ಕೇರಳದ ಕೊಚ್ಚಿ ಸರಣಿ ಸ್ಫೋಟ (kerala bomb blast) ಶಾಕ್ ಕೊಟ್ಟಿದೆ. ಬಹುವರ್ಷಗಳ ನಂತರ ನಡೆಯುತ್ತಿರುವ ಟಿಫಿನ್ ಬಾಕ್ಸ್ ಬಾಂಬ್ (tiffin box bomb attack) ದಾಳಿ ಇದು. ಕೆಲವು ವರ್ಷಗಳ ಹಿಂದೆ ಯುಪಿಎ ಅವಧಿಯಲ್ಲಿ ದೇಶದೆಲ್ಲೆಡೆ ಸರಣಿ ಸ್ಪೋಟಗಳು ನಡೆದಿದ್ದವು. ತಿಂಗಳಿಗೆ ಮಿನಿಮಮ್ ಐದಾರು ಬಾಂಬ್ ಸ್ಫೋಟಗಳು ನಡೆಯುತ್ತಿದ್ದವು. ಆಗೆಲ್ಲ ಬಳಕೆಯಾಗುತ್ತಿದ್ದುದು ಟಿಫಿನ್ ಬಾಕ್ಸ್ ಬಾಂಬ್. ಅದೇ ಮಾದರಿಯಲ್ಲಿ ನಡೆದ ದಾಳಿ ಇದು. ಹೀಗಾಗಿ ಈ ಸ್ಫೋಟದ ಹಿಂದೆಯೂ ಮುಸ್ಲಿಂ ಉಗ್ರರ (muslim terrorist) ಕೈವಾಡವಿದೆ ಎಂದೇ ಶಂಕಿಸಲಾಗಿತ್ತು. ಅಷ್ಟೇ ಅಲ್ಲದೆ, ಘಟನೆ ನಡೆಯುವ ಒಂದು ದಿನ ಮೊದಲು ಮಲಪ್ಪುರಂನಲ್ಲಿ ಹಮಾಸ್ ಉಗ್ರ ಉಗ್ರ ಖಲೀದ್ ಮಶಾಲ್ ಪ್ಯಾಲೆಸ್ತೀನ್ ಪರವಾಗಿ (pro palesteen rally) ಭಾಷಣ ಮಾಡಿದ್ದ. ಜೋರ್ಡಾನ್ ಮೂಲಕವೇ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದ್ದ. ಸಾವಿರಾರು ಜನ ಭಾಗವಹಸಿದ್ದರು. ಈ ಘಟನೆ ನಡೆದ ಮರುದಿನವೇ ಸ್ಫೋಟ ನಡೆದಿದೆ. ಆದರೆ ಸ್ಫೋಟದ ಹೊಣೆ ಹೊತ್ತು ಡೊಮಿನಿಕ್ ಮಾರ್ಟಿನ್ ಹೆಸರಿನ ಯುವಕನೊಬ್ಬ ಪೊಲೀಸರಿಗೆ ಸರೆಂಡರ್ ಆಗಿದ್ದಾನೆ.
ಬಾಂಬ್ ಬ್ಲಾಸ್ಟ್ ಘಟನೆ ನಡೆದಿದ್ದು ಎಲ್ಲಿ?
ಕಲಮಸ್ಸೆರಿಯ ಜಮ್ರಾ ಅಂತಾರಾಷ್ಟ್ರೀಯ ಕನ್ವೆನ್ಷನ್ ಮತ್ತು ಎಕ್ಸಿಬಿಷನ್ ಸೆಂಟರ್ನಲ್ಲಿ 1,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ಕ್ರೈಸ್ತರ ಪ್ರಾರ್ಥನಾ ಸಭೆ ಆಯೋಜಿಸಲಾಗಿತ್ತು. ಅಕ್ಟೋಬರ್ 27 ರಂದು ಪ್ರಾರಂಭವಾದ ಮೂರು ದಿನಗಳ ಸಭೆ, ಭಾನುವಾರ ಕೊನೆಗೊಳ್ಳುತ್ತಿತ್ತು. ಈ ವೇಳೆ ಸ್ಫೋಟ ನಡೆದಿದೆ. ಸ್ಫೋಟದ ಸ್ಥಳವನ್ನು ಎನ್ಐಎ ಹಾಗೂ ರಾಜ್ಯ ಭಯೋತ್ಪಾದನಾ ನಿಗ್ರಹ ದಳ ಸೇರಿದಂತೆ ಹಲವು ಏಜೆನ್ಸಿಗಳು ಪರಿಶೀಲಿಸುತ್ತಿವೆ. ಇದನ್ನು ಈಗಲೇ ಭಯೋತ್ಪಾದಕ ಕೃತ್ಯ ಎನ್ನಲಾಗದು. ಹೆಚ್ಚಿನ ತನಿಖೆ ನಂತರ ಸ್ಪಷ್ಟ ಮಾಹಿತಿ ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ. ತನಿಖೆಗೆ ಎಸ್ಐಟಿ (ವಿಶೇಷ ತನಿಖಾ ತಂಡ) ರಚಿಸಲಾಗುವುದು ಎಂದೂ ಹೇಳಿದ್ದಾರೆ.
