ಕಳೆದ ಎರಡು ವರ್ಷಗಳಿಂದ ವಿದೇಶಗಳಲ್ಲಿ ಭಾರತಕ್ಕೆ ಬೇಕಾಗಿದ್ದ ಉಗ್ರರು ನಿಗೂಢವಾಗಿ ಹತ್ಯೆಯಾಗುತ್ತಿದ್ಧಾರೆ. ಒಬ್ಬೊಬ್ಬರಿಗೆ ಒಂದೊಂದು ಪ್ರಾಬ್ಲಂ. ಒಬ್ಬರಿಗೆ ಲಾರಿ ಗುದ್ದಿ ಆಕ್ಸಿಡೆಂಟ್ ಆಗುತ್ತೆ. ಇನ್ನೊಬ್ಬರಿಗೆ ಸಡನ್ ಆಗಿ ಯಾರೋ ಬಂದು ಗುಂಡಿಕ್ಕಿ ಹೋಗ್ತಾರೆ. ವಾಕಿಂಗ್ ಹೋಗುತ್ತಿದ್ಧಾಗ ಸಾಯ್ತಾರೆ. ಆಸ್ಪತ್ರೆಯಲ್ಲಿ ಚೆಕಪ್ʻಗೆ ಹೋಗಿದ್ದ ಉಗ್ರನಿಗೂ ʻಯಾರೋʼ ವಿಷದ ಇಂಜೆಕ್ಷನ್ ಚುಚ್ಚಿ ಕೊಲ್ತಾರೆ. ಕೆನಡಾ, ಲಂಡನ್(ಬ್ರಿಟನ್), ಕೆನಡಾ, ಪಾಕಿಸ್ತಾನ, ಅಫ್ಘಾನಿಸ್ತಾನ.. ಹೀಗೆ ಜಗತ್ತಿನ ವಿವಿಧೆಡೆಗಳಲ್ಲಿ ಅಡಗಿ ಕುಳಿತಿದ್ದ ಉಗ್ರರೆಲ್ಲ ಯಾರೋ ಅಪರಿಚಿತ, ಆಗಂತುಕರಿಂದ ನಿಗೂಢವಾಗಿ ಸತ್ತು ಹೋಗ್ತಾರೆ. ಯಾರು ಕೊಂದರು ಎನ್ನುವುದಕ್ಕೆ ಸಾಕ್ಷಿಗಳು ಸಿಗುವುದಿಲ್ಲ. ಇಂತಹವರು ಹತ್ಯೆಯಾದ ಕಡೆ ಸಿಸಿಟಿವಿ ಇರುತ್ತವೆ, ಫುಟೇಜ್ ಮಿಸ್ಸಾಗಿರುತ್ತೆ. ಪಾಕಿಸ್ತಾನದಲ್ಲಿ ಯಾರನ್ನೋ ಅರೆಸ್ಟ್ ಕೂಡಾ ಮಾಡ್ತಾರೆ. ಆದರೆ ಅರೆಸ್ಟ್ ಆದವರು ಲೋಕಲ್ ಗೂಂಡಾಗಳು, ಕೊಲೆಗೂ ಅದಕ್ಕೂ ಸಂಬಂಧ ಇಲ್ಲ ಅನ್ನೋದು ಗೊತ್ತಾಗುತ್ತೆ. ಕೆನಡಾದಲ್ಲಿ ಇಬ್ಬರ ಹತ್ಯೆಯಾಗಿತ್ತು. ಭಾರತವೇ ಕೊಂದಿದೆ ಎಂದು ಆರೋಪಿಸಿದ್ದರಾದರೂ, ಇವತ್ತಿಗೂ ಆ ದೇಶಕ್ಕೆ ಒಂದೇ ಒಂದು ಎವಿಡೆನ್ಸ್ ಕೊಡುವುದಕ್ಕೆ ಆಗಿಲ್ಲ. ಹೀಗಿರುವಾಗಲೇ..
