ಅಯೋಧ್ಯೆಯ ರಾಮಮಂದಿರ ಹೋರಾಟ 500 ವರ್ಷಗಳ ನಂತರ ಫಲಿಸಿದೆ. ಕೆಲವು ಮುಸ್ಲಿಂ ಮುಖಂಡರು, ತಲೆಕೆಟ್ಟ ಮೌಲ್ವಿಗಳು ಅದೇ ಅಯೋಧ್ಯೆಯಲ್ಲಿ ಮತ್ತೊಮ್ಮೆ ಮಸೀದಿ ಕಟ್ಟುತ್ತೇವೆ ಎನ್ನುತ್ತಿದ್ದಾರಾದರೆ. ಆದರೆ.. ರಾಮಮಂದಿರದ ಗರ್ಭುಗುಡಿ ಸುತ್ತಲೂ ನಡೆಯುತ್ತಿರುವ ಕೆಲಸ, ಕಾಮಗಾರಿಗಳು ನಿರಂತರವಾಗಿ ನಡೆಯುತ್ತಲೇ ಇವೆ. ರಾಮಲಲ್ಲನ ದೇವಸ್ಥಾನ ಸಂಪೂರ್ಣವಾಗುವುದಕ್ಕೆ ಇನ್ನೂ ಕೆಲವು ವರ್ಷಗಳು ಬೇಕು. ಈ ನಡುವೆಯೇ ಕಾಶಿ ಮತ್ತು ಮಥುರಾದ ಪುರಾತತ್ವ ಇಲಾಖೆಯ ವರದಿಗಳು ಬಂದಿದ್ದು, ಆ ದೇವಸ್ಥಾನಗಳೂ ಮೂಲತಃ ಹಿಂದೂ ದೇವಾಲಯಗಳಾಗಿದ್ದವು ಎಂಬ ಸತ್ಯ ಹೊರಬಿದ್ದಿದೆ. ಹುಡುಕುತ್ತಾ ಹೋದರೆ.. ಭಾರತದ ಸುಮಾರು ೩೫ ಸಾವಿರ ದೇವಸ್ಥಾನಗಳನ್ನು ಔರಂಜಜೇಬನೊಬ್ಬನೇ ಧ್ವಂಸ ಮಾಡಿದ್ದ. ಉಳಿದ ಮುಸಲ್ಮಾನ ದೊರೆಗಳ ಲೆಕ್ಕ ಇನ್ನೂ ಇದೆ. ಹಾಗಾದರೆ.. ಇತಿಹಾಸದಲ್ಲಿ ಹಾಗೆ ನಾಮಾವಶೇಷವಾದ ಎಲ್ಲ ದೇಗುಲಗಳನ್ನು ಪುನರ್ ಪ್ರತಿಷ್ಠಾಪಿಸುವ, ಮರು ಸ್ಥಾಪಿಸುವ ಕೆಲಸ ಮಾಡಬೇಕಾ..? ಇದು ಹೊಸದೊಂದು ಸಮಸ್ಯೆಗೆ ಕಾರಣವಾಗುವುದಿಲ್ಲವೇ.. ಎಂಬ ಪ್ರಶ್ನೆಗೆ ಈಗ ಉತ್ತರ ಕೊಟ್ಟಿದ್ಧಾರೆ ರಾಮಜನ್ಮ ಭೂಮಿ ಸ್ವಾಮೀಜಿ.
ಕಾಶಿ ವಿಶ್ವನಾಥ ಮಂದಿರ, ಮಥುರಾ ಶ್ರೀಕೃಷ್ಮ ಮಂದಿರವನ್ನು ಮುಸ್ಲಿಮ್ ಬಾಂಧವರು ಶಾಂತಿಯುತವಾಗಿ ಹಿಂದೂಗಳಿಗೆ ಮರಳಿಸಿದರೆ ಮತ್ಯಾವ ಮಂದಿರವನ್ನು ಹಿಂದೂ ಸಮಾಜ ವಾಪಸ್ ಕೇಳುವುದಿಲ್ಲ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ವಾಮೀಜಿ ಗೋವಿಂದ್ ದೇವ್ ಗಿರಿ ಮಹಾರಾಜ್ ಹೇಳಿದ್ದಾರೆ. ಗುರು ಗೋವಿಂದ್ ಗಿರಿ ಮಹಾರಾಜ್ ಅವರ 75ನೇ ವರ್ಷದ ಹುಟ್ಟುಹಬ್ಬ ಪ್ರಯುಕ್ತ ಆಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ ದೇಶ ಒಗ್ಗಟ್ಟಾಗಿ ಮುಂದೆ ಸಾಗಬೇಕಿದೆ. ನಮ್ಮ ಸಾವಿರಾರು ದೇಗುಲ ಮೇಲೆ ಮಸೀದಿ ಕಾರ್ಯನಿರ್ವಹಿಸುತ್ತಿದೆ. ಇತಿಹಾಸವನ್ನು ಕೆದಕಲು ಹೋಗುತ್ತಿಲ್ಲ. ಕೇವಲ ಕಾಶಿ ಹಾಗೂ ಮಥುರಾ ಎರಡನ್ನು ಶಾಂತಿಯುತವಾಗಿ ಹಿಂದೂಗಳಿಗೆ ಮರಳಿಸಿ. ಇನ್ನುಳಿದ ಯಾವುದೇ ಮಂದಿರವನ್ನು ಮರಳಿ ಕೇಳುವುದಿಲ್ಲ ಎಂದು ಹೇಳಿದ್ದಾರೆ.
