Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಸಂಕ್ರಾಂತಿ ನಂತರ ಏನಾಗುತ್ತೋ.. ಗೊತ್ತಿಲ್ಲ : ಸತೀಶ್‌ ಜಾರಕಿಹೊಳಿ

SpeciallU by SpeciallU
December 24, 2025
in News, Politics
0 0
0
ಸಂಕ್ರಾಂತಿ ನಂತರ ಏನಾಗುತ್ತೋ.. ಗೊತ್ತಿಲ್ಲ : ಸತೀಶ್‌ ಜಾರಕಿಹೊಳಿ

ಸಿಎಂ ಬದಲಾಗ್ತಾರಾ.. ಇಲ್ವಾ.. ಗೊತ್ತಿಲ್ಲ. ಇದು ಸತೀಶ್‌ ಜಾರಕಿಹೊಳಿಯವರ ಉತ್ತರ. ʻಗೊತ್ತಿಲ್ಲ ಮಂತ್ರಿʼಗಳ ಸರಣಿಗೆ ಹೊಸ ಸೇರ್ಪಡೆ ಆದರಾ.. ನಮಗೆ ಗೊತ್ತಿಲ್ಲ. ಡಿಕೆ ಶಿವಕುಮಾರ್‌ ಡಿಸಿಎಂ ಸ್ಥಾನದಿಂದ ಸಿಎಂ ಸ್ಥಾನಕ್ಕೆ ಪ್ರಮೋಷನ್‌ ತಗೊಳ್ತಾರಾ.. ಸಿಎಂ ಸಿದ್ದರಾಮಯ್ಯ ಕುರ್ಚಿ ಬಿಟ್ಟು ಇಳೀತಾರಾ.. ಸಂಕ್ರಾಂತಿಗೆ ಎಲ್ಲವೂ ಇದೆ ಅಂತಾರೆ. ಆದರೆ ನಮಗೇನು ಗೊತ್ತಾಗಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಒಳಗಿನ ಅರ್ಥ ಏನು..? ಸಾಹುಕಾರ್‌ ನೀಡುತ್ತಿರುವ ಸಂದೇಶ ಏನು.. ಸ್ಪೆಷಲ್‌ ಯು ಡಾಟ್‌ ಕಾಂ ವಿಶ್ಲೇಷಣಾತ್ಮಕ ರಿಪೋರ್ಟ್‌ ಇಲ್ಲಿದೆ.

ಸಂಕ್ರಮಣ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗ್ತಾರೆ ಅಂತ ಇದೆ. ಆಗೋದಿಲ್ಲ ಅಂತಾನೂ ಇದೆ. ಎಲ್ಲವೂ ಅಂತಾರೆ, ಸಂಕ್ರಾಂತಿಗೆ ಎಲ್ಲವೂ ಇದೆ ಅಂತಾರೆ. ಆದರೆ ನಮಗೇನು ಗೊತ್ತಾಗಿಲ್ಲ. ಕುರ್ಚಿ ಕದನ ವಿಚಾರಕ್ಕೆ ಹೈಕಮಾಂಡ್ ಮೌನಕ್ಕೆ ಜಾರಿತಾ? ಎಂಬ ಮಾತಿಗೆ ಇಲ್ಲೇ ಮುಗಿಯುತ್ತೆ, ಇಲ್ಲದಿದ್ದರೆ ಅಂತಿಮವಾಗಿ ಹೈಕಮಾಂಡ್‌ನೇ ಹೇಳಬೇಕಾಗುತ್ತೆ.. ಎಂಬ ಮಾತು ಹೇಳಿದ್ದಾರೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಒಂದು ವಿಷಯ ನೆನಪಿಟ್ಟುಕೊಳ್ಳಬೇಕು. ಬೆಳಗಾವಿಯಲ್ಲಿ ನಡೆದ ಸದನದ ವೇಳೆ ಅಂತಿಮ ಡಿನ್ನರ್‌ ಆಗಿದ್ದೇ ಸತೀಶ್‌ ಜಾರಕಿಹೊಳಿ ಮನೆಯಲ್ಲಿ. ಅದು ಉಪಸಂಹಾರ ಎಂದು ಭಾವಿಸಿದರೆ, ಕ್ಲೈಮಾಕ್ಸ್‌ ಏನಾಗಲಿದೆ ಎಂಬ ನಿರ್ಧಾರವೂ ಅಲ್ಲೇ ಆಗಿದೆ ಎಂದರ್ಥ. ಸತೀಶ್‌ ಜಾರಕಿಹೊಳಿ ಸರಳವಾಗಿ ಯಾವುದನ್ನೂ ಬಿಟ್ಟುಕೊಡುವವರಲ್ಲ. ಈಗ ಬಿಜೆಪಿಯಲ್ಲಿರುವ ಅವರ ಅಣ್ಣ ರಮೇಶ್‌ ಜಾರಕಿಹೊಳಿ ಅವರಂತೆ ಅಂತೂ ಅಲ್ಲವೇ ಅಲ್ಲ.

