ಪ್ರಶ್ನೆ ಕೇಳೋಕೆ ನೀನ್ಯಾರು..? ನಿನಗೂ ನನಗೂ ಏನು ಸಂಬಂಧ..? ನಿರ್ಮಾಪಕ ಕುಮಾರ್ ಅವರಿಗೆ ಧೈರ್ಯ ಹೇಳಿದ್ದರಲ್ಲಿ ತಪ್ಪೇನಿದೆ? ಸ್ನೇಹಿತರಿಗೆ ಧೈರ್ಯ ಹೇಳಬಾರದಾ..? ಇಷ್ಟಕ್ಕೂ ನನ್ನ ಸಿನಿಮಾ ವಿಚಾರದಲ್ಲಿ ನಿಮ್ಮ ಉಸಾಬರಿ ಏಕೆ.. ಸೂರಪ್ಪ ಬಾಬು ಚಂದ್ರಚೂಡ್ (ChandraChud) ಅವರಿಗೆ ಮುಟ್ಟಿ ನೋಡಿಕೊಳ್ಳುವಂತ ಪ್ರಶ್ನೆ ಹಾಕಿದ್ದಾರೆ.
ಸುದೀಪ್ (Kichcha Sudeep) ಮತ್ತು ಕುಮಾರ್ ನಡುವಿನ ಸಂಘರ್ಷಕ್ಕೆ ಸೂರಪ್ಪ ಬಾಬು ಕಾರಣ ಎಂದು ವೀರಕಪುತ್ರ ಶ್ರೀನಿವಾಸ್ (Veerakapurtha Shrinivas) ಮತ್ತು ಚಂದ್ರಚೂಡ್ (ChandraChud) ಆರೋಪಿಸಿದ್ದರು. ಅತ್ತ ಸುದೀಪ (Kichcha Sudeep) ಮತ್ತು ಕುಮಾರ್ ನಡುವೆ ರವಿಚಂದ್ರನ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಯುತ್ತಿದೆ. ಸಭೆಯಲ್ಲಿ ಸಂಧಾನ ಇತ್ಯರ್ಥವಾಗುವ ನಿರೀಕ್ಷೆಯೂ ಇದೆ. ಈ ನಡುವೆ ಸೂರಪ್ಪ ಬಾಬು (SoorappaBabu) ಅವರು ತಮ್ಮ ಮೇಲಿನ ಆರೋಪಗಳಿಗೆ ಉತ್ತರ ಕೊಟ್ಟಿದ್ದಾರೆ.
ನಾನು ಉತ್ತರ ಕೊಡಬೇಕಾಗಿರುವುದು ನನ್ನ ಕುಟುಂಬಕ್ಕೆ ಹಾಗೂ ನನಗೆ ಸಾಲ ಕೊಟ್ಟವರಿಗೆ ಮಾತ್ರ. ನನ್ನ ವಿರುದ್ಧ ಆರೋಪ ಮಾಡಲು ಅವರು ಯಾರು? ನನ್ನ ನಿರ್ಮಾಣ ಸಂಸ್ಥೆಗೂ ಅವರಿಗೂ ಏನು ಸಂಬಂಧ. ನನ್ನ ಸಿನಿಮಾಗಳಿಗೆ ಅವರು ಕೆಲಸ ಮಾಡಿದ್ದಾರಾ? ಸಿನಿಮಾಗಳಿಗೆ ಏನಾದರೂ ಸಹಾಯ ಮಾಡಿದ್ದಾರಾ? ಇದು ಚಂದ್ರಚೂಡ್ (ChandraChud) ಅವರಿಗೆ ಸೂರಪ್ಪ ಬಾಬು (SoorappaBabu) ಕೇಳಿರುವ ಮೊದಲ ಪ್ರಶ್ನೆ.
