ಬುಧವಾರ ಮಧ್ಯಾಹ್ನದ ಹೊತ್ತಿಗೆಲ್ಲ ಇಡೀ ರಾಜ್ಯಕ್ಕೆ (Mild Stroke) ವಿಷಯ ಗೊತ್ತಾಗಿತ್ತು. ತಳಮಳ.. ತಲ್ಲಣ.. ಆತಂಕ.. ಘಟನೆ ಆಗಿದ್ದು ಬೆಳಗ್ಗೆ 3.45ರ ಸುಮಾರಿಗೆ. ಸೂರ್ಯೋದಯದ ಹೊತ್ತಿಗೆಲ್ಲ ಕುಮಾರಸ್ವಾಮಿ (HD Kumaraswamy) ಚೇತರಿಸಿಕೊಂಡಿದ್ದರು. ಆದರೆ ಕಾರ್ಯಕರ್ತರು, ಅಭಿಮಾನಿಗಳಲ್ಲ ಆತಂಕ ಬೇಡ ಎಂದೇ ಸುಮ್ಮನಿದ್ದರೂ, ಸುದ್ದಿ ಬ್ರೇಕ್ ಆಗಿತ್ತು. ಕೊನೆಗೆ ಆಸ್ಪತ್ರೆಯವರೇ ಅಪ್`ಡೇಟ್ ಕೊಟ್ಟರು. ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದರು. ಕುಮಾರಸ್ವಾಮಿಗೆ (HD Kumaraswamy) ಮೈಲ್ಡ್ ಸ್ಟ್ರೋಕ್ (Mild Stroke) ಆಗಿದ್ದು ನಿಜ ಎಂದರು. ಆದರೆ ಡೋಂಟ್‍ವರಿ ಎಂದೂ ಹೇಳಿದರು.
ಮೈಲ್ಡ್ ಸ್ಟ್ರೋಕ್ (Mild Stroke) ಅಂದ್ರೆ ಪಾಶ್ರ್ವವಾಯು ಆಗಿತ್ತಷ್ಟೇ ಅಲ್ಲ, ಬಲಭಾಗದಲ್ಲಿ ಸ್ಟ್ರೋಕ್ ಜೊತೆಗೆ ರಕ್ತನಾಳವೂ ಸ್ವಲ್ಪ ಬ್ಲಾಕ್ ಆಗಿತ್ತು. ಈ ಬಗ್ಗೆ ಜಯನಗರದ (jayanagara) ಅಪೋಲೋ ಆಸ್ಪತ್ರೆ (Apolo hospital) ವೈದ್ಯ ಡಾ. ಸತೀಶ್ ಚಂದ್ರ ಎಚ್ಡಿಕೆಗೆ ನೀಡುತ್ತಿರುವ ಚಿಕಿತ್ಸೆ, ಕುಮಾರಸ್ವಾಮಿ (HD Kumaraswamy) ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಎಚ್ಡಿಕೆಗೆ ನಿನ್ನೆ ತಡ ರಾತ್ರಿ ಅನಾರೋಗ್ಯ ಕಾಣಿಸಿಕೊಂಡಿದೆ. ಎಡಭಾಗದಲ್ಲಿ ರಕ್ತ ಕಟ್ಟಿಕೊಂಡು, ಬಲಭಾಗಕ್ಕೆ ಸಣ್ಣ ಪ್ರಮಾಣದಲ್ಲಿ ಸ್ಟ್ರೋಕ್ ಆಗಿತ್ತು. ಆದರೆ ಅವರು ತಡಮಾಡದೇ ಆಸ್ಪತ್ರೆಗೆ ಧಾವಿಸಿದ್ದಾರೆ. ಹೀಗಾಗಿ ನಾವು ಬೇಗನೆ ಚಿಕಿತ್ಸೆ ಕೊಡಲು ಸಾಧ್ಯವಾಯ್ತು. ಎಚ್ಡಿ (HD Kumaraswamy) ಈಗ ಆರೋಗ್ಯವಾಗಿದ್ದಾರೆ ಅಂತ ಡಾ. ಸತೀಶ್ ಚಂದ್ರ ಹೇಳಿದ್ದಾರೆ. ಆಸ್ಪತ್ರೆಗೆ ಬಂದ ತಕ್ಷಣವೇ ನಾವು ಚಿಕಿತ್ಸೆ ಪ್ರಾರಂಭ ಮಾಡಿದ್ದೇವೆ. ಈಗ ಎಚ್ಡಿ ಕುಮಾರಸ್ವಾಮಿ ಆರೋಗ್ಯ ಸುಧಾರಿಸಿದೆ ಅಂತ ವೈದ್ಯರು ಮಾಹಿತಿ ನೀಡಿದ್ದಾರೆ.
