ನಾನೂ ಕೂಡಾ ನಿಮ್ಮಂತೆಯೇ ಪುನೀತ್ ರಾಜ್`ಕುಮಾರ್ (Dr. Punetth Rajkumar) ಅವರ ಅಭಿಮಾನಿ. ರಾಜ್ ಬಿ.ಶೆಟ್ಟಿ (Raj B Shety) ಹೇಳುವುದಕ್ಕೆ ಕಾರಣ ಟೋಬಿ (Toby) ಚಿತ್ರದ ಪ್ರಚಾರ. ಇದೇ ಶುಕ್ರವಾರ ಟೋಬಿ ರಿಲೀಸ್ ಆಗುತ್ತಿದೆ. ರಾಜ್ ಬಿ.ಶೆಟ್ಟಿಯವರು(Raj B Shety) ಪುನೀತ್ (Dr. Punetth Rajkumar) ಅವರನ್ನು ಮರೆಯುವಂತೆಯೇ ಇಲ್ಲ. ಅದಕ್ಕೆ ಕಾರಣವೂ ಇದೆ. ಡಾ.ರಾಜ್ ಕುಮಾರ್ (Dr. RajKumar) ಅವರ ಅಭಿಮಾನಿಯಾಗಿರುವ ರಾಜ್ ಬಿ.ಶೆಟ್ಟಿ, ಅವರ ಅಭಿಮಾನಿಯಾಗಿ.. ಡಾ.ರಾಜ್ ಅವರನ್ನೂ ಒಂದು ಪಾತ್ರವನ್ನಾಗಿಸಿ ಒಂದು ಮೊಟ್ಟೆಯ ಕಥೆ (Ondu Motteya Kathe) ಸಿನಿಮಾ ಮಾಡಿದ್ದರು. ಒಂದು ಮೊಟ್ಟೆಯ ಕಥೆ ಚಿತ್ರ ಮಾಡಿದಾಗ ಅಪ್ಪು (Appu) ಸರ್ ಅವರಿಗೆ ನನ್ನ ಪರಿಚಯವೂ ಇರಲಿಲ್ಲ. ಅದರೆ ಸಿನಿಮಾ ನೋಡಿ ಇಷ್ಟವಾಗಿ ಚಿತ್ರವನ್ನು ಪ್ರಚಾರ ಮಾಡಿಕೊಟ್ಟಿದ್ದರು ಎಂದು ರಾಜ್ ಬಿ.ಶೆಟ್ಟಿ ಸದಾ ನೆನೆಯುತ್ತಲೇ ಇರುತ್ತಾರೆ. ಇದೀಗ ಟೋಬಿ ಚಿತ್ರದ ಪ್ರಚಾರ ಕೈಗೆತ್ತಿಕೊಂಡಿರುವ ರಾಜ್ ಬಿ ಶೆಟ್ಟಿ ಹೊಸಪೇಟೆಯಲ್ಲಿ ಪುನೀತ್ ಪುತ್ಥಳಿ ಎದುರು ಸಿನಿಮಾ ಪ್ರಚಾರ ಮಾಡಿದ್ದಾರೆ.
ಹೊಸಪೇಟೆಯಲ್ಲಿ ಬೈಕ್ ರ್ಯಾಲಿ ಟೋಬಿ ತಂಡವು ಭರ್ಜರಿಯಾಗಿ ಪ್ರಮೋಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಟ ರಾಜ್ ಬಿ. ಶೆಟ್ಟಿಗೆ ಅದ್ಧೂರಿಯಾಗಿ ಸ್ವಾಗತಿಸುವ ಮೂಲಕ ಹೊಸಪೇಟೆಯ ಕಾಲೇಜು ರಸ್ತೆಯಿಂದ ಡಾ. ಪುನೀತ್ ರಾಜ್ಕುಮಾರ್ ವೃತ್ತದವರೆಗೆ ಬೈಕ್ ರ್ಯಾಲಿ ಮಾಡಲಾಯಿತು. ನಂತರ ಡಾ. ಪುನೀತ್ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಮಾಡಲಾಯಿತು. ಈ ವೇಳೆ ರಾಜ್ ಬಿ. ಶೆಟ್ಟಿ ಡಾ. ಪುನೀತ್ ರಾಜ್ಕುಮಾರ್ ಪುತ್ಥಳಿಗೆ ಕೇಸರಿ, ಬಿಳಿ, ಹಸಿರು ಬಣ್ಣದ ಮಾಲೆಯನ್ನು ಮಾಲಾರ್ಪಣೆ ಮಾಡಿ, ಹೊಸಪೇಟೆ ಜನಕ್ಕೆ ನಾನು ಅಭಾರಿಯಾಗಿದ್ದೇನೆ. ಡಾ. ಪುನೀತ್ ರಾಜ್ಕುಮಾರ್ ಅವರ ಅಚ್ಚು ಮೆಚ್ಚಿನ ಊರಿದು. ಯಾರು ಕೈ ಬಿಟ್ರೂ ಹೊಸಪೇಟೆ ಜನ ಕೈ ಬಿಡೋಲ್ಲಾ ಅಂದಿದ್ರು ಪುನೀತ್. ಹೊಸಪೇಟೆ ಜನರಿಗೆ ನಾವು ಅಭಾರಿಯಾಗಿದ್ದೇವೆ. ಪುನೀತ್ ರಾಜ್ಕುಮಾರ್ ಅವರ ಪುತ್ಥಳಿಯ ಕೈ ಹಿಡಿದ್ರೆ, ಇನ್ನೂ ಅವರದ್ದೇ ಕೈ ಹಿಡಿದ ನೆನೆಪು ಬರ್ತದೆ. ಅವರು ನನ್ನ ಕೈ ಹಿಡಿದಿದ್ದು ನೆನಪಾಗುತ್ತದೆ. ನನ್ನ ಮೊದಲ ಚಿತ್ರ ಒಂದು ಮೊಟ್ಟೆಯ ಕಥೆ ಗೆದ್ದಾಗ ಸಂಭ್ರಮ ಪಟ್ಟದ್ದು ನಮಗೆ ನೆನಪು ಇನ್ನೂ ಹಾಗೆ ಇದೆ ಎಂದು ಹೇಳಿದರು.
ಪುನೀತ್ ಅವರ ಸಾವಿರಾರು ಅಭಿಮಾನಿಗಳಲ್ಲಿ ನಾನೂ ಒಬ್ಬ ಎಂದು ರಾಜ್ ಬಿ.ಶೆಟ್ಟಿ ಶ್ರಾವಣ ಮಾಸದಲ್ಲಿ ಮಾರಿ ಹಬ್ಬ ಮಾಡೋಕೆ ಬರುತ್ತಿದ್ದಾರೆ. ಇದೇ ಆಗಸ್ಟ್ 25ಕ್ಕೆ ವರಮಹಾಲಕ್ಷ್ಮಿ ಹಬ್ಬ. ಆ ದಿನ ಟೋಬಿ ಬೆಳ್ಳಿತೆರೆ ಮೇಲೆ ಎಂಟ್ರಿ ಕೊಡ್ತಿದೆ.