ಯಾರಿವನು ಡೊಮಿನಿಕ್ ಮಾರ್ಟಿನ್? ಯಾವುದು ಈ ಜೆಹೊವ್ಹಾಸ್ ವಿಟ್ನೆಸ್ಸೆಸ್?
1870ರಲ್ಲಿ ಅಮೆರಿಕದಲ್ಲಿ ಆರಂಭವಾದ ಸಂಘಟನೆ. ಬೈಬಲ್ ವಿದ್ಯಾರ್ಥಿ ಚಳವಳಿಯ (bible student movement) ಒಂದು ಭಾಗ. ಚಾರ್ಲ್ಸ್ ಟೇಜ್ ರಸ್ಸೆಲ್ ಅನ್ನೋ ವ್ಯಕ್ತಿ ಈ ಸಮುದಾಯದ ಸಂಘಟನೆಯ ಸಂಸ್ಥಾಪಕ. ರಸ್ಸೆಲ್ ಹಾಗೂ ಅವರ ಅನುಯಾಯಿಗಳು ವಿಚಿತ್ರ ಆಚರಣೆಗಳನ್ನು ರೂಢಿಸಿಕೊಂಡರು. 1916ರಲ್ಲಿ ರಸ್ಸೆಲ್ ಕಾಲಾನಂತರ ಜೋಸೆಫ್ ಫ್ರಾಂಕ್ಲಿನ್ ರುದರ್ಫೋರ್ಡ್ ಅವರು ಈ ಸಂಘಟನೆಯ ಮುಖ್ಯಸ್ಥರಾದರು. 1931ರಲ್ಲಿ ಜೆಹೋವ್ಹಾಸ್ ವಿಟ್ನೆಸ್ಸೆಸ್ (Jehovah’s Witnesses) ಎಂಬ ಹೆಸರನ್ನು ಅಂಗೀಕರಿಸಿದರು. ರುದರ್ಫೋರ್ಡ್ ನಾಯಕತ್ವದಲ್ಲಿ ಸಂಘಟನೆ ಕ್ಷಿಪ್ರ ಪ್ರಗತಿಯನ್ನು ಕಂಡಿತು. ನ್ಯೂಯಾರ್ಕ್ನ ವಾರ್ವಿಕ್ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಸಂಘಟನೆಯಲ್ಲಿ ವಿಶ್ವಾದ್ಯಂತ ಅಂದಾಜು 85 ಲಕ್ಷ ಸದಸ್ಯರಿದ್ದಾರೆ. ಇವರೂ (Jehovah’s Witnesses) ಕ್ರೈಸ್ತರೇ.. ಆದರೆ ಕ್ರೈಸ್ತರಲ್ಲ.
ಕ್ರೈಸ್ತರಲ್ಲ.. ಆದರೆ ಕ್ರೈಸ್ತರು ಎಂದರೆ ಯಾರು?