ಕುಮಾರಸ್ವಾಮಿ ಅವರು ಆರಾಮಾಗಿದ್ದಾರೆ. ಊಹಾಪೋಹದ ಸುದ್ದಿಗಳನ್ನ ಹರಡಬೇಡಿ, ರಾಜ್ಯದ ಜನತೆ ಗಾಬರಿಯಾಗೋದು ಬೇಡ. ಯಾರೂ ಸಹ ಆತಂಕಪಡೋದು ಬೇಡ ನಾಳೆಯೇ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ನಾನೇ ಬೇಡ ಅಂದಿದ್ದೀನಿ ಎಂದು ಅನಿತಾ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.
ಪುತ್ರರಾದ ನಿಖಿಲ್ (Nikhil kumaraswamy) , ಪ್ರಜ್ವಲ್ (Prajwal Revanna) ಅಣ್ಣ ರೇವಣ್ಣ (HD Revanna) ಎಲ್ಲರೂ ಆಸ್ಪತ್ರೆಗೆ ಧಾವಿಸಿ ಬಂದಿದ್ದಾರೆ. ಊಹಾಪೋಹಗಳನ್ನು ನಂಬಬೇಡಿ. ಸುಳ್ಳು ಸುದ್ದಿ ಕೊಡಬೇಡಿ. ಕಾರ್ಯಕರ್ತರು ಆತಂಕಗೊಳ್ಳೋದೇನೂ ಬೇಡ ಎಂದಿದ್ದಾರೆ (Prajwal Revanna) ಪ್ರಜ್ವಲ್ ರೇವಣ್ಣ.
ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಸುದ್ದಿ ಹೊರಬರುತ್ತಲೇ ಕಳವಳಗೊಂಡು ಹಿರಿಯ ನಾಯಕರು ವಿಚಾರಿಸಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ (CM siddaramaiah), ಮಾಜಿ ಸಿಎಂ ಯಡಿಯೂರಪ್ಪ (EX Cm BS yeddyurappa), ಬಸವರಾಜ ಬೊಮ್ಮಾಯಿ (EX CM Basavaraja bommai), ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು(Adi chunchanagiri Nirmalana Sree), ಸೇರಿದಂತೆ ಹಲವು ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಐಸಿಯುನಲ್ಲಿಯೇ ಇರುವ ಕುಮಾರಸ್ವಾಮಿ ಅವರನ್ನು ಎಲ್ಲರಿಗೂ ಭೇಟಿ ಮಾಡಲು ಬಿಡುತ್ತಿಲ್ಲ. ಹೀಗಾಗಿ ಕೆಲವು ನಾಯಕರು ದೂರವಾಣಿ ಮೂಲಕವೂ ಮಾಹಿತಿ ತರಿಸಿಕೊಂಡಿದ್ದಾರೆ.
ಡಿಸ್‍ಚಾರ್ಜ್ ಆಗುತ್ತಿದ್ದವರನ್ನು ತಡೆದಿರುವುದು (Anitha Kumaraswamy) ಅನಿತಾ ಕುಮಾರಸ್ವಾಮಿ. ಡಿಸ್`ಚಾರ್ಜ್ ಮಾಡಿಸಿಕೊಂಡು ಮನೆಗೆ ಕರೆ ತಂದರೆ ಸಾಕು, ಜನರನ್ನು ಭೇಟಿ ಮಾಡುವುದು, ತಿರುಗಾಡುವುದು ಮಾಡ್ತಾರೆ. ಅದಕ್ಕೇ ಬೇಡ, ಆಸ್ಪತ್ರೆಯಲ್ಲೇ ಇರಲಿ. ಇಲ್ಲೇ ನೋಡಿಕೊಳ್ಳೋಣ ಎಂದಿದ್ದಾರಂತೆ (Anitha Kumaraswamy) ಅನಿತಾ ಕುಮಾರಸ್ವಾಮಿ.



