ಸ್ವಾಭಿಮಾನ ಚಿತ್ರದ ಮೂಲಕ ಆಗಿನ ಕಾಲದ ಯುವಕರ ಹೃದಯ ಕದ್ದಿದ್ದವರು ಮಹಾಲಕ್ಷ್ಮಿ. ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಲಿಪ್ ಕಿಸ್ ನೀಡಿದ ಖ್ಯಾತಿಯೂ ಅವರದ್ದೇ. ರವಿಚಂದ್ರನ್-ಮಹಾಲಕ್ಷ್ಮಿ ರೊಮ್ಯಾನ್ಸ್ನ್ನು ಆಗಿನ ಚಿತ್ರರಂಗ ಬೆಚ್ಚಿಬಿದ್ದು ನೋಡಿತ್ತು. ಆದರೆ 80-90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾಗಲೇ ನಟಿ ಮಹಾಲಕ್ಷ್ಮಿ ಚಿತ್ರರಂಗ ಬಿಟ್ಟರು. ಮದುವೆಯಾದರು. ಇಬ್ಬರು ಮಕ್ಕಳ ತಾಯಿಯಾದರು. ಅರ್ಧದಲ್ಲೇ ನಿಲ್ಲಿಸಿದ್ದ ವಿದ್ಯಾಭ್ಯಾಸ ಕಂಪ್ಲೀಟ್ ಮಾಡಿದರು. ಇದೀಗ ಮತ್ತೆ ಬಂದಿದ್ದಾರೆ.
ಟಿಆರ್ಪಿ ರಾಮ ಅನ್ನೋ ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ವಾಪಸ್ ಆಗಿದ್ದಾರೆ. ಇದಕ್ಕೂ ಮುನ್ನ ಸ್ಟಾರ್ ಸುವರ್ಣದ ಧಾರಾವಾಹಿಯ ಮೂಲಕ ಬಣ್ಣ ಹಚ್ಚಿದ್ದರು. 33 ವರ್ಷಗಳ ನಂತರ ಹೀಗೆ ವಾಪಸ್ ಆಗುತ್ತಿರುವಾಗಲೇ ತಾವು ಕನ್ವರ್ಟ್ ಆಗಿರುವುದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ನಾನು ಕ್ರಿಶ್ಚಿಯನ್…ಕನ್ವರ್ಟೆಡ್ ಕ್ರಿಶ್ಚಿಯನ್ ಅನ್ನೋ ವಿಚಾರವನ್ನು ಧೈರ್ಯವಾಗಿ ಹೇಳುತ್ತೀನಿ. ನನ್ನ ಬಗ್ಗೆ ಬಂದಿರುವ ಸುದ್ದಿಗಳು ಎಲ್ಲಾ ಗಾಸಿಪ್ಗಳು ಎಂದು ಈಗಾಗಲೆ ಹಲವು ಮಾಧ್ಯಮಗಳ ಮೂಲಕ ಸ್ಪಷ್ಟನೆ ಕೊಟ್ಟಿದ್ದೀನಿ. ನಾನು Nun ಆಗಿರುವುದು ಶುದ್ಧ ಸುಳ್ಳು ಹಾಗೆ ಸಾಧ್ಯವೂ ಇಲ್ಲ ಏಕೆಂದರೆ ನಾನು ಪಕ್ಕಾ ಫ್ಯಾಮಿಲಿ ಮಹಿಳೆ ಎಂದಿದ್ದಾರೆ ನಟಿ ಮಹಾಲಕ್ಷ್ಮಿ.ಮಹಾಲಕ್ಷ್ಮಿ ಅವರ ತಂದೆ ಹಿಂದೂ. ತಾಯಿ ಕ್ರಿಶ್ಚಿಯನ್.
