ಒಬ್ಬ ನಟಿ, ಒಬ್ಬ ಹೀರೋ ಜೊತೆ ಒಂದು ಅಥವಾ ಎರಡು ಸಿನಿಮಾ ಮಾಡಿದರೆ ಅದೇ ಹೆಚ್ಚು ಎನ್ನುವ ಕಾಲ ಇದು. ಅಂತಾದ್ದರಲ್ಲಿ ಒಬ್ಬ ಹೀರೋ ಜೊತೆ ಮೂರು ಸಿನಿಮಾ ಮಾಡಿದರೆ, ಅಲ್ಲೇನೋ ಇದೆ ಕಣ್ರಿ ಎಂದು ಅನುಮಾನ ಪಡುವವರೇ ಹೆಚ್ಚು. ಮೂರು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಒಂದು ಸೂಪರ್ ಹಿಟ್ ಆದರೆ, ಇನ್ನೆರಡು ಆವರೇಜ್. ಆದರೆ ಜೋಡಿಯ ಬಗ್ಗೆ ಪ್ರೇಕ್ಷಕರು ಖುಷ್ ಹುವಾ. ಜೊತೆಗೆ ರಿಯಾಲಿಟಿ ಶೋ ಮತ್ತು ಇನ್ನೊಬ್ಬ ನಟ-ನಟಿಯ ಜೋಡಿಯ ಮದುವೆಯಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದು.. ಕೇಳ್ಬೇಕಾ.. ಕಥೆ ಹುಟ್ಟಿಕೊಂಡಿದ್ದು ಹಾಗೆ..
ನಟಿ ಅಮೃತಾ ಅಯ್ಯಂಗಾರ್ (Amrutha Aiyangar) , ಡಾಲಿ ಧನಂಜಯ (Dolly dhananjaya) ಪ್ರೀತಿ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳದ್ದು. ಅದು ಇವತ್ತಿನದಲ್ಲ. ಶುರುವಾಗಿದ್ದು ಮಾತ್ರ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ರಿಯಾಲಿಟಿ ಶೋನಲ್ಲಿ. ಆ ಶೋನಲ್ಲಿ ಡಾಲಿ ಧನಂಜಯ(Dolly dhananjaya), ಅಮೃತಾಗೆ ಪ್ರಪೋಸ್ ಮಾಡೋ ವಿಡಿಯೋ ನೋಡಿದವರು, ಇದು ರಿಯಲ್ಲೇ ಅಂದ್ಕೊಂಡ್ ಬಿಟ್ಟಿದ್ರು. ಅದಾದ ಮೇಲೆ ಇಬ್ಬರೂ ವಸಿಷ್ಠ ಸಿಂಹ-ಹರಿಪ್ರಿಯಾ ಮದುವೆಗೆ ಜೋಡಿಯಾಗಿ ಹೋಗಿದ್ದು ನೋಡಿ, ಅದಕ್ಕೆ ಇನ್ನಷ್ಟು ರೆಕ್ಕೆ ಪುಕ್ಕ ಬಂದಿತ್ತು. ಅದಕ್ಕೆ ತಕ್ಕಂತೆ ಡಾಲಿ ಮತ್ತು ಅಮೃತಾ ಇಬ್ಬರೂ ಜೊತೆಯಾಗಿ ಮೂರು ಸಿನಿಮಾ ಮಾಡಿದ್ದಾರೆ. ಪಾಪ್ ಕಾರ್ನ್ ಮಂಕಿ ಟೈಗರ್, ಬಡವ ರಾಸ್ಕಲ್ ಮತ್ತು ಹೊಯ್ಸಳ. ಈಗ ಇದಕ್ಕೆಲ್ಲ ಫುಲ್ ಸ್ಟಾಪ್ ಇಟ್ಟಿದ್ದಾರೆ ಅಮೃತಾ ಅಯ್ಯಂಗಾರ್ (Amrutha Aiyangar).
