ದೊಡ್ಮನೆಯಲ್ಲಿ ಮೊದಲ ಬಾರಿ ಕೇಳಿ ಬಂದ ಡೈವೋರ್ಸ್ ವಿಷಯದಲ್ಲಿ ನಟಿ ಸಪ್ತಮಿ ಗೌಡ ಹೆಸರೂ ಕೇಳಿ ಬರ್ತಾ ಇದೆ.
ಯುವ ರಾಜ್ ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಅವರ ಡೈವೋರ್ಸ್ ವಿಷಯದಲ್ಲಿ ನಟಿ ಸಪ್ತಮಿ ಗೌಡ ಹೆಸರು ಕೂಡಾ ತಗುಲಿ ಹಾಕಿಕೊಂಡಿದೆ. ಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿಯೂ ಕೂಡಾ ಸಪ್ತಮಿ ಗೌಡ ಹೆಸರು ಇದೆ.
ಸಪ್ತಮಿ ಗೌಡ ಹಾಗೂ ಯುವ ನಡುವೆ ಅಫೇರ್ ಇದೆ. 2023 ಡಿಸೆಂಬರ್ʻನಲ್ಲಿ ನಾನು ಅಮೇರಿಕಾದಿಂದ ಭಾರತಕ್ಕೆ ವಾಪಸ್ ಬಂದಿದ್ದಾಗ ಖಾಸಗಿ ಹೋಟೆಲ್ ರೂಮ್‌ನಲ್ಲಿ ಸಪ್ತಮಿ ಗೌಡ ಜೊತೆ ಯುವ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು ಎಂದೆಲ್ಲ ಶ್ರೀದೇವಿ ಆರೋಪಿಸಿದ್ದರು. ಈ ಸಂಬಂಧ ಶ್ರೀದೇವಿ ಭೈರಪ್ಪ ವಿರುದ್ಧ ಸಪ್ತಮಿ ಗೌಡ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಸಪ್ತಮಿ ಗೌಡ ವಿರುದ್ಧ ಶ್ರೀದೇವಿ ಭೈರಪ್ಪ ಮಾನಹಾನಿಕರ ಹೇಳಿಕೆ ನೀಡದಂತೆ ನ್ಯಾಯಾಲಯ ನಿರ್ಬಂಧಕಾಜ್ಞೆ ಆದೇಶ ನೀಡಿತ್ತು. ಈ ನಡುವೆಯೇ ನಟಿ ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ.
ವೈರಲ್ ಆಗಿರುವ ಆಡಿಯೋದಲ್ಲಿ.. ಯುವತಿಯೊಬ್ಬಳು ಅಳುತ್ತಾ ʻನನ್ನ ಸೈಡ್ ಆಫ್ ದಿ ಸ್ಟೋರಿ ಕೇಳಿ.. ನನಗೊಂದು ಚಾನ್ಸ್ ಕೊಡಿ.. ನನ್ನಿಂದ ತಪ್ಪಾಗಿದೆʼ ಎಂದು ಕೇಳುತ್ತಾರೆ. ಚಾನ್ಸ್ ಕೊಡಿ, ತಪ್ಪಾಗಿದೆ ಎಂದು ಕೇಳುತ್ತಿರುವುದು ನಿರ್ಮಾಪಕರಿಗೆ ಎನ್ನಲಾಗಿದೆ. ಆ ನಿರ್ಮಾಪಕರು ಯಾರು ಎನ್ನುವುದು ಈಗಿರುವ ಪ್ರಶ್ನೆ.
ಹಾಯ್ ಸರ್.. ಇವಾಗ ನಿಮಗಾಗಲೇ ವಿಷಯ ಗೊತ್ತಾಗಿರುತ್ತೆ ಏನಾಗಿದೆ ಏನು ಅಂತ. ನನ್ನ ಸೈಡ್ ಆಫ್ ದಿ ಸ್ಟೋರಿ ಹೇಳೋಕೆ ನಾನಗೊಂದು ಚಾನ್ಸ್ ಕೊಡಿ. ನಾನು ತಪ್ಪು ಮಾಡಿಲ್ಲ ಅಂತ ಹೇಳ್ತಾ ಇಲ್ಲ. ಖಂಡಿತವಾಗಿಯೂ ನನ್ನಿಂದ ತಪ್ಪಾಗಿದೆ. ಇಲ್ಲ ಅಂತ ಹೇಳ್ತಿಲ್ಲ. ನಾನು ನನ್ನ ಅಮ್ಮನ ಮೇಲೆ ಆಣೆ ಮಾಡಿ ಹೇಳ್ತೀನಿ, ಬಾಬಾ ಮೇಲೆ ಆಣೆ ಮಾಡಿ ಹೇಳ್ತೀನಿ.. ಯಾವತ್ತೂ ನಾನು ಗುರುಗೆ (ಯುವ ರಾಜ್‌ಕುಮಾರ್) ನಿನ್ನ ಮದುವೆ ಬಿಟ್ಟುಬಿಟ್ಟು ನನ್ನ ಜೊತೆ ಬಾ ಅಂತ ಹೇಳಿಲ್ಲ. ಬೇಕಾದರೆ ನೀವು ಅವನನ್ನೂ ಕೇಳಬಹುದು.
ಇದನ್ನ ವರ್ಕೌಟ್ ಮಾಡು, ಇದು ತಪ್ಪಾಗುತ್ತೆ, ಬೇಡ ಅಂತ ನಾನು ತುಂಬಾ ಸಲಿ ಹೇಳಿದ್ದೀನಿ ಸರ್. ಹೌದು, ಇದು ನಿಮ್ಮ ಸೆಟ್‌ನಲ್ಲಿ ಆಗಿದ್ದು. ಅದಕ್ಕೆ ನಿಮಗೆ ನಮ್ಮ ಮೇಲೆ ಎಷ್ಟೇ ಕೋಪ ಇರಬಹುದು ಸರ್. ಪರ್ವಾಗಿಲ್ಲ. ನನ್ನ ಮನೆಯಲ್ಲೂ ನಾನು ಪ್ರಾಮಿಸ್ ಮಾಡಿದ್ದೇನೆ ನಾನು ಮಾತಾಡಲ್ಲ ಅಂತ.
ಗುರುಗೆ (ಯುವ ರಾಜ್‌ಕುಮಾರ್) ಇದು ಫಸ್ಟ್ ಸಿನಿಮಾ. ನನಗೂ ಇಂಪಾರ್ಟೆಂಟ್. ಎಲ್ಲರೂ ಇಷ್ಟು ದುಡ್ಡು ಹಾಕಿ ಕಷ್ಟ ಪಟ್ಟು ಸಿನಿಮಾ ಮಾಡಿದ್ದಾರೆ. ಅದಕ್ಕೆ 100% ನಾನು ಮಧ್ಯೆ ಬರಲ್ಲ ಸರ್. ನಾನೇನೂ ಆ ತರಹ ಮಾಡೋಕೆ ಹೋಗಲ್ಲ. ಕಾಂಟ್ಯಾಕ್ಟ್ ಮಾಡಲ್ಲ, ಏನೂ ಮಾಡಲ್ಲ ಅಂತ ನಾನು ಹೇಳಿದ್ದೀನಿ ಸರ್.
ಗುರುಗೆ (ಯುವ ರಾಜ್‌ಕುಮಾರ್) ಇದು ಫಸ್ಟ್ ಸಿನಿಮಾ. ನನಗೂ ಇಂಪಾರ್ಟೆಂಟ್. ಎಲ್ಲರೂ ಇಷ್ಟು ದುಡ್ಡು ಹಾಕಿ ಕಷ್ಟ ಪಟ್ಟು ಸಿನಿಮಾ ಮಾಡಿದ್ದಾರೆ. ಅದಕ್ಕೆ 100% ನಾನು ಮಧ್ಯೆ ಬರಲ್ಲ ಸರ್. ನಾನೇನೂ ಆ ತರಹ ಮಾಡೋಕೆ ಹೋಗಲ್ಲ. ಕಾಂಟ್ಯಾಕ್ಟ್ ಮಾಡಲ್ಲ, ಏನೂ ಮಾಡಲ್ಲ ಅಂತ ನಾನು ಹೇಳಿದ್ದೀನಿ ಸರ್.
