ರಮ್ಯಾ (Actress Ramya) ಸತ್ತು ಹೋದರಂತೆ.. ಹಾರ್ಟ್ ಅಟ್ಯಾಕ್ (Heart Attack) ಅಂತೆ.. ಅಲ್ಲಲ್ಲ.. ಕಾರ್ಡಿಯಾಕ್ ಅರೆಸ್ಟ್ (Cardiac arrest) ಅಂತೆ.. ಅಯ್ಯೋ ಪಾಪ.. ಇನ್ನೂ 40 ವರ್ಷದ ಹೆಣ್ಣು ಮಗಳು.. ಮೋಸ್ಟ್`ಲೀ.. ಸಿಕ್ಕಾಪಟ್ಟೆ ಸಣ್ಣ ಆಗಿದ್ರಲ್ಲ.. ಅದಕ್ಕೇ ಹಾಗಾಗಿರ್ಬೇಕು..ಏನೇನೋ ಮಾಡ್ಕಂಡ್ ಸ್ಲಿಮ್ ಆಗೋಕೆ ಹೋಗಿ, ಏನೇನೆಲ್ಲ ಮಾಡ್ಕೋತಾರಪ್ಪ.. ಥ್ಚು.. ಥ್ಚು.. ಥ್ಚು.. ಛೆ.. ಛೆ.. ಛೆ.. ಛೆ.. ಪಾಪ.. ಅಂದುಕೊಂಡಿದ್ದವರ ಮಾತು.. ಆಮೇಲೆ ಯಾವನ್ಲಾ ಅವ್ನು ಸುಮ್ ಸುಮ್ನೆ ಸುಳ್ ಸುದ್ದಿ ಹಬ್ಬಿಸಿದ್ದು ಅನ್ನೋ ಲೆವೆಲ್ಲಿಗೆ ಹೋಗಿತ್ತು. ಸಿಕ್ಕಿದ್ರೆ ಸರಿಯಾಗಿ ವಿಚಾರಿಸಿಕೊಳ್ತಿದ್ರೇನೋ..
ಯಾವನೋ ಒಬ್ಬ ತಮಿಳು ಪಿಆರ್`ಒ (PRO), ರಮ್ಯಾ (Actress Ramya) ನಿಧನರಾಗಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸುದ್ದಿ ಮಾಡಿಬಿಟ್ಟಿದ್ದ. ಕೆಲವು ತಮಿಳು ಚಾನೆಲ್ಲುಗಳಲ್ಲಿ (Tamil news channels) ಪ್ರಸಾರವೂ ಆಯಿತು. ಎಲ್ಲರೂ ಗಾಬರಿಗೊಂಡು ಸ್ಪಷ್ಟತೆಗಾಗಿ ಹುಡುಕಾಡೋಕೆ ಶುರು ಮಾಡಿದರು. ಅಫ್`ಕೋರ್ಸ್ ಪತ್ರಕರ್ತರ (Journalists) ಡ್ಯೂಟಿಯೇ ಅದು. ಈ ಸುದ್ದಿ ಕನ್ನಡದ ಯಾವುದೇ ನ್ಯೂಸ್ ಚಾನೆಲ್ಲುಗಳಲ್ಲಿಯೂ (Kannada news channels) ಪ್ರಸಾರವಾಗಲಿಲ್ಲ. ಪತ್ರಕರ್ತೆ ಧನ್ಯಾ ರಾಮಚಂದ್ರನ್ ಅವರು ನೇರವಾಗಿ ರಮ್ಯಾಗೆ ಕರೆ ಮಾಡಿದರು. ಹಲವು ಬಾರಿ ಕರೆ ಮಾಡಿದರೂ ರಿಸೀವ್ ಮಾಡಲಿಲ್ಲ. ಬಹುಶಃ ನಿದ್ರೆ ಮಾಡುತ್ತಿದ್ದರೇನೋ.. ಯೂರೋಪ್ ಪ್ರವಾಸದಲ್ಲಿರುವ ರಮ್ಯಾ, ಜಿನೀವಾದಲ್ಲಿದ್ದರಂತೆ. ಕೊನೆಗೂ ಫೋನ್ ರಿಸೀವ್ ಮಾಡಿದಾಗ ಪತ್ರಕರ್ತೆ ಹೇಳಿದ ಒಂದು ಮಾತು, ಐ ಆ್ಯಮ್ ಗ್ಲಾಡ್. ಯೂ ಆರ್ ಅಲೈವ್ ಎಂದರಂತೆ ಧನ್ಯಾ. ಅದ್ಯಾರದು.. ನಾನು ಸತ್ತಿದ್ದೇನೆ ಎಂದು ಹೇಳಿದ್ದು ಎಂದು ಪ್ರಶ್ನಿಸಿದ ರಮ್ಯಾ, ತಮ್ಮ ಸಾವಿನ ಸುದ್ದಿ ಹರಡಿಸಿದವರ ವಿರುದ್ಧ ಸಿಟ್ಟಾದರಂತೆ. ಮತ್ತೊಬ್ಬ ಪತ್ರಕರ್ತೆ ಚಿತ್ರಾ ಸುಬ್ರಹ್ಮಣ್ಯಂ ಕೂಡಾ ಫೋನ್`ನಲ್ಲಿ ಮಾತನಾಡಿ ಸುದ್ದಿ ಖಚಿತ ಪಡಿಸಿದರು.
