ಹೊಂಬಾಳೆ ಫಿಲಮ್ಸ್. ದೇಶದ ಅತಿ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ. RCB, ಐಪಿಎಲ್ ಫ್ರಾಂಚೈಸಿಗಳಲ್ಲಿಯೇ ಅತೀ ಹೆಚ್ಚು ನಿಷ್ಠಾವಂತ ಫ್ಯಾನ್ಸ್ ಫಾಲೋವಿಂಗ್ ಇರುವ ಕ್ರಿಕೆಟ್ ಟೀಂ. ಹೊಂಬಾಳೆ ಶುರುವಾಗಿದ್ದು ಪುನೀತ್ ಚಿತ್ರದಿಂದ. RCB ಆರಂಭವಾಗಿದ್ದು ವಿಜಯ್ ಮಲ್ಯ ಅವರಿಂದ. ಹೊಂಬಾಳೆಗೆ ಯಶ್, ಪ್ರಭಾಸ್ ಅಂತಹ ಸ್ಟಾರ್ ನಟರು ರಾಯಭಾರಿಗಳು. ಯಶ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ್ದೇ ಹೊಂಬಾಳೆ. ಇತ್ತ RCBಗೆ ವಿರಾಟ್ ಕೊಹ್ಲಿ ಬ್ರಾಂಡ್ ಅಂಬಾಸಿಡರ್. ವಿರಾಟ್ ಆಟದಿಂದಾಗಿಯೇ ಖ್ಯಾತಿ ಪಡೆದರೂ.. ಅವರಿನ್ನೂ ಕ್ರಿಕೆಟ್ ಲೋಕದಲ್ಲಿ ಅಂಬೆಗಾಲಿಡುತ್ತಿದ್ದಾಗ ಚಾನ್ಸ್ ಕೊಟ್ಟಿದ್ದು RCB. ಈಗ ಇವೆರಡೂ ಒಂದಾಗ್ತಾ ಇವೆ.. ಅಥವಾ ಒಂದಾಗಲಿವೆ.
ಮೂಲಗಳ ಪ್ರಕಾರ RCB ತಂಡದ ಮಾಲೀಕತ್ವ ಹೊಂದಿರುವ UB ಗ್ರೂಪ್‌ನ DIAGIO ಸಂಸ್ಥೆ RCB ಷೇರುಗಳನ್ನು ಮಾರಾಟಕ್ಕೆ ಇಟ್ಟಿದೆ. RCB ಫ್ರಾಂಚೈಸಿಯ ಒಟ್ಟಾರೆ ಮೌಲು 17 ಸಾವಿರ ಕೋಟಿ. ಹಾಗಾದರೆ ಹೊಂಬಾಳೆ 17ಕ್ಕೆ 17 ಸಾವಿರ ಕೋಟಿಯಷ್ಟೂ ಹಣವನ್ನೂ ಕೊಟ್ಟು ಆರ್‌ಸಿಬಿಯನ್ನು ಖರೀದಿ ಮಾಡಲಿದೆಯಾ.. ಎಂದರೆ ಹಾಗೇನೀಲ್ಲ. UB ಗ್ರೂಪ್‌ನ DIAGIO ಸಂಸ್ಥೆ RCB ಷೇರುಗಳಲ್ಲಿ ಸ್ವಲ್ಪವನ್ನು ಮಾತ್ರ ಮಾರಾಟಕ್ಕೆ ಇಟ್ಟಿದೆ. ಅಂದರೆ ಪಾಲುದಾರಿಕೆಯಲ್ಲಿ ಮುಂದುವರೆಯಲಿದೆ. ಹಾಗೆ UB ಗ್ರೂಪ್‌ನ DIAGIO ಸಂಸ್ಥೆ ಬಿಟ್ಟುಕೊಟ್ಟ RCB ಷೇರುಗಳನ್ನು ಎಷ್ಟನ್ನು ಹೊಂಬಾಳೆ ಖರೀದಿ ಮಾಡಲಿದೆ ಎನ್ನುವುದರ ಮೇಲೆ ಮಾಲೀಕರು ಯಾರು ಎನ್ನುವುದು ನಿರ್ಧಾರವಾಗಲಿದೆ.
ಶೇ.51ಕ್ಕೂ ಹೆಚ್ಚು ಷೇರುಗಳನ್ನು ಹೊಂಬಾಳೆ ಖರೀದಿಸಿದರೆ.. ಆಗ ಹೊಂಬಾಳೆಯವರು ಓನರ್ ಎನ್ನಬಹುದು. ಇಲ್ಲದಿದ್ದರೆ ಪಾಲುದದಾರಾಗಬಹುದಷ್ಟೇ. ಈ 17 ಸಾವಿರ ಕೋಟಿಯಲ್ಲಿ ಹೊಂಬಾಳೆ ಸಂಸ್ಥೆಗೆ ಎಷ್ಟು ಷೇರುಗಳನ್ನು ಕೊಡಲಿದ್ದಾರೆ ಎನ್ನುವುದು ನಿರ್ಧಾರವಾಗಬೇಕಷ್ಟೇ. ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್ ಅವರಾಗಲೀ.. ಚೆಲುವೇ ಗೌಡ ಅವರಾಗಲೀ.. ಇದರ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಆದರೆ ಮೂಲಗಳ ಪ್ರಕಾರ ಮಾತುಕತೆ ನಡೆಯುತ್ತಿರುವುದು ನಿಜ.
