ಜೂನ್ ತಿಂಗಳ ಆರಂಭದಲ್ಲಿ ಇಡೀ ಕರ್ನಾಟಕಕ್ಕೆ ಹೀರೋ ಎಂಬಂತೆ ಪ್ರತಿಬಿಂಬಿತವಾಗಿದ್ದವರು ಎಸಿಪಿ ಚಂದನ್ ಕುಮಾರ್. ಇತ್ತೀಚೆಗೆ ದೊಡ್ಡ ಹೆಸರು ಮಾಡಿರುವ ಅಧಿಕಾರಿಗಳಲ್ಲಿ ಚಂದನ್ ಕೂಡಾ ಒಬ್ಬರು. ಬೇರೆಯವರಂತೆ ಮೀಡಿಯಾ ಫ್ರೆಂಡ್ಲಿ ಅಲ್ಲದಿದ್ದರೂ.. ಮಾಧ್ಯಮಗಳಲ್ಲಿ ಹೀರೋನಂತೆಯೇ ಬಿಂಬಿತವಾಗುತ್ತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿದ್ದ ದರ್ಶನ್ ತೂಗೂದೀಪ್ ಅವರನ್ನು ಅರೆಸ್ಟ್ ಮಾಡಲು ಹೋಗಿದ್ದೇ ಎಸಿಪಿ ಚಂದನ್ ಅವರು. ಮೈಸೂರಿಗೆ ಹೋಗಿ ನೇರವಾಗಿ ನಟ ದರ್ಶನ್ ತೂಗೂದೀಪ್ ಅವರನ್ನು ಅರೆಸ್ಟ್ ಮಾಡಿಕೊಂಡು, ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು ಎಸಿಪಿ ಚಂದನ್. ಹೀಗಿದ್ದಾಗಲೇ, ಬೇಕು ಅಂತಲೇ ಬಿಜೆಪಿ ನಾಯಕರು ಎಸಿಪಿ ಚಂದನ್ ಅವರನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇನ್ನು ಚಂದನ್ ಅವರು ದರ್ಶನ್ ಜೊತೆ ನಡೆದುಕೊಂಡ ರೀತಿಯ ಬಗ್ಗೆ ದಂತಕಥೆಗಳೇ ಹುಟ್ಟಿಕೊಂಡಿವೆ. ಹೀಗಿರುವಾಗಲೇ ಪ್ರತಾಪ್ ಸಿಂಹ ಇದೀಗ ದರ್ಶನ್ ತೂಗುದೀಪ್ ಅವರನ್ನು ಬಂಧಿಸಿದ್ದ ದಕ್ಷ ಅಧಿಕಾರಿ ಎಸಿಪಿ ಚಂದನ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅದು ಪುನೀತ್ ಕೆರೆಹಳ್ಳಿ ಅವರನ್ನು ಅರೆಸ್ಟ್ ಆಗುವಂತೆ ಮಾಡಿದ್ದ ಪ್ರಕರಣ.
ಇತ್ತೀಚೆಗೆ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಕಳಪೆ ಮಾಂಸ ಸಪ್ಲೈ ಮಾಡುವವರ ವಿರುದ್ಧ ದೊಡ್ಡ ಹೋರಾಟವೇ ನಡೆದಿತುತ. ಅಬ್ದುಲ್ ರಜಾಕ್ ಮಾಲೀಕತ್ವದಲ್ಲಿ ಕಳಪೆ ಮಾಂಸ ಸರಬರಾಜಾಗುತ್ತಿರುವುದನ್ನು ಪುನೀತ್ ಕೆರೆಹಳ್ಳಿ ನೇತೃತ್ವದ ತಂಡ ಪತ್ತೆ ಹಚ್ಚಿತ್ತು. ಆ ಪ್ರಕರಣದಲ್ಲಿ ರಜಾಕ್ ಅರೆಸ್ಟ್ ಆಗಿಲ್ಲವಾದರೂ, ಪುನೀತ್ ಕೆರೆಹಳ್ಳಿ ಬಂಧನವಾಗಿತ್ತು.