ಅಣ್ಣ ಜಾರಕಿಹೊಳಿಯವರದ್ದು ಆರ್ಭಟ ಜಾಸ್ತಿ. ತಮ್ಮ ಜಾರಕಿಹೊಳಿಯದ್ದು ಮೌನ ಜಾಸ್ತಿ. ಆದರೆ, ಮೌನದ ಮರ್ಮವನ್ನು ಅರಿಯುವುದು ಕಷ್ಟ. ಅದು ಡಿಕೆ ಶಿವಕುಮಾರ್‌ ಅವರಿಗೆ ಚೆನ್ನಾಗಿ ಗೊತ್ತು. ತಂತ್ರಗಾರಿಕೆಯಲ್ಲೂ ನಿಪುಣ ಎನ್ನುವುದು ಬಸವರಾಜ ಬೊಮ್ಮಾಯಿ ಅವರಿಗೆ ಅರ್ಥವಾಗುವ ವೇಳೆಗೆ, ಅವರ ಮಗನೇ ಅವರೇ ಬಿಟ್ಟುಕೊಟ್ಟಿದ್ದ ಕ್ಷೇತ್ರದಲ್ಲಿ ಮಣ್ಣು ಮುಕ್ಕಿದ್ದ. ಬಿಜೆಪಿಯ ಭದ್ರಕೋಟೆಯನ್ನು ಮಾತೇ ಆಡದೆ ಕಾಂಗ್ರೆಸ್ಸಿಗೆ ಬರೆಸಿಕೊಂಡಿದ್ದರು ಸತೀಶ್‌ ಜಾರಕಿಹೊಳಿ. ಅದರ ಅರಿವು ಡಿಕೆ ಶಿವಕುಮಾರ್‌ ಅವರಿಗೂ ಇದೆ.

ಡಿಕೆಶಿ ದೆಹಲಿ ಪ್ರಯಾಣ, ವ್ಯರ್ಥ ಪ್ರಯತ್ನವಾ? ಎಂಬ ಪ್ರಶ್ನೆಗೆ ನಾವೇನು ಹೇಳಲ್ಲ, ಪರವಾಗಿಯೂ ಹೇಳಲ್ಲ, ವಿರೋಧವಾಗಿಯೂ ಇಲ್ಲ. ನಾವು ತಟಸ್ಥವಾಗಿದ್ದೇವೆ ಎಂದು ಹೇಳುವ ಸತೀಶ್‌ ಜಾರಕಿಹೊಳಿ, ಅಂತರಂಗದಲ್ಲಿ ಸಿದ್ದರಾಮಯ್ಯ ನಿಷ್ಠರು. ಸಿದ್ದರಾಮಯ್ಯ ಅವರ ಜೊತೆಯಲ್ಲಿಯೇ ಕಾಂಗ್ರೆಸ್ಸಿಗೆ ಬಂದವರು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ಜೊತೆಯಲ್ಲಿ ನಿಂತವರು. ಸೋತಾಗ ಹೆಗಲು ಕೊಟ್ಟವರು. ಕಾಂಗ್ರೆಸ್ಸಿನಲ್ಲಿದ್ದರೂ ಸಿದ್ದರಾಮಯ್ಯ ಜೊತೆ ಕಾಂಗ್ರೆಸ್ಸಿಗೆ ಬಂದವರೆಲ್ಲ ಈಗಲೂ ಸಿದ್ದರಾಮಯ್ಯ ಕಾಂಗ್ರೆಸ್ಸಿನಲ್ಲಿ ಪ್ರತ್ಯೇಕವಾಗಿದ್ದಾರೆ ಎನ್ನಬಹುದು. ಇದ್ಯಾವುದು ಸಿದ್ದರಾಮಯ್ಯ ಕಾಂಗೆಸ್‌ ಎನ್ನಬೇಡಿ. ಅದು ಕಾಂಗ್ರೆಸ್‌ನ ಮೂಲ ಕಾಂಗ್ರೆಸ್ಸಿಗರು ಹೇಳುವ ಮಾತು. ಅಷ್ಟೇ. ಎಲ್ಲರೂ ಕಾಂಗ್ರೆಸ್ಸಿಗರೇ. ಆದರೆ, ಸತೀಶ್‌ ಜಾರಕಿಹೊಳಿ ಅವರ ಮೊದಲ ನಿಷ್ಠೆ ಸಿದ್ದರಾಮಯ್ಯ ಅವರಿಗೆ ಅಂತೆ. ಆದರೆ, ಸಿದ್ದರಾಮಯ್ಯ ಅವರು ಈ ಬಾರಿ ಅಧಿಕಾರ ವಂಚಿತರಾದರೆ, ಭವಿಷ್ಯದಲ್ಲಿ ಅಧಿಕಾರಕ್ಕೆ ಬರಲ್ಲ. ಇದೆಲ್ಲ ಗೊತ್ತಿದ್ದೂ ಸತೀಶ್‌ ಜಾರಕಿಹೊಳಿ, ಪಕ್ಷವನ್ನು ಮೀರಿ ಮುಂದೆ ಹೆಜ್ಜೆ ಇಡ್ತಾರಾ.. ಗೊತ್ತಿಲ್ಲ. ಆಗಬಹುದು.. ಆಗದೆಯೂ ಇರಬಹುದು.

Tags: #ಸತೀಶ್‌ಜಾರಕಿಹೊಳಿ #ಡಿಕೆಶಿವಕುಮಾರ್‌ #ಸಂಕ್ರಾಂತಿ #ಸಿದ್ದರಾಮಯ್ಯ #Sathishjarakiholi #DKShivakumar #Sankranti #Siddharamaiah
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.