ದರ್ಶನ್ (Actor Darshan) ಚಿತ್ರಗಳಲ್ಲಿ ಕನ್ನಡದ ನಟಿಯರು ನಾಯಕಿಯರಾಗಿ ಎಂಟ್ರಿ ಕೊಡುವುದು ಅಪರೂಪವೇನಲ್ಲ. ರಚಿತಾ ರಾಮ್ (Actress Rachitha ram ) ಅವರಿಂದ ಹಿಡಿದು ಆರಾಧನಾ ಅವರ ತನಕ. ಅಂದಂತೆ ಆರಾಧನಾ, ಮಾಲಾಶ್ರೀ ರಾಮು ಅವರ ಮಗಳು.
ಕನಸಿನ ರಾಣಿ ಮಾಲಾಶ್ರೀ (Actress Malashree). ಮಾಲಾಶ್ರೀ ನಂತರ ಆ ರೇಂಜಿಗೆ ಇಂಡಸ್ಟ್ರಿಯನ್ನು ರೂಲ್ ಮಾಡಿದ ಇನ್ನೊಬ್ಬ ನಾಯಕಿ ಬರಲಿಲ್ಲ. ಅಂತಹ ಮಾಲಾಶ್ರೀಯವರ ಮಗಳು ನಾಯಕಿಯಾಗಿರುವ ಮೊದಲ ಸಿನಿಮಾ ಎಂದರೆ, ಆ ಚಿತ್ರದ ನಿರೀಕ್ಷೆಯೇ ಬೇರೆ ಇರುತ್ತೆ. ಅಪ್ಪ ರಾಮು (Koti Ramu), ಚಿತ್ರರಂಗದಲ್ಲಿ ಕೋಟಿ ರಾಮು ಎಂದೇ ಫೇಮಸ್ ಆಗಿದ್ದ ನಿರ್ಮಾಪಕ. ತಾಯಿ ಚಿತ್ರರಂಗವನ್ನೇ ಆಳಿದ್ದ ನಟಿ. ಅಂತಹವರ ಮಗಳಾಗಿ ಚಿತ್ರರಂಗಕ್ಕೆ ಬರುವಾಗ ಹೇಗೆಲ್ಲ ತಯಾರಿ ಇತ್ತು, ಏನೇನೆಲ್ಲ ಆಯ್ತು..
ನಾವು ಹುಡುಕಿದ್ದು ನಟಿಯನ್ನಷ್ಟೇ, ಮಾಲಾಶ್ರೀ ಅವರ ಮಗಳನ್ನಲ್ಲ. ಹಾಗೆ ನೋಡಿದ್ರೆ ಕಾಟೇರ (Katera) ಚಿತ್ರಕ್ಕೆ ನಾಯಕಿಯ ಆಯ್ಕೆ ಮಾಡುವಾಗ ದರ್ಶನ್ ಅವರು ಯಾರನ್ನಾದ್ರೂ ಆಯ್ಕೆ ಮಾಡು. ಆದರೆ ಕನ್ನಡದವರಿಗೆ ಆದ್ಯತೆ ಕೊಡು ಎಂದಿದ್ದರು ದರ್ಶನ್. ಆ ವೇಳೆಯಲ್ಲಿಯೇ ಕಥೆಗೆ ಹೀರೋಯಿನ್ ಯಾರು ಬೇಕು ಅಂತ ನೀವೇ ಸಜೆಸ್ಟ್ ಮಾಡಿ ಅಂತ ರಾಕ್ಲೈನ್ ಸರ್ ಹೇಳಿದ್ದರು. ಅದಾದ ಮೇಲೆ ರಾಕ್`ಲೈನ್ ವೆಂಕಟೇಶ್ (Rocklline Venkatesh) ಅವರೇ ಆರಾಧನಾ (Actress Aradhana) ಅವರ ಪ್ರೊಫೈಲ್ ಕಳಿಸಿದ್ರು. ಫ್ರೆಶ್ ಫೇಸ್ (fresh face) ಇದೆ, ಇದು ಯಾರು ಅಂತ ಕೇಳಿದಾಗ.. ಮಾಲಾಶ್ರೀ ಮಗಳು ಅಂತಾ ಉತ್ತರ ಸಿಕ್ತು. ಆದರೆ ರಾಕ್`ಲೈನ್ ವೆಂಕಟೇಶ್ ಅವರು ಒತ್ತಾಯ ಮಾಡಲಿಲ್ಲ. ಸೂಟ್ ಆಗುವ ಹಾಗಿದ್ದರೆ ನೋಡಿ ಎಂದರು. ಅತ್ತ ಮಾಲಾಶ್ರೀ ಅವರು ಕೂಡ ಮಾಲಾಶ್ರೀ ಮಗಳು ಎಂಬ ಕಾರಣಕ್ಕೆ ಬೇಡ. ನಿಜವಾಗಿಯೂ ಟ್ಯಾಲೆಂಟ್ ಇದ್ದರೆ ಸೆಲೆಕ್ಟ್ ಮಾಡಿ ಎಂದರು. ನಾವು ಲುಕ್ ಟೆಸ್ಟ್, ಆಡಿಷನ್ ಮಾಡಿ ಆಮೇಲೆ ಸೆಲೆಕ್ಟ್ ಮಾಡಿದ್ವಿ. ಆರಾಧನಾ ನಿಜಕ್ಕೂ ಭರವಸೆಯ ನಟಿ. ನಾವು ಮೊದಲನೇ ದಿನವೇ ಟಫ್ ಸೀನ್ ಕೊಟ್ಟಿದ್ವಿ. ಫಸ್ಟ್ ಸೀನ್, ಫಸ್ಟ್ ಡೇ, ಫಸ್ಟ್ ಶಾಟ್.. ದರ್ಶನ್ ಅಂತಹ ಸೂಪರ್ ಸ್ಟಾರ್ ಕುತ್ತಿಗೆಗೆ ಮಚ್ಚು ಇಟ್ಟು ಬಿಟ್ಟು ಡೈಲಾಗ್ ಹೇಳಬೇಕು. ಆರಾಧನಾ ಅದನ್ನ ಒಂದೇ ಟೇಕ್ನಲ್ಲಿ ಓಕೆ ಮಾಡಿದಳು ಎನ್ನುತ್ತಾರೆ ತರುಣ್ ಸುಧೀರ್.
ಇನ್ನು ನಟ ದರ್ಶನ್ ಮಾತನಾಡಿ ಆರಾಧನಾ ಅವರು ನಟಿ ರಕ್ಷಿತಾ, ರಚಿತಾ ರಾಮ್ ತರಹ ಆಗ್ತಾರೆ ಅನ್ನೋ ಭವಿಷ್ಯ ನುಡಿದರು.
ಹೌದು, ಮೊದಲ ಸೀನ್‍ನಲ್ಲಿಯೇ ಸ್ಟಾರ್ ನಟರೊಬ್ಬರ ಕುತ್ತಿಗೆಗೆ ಮಚ್ಚಿಟ್ಟು ಆಕ್ಟ್ ಮಾಡುವುದು ಸುಲಭದ ಮಾತಲ್ಲ. ಆದರೆ ಅದರಲ್ಲಿಯೇ ಗೆದ್ದಿದ್ದಾರೆ ಆರಾಧನಾ.
ರಕ್ಷಿತಾ (Actress Rakshitha ) ತುಂಬಾ ಸಿನಿಮಾ ಮಾಡಿದ್ದಾರೆ. ರಚಿತಾ ರಾಮ್ ನನ್ನ ಜೊತೆಗೆ ಹೊಸದಾಗಿ ಹೀರೋಯಿನ್ ಆಗಿ ಶುರು ಮಾಡಿದವರು. ಈಗ ಅವರು ಇಂಡಸ್ಟ್ರಿಗೆ ಬಂದು 10 ವರ್ಷ ಆಗಿದೆ. ಖಂಡಿತ ಅದೇ ತರಹ ಆರಾಧನಾ ಸ್ಟ್ಯಾಂಡ್ ಆಗುತ್ತಾರೆ. ಆರಾಧನಾ ಒನ್ ಟೇಕ್ ಆರ್ಟಿಸ್ಟ್. ಅವರ ತಾಯಿ ಮಾಲಾಶ್ರೀ. ಅವರ ಬಗ್ಗೆ ಹೇಳಬೇಕಾ? ಅವರು ಯಾರ ಮುಂದೆ ನಿಂತರೂ ಬಡಿದು ಬಾಯಿಗೆ ಹಾಕಿಕೊಳ್ಳುತ್ತಾರೆ ಎಂದರು ನಟ ದರ್ಶನ್.