ಅವರಷ್ಟೇ ಅಲ್ಲ, ರಮ್ಯಾ ಅವರೊಂದಿಗೆ ನಟಿಸುತ್ತಿರುವ ಡಾಲಿ ಧನಂಜಯ, ರಮ್ಯಾ ನಿರ್ಮಾಣದ ಚಿತ್ರವನ್ನು ನಿರ್ದೇಶಿಸಿರುವ ರಾಜ್ ಬಿ.ಶೆಟ್ಟಿ ಸೇರಿದಂತೆ ಹಲವರು ನೇರವಾಗಿ ರಮ್ಯಾಗೆ ಕರೆ ಮಾಡಿ, ಮಾತನಾಡಿ ನಿರಾಳರಾಗಿದ್ದಾರೆ.
ಇಷ್ಟಕ್ಕೂ ಈ ಸುದ್ದಿಯನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಂಡಿದ್ದೇಕೆಂದರೆ, ತಮಿಳಿನ ಎಸ್ಎಸ್ ಮ್ಯೂಸಿಕ್, ದಿನಕರನ್ ಹಾಗೂ ಕೆಲವೊಂದು ಅಧಿಕೃತ ಟ್ವಿಟರ್ ಪೇಜ್ಗಳು ಕೂಡ ನಟಿ ರಮ್ಯಾ ಅವರ ಚಿತ್ರಗಳನ್ನು ಪೋಸ್ಟ್ ಮಾಡಿ ಕಾರ್ಡಿಯಾಕ್ ಅರೆಸ್ಟ್ನಿಂದ ನಿಧನರಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದವು. ಹೀಗಾಗಿ ಎಲ್ಲರೂ ಗಾಬರಿ ಬಿದ್ದಿದ್ದರು. ಕೊನೆಗೆ ಆ ಪಿಆರ್‍ಒ ಕೂಡಾ ಸುದ್ದಿಯನ್ನು ಡಿಲೀಟ್ ಮಾಡಿಬಿಟ್ಟ.
ಇಷ್ಟಕ್ಕೂ ಆಗಿದ್ದಾದರೂ ಏನು..?
ರಮ್ಯಾ ನಿಧನದ ಸುದ್ದಿಗೂ, ವಿಜಯ್ ರಾಘವೇಂದ್ರ (Vijay Ragahavendra) ಅವರ ಪತ್ನಿ ಸ್ಪಂದನ (Spandana Vijay Ragahavendra) ಅವರ ದುರಂತ ಸಾವಿಗೂ ಸಂಬಂಧ ಇದೆ. ವಿಜಯ್ ರಾಘವೇಂದ್ರ ಅವರ ಪತ್ನಿಯ ಹೆಸರು ಸ್ಪಂದನ(Spandana Vijay Ragahavendra). ಸ್ಪಂದನ ಹೃದಯಾಘಾತದಿಂದ ನಿಧರಾಗಿದ್ದರು. ಆ ಸಾವಿನ ಸುದ್ದಿಯ ಮಾಹಿತಿಗಳಲ್ಲಿ ಏನನ್ನೋ ಹೊಸದು ಹುಡುಕಿ ಸುದ್ದಿ ಕೆದಕಿ ವರದಿ ಮಾಡುತ್ತಲೇ ಇವೆ ವೆಬ್`ಸೈಟ್ ಮತ್ತು ಯೂಟ್ಯೂಬ್ ಚಾನೆಲ್ಲುಗಳು. ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ರಮ್ಯಾ ಅವರ ಮತ್ತೊಂದು ಹೆಸರು ದಿವ್ಯಸ್ಪಂದನ (Divya Spandana) ಅನ್ನೋದು ಗೊತ್ತೇ ಇರುತ್ತೆ. ರಮ್ಯಾ (Divya Spandana) ಅನ್ನೋದು ಸಿನಿಮಾಗಾಗಿ ಪಾರ್ವತಮ್ಮ ರಾಜಕುಮಾರ್ (Parvathamma Rajkumar) ಇಟ್ಟ ಹೆಸರು. ಅಲ್ಲಿಯೇ ಆ ಪಿಆರ್`ಓ ಕನ್`ಫ್ಯೂಸ್ ಮಾಡ್ಕೊಂಡಿದ್ದ. ಸ್ಪಂದನ ಸಾವನ್ನು ದಿವ್ಯ ಸ್ಪಂದನಾ ಎಂದು ಅರ್ಥ ಮಾಡಿಕೊಂಡು ಪೋಸ್ಟ್ ಮಾಡಿದ್ದ. ಸ್ವಲ್ಪ ಕಾಮನ್`ಸೆನ್ಸ್ ಬಳಸಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲ. ಪೋಸ್ಟ್ ಮಾಡಿಯೇಬಿಟ್ಟಿದ್ದ. ನಂತರ ಆಗಿದ್ದೆಲ್ಲವೂ ಗೊತ್ತೇ ಇದೆ.



