ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿದ್ದ ಕಾರ್ ಆಕ್ಸಿಡೆಂಟ್ ಆಗಿದೆ. ಲಕ್ಷ್ಮಿ ಅವರು ಅವರ ಸಹೋದರ ಚನ್ನರಾಜ್ ಹಟ್ಟಿಹೊಳಿ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ದಾರಿಗೆ ಅಡ್ಡ ಬಂದ ನಾಯಿಯನ್ನ ರಕ್ಷಿಸೋಕೆ ಹೋಗಿ ಕಾರ್ ಆಕ್ಸಿಡೆಂಟ್ ಆಗಿದೆ. ಕಿತ್ತೂರು ಸಮೀಪದಲ್ಲಿಯೇ ಇರುವ ಅಂಬಡಗಟ್ಟಿ ಬಳಿ ಲಕ್ಷ್ಮಿ ಅವರಿದ್ದ ಕಾರು ಆಕ್ಸಿಡೆಂಟ್ ಆಗಿದ್ದು ಬೆಳಗಿನ ಜಾವ ಸುಮಾರು 5 ಗಂಟೆ ಸುಮಾರಿನಲ್ಲಿ. ರೋಡಿಂದ ಸಡನ್ ಆಗಿ ತಿರುಗಿದ ಕಾರು, ರಸ್ತೆಯ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ತುರ್ತಾಗಿ ಹೊರಟಿದ್ದ ಕಾರಣ, ಬೆಂಗಾವಲು ವಾಹನಕ್ಕೆ ಮಾಹಿತಿ ನೀಡದೆ ಹೊರಟಿದ್ದರಂತೆ. ಆಗ ಈ ಆಕ್ಸಿಡೆಂಟ್ ಜರುಗಿದೆ.
ಸೀಟ್ ಬೆಲ್ಟ್ ಹಾಕ್ಕೊಂಡಿದ್ದ ಕಾರಣ ಏರ್ ಬ್ಯಾಗ್ ತಕ್ಷಣ ಓಪನ್ ಆಗಿದೆ. ಲಕ್ಷ್ಮೀ ಹೆಬ್ಬಾಳ್ಕರ್, ಅವರ ತಮ್ಮ ಎಮ್‌ಎಲ್‌ಸಿ ಚನ್ನರಾಜ್ ಹಟ್ಟಿಹೊಳಿ, ಡ್ರೈವರ್ ಶಿವಪ್ರಸಾದ್ ಜೀವಂತವಾಗಿ ಉಳ್ಕೊಂಡಿರೋದು ಈ ಕಾರಣಕ್ಕೆ. ಇಷ್ಟೆಲ್ಲ ಆಗಿ ಲಕ್ಷ್ಮೀ ಹೆಬ್ಭಾಳ್ಕರ್ ಅವರಿಗೆ ಮುಖಕ್ಕೆ ಸ್ವಲ್ಪ ಗಾಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಎಲ್ 1, ಎಲ್ 4 ಡ್ಯಾಮೇಜ್ ಆಗಿದ್ಯಂತೆ. ಈ ಎಲ್ 1 ಮತ್ತು ಎಲ್ 4 ಇದಾವಲ್ಲ, ಅವನ್ನ ಲುಂಬರ್ ಸ್ಪೈನ್ ಅಂತಾರೆ. ಅದರಲ್ಲಿ ಎಲ್ 1, ಎಲ್ 2, ಎಲ್ 3, ಎಲ್ 4 ಹಾಗೂ ಎಲ್ 5 ಅನ್ನೋ ಮೂರು ಜಾಯಿಂಟ್ಸ್ ಇರುತ್ವೆ. ಬೆನ್ನಿನ ಭಾಗದಲ್ಲಿ ಬರೋ ಕಶೇರುಕ ಮಣಿ ಅಂತಾರೆ.
ಈ ಎಲ್ 1 ಮತ್ತು ಎಲ್ 4 ಡ್ಯಾಮೇಜ್ ಆಗಿದ್ಯಲ್ಲ, ಇವು ಮೂಳೆಯ ಎರಡೂ ಕಡೆ ಸೈಕಲ್ ಚೈನ್ ಲಿಂಕ್ ಇರ್ತವಲ್ಲ, ಹಾಗೆ ಇರುತ್ವೆ. ಅವುಗಳಲ್ಲಿ ಒಂದಕ್ಕೆ ಒಂದು ಲಿಂಕ್ ಇರುತ್ತೆ.
