ಹಾಸ್ಟೆಲ್ ಹುಡುಗರು. ಹೊಸ ಹುಡುಗರ ಸಿನಿಮಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದೆ. ಚಿತ್ರದಲ್ಲಿ ದಿ.ಡಾ. ಪುನೀತ್ ರಾಜಕುಮಾರ್ (Dr.Puneeth Rajkumar) , ರಿಷಬ್ ಶೆಟ್ಟಿ (Rishabh Shetty) , ರಕ್ಷಿತ್ ಶೆಟ್ಟಿ (Rakshith Shetty) ಜೊತೆಗೆ ಸ್ಯಾಂಡಲ್`ವುಡ್ ಕ್ವೀನ್ ರಮ್ಯಾ (Ramya) ಕೂಡಾ ಇದ್ದಾರೆ. ಆದರೆ, ಇದು ಸ್ಪೆಷಲ್ ಅಪಿಯರೆನ್ಸ್. ಅತಿಥಿ ಪಾತ್ರ. ಈ ಚಿತ್ರದಲ್ಲಿ ಮತ್ತೊಮ್ಮೆ ಟೀಚರ್ ಅರ್ಥಾತ್ ಪ್ರೊಫೆಸರ್/ಲೆಕ್ಚರರ್ ಆಗಿದ್ದಾರೆ. ಆದರೆ ವಿಷಯ ಅದಲ್ಲ. ಹಾಸ್ಟೆಲ್ ಹುಡುಗರು (Hostel hudugaru bekagiddare) ಚಿತ್ರದ ಪ್ರಚಾರದಲ್ಲಿ ಕೂಡಾ ಪಾಲ್ಗೊಂಡಿದ್ದ (Ramya) ರಮ್ಯಾ, ಸಿನಿಮಾ ರಿಲೀಸ್ ಆಗುವುದಕ್ಕೆ ಮೊದಲು ಟ್ರೇಲರ್ ರಿಲೀಸ್ ಆದ ಮೇಲೆ ಚಿತ್ರಕ್ಕೊಂದು ತಡೆಯಾಜ್ಞೆ ತಂದುಬಿಟ್ಟರು. ಸಿನಿಮಾ ರಿಲೀಸ್ ಆಗುತ್ತೋ.. ಇಲ್ಲವೋ.. ಎಂಬ ಅನುಮಾನ ಹುಟ್ಟಿಸಿದರು.
ಚಿತ್ರದ (Hostel hudugaru bekagiddare) ಟ್ರೇಲರ್`ನಲ್ಲಿ ತಮ್ಮ ದೃಶ್ಯಗಳು ಇರಬಾರದು. ಹಾಸ್ಟೆಲ್ ಹುಡುಗರು ಪ್ರೋಮೋದಲ್ಲಿ ಮಾತ್ರ ನನ್ನ ದೃಶ್ಯಗಳು ಬಳಸುವುದಾಗಿ ಹೇಳಿದ್ದರು. ಆದರೀಗ, ಸಿನಿಮಾದಲ್ಲೂ ನನ್ನ ದೃಶ್ಯಗಳನ್ನು ಬಳಿಸಿದ್ದಾರೆ ಎಂದು ಆರೋಪಿಸಿದ್ದ (Ramya) ರಮ್ಯಾ 1 ಕೋಟಿ ರೂ. ನಷ್ಟ ಪರಿಹಾರವಾಗಿ ಕೊಡಬೇಕು ಎಂದು ದೂರು ಕೊಟ್ಟಿದ್ದರು. ಆದರೆ ಚಿತ್ರತಂಡದ (Hostel hudugaru bekagiddare) ಬಳಿ ಅಗ್ರಿಮೆಂಟ್ ಕಾಪಿ ಇತ್ತು. ಹೀಗಾಗಿ ಸಿನಿಮಾ ರಿಲೀಸ್`ಗೆ ಯಾವ ಸಮಸ್ಯೆಯೂ ಆಗಲಿಲ್ಲ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (Hostel hudugaru bekagiddare) ಚಿತ್ರ ತಂಡದ ಪರವಾಗಿ ಲಾಯರ್ ವೇಲನ್ ವಾದಿಸಿದ್ದರು.