ಕೋಟಿಗೊಬ್ಬ 3 ಸಿನಿಮಾ ಮಾಡಿದ್ದ ಸೂರಪ್ಪ ಬಾಬು (SoorappaBabu) ಅವರಿಗೆ ರಿಲೀಸ್ ವೇಳೆ ಸಮಸ್ಯೆ ಎದುರಾಗಿತ್ತು. ಆಗ ಸ್ವತಃ ಸುದೀಪ್, ತಮ್ಮ ಆಪ್ತ ಜಾಕ್ ಮಂಜು (jack Manju) ಮೂಲಕ ಸಮಸ್ಯೆಗೆ ಪರಿಹಾರ ಒದಗಿಸಿದ್ದರು. ಆದರೂ ಸಿನಿಮಾ ಘೋಷಣೆಯಾದ ದಿನದ ಬದಲು ಒಂದು ದಿನ ತಡವಾಗಿ ರಿಲೀಸ್ ಆಗಿತ್ತು. ಅದಕ್ಕೂ ಉತ್ತರ ಕೊಟ್ಟಿರುವ ಸೂರಪ್ಪ ಬಾಬು (SoorappaBabu) ಅವರಿಗೂ ಇದಕ್ಕು ಏನ್ ಸಂಬಂಧ..? ನನ್ನ ರಾಮ್ ಬಾಬು ಪ್ರೊಡಕ್ಷನ್ ಗೆ ಚಂದ್ರಚೂಡ್ ಏನ್ ಸಹಕಾರ ಕೊಟ್ಟಿದ್ದಾರೆ. ಸೂರಪ್ಪ ಬಾಬು ಕೋಟಿಗೊಬ್ಬ ೨, ಕೋಟಿಗೊಬ್ಬ3 (Kotigobba 3) ಸಿನಿಮಾದಲ್ಲಿ ದುಡ್ಡು ಕೊಡ್ಲಿಲ್ಲವಂತೆ ಅಂತ ಆರೋಪ ಮಾಡಿದ್ದಾರೆ. ಅದು ನನ್ನ ಸಿನಿಮಾ ವಿಚಾರ. ನಿಮಗ್ಯಾಕೆ ಈ ಉಸಾಬರಿ..? ನನ್ನ ವಿಷಯ ನಿಮಗೇನಕ್ಕೆ ಬೇಕು..? ತಾಖತ್ತಿದ್ದರೆ ಯಾವ ನಟ ಅಂತ ಹೇಳಲಿ. ನಾನು ಬೇರೆವರಿಗೆ ಹಣ ಕೊಡಬೇಕು ಅನ್ನೋದು ನನ್ನ ಸ್ವಂತ ವಿಚಾರ. ನಾನು ಬೇರೆವರಿಗೆ ಹಣ ಕೊಡಬೇಕು ಅನ್ನೋದು ನನ್ನ ಸ್ವಂತ ವಿಚಾರ. ಅವರು ಆತ್ಮಹತ್ಯೆ ಮಾಡಿಕೊಳ್ಳೋಕೆ ಪ್ರಯತ್ನ ಪಟ್ರು. ಅವರು ನನ್ನ ಸ್ನೇಹಿತ, ಅವರಿಗೆ ಧೈರ್ಯ ಹೇಳಿದ್ದೇನೆ ತಪ್ಪಾ ಎಂದಿದ್ದಾರೆ.
ಸುದೀಪ್ (Kichcha Sudeep) ಮತ್ತು ನನ್ನ ಸಂಬಂಧ ಚೆನ್ನಾಗಿತ್ತು. ಈಗಲೂ ಚೆನ್ನಾಗಿದೆ.ಮುಂದೆಯೂ ಚೆನ್ನಾಗಿರುತ್ತೆ. ಸಿನಿಮಾ ಮಾಡಬಹುದು ಅಥವಾ ಮಾಡದೆಯೇ ಇರಬಹುದು. ಸಂಬಂಧಕ್ಕೇನು ಸಮಸ್ಯೆ ಆಗಲ್ಲ ಎಂದಿದ್ದಾರೆ ಸೂರಪ್ಪ ಬಾಬು (SoorappaBabu).