ಇವರಿಬ್ಬರ ಲವ್ ಸ್ಟೋರಿ ಗಾಸಿಪ್ ಹುಟ್ಟಿಕೊಂಡಿದ್ದರಲ್ಲಿ ಸುದೀಪ್ ಮತ್ತು ರಮ್ಯಾ ಪಾತ್ರವೂ ಇದೆ. ಹೊಯ್ಸಳ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ನೀವ್ಯಾಕೆ ಡಾಲಿ ಒಬ್ಬರ ಜೊತೆಗೇ ಅಷ್ಟು ಸಿನಿಮಾ ಮಾಡ್ತೀರಿ, ನಮ್ಮ ಜೊತೆಯಲ್ಲೂ ಆಕ್ಟ್ ಮಾಡಿ ಎಂದು ಕಿಚಾಯಿಸಿದ್ದರು. ಅದೇ ಚಿತ್ರದ ಪ್ರೀಮಿಯರ್`ನಲ್ಲಿ ರಮ್ಯಾ ಅವರು ಡಾಲಿ ಮತ್ತು ಅಮೃತಾರ ತೆರೆ ಹಿಂದಿನ ಕೆಮಿಸ್ಟ್ರಿಯೂ ಚೆನ್ನಾಗಿದೆ ಎಂದು ಚುಡಾಯಿಸಿದ್ದರು. ಇದೆಲ್ಲವೂ ಒಟ್ಟಾಗಿ ಇಬ್ಬರದ್ದೂ ಲವ್ ಸ್ಟೋರಿ ದೊಡ್ಡ ಸುದ್ದಿಯಾಗಿತ್ತು.
ನಾವಿಬ್ಬರೂ ಒಟ್ಟಿಗೆ ಮೂವರು ಸಿನಿಮಾವನ್ನು ಮಾಡಿದ್ದೇವೆ. ಹಾಗಾಗಿ ಕೆಲವರು ನಮ್ಮಿಬ್ಬರ ಮಧ್ಯೆ ಏನೋ ಇದೆ ಎಂದು ಅಂದುಕೊಳ್ಳುತ್ತಾರೆ. ಧನಂಜಯ, ನನ್ನ ಮಧ್ಯೆ ಒಳ್ಳೆಯ ಸ್ನೇಹವಿದೆ. ಅದನ್ನು ಬಿಟ್ಟರೆ ನಾನು ಇನ್ನೂ ಸಿಂಗಲ್ ಎಂದು ಹೇಳಿದ್ದಾರೆ (Amrutha Aiyangar) ಅಮೃತಾ ಅಯ್ಯಂಗಾರ್.
ಅಮೃತಾ ಅಯ್ಯಂಗಾರ್ ಸದ್ಯಕ್ಕೆ ಶರಣ್ ಜೊತೆ ನಟಿಸುತ್ತಿದ್ದಾರೆ. ಅಮೃತಾ ನಟಿಸಿರುವ ಚಿತ್ರಗಳಲ್ಲಿ ಹೆಚ್ಚು ಹಿಟ್ ಕೊಟ್ಟಿದ್ದಾರೆ. ಸದ್ಯಕ್ಕೆ ಕನ್ನಡದ ಬೇಡಿಕೆಯ ನಟಿಯರಲ್ಲಿ ಅಮೃತಾ ಅಯ್ಯಂಗಾರ್ ಒಬ್ಬರಾಗಿದ್ದಾರೆ. ಅಂದಹಾಗೆ ಜುಲೈ 26, ಅಮೃತಾ ಅಯ್ಯಂಗಾರ್ ಹುಟ್ಟುಹಬ್ಬ. ಡಾಲಿ ಧನಂಜಯ ಅವರೂ ಸೇರಿದಂತೆ ಇಂಡಸ್ಟ್ರಿಯವರು, ಅಭಿಮಾನಿಗಳು ಅಮೃತಾ ಅಯ್ಯಂಗಾರ್ ಅವರಿಗೆ ವಿಷ್ ಮಾಡಿದ್ದಾರೆ.