ನಂ.18 :
ಇದೀಗ 2018ರಲ್ಲಿ ಭಾರತೀಯ ಸೇನೆ ಮೇಲೆ ನಡೆದ ಸುಂಜುವಾನ್ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್ ಇ ತೈಬಾ ಕಮಾಂಡ್ ಖ್ವಾಜಾ ಶಾಹೀದ್ ಶವವಾಗಿ ಪತ್ತೆಯಾಗಿದ್ದಾನೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೀಲಮ್ ಕಣಿವೆ ಪ್ರದೇಶದ ಖ್ವಾಜಾ ಶಾಹೀದ್, ಮಿಯಾ ಮುಜಾಹೀದ್ ಎಂದೇ ಜನಪ್ರಿಯ. ಪಾಕಿಸ್ತಾನದ ಖೈಬರ್ ಪಖ್ತುಂಕ್ವಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈತ ಕಳೆದೆರಡು ದಿನದಿಂದ ನಾಪತ್ತೆಯಾಗಿದ್ದ. ಅಪರಿಚಿತರರು ಖ್ವಾಜಾ ಶಾಹೀದ್‌ನನ್ನು ಅಪಹರಣ ಮಾಡಿದ್ದರು. ಖ್ವಾಜಾ ಶಾಹೀದ್‌ಗಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು. ಆದರೆ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಕಿಡ್ನಾಪ್ ಮಾಹಿತಿಯನ್ನು ಪಾಕಿಸ್ತಾನ ಅಧಿಕಾರಿಗಳು ಖಚಿತಪಡಿಸಿದ್ದರು. ಇದರ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಕೆಲ ಪ್ರಾಂತ್ಯದಲ್ಲಿ ಅಲರ್ಟ್ ಘೋಷಿಸಲಾಗಿತ್ತು. ಇದೀಗ ಖ್ವಾಜಾ ಶಾಹೀದ್ ಶವ ಪತ್ತೆಯಾಗಿದೆ. ರುಂಡ ಬೇರ್ಪಟ್ಟ ಶವ ಪತ್ತೆಯಾಗಿದೆ. ಇತ್ತೀಚೆಗೆ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿದ್ದ ಲಷ್ಕರ್-ಎ-ಜಬ್ಬಾರ್ ಉಗ್ರ ಸಂಘಟನೆಯ ಸಂಸ್ಥಾಪಕ ದಾವೂದ್ ಮಲಿಕ್‌ನನ್ನು ಪಾಕಿಸ್ತಾನ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಮಲಿಕ್ ಕುಖ್ಯಾತ ಉಗ್ರ ಮೌಲಾನಾ ಮಸೂದ್ ಅಜರ್‌ನ ಆಪ್ತನಾಗಿದ್ದ. ಅದು ನಂ.17.
ನಂ.19 ಹತ್ಯೆ ನಿಗೂಢ :
ಅಕ್ರಂ ಘಾಜಿ. ಈತ ಲಷ್ಕರ್ ಎ ತೊಯ್ಬಾದ ಪ್ರಮುಖ ನಾಯಕ. ಸಂಘಟನೆಗೆ ಯುವಕರನ್ನು ಸೇರಿಸುವುವುದು ಈತನ ಡ್ಯೂಟಿ. ಹಣ ಮತ್ತು ಹೆಣ್ಣಿನ ಆಮಿಷ ತೋರಿಸಿ, ಭಯ ಹುಟ್ಟಿಸಿ, ಧರ್ಮದ ವಿಷ ಬಿತ್ತಿ ಈಗ ಯುವಕರನ್ನು ಉಗ್ರಗಾಮಿ ಸಂಘಟನೆಗೆ ರೀಕ್ರೂಟ್ ಮಾಡುತ್ತಿದ್ದ. ಇವನೀಗ ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ ಸತ್ತು ಹೋಗಿದ್ದಾನೆ.
ಇದರೊಂದಿಗೆ ಭಾರತ ವಿರೋಧಿ ಕೃತ್ಯಗಳ ಎಸಗಿ, ವಿದೇಶಗಳಲ್ಲಿ ನಿಗೂಢವಾಗಿ ಕೊಲೆಯಾಗುತ್ತಿರುವ ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಸಂಖ್ಯೆಯು 19ಕ್ಕೆ ಏರಿಕೆಯಾಗಿದೆ.



