ಡಾ.ರಾಜ್ (Dr.Rajkumar) ನಟಿಸಿದಂತೆ ವಿಭಿನ್ನ ಚಿತ್ರಗಳಲ್ಲಿ, ಪಾತ್ರಗಳಲ್ಲಿ ನಟಿಸಬೇಕು. ಅವರಂತೆಯೇ ವ್ಯಕ್ತಿತ್ವ ಇಟ್ಟುಕೊಳ್ಳಬೇಕು. ಅವರಂತೆಯೇ ಸಾಧನೆ ಮಾಡಬೇಕು ಅನ್ನೋ ಕನಸು ಒಬ್ಬಿಬ್ಬರದ್ದಲ್ಲ. ಹಲವರು ಆ ರೀತಿಯ ಕನಸು ಇಟ್ಟುಕೊಂಡಿರುತ್ತಾರೆ. ಅಂತಹವರಲ್ಲಿ ದುನಿಯಾ ವಿಜಯ್ (Dunia Vijay) ಕೂಡಾ ಒಬ್ಬರು. ಅದ್ಭುತ ಮೈಕಟ್ಟು ಇರುವ, ಸಿಕ್ಸ್ʻಪ್ಯಾಕ್ (six pack) ದೇಹ ಹೊಂದಿರುವ ದುನಿಯಾ ವಿಜಯ್ ಅವರಿಗೆ ಯೋಗ ಮಾಡುವ ಆಸೆ ಇದೆಯಂತೆ. ಅದೂ ಡಾ.ರಾಜ್ ಅವರಂತೆಯೇ ಯೋಗ ಮಾಡುವ ಆಸೆ. ಇದೆಲ್ಲವನ್ನೂ ದುನಿಯಾ ವಿಜಯ್ ಫೈಟರ್ (Fighter) ಅನ್ನೋ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡರು.
‘ಮರಿ ಟೈಗರ್’ ವಿನೋದ್ ಪ್ರಭಾಕರ್ (Vinod Prabhakar) ಅಭಿನಯದ ‘ಫೈಟರ್’ ಸಿನಿಮಾವು ಇದೇ ಅಕ್ಟೋಬರ್ 6ರಂದು ತೆರೆಗೆ ಬರುತ್ತಿದೆ. ಫೈಟರ್ ಸಿನಿಮಾಗೆ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ದುನಿಯಾ ವಿಜಯ್ ಟೈಗರ್ ಪ್ರಭಾಕರ್ (tiger prabhakar) ಬಂದ್ರೆ ಒಂದು ಹುಲಿನೇ ಬರ್ತಾ ಇದೆ ಅನ್ನಿಸೋದು..’ ಎಂದು ಹಳೆಯ ದಿನಗಳ ಮೆಲುಕು ಹಾಕಿದರು.
ಸ್ಕೂಲ್ನಲ್ಲಿ ಇರುವಾಗ ಅಭಿಮಾನ್ ಸ್ಟುಡಿಯೋದಲ್ಲಿ ‘ರಣಭೇರಿ’ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಟೈಗರ್ ಪ್ರಭಾಕರ್, ಅಂಬರೀಷ್ (ambareesh) ಮತ್ತು ಶಂಕರ್ ನಾಗ್ (Shankar nag) ಒಟ್ಟಿಗೇ ನಟಿಸಿದ್ದ ಸಿನಿಮಾ ಅದು. ಅಲ್ಲಿ ಮೊದಲ ಬಾರಿಗೆ ಟೈಗರ್ ಪ್ರಭಾಕರ್ ಅವರನ್ನು ಅಲ್ಲಿ ನೋಡಿದ್ದೆ. ಅಲ್ಲಿ ಹೋಗಿದ್ದಾಗ 2-3 ಗಂಟೆ ಪ್ರಭಾಕರ್ ಸರ್, ಅಂಬರೀಶಣ್ಣ, ಶಂಕರ್ ನಾಗ್ ಅವರನ್ನ ಒಟ್ಟಿಗೆ ನೋಡಿದ್ದೆ. ಪ್ರಭಾಕರ್ ಸರ್ ಫೈಟ್ ಮಾಡ್ತಿದ್ದ ಸ್ಟೈಲ್ನ ಇದುವರೆಗೂ ಯಾರಿಂದಲೂ ರೀಚ್ ಮಾಡೋಕೆ ಸಾಧ್ಯ ಆಗಿಲ್ಲ. ಅವರು ನಡ್ಕೊಂಡು ಬರ್ತಾ ಇದ್ರೆ, ಒಂದು ಹುಲಿ ಬರ್ತಾ ಇದೆ, ನಮ್ಮನ್ನು ತಿಂದುಬಿಡುತ್ತದೆ ಅನ್ನಿಸೋದು.. ಎಂದು ಹಳೆಯ ನೆನಪಿನ ಬುತ್ತಿಗೆ ಜಾರಿದರು ದುನಿಯಾ ವಿಜಯ್. ನನಗೆ ಎರಡು ಆಸೆ ಇದೆ. ಒಂದು ಟೈಗರ್ ಪ್ರಭಾಕರ್ ಅವರ ಥರ ಫೈಟ್ ಮಾಡೋದು, ಇನ್ನೊಂದು ಅಣ್ಣಾವ್ರ ಥರ ಯೋಗ ಮಾಡಬೇಕು ಅನ್ನೋದು ಎಂದು ಆಸೆ ಹೇಳಿಕೊಂಡ ದುನಿಯಾ ವಿಜಯ್, ಕಾಮನಬಿಲ್ಲು ಸಿನಿಮಾದಲ್ಲಿನ ಯೋಗ ಮಾಡುವ ದೃಶ್ಯ ನೋಡಿದ ದಿನದಿಂದಲೂ ನನಗೆ ಅವರಂತೆಯೇ ಯೋಗ ಮಾಡುವ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ.
ಪ್ರಭಾಕರ್ ಅವರ ಮಗ ವಿನೋದ್ ಅವರಿಗಿಂತಲೂ ಮೊದಲೇ ನಾನು ಪ್ರಭಾಕರ್ ಅವರಿಗೆ ಫ್ಯಾನ್ ಎಂದು ಹೇಳಿಕೊಂಡರು. ವಿನೋದ್ ಹತ್ತಿರ ಇದ್ದರೆ ಪ್ರಭಾಕರ್ ಅವರೇ ಹತ್ತಿರ ಇದ್ದಾರೇನೋ ಎಂಬ ಫೀಲಿಂಗ್ ಅನ್ನೋದನ್ನೂ ಹೇಳಿಕೊಂಡ್ರು. ಅಂದಹಾಗೆ ದುನಿಯಾ ವಿಜಯ್ ಜಂಗ್ಲಿ ಸಿನಿಮಾದಲ್ಲಿ ಪ್ರಭಾಕರ್ ಅವರ ಅಭಿಮಾನಿಯಾಗಿ ನಟಿಸಿದ್ದಾರೆ.
ಸ್ಯಾಂಡಲ್ವುಡ್ ನಟ, ಮರಿ ಟೈಗರ್ ವಿನೋದ್ ಪ್ರಭಾಕರ್ ನಾಯಕರಾಗಿ, ಲೇಖಾಚಂದ್ರ ನಾಯಕಿಯಾಗಿ ನಟಿಸಿರುವ ಫೈಟರ್ ಚಿತ್ರ ಇದೇ ವಾರ ರಿಲೀಸ್ ಆಗ್ತಿದೆ. ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಾಣದ ಚಿತ್ರಕ್ಕೆ ನೂತನ್ ಉಮೇಶ್ ನಿರ್ದೇಶಕ.



