ಕಮಲ್ ಹಾಸನ್ ಅವರ ಮಗಳಾಗಿರುವ, ಸ್ಟಾರ್ ನಟಿಯೂ ಆಗಿರುವ ಶೃತಿ ಹಾಸನ್ ಅವರಿಗೆ ತಾನು ಕಮಲ್ ಹಾಸನ್ ಮಗಳು ಎಂದು ಹೇಳಿಕೊಳ್ಳೋಕೆ ನಾಚಿಕೆ ಆಗ್ತಾ ಇತ್ತಂತೆ. ತಮಿಳುಚಿತ್ರರಂಗದ ಸ್ಟಾರ್ ನಟನ ಮಗಳಾಗಿಯೂ ಇಂತಹ ನಾಚಿಕೆ ಏಕೆ ಅನ್ನೋದಕ್ಕೆ ಶೃತಿ ಹಾಸನ್ ಕಾರಣವನ್ನೂ ಕೊಟ್ಟಿದ್ದಾರೆ. ಇತ್ತೀಚೆಗೆ ತಾನು ಕಮಲ್ ಹಾಸನ್-ಸಾರಿಕಾ ಮಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳೋದಾಗಿ ಹೇಳಿದ್ದ ಶೃತಿ ಹಾಸನ್, ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಕಮಲ್ ಹಾಸನ್ ಹೆಸರು ಹೇಳಿಕೊಳ್ಳೋಕೆ ಸಂಕೋಚ, ನಾಚಿಕೆ ಆಗೋದಕ್ಕೆ ಕಾರಣ ಅಪ್ಪ ಸ್ಟಾರ್ ನಟ ಎಂದಲ್ಲ, ಕಮಲ್ ಹಾಸನ್ ಅವರಿಗಿದ್ದ ಅಫೇರುಗಳು.
ಏಕೆಂದರೆ ಕಮಲ್ ಹಾಸನ್ ತೆರೆಯ ಮೇಲೆ ಸಜ್ಜನರಾದರೂ, ಇಬ್ಬರನ್ನು ಮದುವೆಯಾಗಿದ್ದಾರೆ. ಐವರು ನಟಿಯರ ಜೊತೆ ರಿಲೇಷನ್‌ಶಿಪ್ ಇಟ್ಟುಕೊಂಡಿದ್ದ ನಟ. ಕಮಲ್ ಹಾಸನ್ ಬದುಕಿನಲ್ಲಿ ಲವ್, ರೊಮ್ಯಾನ್ಸ್, ಬ್ರೇಕಪ್ ಸರ್ವೇಸಾಧಾರಣ.
ವಾಣಿ ಗಣಪತಿಯನ್ನು ಮದುವೆಯಾಗುವ ಮುನ್ನ ಕಮಲ್ ಹಾಸನ್ ನಟಿ ಶ್ರೀವಿದ್ಯಾ ಅವ್ರೊಂದಿಗೆ ರಿಲೇಷನ್ ಶಿಪ್ ಹೊಂದಿದ್ದರು. ಮದುವೆಯಾದ ಮೇಲೆ ಸಾರಿಕಾಳೊಂದಿಗೆ ಡೇಟಿಂಗ್ ಮಾಡಿದ್ರು. ಸ್ಟಾರ್ ನಟ ಕಮಲ್ ಹಾಸನ್ ಅವರ ಪ್ರೀತಿ, ಅಫೇರ್ ಮತ್ತು ಮದುವೆ ವಿಚಾರಗಳು ನಟನ ಮಗಳು ನಟಿ ಶ್ರುತಿ ಹಾಸನ್ ಅವರ ಮೇಲೂ ಪರಿಣಾಮ ಬೀರಿತ್ತು. ಕಮಲ್ ಹಾಸನ್ ಇಬ್ಬರನ್ನು ಮದುವೆ ಆಗಿದ್ರು. 5 ಮಂದಿ ಜೊತೆ ಆಫೇರ್ ಹೊಂದಿದ್ರು ಎನ್ನಲಾಗ್ತಿದೆ. ತಮಿಳು. ತೆಲುಗು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರುವ ಶ್ರುತಿ ಹಾಸನ್, ಈ ಹಿಂದೆ ತನ್ನ ತಂದೆಯ ಹೆಸರನ್ನು ಕೇಳಿದ್ರೆ ಸಾಕು ಕೆರಳುತ್ತಿದ್ರಂತೆ. ಕೆಲವೊಮ್ಮೆ ತನಗೆ ಕಮಲ್ ಹಾಸನ್ ಯಾರು ಅನ್ನೋದೇ ತಿಳಿಯದಂತೆ ವರ್ತಿಸುತ್ತಿದ್ರಂತೆ.
ಹೇ, ನೀವು ಕಮಲ್ ಅವರ ಮಗಳು ಮತ್ತು ಯಾರಾದರೂ ನನ್ನನ್ನು ಕೇಳಿದಾಗ, ನಾನು ನನಗೆ ಗೊತ್ತಿಲ್ಲವೆಂಬಂತೆ ವರ್ತಿಸುತ್ತಿದ್ದೆ. ನನ್ನ ತಂದೆ ಡಾ. ರಾಮಚಂದ್ರನ್ ಎಂದು ನಮ್ಮ ಡೆಂಟಲ್ ಡಾಕ್ಟರ್ ಹೆಸರು ಹೇಳ್ತಿದ್ದೆ. ನಾನು ಪೂಜಾ ರಾಮಚಂದ್ರನ್ ಎಂದು ಹೆಸರು ಬದಲಿಸಿಕೊಂಡ್ತಿದ್ದೆ ಎಂದು ಶ್ರುತಿ ಹಾಸನ್ ಹೇಳಿದ್ರು.
ತನ್ನ ತಂದೆ ಸಾಮಾನ್ಯ ಸ್ಟಾರ್ ಅಲ್ಲ. ಆದ್ರೆ ದೊಡ್ಡ ನಟ ಎಂದು ತನಗೆ ಯಾವಾಗಲೋ ಗೊತ್ತಿತ್ತು. ಚೆನ್ನೈನಲ್ಲಿ ವಾಸಿಸುತ್ತಿರುವಾಗ ಜನಪ್ರಿಯತೆಯಿಂದ ತಪ್ಪಿಸಿಕೊಳ್ಳುವುದು ನನಗೆ ಸಾಕಷ್ಟು ಸವಾಲಾಗಿತ್ತು. ಇಂದು ಕಮಲ್ ಹಾಸನ್ ಇಲ್ಲದೆ ಶ್ರುತಿ ಹಾಸನ್ ನನ್ನನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ನಟಿ ಶ್ರುತಿ ಹಾಸನ್ ಕಮಲ್ ಹಾಸನ್ ಬಗ್ಗೆ ಮಾತಾಡಿದ್ದಾರೆ.