ಚಿತ್ರೀಕರಣದ ಸಮಯದಲ್ಲಿ ತಮ್ಮ ಫೋಟೋ ಮತ್ತು ವಿಡಿಯೋವನ್ನು ಪ್ರಚಾರಕ್ಕೆ ಬಳಸಬಾರದು ಎಂದು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡಕ್ಕೆ ಸೂಚಿಸಿದ್ದರಂತೆ. 2022ರ ಏಪ್ರಿಲ್ನಲ್ಲಿ ಒಪ್ಪಂದವಾಗಿದೆ. ಒಪ್ಪಂದವನ್ನು ಚಿತ್ರತಂಡ ಮುರಿದಿದ್ದು, ಸಿನಿಮಾ ಸೇರಿದಂತೆ ಅದರ ಟ್ರೇಲರ್, ಪೋಸ್ಟರ್ನಲ್ಲಿ ತಮ್ಮ ಫೋಟೋ, ವಿಡಿಯೋಗಳನ್ನು ತೆಗೆಯಬೇಕು ಹಾಗೂ ತಮ್ಮ ಅನುಮತಿಯಿಲ್ಲದ ಅನಧಿಕೃತವಾಗಿ ತಮ್ಮ ದೃಶ್ಯವಿರುವ ಟ್ರೇಲರ್ ಬಿಡುಗಡೆ ಮಾಡಿದ ಕಾರಣ ಚಿತ್ರತಂಡ ತಮಗೆ 1 ಕೋಟಿ ರೂ. ಹಣವನ್ನು ಪರಿಹಾರ ಧನವಾಗಿ ರಮ್ಯಾ ನೋಟಿಸ್ ನೀಡಿದ್ದರು.
ರಮ್ಯಾ (Ramya) ಅವರು ನಮ್ಮ ಸಿನಿಮಾದಲ್ಲಿ ನಟಿಸಿದ್ದಾರೆ ಮತ್ತು ಡಬ್ಬಿಂಗ್ ಕೂಡ ಮಾಡಿದ್ದಾರೆ. ಆದರೂ ಈಗ ಈ ರೀತಿಯ ನೋಟಿಸ್ ಬಂದಿದೆ ಎಂದು ವಾದಿಸಿದ್ದ ಚಿತ್ರತಂಡ, ಅಗ್ರಿಮೆಂಟ್ ಕಾಪಿಯನ್ನು ತೋರಿಸಿತ್ತು. ಹೀಗಾಗಿ ರಿಲೀಸ್ ನೋ ಪ್ರಾಬ್ಲಂ ಆಗಿದೆ.
ಆದರೆ ರಮ್ಯಾ ಅವರು ಇಂತಹ ನಿರ್ಧಾರ ತೆಗೆದುಕೊಳ್ಳೋಕೆ ಕಾರಣ ಏನು ಎಂದರೆ ರಾಜಕೀಯದ ಕಥೆ ಕೇಳಿ ಬರುತ್ತಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲೇ ಚನ್ನಪಟ್ಟಣ ಕ್ಷೇತ್ರಕ್ಕೆ ರಮ್ಯಾ ಹೆಸರು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ರಮ್ಯಾ, ಬಹಳ ದಿನಗಳ ನಂತರ ಕಾಂಗ್ರೆಸ್ ಪರ ಪ್ರಚಾರದಲ್ಲೂ ಕಾಣಿಸಿಕೊಂಡಿದ್ದರು. ಇದೆಲ್ಲದಕ್ಕೂ ಮುನ್ನವೇ, ರಮ್ಯಾ ಒಪ್ಪಿಕೊಂಡಿದ್ದ ಸಿನಿಮಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ. ಇದೀಗ ಲೋಕಸಭೆಯಲ್ಲಿ ರಮ್ಯಾ ಹೆಸರು ಮತ್ತೊಮ್ಮೆ ಕೇಳಿ ಬರುತ್ತಿದೆ.
ಹೀಗಾಗಿಯೇ ರಮ್ಯಾ ಹಾಸ್ಟೆಲ್ ಹುಡುಗರಿಗೆ ಶಾಕ್ ಕೊಟ್ಟಿದ್ದಾರೆ. ರಮ್ಯಾ ಅವರು ತಮ್ಮದೇ ನಿರ್ಮಾಣದ ಮೊದಲ ಚಿತ್ರಕ್ಕೆ ತಾವೇ ನಾಯಕಿಯಾಗಿದ್ದರು. ಆದರೆ ಕಡೆಯ ಕ್ಷಣದಲ್ಲಿ ಹಿಂದೆಗೆದಿದ್ದರು. ಅಷ್ಟೇ ಅಲ್ಲ, ಶಿವಣ್ಣ-ಡಾಲಿ ಧನಂಜಯ ಜೊತೆಗೆ ನಟಿಸುವುದಕ್ಕೆ ಎಸ್ ಎಂದಿದ್ದ ರಮ್ಯಾ, ಆ ಚಿತ್ರದಿಂದಲೂ ರಿಟರ್ನ್ ಬಂದಿರುವ ಬಗ್ಗೆ ಸುದ್ದಿ ಇದೆ. ರಮ್ಯಾ ಮತ್ತೊಮ್ಮೆ ಫುಲ್ ಟೈಂ ರಾಜಕಾರಣಿಯಾಗುತ್ತಿದ್ದಾರಂತೆ.



