ನಿಮಗೆಲ್ಲರಿಗೂ ಈಗ ಕೆಜಿಎಫ್ (KGF) ಸಿನಿಮಾದ ಯಶ್ (Yash) ಗೊತ್ತು. ಆದರೆ ಅವರ ಮೊದಲ ಸ್ಥಿತಿ ಬೇರೆಯದ್ದೇ ಆಗಿತ್ತು ಎಂದಿರುವ ಜೈ ಆಕಾಶ್ (Jai Akash) ಅವರು, ಯಶ್ (Yash) ಮೊದಲಿಗೆ ಇಂಟ್ರಡ್ಯೂಸ್ ಆಗಿದ್ದು, ನಾನು ಹೀರೋ ಆಗಿ ನಟಿಸಿದ್ದ ಸಿನಿಮಾದಲ್ಲಿ. ನನ್ನ ತಮ್ಮನಾಗಿ ಯಶ್ (Yash) ನಟಿಸಿದ್ದಾರೆ. ಆತನನ್ನು ನಾನೇ ಸೆಲೆಕ್ಟ್ ಮಾಡಿದ್ದೆ. ಆತನ ಮುಖ ನನ್ನ ಮುಖವನ್ನು ಹೋಲುತ್ತಿತ್ತು. ಅದಕ್ಕಾಗಿ ತಮ್ಮನ ಪಾತ್ರ ನೀಡಿದ್ದೆ.. ಅಂದು ಯಶ್ (Yash), ಸದ್ಯಕ್ಕೆ ನನಗೆ ಸೀರಿಯಲ್ (Serial) ಎಲ್ಲಾ ಬೇಡ. ಸಿನಿಮಾಗ(Cinema) ಳಲ್ಲಿ ನಟಿಸಬೇಕು. ಅವಕಾಶಗಳು ಸಿಗುತ್ತಿಲ್ಲ ಎಂದಿದ್ದ. ಆಗ ನಾನೇ ಅವನನ್ನು ಕರೆದು ಸಮಾಧಾನ ಪಡಿಸಿದ್ದೆ, ಊಟವನ್ನೂ ಮಾಡಿಸಿದ್ದೆ. ಜೊತೆಗೆ ನನ್ನ ಸಿನಿಮಾ ಜಂಬದ ಹುಡುಗಿದಲ್ಲಿ (Jambada hudugi) ನಟಿಸುವ ಅವಕಾಶವನ್ನೂ ಕೊಟ್ಟೆ.. ‘ಜಂಬದ ಹುಡುಗಿ (Jambada hudugi)ಸಿನಿಮಾ ಆರಂಭವಾದ ಬಳಿಕ ಅವನನ್ನು ನಾನೇ ಪಿಕಪ್ ಮತ್ತು ಡ್ರಾಪ್ ಮಾಡುತ್ತಿದ್ದೆ. ಆವತ್ತು ಆ ಸಿನಿಮಾ (Jambada hudugi) ಹಿಟ್ ಆಗಿತ್ತು. ಅದಾದ ಬಳಿಕ ನಾನು ತೆಲುಗು, ತಮಿಳು ಕಡೆ ಗಮನ ಹರಿಸಿದೆ. ಯಶ್ ಕನ್ನಡದಲ್ಲಿ ನಾಯಕನಾಗಿ ಗುರುತಿಸಿಕೊಂಡ. ಇದೀಗ ಯಶ್ ಸ್ಟಾರ್ ಆಗಿ ಬೆಳೆದಿದ್ದಾನೆ..
ಹೀಗೆ ಹೇಳುತ್ತಾ ಹೋಗುತ್ತಾರೆ ತಮಿಳು (Tamil Actor) ನಟ ಜೈಪ್ರಕಾಶ್(Jai Akash). ಜೈಪ್ರಕಾಶ್ ಜಂಭದ ಹುಡುಗಿ ಚಿತ್ರದ ಹೀರೋ. ಆ ಚಿತ್ರದಲ್ಲಿ ರಾಕೇಶ್ ಪಾತ್ರದಲ್ಲಿ ನಟಿಸಿದ್ದರು. ಯಶ್, ಲಕ್ಷ್ಮೀಕಾಂತ್ ಎಂಬ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ಹಾಗೆ ನೋಡಿದರೆ ಆ ಚಿತ್ರದ ನಾಯಕಿ, ನಿರ್ದೇಶಕಿ ಪ್ರಿಯಾ ಹಾಸನ್(Priya hassan). ಇನ್ನು ಜೈಪ್ರಕಾಶ್ ತಮಿಳಿನಲ್ಲಿ ನಟನಷ್ಟೇ ಅಲ್ಲ, ಡೈರೆಕ್ಟರ್ ಕೂಡಾ ಹೌದು.
ಲೈಫೇ ಹಾಗೆ.. ಇವತ್ತು ಯಶ್‍ಎಲ್ಲಿಯೋ ಇದ್ದಾರೆ. ಜೈಪ್ರಕಾಶ್ ಎಲ್ಲಿದ್ದಾರೆ ಅನ್ನೋದು ಗೊತ್ತಿದೆ.