ಈ ಹೇಳಿಕೆ ಮೂಲಕ ಮಹಾಲಕ್ಷ್ಮಿ ಮತ್ತೊಮ್ಮೆ ತಮ್ಮ ಬಗ್ಗೆ ಹರಡಿರುವ ಗಾಳಿ ಸುದ್ದಿಗಳನ್ನೆಲ್ಲ ತಳ್ಳಿ ಹಾಕಿದ್ದಾರೆ. ‘ನನ್ನ ಜೀವನ ಚೆನ್ನಾಗಿದೆ. ನನ್ನ ಫ್ಯಾಮಿಲಿಯನ್ನು ಕ್ಯಾಮೆರಾ ಮುಂದೆ ತರುವುದಿಲ್ಲ ನನಗೆ ಇಷ್ಟವಿಲ್ಲ ವೈಯಕ್ತಿಕ ಮತ್ತು ವೃತ್ತಿ ಜೀವನ ಬೇರೆ ಬೇರೆ. ಗಾಸಿಪ್ಗಳು ಸಾಕಷ್ಟು ಇರುತ್ತದೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅಮರ್ ಸಿನಿಮಾದಲ್ಲಿ ನನ್ನ ಕಥೆ ಹಾಗೆ ಹೀಗೆ ಎಂದು ಮಾಡುತ್ತಿದ್ದರು . ನಿರ್ದೇಶಕರ ಇಮ್ಯಾಜಿನೇಷಕ್ ಅದರ ಬಗ್ಗೆ ನಾನು ಏನೂ ಹೇಳುವುದಕ್ಕೆ ಆಗಲ್ಲ. ಸಿನಿಮಾ ರಿಲೀಸ್ ಆದ ಮೇಲೆ ಜನರು ಮಾತನಾಡಿದ್ದರು. ಚಿತ್ರತಂಡದವರನ್ನು ಸಂಪರ್ಕಿಸಿ ಈ ವಿಚಾರದ ಬಗ್ಗೆ ಕೇಳುವ ಪ್ರಯತ್ನ ಕೂಡ ಮಾಡಲಿಲ್ಲ ಅದೆಲ್ಲಾ ಸಮಯ ವ್ಯರ್ಥ ಮಾಡುತ್ತದೆ. ಅದು ಸುಳ್ಳು ನಾನು ನನ್ ಆಗಿಲ್ಲ. ನನಗೆ ಫ್ಯಾಮಿಲಿ ಇದೆ ಖುಷಿಯಾಗಿದ್ದೀನಿ ಹೀಗಿರುವಾಗ ನಾನು ಯಾಕೆ ತಲೆ ಕೆಡಿಸಿಕೊಂಡು ವಿಚಾರಿಸಬೇಕು. ನಾನು 20 ವರ್ಷ ಇದ್ದಾಗ ಮದುವೆ ಮಾಡಿಕೊಂಡೆ ನನಗೆ ಇಬ್ಬರು ಮಕ್ಕಳಿದ್ದಾರೆ ಜೀನದಲ್ಲಿ ಖುಷಿಯಾಗಿದ್ದೀವಿ ಚೆನ್ನಾಗಿ ಓದಿಕೊಂಡು ಕೆಲಸ ಮಾಡುತ್ತಿದ್ದಾರೆ. ನನ್ನ ಜೀವನದಲ್ಲಿ ಪಾದ್ರಿಯಾಗಲು ಸಮಯವಿಲ್ಲ ಎಂದಿದ್ದಾರೆ ನಟಿ ಮಹಾಲಕ್ಷ್ಮಿ.
ಕ್ಯಾಥಲಿಕ್ ಹಾಸ್ಟಲ್ನಲ್ಲಿ ಬೆಳೆದಿರುವ ಕಾರಣ ನನಗೆ ಜೀಸಸ್ ಮೇಲೆ ತುಂಬಾ ಪ್ರೀತಿ ಇದೆ ಹೀಗಾಗಿ ಚರ್ಚ್ಗೆ ಭೇಟಿ ನೀಡುತ್ತಿದ್ದೆ. ನನ್ನ ಬಾಲ್ಯದಿಂದ ನಾನು ಬೈಬಲ್ ಓದಿಕೊಂಡು ಬಂದಿರುವೆ ಎಂದಿರುವ ಮಹಾಲಕ್ಷ್ಮಿ ತಾವೊಬ್ಬರು ಮತಾಂತರಗೊಂಡ ಕ್ರಿಶ್ಚಿಯನ್. ಅದಕ್ಕೇನೂ ನನಗೆ ಬೇಸರ ಇಲ್ಲ. ಹೆಮ್ಮೆ ಇದೆ. ನನ್ ಆಗುವುದು ಸುಲಭದ ವಿಷಯವಲ್ಲ. ಆದರೆ ನಾನು ನನ್ ಆಗಿಲ್ಲ ಎಂದು ಮತ್ತೊಮ್ಮೆ ಹೇಳಿದ್ದಾರೆ.