ನೀವು ಬೈಯ್ಯುತ್ತೀರೋ.. ಏನೋ.. ಅದನ್ನ ನಾನು ಸ್ವೀಕರಿಸುತ್ತೇನೆ. ಸಪ್ತಮಿ ಇಷ್ಟು ಕೆಟ್ಟವಳಾಗೋಕೆ ಸಾಧ್ಯನಾ ಅಂತ ಯಾವತ್ತಾದರೂ ಒಂದು ಸಲಿ ಅನಿಸಿದ್ದರೆ ನನಗೆ ಒಂದು ಚಾನ್ಸ್ ಬೇಕು. ನನ್ನ ಸೈಡ್ ಆಫ್ ದಿ ಸ್ಟೋರಿಯನ್ನ ನಾನು ಹೇಳೋಕೆ ಅಷ್ಟೇನೇ. ನೀವು ಓಕೆ ಅಂದ್ರೆ ಹೇಳಿ ಸರ್. ನಾನು ಬಂದು ಮಾತಾಡುತ್ತೇನೆ.
ಹೌದು ಸರ್. ನನ್ನಿಂದ ಇನ್ನೊಬ್ಬರಿಗೆ ನೋವಾಗಿದೆ. ಎಲ್ಲಾ ಆಗಿದೆ. ಎಲ್ಲವನ್ನೂ ನಾನು ಒಪ್ಪಿಕೊಳ್ತೀನಿ. ತಪ್ಪೇ ನಂದು. ಇಲ್ಲ ಅಂತ ಹೇಳ್ತಾ ಇಲ್ಲ. ಆದರೆ, ನಿಜವಾಗಿಯೂ ನಾನು ಇದನ್ನ ನಂಬಿ ಮಾಡಿದ್ದು. ಗುರು (ಯುವ ರಾಜ್‌ಕುಮಾರ್) ನನ್ನ ಹತ್ತಿರ ಬಂದು ಅಷ್ಟು ಹೇಳಿಕೊಂಡ ಮೇಲೆ ನಾನು ಅವನನ್ನ ನಂಬಿ ಮಾಡಿದ್ದು. ಇಲ್ಲಾಂದ್ರೆ ನಾನು… ಸಾರಿ ಸರ್. ಜಸ್ಟ್ ಚಾನ್ಸ್ ಕೇಳ್ತಿದ್ದೀನಿ ಸರ್.
ಇದು ಆಡಿಯೋದಲ್ಲಿರುವ ಮಾತಿನ ಒಟ್ಟಾರೆ ಸಾರಾಂಶ. ಹೌದು ಇದು ನನ್ನದೇ ಧ್ವನಿ ಎಂದು ಸಪ್ತಮಿ ಗೌಡ ಸ್ಪಷ್ಟನೆಯನ್ನೂ ಕೊಟ್ಟಿಲ್ಲ. ಅಲ್ಲ, ಇದು ಇನ್ಯಾರೋ ಸೃಷ್ಟಿ ಮಾಡಿರುವ ಸುಳ್ಳು ಆಡಿಯೋ ಎಂದು ನಿರಾಕರಿಸಿಯೂ ಇಲ್ಲ. ಆ ನಿರ್ಮಾಪಕರು ಯಾರು ಎಂಬ ಬಗ್ಗೆಯೂ ಪ್ರಶ್ನೆಗಳಿವೆ. ಇನ್ನು ರಾಘವೇಂದ್ರ ರಾಜಕುಮಾರ್, ಯುವ ಸೇರಿದಂತೆ ಅವರ ಕುಟುಂಬದಿಂದಲೂ ಸ್ಪಷ್ಟನೆ ಬಂದಿಲ್ಲ.
ಒಂದು ಮೂಲದ ಪ್ರಕಾರ ಈ ಮಾತು ಕತೆ ನಡೆದಿರುವುದು ಯುವ ಚಿತ್ರದ ಪ್ರೊಡ್ಯೂಸರ್ ವಿಜಯ್ ಕಿರಗಂದೂರು ಜೊತೆ ಎನ್ನಲಾಗಿದೆ. ವಿಜಯ್ ಅವರು ಪುನೀತ್ ಅವರ ಮೇಲೆ ಇದ್ದ ಪ್ರೀತಿಗಾಗಿಯೇ ಯುವ ಸಿನಿಮಾ ಪ್ರೊಡ್ಯೂಸ್ ಮಾಡಿದ್ದರು. ಆದರೆ, ಯುವ ಆ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ ಎಂದು ಬೇಜಾರು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳ ಕಾರಣದಿಂದಾಗಿಯೇ ವಿಜಯ್ ಕಿರಗಂದೂರು ಯುವ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುವುದಕ್ಕೆ ನಿರಾಸಕ್ತಿ ತೋರಿಸಿದ್ದರು ಎನ್ನಲಾಗಿದೆ.



