದುಮಿಟ್ಟುಕೊಂಡು ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ. ಮನುಷ್ಯರಿಗೆ ಸಹಜವಾದದ್ದು ಇರಲೇಬೇಕು. ಅವುಗಳನ್ನು ಕಾನೂನು ಬದ್ಧವಾಗಿ ಈಡೇರಿಸಿಕೊಳ್ಳುವ ಅವಕಾಶ ಸಿಕ್ಕರೆ ಆಗ ಅತ್ಯಾಚಾರಗಳಂತಹೂ ಹೀನ ಕೃತ್ಯಗಳೂ ನಡೆಯುವುದಿಲ್ಲ ಎಂದಿದ್ದಾರೆ. ನಿರೀಕ್ಷೆಯಂತೆಯೇ ಓವಿಯಾ ಹೇಳಿಕೆಗೆ ಪರ ವಿರೋಧ ಚರ್ಚೆಗಳೂ ಶುರುವಾಗಿವೆ.



