ಯಶ್ ಚಿತ್ರರಂಗಕ್ಕೆ ಬಂದಾಗ ಚಾಕೊಲೇಟ್ ಬಾಯ್. ಅದಾದ ಮೇಲೆ ಯಶ್ ಅವರ ಹೇರ್ ಸ್ಟೈಲ್ ಸ್ವಲ್ಪ ಮಟ್ಟಿಗೆ ಚೇಂಜ್ ಆಗಿದ್ದು, ರಗಡ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದು ಮಾಸ್ಟರ್ ಪೀಸ್ ಚಿತ್ರದಲ್ಲಿ. ಲಕ್ಕಿ ಚಿತ್ರದಲ್ಲಿ ಫನ್ನಿ ಫನ್ನಿಯಾಗಿ ನಟಿಸಿದ್ದ ಯಶ್ ಇವರೇನಾ ಎನ್ನುವಂತೆ ನಟಿಸಿದ್ದರು ಯಶ್. ಅದಾದ ಮೇಲೆ ಯಶ್, ರಾಕಿಂಗ್ ಸ್ಟಾರ್ ಯಶ್ ಆದರು. ಆದರೆ.. ಸುಮಾರು ಐದಾರು ವರ್ಷಗಳಿಂದ ಒಂದೇ ಹೇರ್ ಸ್ಟೈಲ್ ಮೈಂಟೇನ್ ಮಾಡ್ತಿದ್ರು. ಕೆಜಿಎಫ್ ಚಾಪ್ಟರ್ 1 ಆಗಿ, ಕೆಜಿಎಫ್ 2 ಬರುವ ನಡುವೆ ಮತ್ತೊಮ್ಮೆ ಕಿರಾತಕ ಸ್ಟೈಲ್ ಬಂದು ಹೋಗಿದ್ದು ಬಿಟ್ಟರೆ, ಯಶ್ ಕೆಜಿಎಫ್ ಹೇರ್ ಸ್ಟೈಲ್ʻನಲ್ಲೇ ಇದ್ರು. ಕೆಜಿಎಫ್ ಚಾಪ್ಟರ್ ೨ ಮುಗಿದ ಮೇಲೆ ಯಶ್ ಹೇರ್ ಸ್ಟೈಲ್ ಅಷ್ಟೇನೂ ಬದಲಾಗಿರಲಿಲ್ಲ. ಆದರೆ ಇದೀಗ ಯಶ್ ಹೊಸ ಹೇರ್ ಸ್ಟೈಲ್ ಪ್ರತ್ಯಕ್ಷವಾಗಿದೆ.
ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಸ್ಯಾಂಡಲ್‌ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಭಾಗಿಯಾಗಿದ್ದು, ಹೊಸ ಹೇರ್ ಸ್ಟೈಲ್ʻನಲ್ಲಿ ಕಾಣಿಸಿಕೊಂಡಿದ್ದಾರೆ ಯಶ್.
ಇಷ್ಟು ದಿನ ಉದ್ದನೆಯ ಕೂದಲು ಮತ್ತು ಗಡ್ಡದಿಂದ ಅಭಿಮಾನಿಗಳ ಮುಂದೆ ಕಾಣಿಸುತ್ತಿದ್ದ ರಾಕಿಂಗ್ ಸ್ಟಾರ್ ಈಗ ತನ್ನ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ಗಡ್ಡವೇನೋ ಇದೆ. ಆದರೆ ಸಖತ್ ಸ್ಟೈಲಿಷ್ ಆಗಿದೆ. ಗಡ್ಡ ಮತ್ತು ಕಿವಿಯ ಮೇಲೆ ಕ್ಲೀನ್ ಕಟ್ ಆಗಿದ್ದು, ವಿರಾಟ್ ಕೊಹ್ಲಿ ಸ್ಟೈಲ್ ನೆನಪಿಸುವಂತಿದೆ.
ಇದು ಟಾಕ್ಸಿಕ್ ಚಿತ್ರದ ಹೊಸ ಲುಕ್ ಇರಬಹುದಾ ಅನ್ನೋದು ಅಭಿಮಾನಿಗಳ ನಿರೀಕ್ಷೆ. ಇದ್ದರೂ ಇರಬಹುದು.