ದರ್ಶನ್ ಚಿತ್ರಗಳಲ್ಲಿ ಬೆಳ್ಳಿತೆರೆಗೆ ಬಂದ ಹೀರೋಯಿನ್`ಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡವರು ರಚಿತಾ ರಾಮ್. ಇನ್ನೂ ಕೆಲವರು ಗುರುತಿಸಿಕೊಂಡರಾದರೂ, ಸ್ಟಾರ್ ನಟಿಯಾಗಲಿಲ್ಲ. ಇದೀಗ ಆರಾಧನಾ ಎಂಟ್ರಿ ಆಗುತ್ತಿದ್ದಾರೆ.
ಇದೆಲ್ಲದರ ಮಧ್ಯೆ ರಾಕ್`ಲೈನ್ ಪ್ರೊಡ್ಯೂಸರ್ ಆಗಿದ್ದರೂ ದರ್ಶನ್ ರೂಲ್ಸ್ ಬದಲಾಗಿಲ್ಲ. ತಮ್ಮ ಯಾವುದೇ ಚಿತ್ರಕ್ಕೆ ನಾನು 85 ದಿನಕ್ಕಿಂತ ಹೆಚ್ಚು ಕಾಲ್`ಶೀಟ್ ಕೊಡೋದಿಲ್ಲ. ಇದು ನಟ ದರ್ಶನ್ ಅವರ ಮಾತು. ರಾಕ್`ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ದರ್ಶನ್ ತಮ್ಮ ಪದ್ಧತಿಯನ್ನೇ ಫಾಲೋ ಮಾಡ್ತಾರಾ ಅನ್ನೋ ಕುತೂಹಲ ಇತ್ತು. ಆದರೆ ಹಾಗಾಗಿಲ್ಲ.
100 ದಿನ ಆಯ್ತು ಅಂತ ಎಲ್ಲರೂ ಕೇಳಬಹುದು. ಅಂದಿನಿಂದ ಇಂದಿನ ತನಕ ನನ್ನ ರೂಲ್ಸ್ ಬದಲಾಗಿಲ್ಲ. ನಾನು ಡೇಟ್ ನೀಡಿರುವುದು 85 ದಿನ ಅಷ್ಟೇ. ಇವತ್ತಿಗೆ ನನ್ನದು 71 ದಿನ ಆಗಿದೆ. ಇನ್ನು 30 ದಿನ ಟೀಮ್ನವರು ಅವರ ಕೆಲಸ ಮಾಡಿಕೊಂಡಿದ್ದಾರೆ. ನನ್ನದು ಇನ್ನು 15 ದಿನ ಇದೆ. ಒಂದೊಂದು ಹಾಡಿಗೆ ಮೂರು ದಿನ ಬೇಕು ಅಂದುಕೊಂಡರೂ ಸರಿಯಾಗಿ 85ನೇ ದಿನಕ್ಕೆ ನನ್ನ ಕೆಲಸ ಮುಗಿಯುತ್ತದೆ. ತರುಣ್ ಅವರಿಗೆ ಅದರ ಪ್ಲ್ಯಾನ್ ತುಂಬ ಚೆನ್ನಾಗಿ ಗೊತ್ತು’ ಎಂದು ದರ್ಶನ್ ಹೇಳಿದ್ದಾರೆ.
ಶೇಕಡ 90ರಷ್ಟು ಕೆಲಸ ಮುಗಿದಿದೆ. ಕ್ಲೈಮ್ಯಾಕ್ಸ್ ಶೂಟಿಂಗ್ ಮುಗಿಸಿದ್ದೇವೆ. ಇನ್ನು ಮೂರು ಸಾಂಗ್ ಚಿತ್ರೀಕರಣ ಆಗಬೇಕು. ಡಬ್ಬಿಂಗ್ ಕೂಡ ಆಗಿದೆ ಎಂದಿರುವ ನಟ ದರ್ಶನ್, ಶೀಘ್ರದಲ್ಲೇ ಚಿತ್ರದ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.