ಹಿಂದೂ ಧರ್ಮ 7 ಕ್ಷೇತ್ರ ಹಾಗೂ ಮೋಕ್ಷ ಧಾಮಗಳಲ್ಲಿ ಕೇವಲ 3 ಮಾತ್ರ ಕೇಳುತ್ತಿದ್ದೇವೆ. ಇದರಲ್ಲಿ ಆಯೋಧ್ಯೆಯಲ್ಲಿ ರಾಮ ವಿರಾಜಮಾನನಾಗಿದ್ದಾನೆ. ಇದೇ ರೀತಿ ಕಾಶಿ ವಿಶ್ವನಾಥ ಹಾಗೂ ಮಥುರಾ ಶ್ರೀಕೃಷ್ಣನ ಜನ್ಮಸ್ಥಾನ ಮಾತ್ರ ಮರಳಿ ಕೇಳುತ್ತಿದ್ದೇವೆ ಎಂದು ಮಹರಾಜ್ ಹೇಳಿದ್ದಾರೆ. ಹಿಂದಿನ ದಾಳಿ, ಇತಿಹಾಸವನ್ನು ಮೈಮೇಲೆ ಎಳೆದುಕೊಳ್ಳುವ ಅಗತ್ಯವಿಲ್ಲ. ಈ ದೇಶದಲ್ಲಿ ಹಿಂದೂ ಮುಸ್ಲಿಮ್ ಸಮುದಾಯಕ ಜೊತೆಯಾಗಿ ಸಾಗಬೇಕಿದೆ. ಹೀಗಾಗಿ ಶಾಂತಿಯುತವಾಗಿ ಪರಿಹಾರ ಅಗತ್ಯ. ನಮ್ಮ ಅತ್ಯಂತ ಪುಣ್ಯಕ್ಷೇತ್ರ ಎಂದು ನಂಬಿರುವ ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಡಿ. ಉಳಿದದ್ದರ ತಂಟೆಗೆ ಬರುವುದಿಲ್ಲ ಎಂಬ ಸಂದೇಶವನ್ನೂ ಗಿರಿ ಮಹರಾಜ್ ರವಾನಿಸಿದ್ದಾರೆ.
ಈ ರೀತಿಯ ಸಂದೇಶವನ್ನೂ ಇದಕ್ಕೂ ಮುನ್ನ ಹಲವರು ಕೊಟ್ಟಿದ್ದಾರದರೂ.. ಅದಕ್ಕೆ ಮುಸ್ಲಿಂ ಸಮಾಜ ಒಪ್ಪಿರಲಿಲ್ಲ. ಹಾಗೆ ನೋಡಿದರೆ.. ಔರಂಗಜೇಬ್ ಸೇರಿದಂತೆ ಮುಸ್ಲಿಂ ರಾಜರು ಹಿಂದೂಗಳ ಮೇಲೆ ಯಾವುದೇ ದಾಳಿ ದಬ್ಬಾಳಿಕೆ ಮಾಡಿಲ್ಲ ಎಂದು ವಾದಿಸುವವರೂ ಇದ್ಧಾರೆ. ಹೀಗಿರುವಾಗ.. ಗಿರಿರಾಜ್ ಮಹಾರಾಜರ ಸಂದೇಶವನ್ನು ಯಾವ ರೀತಿ ಸ್ವೀಕರಿಸಲಿದೆ ಎಂದು ಕಾದು ನೋಡಬೇಕು.