ಹೊಸ ಮನೆ ಕಟ್ಟಿಸಿಕೊಂಡಿದ್ದಾರೆ ಎಂದ ಆರೋಪಕ್ಕೂ ಉತ್ತರ ಕೊಟ್ಟಿರುವ ಸೂರಪ್ಪ ಬಾಬು ವಿಷ್ಣುವರ್ಧನ್ (Vishnuvardhan) ಅವರ ಕೋಟಿಗೊಬ್ಬ ನಿರ್ಮಾಣ ಮಾಡಿ ಒಂದು ಮನೆ ಕಟ್ಟಿಕೊಂಡಿದ್ದೆ. ಆ ಮನೆಯಲ್ಲಿ ಇದೇ ವರ್ಷ ಜನವರಿ 30ರಂದು ಮಾರಿದ್ದೇನೆ ಎಂದಿದ್ದಾರೆ ಎಂದಿದ್ದಾರೆ. ನನ್ನ ಮಗಳು ಫಾರಿನ್ನಲ್ಲಿ ಓದುತ್ತಿದ್ದಾಳೆ ಎಂದಿದ್ದಾರೆ. ಹೌದು ಓದುತ್ತಿದ್ದಾಳೆ. ಆದರೆ ನನ್ನ ಸ್ವಂತ ದುಡ್ಡಿನಲ್ಲಿ ಓದಿಸುತ್ತಿದ್ದೇನೆ. ಮಕ್ಕಳು, ಪತ್ನಿಯನ್ನು ಸ್ವಂತ ಹಣದಲ್ಲಿ ಸಾಕುತ್ತಿದ್ದೇನೆ. ಯಾರದ್ದೋ ಚಾರಿಟಿಯಲ್ಲಿ ಹಣ ತೆಗೆದುಕೊಂಡು ಸಂಸಾರ ನಡೆಸುತ್ತಿಲ್ಲ ಮಕ್ಕಳನ್ನು ಓದಿಸುತ್ತಿಲ್ಲ. ಹೊಸ ಮನೆ ಕಟ್ಟಿರುವುದು ಬೆವರು ಸುರಿಸಿ ದುಡಿದ ದುಡ್ಡಿನಿಂದ. ಅದಕ್ಕೆ ಬ್ಯಾಂಕ್ನಿಂದ ಸಾಲವನ್ನು ಪಡೆದಿದ್ದೀನಿ, ಅದರ ದಾಖಲೆಗಳು ಇವೆ ಎಂದಿದ್ದಾರೆ ಸೂರಪ್ಪ ಬಾಬು.
ಅಂದ ಹಾಗೆ ಚಂದ್ರಚೂಡ್ ಪತ್ರಕರ್ತರಾಗಿದ್ದವರು. ಇತ್ತೀಚೆಗೆ ಸುದೀಪ್ (Kichcha Sudeep) ಅವರ ಗುಂಪಿನಲ್ಲಿ ಕಾಣಿಸುತ್ತಿದ್ದಾರೆ. ಎಡ ಸಿದ್ದಾಂತ ಪ್ರೇಮಿ ಪತ್ರಕರ್ತರಾಗಿದ್ದ ಚಂದ್ರಚೂಡ್, ಸುದೀಪ್ ಬಿಜೆಪಿ ಜೊತೆ ಗುರುತಿಸಿಕೊಂಡ ಬಳಿಕ ಎಡ ಸಿದ್ದಾಂತಿಗಳಿಂದ ಟೀಕೆಗೆ ಗುರಿಯಾಗಿದ್ದರು. ಅತ್ತ ಮೊದಲಿನಿಂದ ಬಲ ಸಿದ್ಧಾಂತಿಗಳ ವಿರುದ್ಧ ಇದ್ದ ಕಾರಣ, ಅವರೂ ಕೂಡಾ ಚಂದ್ರಚೂಡ್ ನೆರವಿಗೆ ಬಂದಿರಲಿಲ್ಲ. ಇದೀಗ ಚಿತ್ರರಂಗದಲ್ಲಿ ಕೂಡಾ ಚಂದ್ರಚೂಡ್ ಟೀಕೆಗೆ ಗುರಿಯಾಗುತ್ತಿದ್ದಾರೆ. ಈ ಮಧ್ಯೆ ಚಂದ್ರಚೂಡ್ ನಿರ್ದೇಶನ ಮಾಡಬೇಕಿದ್ದ ಸಿನಿಮಾವೊಂದು ಸದ್ಯಕ್ಕೆ ನಿಂತು ಹೋಗಿದೆ.