ಇವರಿಗೆ ಜೆಹ್ಹೋವ್ಹಾ (Jehovah’s) ಮಾತ್ರ ದೇವರು. ಸೃಷ್ಟಿಕರ್ತ. ಏಕೈಕ ಸಾರ್ವಭೌಮ ಎನ್ನುವುದು ಇವರ ನಂಬಿಕೆ. ಯೇಸು ಕ್ರಿಸ್ತನೂ (Jesus Christ) ಜೆಹ್ಹೋವ್ಹಾನ (Jehovah’s) ಸೃಷ್ಟಿ. ಕ್ರಿಸ್ತ ದೇವರ ರಕ್ಷಕ ಹಾಗೂ ದೇವರ ಪುತ್ರನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳುತ್ತಾರೆ. ದೇವರು, ಕ್ರಿಸ್ತ ಹಾಗೂ ದೇವಶಕ್ತಿಯ ತ್ರಿಕೂಟವೇ ಭಗವಂತ ಎಂಬ ಕ್ರೈಸ್ತರ ನಂಬಿಕೆಯನ್ನು ಇವರು ಒಪ್ಪಲ್ಲ. ಮನೆಮನೆಗೆ ತೆರಳಿ ಕ್ರೈಸ್ತಧರ್ಮ ಪ್ರಚಾರ ಮಾಡುತ್ತಾರೆ. ತಮ್ಮ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಾರೆ. ಕ್ರಿಸ್ಮಸ್ (chrissmass) ಹಾಗೂ ಈಸ್ಟರ್ (ester day) ಅನ್ನು ಆಚರಣೆ ಮಾಡುವುದಿಲ್ಲ. ಅವೆಲ್ಲಾ ಧರ್ಮಬಾಹಿರ ಎಂದು ಭಾವಿಸಿದ್ದಾರೆ. ಇವರಿಗೆ ಯೇಸು ದೇವರ ಸೇವಕನೇ ಹೊರತು, ದೇವರಲ್ಲ. ಹೀಗಾಗಿ ಇವರು ಕ್ರೈಸ್ತರಾದರೂ, ಕ್ರೈಸ್ತರಿಗಿಂತ ಭಿನ್ನ. ಹಾಗೆಂದೇ ಇವರು ತಮ್ಮನ್ನು ತಾವು ಜೆಹೋವ್ಹಾಸ್ ವಿಟ್ನೆಸ್ಸೆಸ್ ಎಂದು ಕರೆದುಕೊಳ್ಳುತ್ತಾರೆ.
ಇವರು ಎಷ್ಟರಮಟ್ಟಿಗೆ ಕರ್ಮಠರೆಂದರೆ ಈ ಸಂಘಟನೆಯವರು ರಕ್ತ ಪಡೆಯುವುದಿಲ್ಲ. ರಕ್ತ ಪವಿತ್ರ ಎಂದು ನಂಬುವ ಇವರು ರಕ್ತಪಡೆಯುವ ಪರಿಸ್ಥಿತಿ ಬಂದರೆ ಸಾಯಲೂ ಸಿದ್ಧ.
ಈ ಸಂಘಟನೆಯ ಸದಸ್ಯನಾಗಿದ್ದೆ ಎಂದಿರುವ ಮಾರ್ಟಿನ್
ದಾಳಿಕೋರ ಮಾರ್ಟಿನ್, ‘ಕಳೆದ 16 ವರ್ಷದಿಂದ ನಾನು ಈ ಸಂಘಟನೆಯ ಸದಸ್ಯನಾಗಿದ್ದೆ. ಆದರೆ 6 ವರ್ಷದಿಂದ ಈ ಸಂಘಟನೆಯ ಚಿಂತನೆಗಳು ಬದಲಾಗಿದ್ದವು. ರಾಷ್ಟ್ರಗೀತೆಗಳನ್ನು ಹಾಡದಂತೆ ಜೆಹೋವಾಸ್ ಪಂಥೀಯರಿಗೆ ಬೋಧನೆ ಮಾಡಲಾಗಿತ್ತು. ಅಲ್ಲದೆ 4 ವರ್ಷದ ಮಗವಿಗೆ ಕೂಡ ‘ಇನ್ನೊಬ್ಬ ಮಗುವೊಂದಿಗೆ ಚಾಕೋಲೇಟ್ ಹಂಚಿಕೊಳ್ಳಬೇಡ’ ಎಂದು ಬೋಧಿಸಿ ಮಕ್ಕಳ ನಡುವೆಯೇ ದ್ವೇಷ ಹರಡಿಸಲಾಗುತ್ತಿತ್ತು. ಕೇರಳದಲ್ಲಿ ನೈಸರ್ಗಿಕ ವಿಕೋಪದ ವೇಳೆ ಎಲ್ಲರಿಗೂ ಸಹಾಯ ಮಾಡದೇ ಜೆಹೋವಾ ಪಂಥದ ಮನೆಗಳಿಗೆ ಮಾತ್ರ ಸಂಘಟನೆಯವರು ಸಹಾಯ ಮಾಡಿದರು. ಇದರಿಂದ ಕ್ರುದ್ಧನಾಗಿ ನಾನು ಅಂದಿನಿಂದಲೇ ಇಂಥ ದೇಶದ್ರೋಹಿ ಹಾಗೂ ದ್ವೇಷಕಾರಕ ಬೋಧನೆಗಳನ್ನು ಕೈಬಿಡಿ ಎಂದು ಒತ್ತಾಯಿಸುತ್ತಿದ್ದೆ. ನನ್ನ ಮಾತಿಗೆ ಅವರು ಕಿವಿಗೊಡಲಿಲ್ಲ. ಹೀಗಾಗಿ ನಾನು ಬಾಂಬ್ ಸ್ಫೋಟಿಸಿದೆ ಎಂದಿದ್ದಾನೆ.



