ನನ್ನ ಹೆಸರು ಕೇಳಿದರೇ ಮೋದಿ (Narendra Modi) ನಡುಗುತ್ತಾರೆ. ಮೋದಿಗೆ ನನ್ನ ಹೆಸರು ಕೇಳಿದರೆ ಭಯ ಎಂದಿದ್ದಾರೆ ಸಿದ್ದರಾಮಯ್ಯ(Siddaramaiah). ಸಿದ್ದರಾಮಯ್ಯ ಈ ಮಾತು ಹೇಳಿರೋದು ತೆಲಂಗಾಣದಲ್ಲಿ(Telangana). ತೆಲಂಗಾಣದಲ್ಲಿ ಇದೀಗ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಮುಂದಿನ ತಿಂಗಳು ಫಲಿತಾಂಶ ಬರಲಿದೆ. ಈ ಬಾರಿ ಸಮೀಕ್ಷೆಗಳಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ʻಗೆ ಗೆಲ್ಲುವ ಸೂಚನೆಗಳು ಕಂಡು ಬಂದಿವೆ. ಅದಕ್ಕೆಲ್ಲ ಕಾರಣ ಕರ್ನಾಟಕದಲ್ಲಿ ಕಂಡ ಭರ್ಜರಿ ಗೆಲುವು. ಗ್ಯಾರಂಟಿಗಳು ಮಾಡಿದ ಪರಿಣಾಮ. ಹೀಗಾಗಿಯೇ ಕರ್ನಾಟಕವನ್ನೂ ಮೀರಿಸಿದ ಗ್ಯಾರಂಟಿ ಘೋಷಿಸಿ (Declare a guarantee) ತೆಲಂಗಾಣ ಚುನಾವಣೆ ಎದುರಿಸುತ್ತಿರುವ ಕಾಂಗ್ರೆಸ್(Congress), ತೆಲಂಗಾಣದಲ್ಲಿ ಕರ್ನಾಟಕ ನಾಯಕರಿಗೆ ರತ್ನಗಂಬಳಿ ಹಾಸಿದೆ.
ನರೇಂದ್ರ ಮೋದಿ ಓರ್ವ ಸುಳ್ಳುಗಾರ. ಅವರು ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ 48 ಬಾರಿ ಭೇಟಿ ನೀಡಿ ಪ್ರಚಾರ ಮಾಡಿದ್ದರು. ಆದರೆ ಅವರು ಪ್ರಚಾರ ಮಾಡಿದಲ್ಲೆಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದು ತೆಲಂಗಾಣದಲ್ಲೂ ಪುನರಾವರ್ತನೆಯಾಗಲಿದೆ. ಮೋದಿ 100 ಬಾರಿ ತೆಲಂಗಾಣಕ್ಕೆ ಭೇಟಿ ನೀಡಿದರೂ ಬಿಜೆಪಿ ಇಲ್ಲಿ ಅಧಿಕಾರಕ್ಕೆ ಬರಲಾಗದು. ಮೋದಿಗೆ ಹೀಗಾಗಿಯೇ ಸಿದ್ದರಾಮಯ್ಯ ಹೆಸರು ಕೇಳಿದರೇ ನಡುಗುತ್ತಾರೆ ಎಂದಿದ್ದಾರೆ ಸಿದ್ದರಾಮಯ್ಯ. ಈ ಬಾರಿ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮತ್ತು ಬಿಆರ್‌ಸಿ ಎರಡೂ ಒಂದೇ. ಬಿಆರ್‌ಸಿ (BRC) ತೆಲಂಗಾಣದಲ್ಲಿ ಬಿಜೆಪಿಯ ಬಿ ಟೀಮ್ ಆಗಿ ಕೆಲಸ ಮಾಡುತ್ತಿದೆ. ತೆಲಂಗಾಣದ ಜನತೆ ಕೆಸಿಆರ್ ಮತ್ತು ಮೋದಿಯವರ ಮಕ್ಮಲ್ ಟೋಪಿಗೆ ಈ ಬಾರಿ ತಲೆ ಕೊಡುವುದಿಲ್ಲ . ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ತನ್ನ 5 ಭರವಸೆ ಈಡೇರಿಸಲು ಸಾಧ್ಯವಿಲ್ಲ. ಭರವಸೆ ಈಡೇರಿಸಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. ಆದರೆ ಅವರ ವಾದ ತಪ್ಪು ಎಂಬುದನ್ನು ನಾವು ಸಾಧಿಸಿ ತೋರಿಸಿದ್ದೇವೆ. ಅಧಿಕಾರಕ್ಕೆ ಬರುತ್ತಲೇ ನಾವು ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಜಾರಿಗೆ ತಂದಿದ್ದೇವೆ. ಹೀಗಾಗಿಯೇ ಮೋದಿಗೆ ನನ್ನ ಹೆಸರು ಕೇಳಿದಾಕ್ಷಣ ನಡುಕ ಉಂಟಾಗುತ್ತದೆ. ಇದೇ ಕಾರಣಕ್ಕೆ ಇತ್ತೀಚಿನ ಮಧ್ಯಪ್ರದೇಶ ಚುನಾವಣಾ ಪ್ರಚಾರದ ವೇಳೆಯೂ ನನ್ನ ಹೆಸರು ಪ್ರಸ್ತಾಪಿಸಿದ್ದರು. ಎಲ್ಲಿಯೇ ಹೋಗಲಿ ನನ್ನ ಹೆಸರು ಹೇಳುತ್ತಿರುವ ಮೋದಿಗೆ, ನನ್ನನ್ನ ಕಂಡರೆ ಭಯ ಇದೆ ಎಂದಿದ್ದಾರೆ.
ಬಿಜೆಪಿಯವರು ಪ್ರಧಾನಿ ಮೋದಿ ಬಂದು ಪ್ರಚಾರ ಮಾಡಿದರೆ ಗೆದ್ದು ಬಿಡುತ್ತೇವೆ ಎಂದುಕೊಂಡಿದ್ದಾರೆ. ಆದರೆ ಒಮ್ಮೆಯಲ್ಲ 100 ಬಾರಿ ಮೋದಿ ಬಂದು ಪ್ರಚಾರ ಮಾಡಿದರೂ ಬಿಜೆಪಿ ಗೆಲ್ಲುವುದಿಲ್ಲ. ಅಭ್ಯರ್ಥಿಗಳು ಮಾತ್ರ ತಮ್ಮ ಡೆಪಾಸಿಟ್ ಕಳೆದುಕೊಳ್ಳುತ್ತಾರೆ. ಇದಕ್ಕೆ ಉದಾಹರಣೆ ಎಂದರೆ ಕರ್ನಾಟಕದಲ್ಲಿ ಮೋದಿ ಪ್ರಚಾರ ಮಾಡಿದಲ್ಲೆಲ್ಲ ಬಿಜೆಪಿ ಸೋತಿದೆ. ಮೋದಿ ಕಿವಿ ಮೇಲೆ ಹೂವು ಹಾಗೂ ಮಕ್ಮಲ್ ಟೋಪಿ ಹಾಕುವುದರಲ್ಲಿ ನಿಸ್ಸೀಮರು. ನನ್ನ ಜೀವನದಲ್ಲಿ ಪ್ರಧಾನಿಯಷ್ಟು ಸುಳ್ಳು ಹೇಳುವವರನ್ನು ನಾನು ನೋಡಿಲ್ಲ ಎಂದಿರುವ ಸಿದ್ದರಾಮಯ್ಯ ಡಿಸೆಂಬರ್ 9 ನೇ ತಾರೀಕು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಪ್ರಮಾಣ ವಚನ ತೆಗೆದುಕೊಳ್ಳುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.