ಬಲಭಾಗದ ಒಂದು ಸೈಡಲ್ಲಿ ಎಲ್ 1 ಡ್ಯಾಮೇಜ್ ಆದ್ರೆ, ಎಡಭಾಗದ ಎಲ್ 2 ಕೂಡಾ ಡ್ಯಾಮೇಜ್ ಆಗುತ್ತೆ. ಆ ರೀತಿ ಇರುತ್ತೆ ದೇಹದ ನರವ್ಯೂಹ ವ್ಯವಸ್ಥೆ. ಈಗ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಎಲ್ 1, ಎಲ್ 4 ಎರಡಕ್ಕೂ ದೊಡ್ಡ ಪೆಟ್ಟು ಬಿದ್ದಿಲ್ಲ. ಡಾಕ್ಟರ್ ಸದ್ಯಕ್ಕೆ ಹೇಳೋ ಪ್ರಕಾರ ಒಂದೆರಡು ದಿನ ಆಸ್ಪತ್ರೆಯಲ್ಲಿದ್ದು ಡಿಸ್ ಚಾರ್ಜ್ ಆಗ್ತಾರೆ. ಆದರೆ ಇದು ಲೈಫ್ ಲಾಂಗ್ ಕಾಡ್ತಾನೇ ಇರುತ್ತೆ. ಕನಿಷ್ಠ ಒಂದು ತಿಂಗಳು ಹಾಸಿಗೆ ಬಿಟ್ಟು ಮೇಲೇಳೋದಕ್ಕೆ ಆಗಲ್ಲ. ಆದರೆ ಕಂಪ್ಲೀಟ್ ರಿಕವರ್ ಆಗ್ತಾರೆ.
ಮರಕ್ಕೆ ಗುದ್ದಿದ ರಭಸಕ್ಕೆ ಇನೋವಾ ಹೈ ಕ್ರಾಸ್ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನ ಚಾಲಕ, ಗನ್ ಮ್ಯಾನ್, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅವರ ಸಹೋದರ ಬದುಕುಳಿದಿದ್ದೇ ಪವಾಡ. ಯಾಕಂದ್ರೆ ಕಾರಿನ ಸ್ಥಿತಿ ನೋಡಿದರೆ ಅಪಘಾತದ ಕರಾಳತೆ ಬಿಚ್ಚಿಡ್ತಿದೆ. ಇನೋವಾ ಹೈ ಕ್ರಾಸ್ ಕಾರು ಫುಲ್ ಹೈಫೈ ಆಗಿರುವುದರಿಂದ ಎಲ್ಲರೂ ಬದುಕುಳಿದಿದ್ದಾರೆ. ಗುದ್ದಿದ ರಭಸಕ್ಕೆ ಕಾರಿನ ಹೆರ್ಬ್ಯಾಗ್ಗಳು ಓಪನ್ ಆಗಿವೆ. ಹೀಗಾಗಿ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದಾವೆ. ಇನ್ನೋವಾ ಬಿಟ್ಟರೇ ಬೇರೆ ಯಾವುದೇ ಸಣ್ಣ-ಪುಟ್ಟ ಕಾರು ಆಗಿದ್ದರೆ ದೊಡ್ಡ ದುರಂತವೇ ಆಗಿರೋದು.
ಆಧುನಿಕ ವಾಹನಗಳಲ್ಲಿ ಏರ್ ಬ್ಯಾಗ್ ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ. ಅಪಘಾತ ಸಂದರ್ಭಗಳಲ್ಲಿ ಚಾಲಕ ದಿಢೀರ್ ಬ್ರೇಕ್ ಹಾಕುವ ಸಂದರ್ಭದಲ್ಲಿ ಎದುರಿನ ಸ್ಟೀರಿಂಗ್ ಅಥವಾ ಡ್ಯಾಷ್ ಬೋರ್ಡ್‌ಗಳಿಗೆ ತಲೆ ಅಪ್ಪಳಿಸಿ ತೀವ್ರ ರೀತಿಯ ಪೆಟ್ಟು ಬೀಳುವ ಸಂಭವವಿರುತ್ತದೆ. ಇದನ್ನು ತಡೆಯುವಲ್ಲಿ ಏರ್ ಬ್ಯಾಗ್‌ಗಳು ನಿರ್ಣಾಯಕ ಪಾತ್ರವಹಿಸುತ್ತದೆ. ಅದರಂತೆ ಹೆಬ್ಬಾಳ್ಕರ್ ಮರಕ್ಕೆ ಡಿಕ್ಕಿ ಹೊಡೆದ ತಕ್ಷಣವೇ ಸ್ಟೇರಿಂಗ್ ಹಾಗೂ ಡ್ಯಾಶ್ ಬೋರ್ಡ್ನಿಂದ ಏರ್ ಬ್ಯಾಗ್‌ಗಳು ಓಪನ್ ಆಗಿದ್ದರಿಂದ ಪ್ರಾಣಾಪಯಾದಿಂದ ಪಾರಾಗಿದ್ದಾರೆ.
