ನಟ ದರ್ಶನ್ (actor Darshan) ಮತ್ತು ದೊಡ್ಮನೆ ನಡುವೆ ಸಂಥಿಂಗ್ ಈಸ್ ರಾಂಗ್ ಅನ್ನೋ ಸುದ್ದಿ, ಗಾಂಧಿನಗರದಲ್ಲಿ Gandhinagara ಓಡಾಡ್ತಾನೇ ಇರುತ್ತೆ. ನಟ ದರ್ಶನ್ ಮತ್ತು ಶಿವ ರಾಜ್ʻಕುಮಾರ್ (Shiva rajkumar) ಮಧ್ಯೆ ಏನೋ ಇದೆ ಅನ್ನೋ ಸುದ್ದಿ ಸದಾ ಇಂಡಸ್ಟ್ರಿಯಲ್ಲಿ ಚಾಲ್ತಿಯಲಿರುತ್ತೆ. ಅದಕ್ಕೆ ಕಾರಣ ನಟ ದರ್ಶನ್ ಮತ್ತವರ ಫ್ಯಾನ್ಸ್ಅನ್ನೋದ್ರಲ್ಲೂ ತಪ್ಪಿಲ್ಲ.
ರಾಬರ್ಟ್ (robert) ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಜೊತೆಗಿನ ಗಲಾಟೆಯಲ್ಲಿ ಅಗತ್ಯವಿಲ್ಲದಿದ್ದರೂ, ಪುನೀತ್ ಹೆಸರು ಎಳೆದು ತಂದಿದ್ದು ಒಂದು ವಿವಾದ ಸೃಷ್ಟಿಸಿತ್ತು. ಅದಾದ ಮೇಲೆ ಕ್ರಾಂತಿ ರಿಲೀಸ್ ವೇಳೆ ಕೆಲವು ದರ್ಶನ್ ಫ್ಯಾನ್ಸ್ ತೋರಿಸಿದ ಅತಿರೇಕದ ವರ್ತನೆಯನ್ನು ದರ್ಶನ್ ಖಂಡಿಸುವ ಗೋಜಿಗೂ ಹೋಗಲಿಲ್ಲ. ಇಂತಹ ಹಲವು ಘಟನೆಗಳಿಂದಾಗಿ ಸಹಜವಾಗಿಯೇ ಇಂತಹ ಪ್ರಶ್ನೆಗಳೇಳುವುದು ಸುಳ್ಳಲ್ಲ.
ದರ್ಶನ್ ಚಿತ್ರರಂಗ ಪ್ರವೇಶಿಸಿದ್ದು, ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದು ಡಾ.ರಾಜ್ (Dr. Rajkumar) ಬ್ಯಾನರಿನಲ್ಲಿ. ದರ್ಶನ್ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರು ಅತೀ ಹೆಚ್ಚು ನಟಿಸಿದ್ದು ಡಾ.ರಾಜ್ ಬ್ಯಾನರ್ ಸಿನಿಮಾಗಳಲ್ಲಿ. ದರ್ಶನ್ ಅವರು ಇತ್ತೀಚೆಗೆ ನಡೆದ ಕಾವೇರಿ ಪರ ಪ್ರತಿಭಟನೆಯಲ್ಲಿ ಶಿವಣ್ಣ ಅವರಿಗೆ ಕಾಲಿಗೆ ನಮಸ್ಕಾರ ಮಾಡಿದ್ದರು. ಈ ಪ್ರಶ್ನೆಗೆ ಶಿವಣ್ಣ ಹಲವು ಬಾರಿ ಸ್ಪಷ್ಟನೆ ಕೊಟ್ಟಿದ್ದರೂ ಪದೇ ಪದೇ ಎದುರಾಗುತ್ತಲೇ ಇರುತ್ತೆ.
ಈಗಲೂ ಅಷ್ಟೆ, ಘೋಸ್ಟ್ (ghost) ಚಿತ್ರದ ಪ್ರಚಾರದ ವೇಳೆ ಶಿವಣ್ಣ ಅವರಿಗೆ ಈ ಪ್ರಶ್ನೆ ಎದುರಾಗಿದೆ. ಮತ್ತೊಮ್ಮೆ ಶಿವಣ್ಣ Shivanna ಕ್ಲಾರಿಫಿಕೇಶನ್ ಕೊಟ್ಟಿದ್ದಾರೆ.
ನನ್ನ ಮತ್ತು ದರ್ಶನ್ ಮಧ್ಯೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ವೈಮನಸ್ಯವೂ ಇಲ್ಲ. ವೈರತ್ವ ಇಲ್ಲವೇ ಇಲ್ಲ ಎಂದಿದ್ದಾರೆ ಶಿವಣ್ಣ. ಮನುಷ್ಯ, ಕುಟುಂಬ ಅಂದ ಮೇಲೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಹಾಗಂತ ಅದನ್ನೇ ದೊಡ್ಡದು ಮಾಡಬಾರದು.ಕೆಲವೊಮ್ಮೆ ಮಿಸ್ ಕಮ್ಯೂನಿಕೇಷನ್ನಿನಿಂದಾಗಿ ಭಿನ್ನಾಭಿಪ್ರಾಯಗಳು ಮೂಡ್ತವೆ. ಸಣ್ಣ ಪುಟ್ಟ ತಕರಾರು ಬಂದರೆ ಅವನ್ನು ಗಂಭೀರವಾಗಿ ತಗೊಬೇಕಿಲ್ಲ ಎಂದಿದ್ದಾರೆ ಶಿವಣ್ಣ.
ದರ್ಶನ್ ಅವರನ್ನ ಚಿಕ್ಕಂದಿನಿಂದ ನೋಡಿದ್ದೇನೆ. ಜೀವನದಲ್ಲಿ ಸಾಕಷ್ಟು ಕಷ್ಟ ಎದುರಿಸಿ ಸ್ಟಾರ್ ಆಗಿದ್ದಾರೆ. ಟಾಪ್ ಹೀರೋ ಆಗಿದ್ದಾರೆ. ಅವರೂ ಮನುಷ್ಯರೇ ತಾನೆ. ಮಿಸ್ ಕಮ್ಯುನಿಕೇಷನ್ನ್ನು ವೈರತ್ವ ಅಂದುಕೊಳ್ಳಬಾರದು ಎಂದಿದ್ದಾರೆ ಶಿವ ರಾಜ್ ಕುಮಾರ್.