ಆದರೆ.. ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸರು.. ಅದರಲ್ಲೂ ವಿಶೇಷವಾಗಿ ಚಂದನ್ ʻಬೆತ್ತಲೆ ಮಾಡಿ ಹೊಡೆದಿದ್ದಾರೆʼ ಎನ್ನುವುದು ಪ್ರತಾಪ್ ಸಿಂಹ ಆರೋಪ.
ಬಸವೇಶ್ವರನಗರ ಪೊಲೀಸ್ ಠಾಣೆ ಮುಂಭಾಗದಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿರುವ ಪುನೀತ್ ಕೆರೆಹಳ್ಳಿ ಕಲಬೆರಕೆ ಮಾಂಸ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ನಾವು ಸ್ಥಳಕ್ಕೆ ಧಾವಿಸಿದ್ದೆವು. ಆ ಸಂದರ್ಭದಲ್ಲಿ ನಮ್ಮನ್ನು ವಿನಾಕಾರಣ ಬಂಧಿಸಲಾಗಿದೆ ನಾವು ಸ್ಥಳಕ್ಕ ತೆರಳಿದಾಗ ಅಲ್ಲಿ ಪತ್ರಕರ್ತರೂ ಇದ್ದರು, ಹೊಯ್ಸಳದ ಗಸ್ತು ಪೊಲೀಸರೂ ಇದ್ದರು. ಈ ಸಂದರ್ಭದಲ್ಲಿ ನಾವು ಹೊಯ್ಸಳದ ಪೊಲೀಸರ ಬಳಿ ಕೇಳಿದಾಗ, ನಾವು ಮಾಡಲು ಸಾಧ್ಯವಿಲ್ಲ 112ಕ್ಕೆ ಕರೆ ಮಾಡಿ ಎಂದು ಹೇಳಿದ್ದಾರೆ. ಅದರಂತೆ ನಾವು ಕರೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ಫುಡ್ ಇನ್ ಸ್ಪೆಕ್ಟರ್ ಸ್ಥಳಕ್ಕೆ ಬಂದು ಮಾಂಸ ತೆಗೆದುಕೊಂಡು ಹೋದರು. ಈ ವೇಳೆ ನನ್ನ ಬಳಿ ಪೆನ್ ಡ್ರೈವ್ ಇದೆ. ಇದನ್ನು ಏನಾದೂ ನೀವು ಮುಚ್ಚಿ ಹಾಕಲು ಪ್ರಯತ್ನಿಸಿದರೆ, ಇದರಲ್ಲಿರುವ ದಾಖಲೆಯನ್ನು ಮಾಧ್ಯಮದ ಮುಂದೆ ಇಡುತ್ತೇನೆ ಎಂದು ಹೇಳಿದೆ. ಅಷ್ಟು ಹೇಳಿದೊಡನೆ ಪೊಲೀಸರು ನನ್ನನ್ನು ಏಕಾಏಕಿ ಬಂಧಿಸಿದರು ಎಂದು ಪುನೀತ್ ಕೆರೆಹಳ್ಳಿ ದೂರಿದ್ದಾರೆ.
ಪ್ರತಿಭಟನೆಗೆ ಪ್ರತಾಪ್ ಸಿಎಂ ಎಂಟ್ರಿ ಕೊಟ್ಟಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ರಾಜ್ಯಾದ್ಯಂತ ಪ್ರಚಾರ ಸಿಕ್ಕಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಪರ ಧ್ವನಿಯೆತ್ತಿದ್ದಾರೆ. ಅವರನ್ನು ಅನಾಗರಿಕವಾಗಿ ಬಂಧಿಸಿರುವುದನ್ನು ಬಿಜೆಪಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ..