ಸೈಡ್ ಏರ್ ಬ್ಯಾಗ್‌ಗಳು ಬದಿಯಿಂದ ಢಿಕ್ಕಿಯಾದ ಸಂದರ್ಭದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತವೆ. ಸೈಡ್ ಏರ್ ಬ್ಯಾಗ್ ಎರಡು ವಿಧಗಳಲ್ಲಿರುತ್ತದೆ. ಇದರಲ್ಲಿ ಮೊದಲನೆಯದ್ದು ಸೈಡ್ ಟಾರ್ಸೊ (ದೇಹ) ಏರ್ ಬ್ಯಾಗ್ ಆಗಿದೆ. ಇದು ಸಾಮಾನ್ಯವಾಗಿ ಸೀಟಿನ ಬದಿಯಲ್ಲಿ ಲಗತ್ತಿಸಲಾಗಿದ್ದು, ಅಪಘಾತ ಸಂದರ್ಭದಲ್ಲಿ ಚಾಲಕ ಹಾಗೂ ಬಾಗಿಲು ನಡುವೆ ತೆರೆದುಕೊಳ್ಳುತ್ತದೆ. ಅದರಂತೆ ಹೆಬ್ಬಾಳ್ಕರ್ ಕಾರಿನಲ್ಲೂ ಸಹ ಸೈಡ್ ಏರ್ ಬ್ಯಾಗ್‌ಗಳು ಸಹ ಓಪನ್ ಆಗಿವೆ.
ಸೆಂಟ್ರಲ್ ಏರ್ ಬ್ಯಾಗ್ ಕಂಟ್ರೋಲ್ ಯುನಿಟ್ (ಎಸಿಯು) ವಾಹನಗಳಲ್ಲಿ ಸೆನ್ಸಾರುಗಳನ್ನು ಮಾನಿಟರ್ ಮಾಡುತ್ತದೆ. ಏರ್ ಬ್ಯಾಗ್‌ಗಳು ಸ್ಟೀರಿಂಗ್ ಒಳಗಡೆ ಪ್ಲಾಸ್ಟಿಕ್ ರೀತಿಯಲ್ಲಿ ಇರುತ್ತೆ. ಅಪಘಾತ ವೇಳೆ ತಕ್ಷಣ ಹೊರಚಿಮ್ಮುವಂತೆ ವ್ಯವಸ್ಥೆ ಮಾಡಲಾಗಿದ್ದು, ಇದು ಸ್ಟೀರಿಂಗ್ ಮೇಲೆ ಬಂದಪ್ಪಳಿಸುವ ಪ್ರಯಾಣಿಕರ ಮುಖಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತದೆ. ಅಲ್ಲದೆ ತೆರೆಯಲ್ಪಟ್ಟ ಕ್ಷಣಾರ್ಧದಲ್ಲೇ ಮುದುಡಿಕೊಳ್ಳುತ್ತದೆ. ವಾಹನದ ಮುಂಭಾಗದ ಬಂಪರ್‌ನಲ್ಲಿರುವ ಸೆನ್ಸಾರ್ ಮೇಲೆ ಕೊಂಚ ಒತ್ತಡದ ಸ್ಪರ್ಶ ಬಿದ್ದರೂ ಏರ್ ಬ್ಯಾಗ್ ತೆರೆದುಕೊಳ್ಳುವಂತೆ ಮಾಡಲಾಗಿರುತ್ತದೆ. ಅದರಂತೆ ಹೆಬ್ಬಾಳ್ಕರ್ ಅಪಘಾತದಲ್ಲೂ ಸಹ ಕಾರಿನ ಎಲ್ಲಾ ಏರ್ ಬ್ಯಾಗ್‌ಗಳು ತೆರೆದುಕೊಂಡಿದ್ದು, ನಾಲ್ವರ ಜೀವ ಕಾಪಾಡಿವೆ.