RCB ಷೇರುಗಳನ್ನು ಪಡೆಯುವುದು ಅಷ್ಟು ಸುಲಭವೂ ಅಲ್ಲ. RCB ತಂಡದ ಷೇರುಗಳನ್ನು ಪಡೆಯಲು ZERODA ಸಂಸ್ಥೆಯ ಸಂಸ್ಥಾಪಕ ನಿಖಿಲ್ ಕಾಮತ್, ಮಣಿಪಾಲ್ ಗ್ರೂಪ್ಸ್‌ನ ರಂಜನ್ ಪೈ, ಸೀರಂ ಸಂಸ್ಥೆಯ ಅಡಾರ್ ಪೂನಾವಾಲ ಕೂಡಾ ಪೈಪೋಟಿ ನಡೆಸುತ್ತಿದ್ದಾರೆ.
ZERODA ಷೇರುಪೇಟೆಯ ದಿಗ್ಗಜ ಸಂಸ್ಥೆ. ಮಣಿಪಾಲ್ ಗ್ರೂಪ್ಸ್ ಎಂದರೆ ಉದಯವಾಣಿ ಪತ್ರಿಕೆ ನೆನಪಾಗುತ್ತದೆ. ಆದರೆ ಅದೊಂದೇ ಅವರ ಉದ್ಯಮ ಅಲ್ಲ. ಇವೆರಡರ ಮೂಲ ಇರುವುದು ಕರ್ನಾಟಕದಲ್ಲಿ. ಪಡೆಯಲು ZERODA ಸಂಸ್ಥೆಯ ಸಂಸ್ಥಾಪಕ ನಿಖಿಲ್ ಕಾಮತ್, ಮಣಿಪಾಲ್ ಗ್ರೂಪ್ಸ್‌ನ ರಂಜನ್ ಪೈ ಇಬ್ಬರೂ ಅಪ್ಟಟ ಕನ್ನಡಿಗರು.
RCB ತಂಡದ ಮಾಲೀಕತ್ವವನ್ನು ಮೊದಲಿಗೆ ಹೊಂದಿದ್ದವರು ಕನ್ನಡಿಗರೇ. ವಿಜಯ್ ಮಲ್ಯ ಮಾಲೀಕತ್ವದಲ್ಲಿ RCBಯಲ್ಲಿ ಕನ್ನಡಿಗರೇ ತುಂಬಿ ತುಳುಕಿದ್ದರು. ಈಗ RCBಯಲ್ಲಿ ಕರ್ನಾಟಕ ಮೂಲದವರನ್ನು ಬೂದುಗನ್ನಡಿ ಹಾಕಿ ಹುಡುಕುವ ಪರಿಸ್ಥಿತಿ ಎದುರಾಗಿದೆ.
ʻನಿನ್ನಿಂದಲೇʼ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹೊಂಬಾಳೆ ಫಿಲಮ್ಸ್, ಈಗ ದೇಶದಲ್ಲಿಯೇ ನಂ.1 ಚಿತ್ರ ನಿರ್ಮಾಣ ಸಂಸ್ಥೆ. ಭವಿಷ್ಯದಲ್ಲಿ RCB ಕ್ರಿಕೆಟ್ ಟೀಂ ಮಾಲೀಕತ್ವ ವಹಿಸುವ ಸಾಧ್ಯತೆ ದಟ್ಟವಾಗಿದೆ. ಐಪಿಎಲ್ ಜಗತ್ತಿನಲ್ಲಿ ಅತೀ ಹೆಚ್ಚು ಫ್ಯಾನ್ ಬೇಸ್ ಇರುವ ಟೀಂ RCB. ತಂಡದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ. ಅವರೀಗ RCB ಕ್ಯಾಪ್ಟನ್ ಅಲ್ಲ. ಆದರೂ RCB ಎಂದರೆ ಥಟ್ಟಂತ ನೆನಪಾಗುವುದು ವಿರಾಟ್ ಕೊಹ್ಲಿಯೇ. ಇಂತಹ ತಂಡ ಈಗ ಮಾರಾಟಕ್ಕೆ ಇದೆ. ಆ ಮಾಲೀಕತ್ವವವನ್ನು ಪಡೆದುಕೊಳ್ಳಲು ಹೊಂಬಾಳೆ ಮುಂದಾಗಿದೆ. ಹೊಂಬಾಳೆ ಮತ್ತು RCB ನಡುವೆ ಉತ್ತಮ ವ್ಯಾವಹಾರಿಕ ಬಾಂಧವ್ಯವಿದೆ. ಹೊಂಬಾಳೆ ಮತ್ತು RCB ಎರಡೂ ಡಿಜಿಟಲ್ ಪಾರ್ಟನರ್ಸ್. ಈ ಸಂಬಂಧ ತಂಡದ ಷೇರುಗಳನ್ನು ಹಂಚಿಕೊಳ್ಳುವ ಹಂತಕ್ಕೆ ಬರುತ್ತದಾ.. ಕಾದು ನೋಡಬೇಕು.



